Budh Gochar: 24 ಗಂಟೆಗಳಲ್ಲಿ ಬದಲಾಗಲಿದೆ ಈ ರಾಶಿಯವರ ಭವಿಷ್ಯ

Budh Gochar: ಸಂಪತ್ತು, ಬುದ್ಧಿ, ವ್ಯಾಪಾರದ ಅಂಶವಾದ ಬುಧ ರಾಶಿಯ ಬದಲಾವಣೆಯು 4 ರಾಶಿಯವರಿಗೆ ಬಹಳಷ್ಟು ಉಡುಗೊರೆಗಳನ್ನು ತರುತ್ತಿದೆ. ಈ ರಾಶಿಗಳ ಜನರು ಈ ಅವಧಿಯಲ್ಲಿ ಸಾಕಷ್ಟು ಪ್ರಗತಿಯನ್ನು ಪಡೆಯುತ್ತಾರೆ ಮತ್ತು ಆರ್ಥಿಕವಾಗಿಯೂ ಲಾಭ ಪಡೆಯಬಹುದು.

Written by - Zee Kannada News Desk | Last Updated : Mar 23, 2022, 07:20 AM IST
  • ಮಾರ್ಚ್ 24 ರಂದು ಬುಧನು ರಾಶಿಚಕ್ರವನ್ನು ಬದಲಾಯಿಸುತ್ತಾನೆ
  • ಬುಧನು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ
  • ಈ ಸಮಯ 4 ರಾಶಿಯವರ ಭವಿಷ್ಯವನ್ನು ಬೆಳಗಿಸಲಿದೆ.
Budh Gochar: 24 ಗಂಟೆಗಳಲ್ಲಿ ಬದಲಾಗಲಿದೆ ಈ ರಾಶಿಯವರ ಭವಿಷ್ಯ  title=
Budha Rashi Parivartan Effects

Budh Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಮಂಗಳಕರವೆಂದು ಪರಿಗಣಿಸಲಾದ ಗ್ರಹಗಳಲ್ಲಿ ಒಂದಾದ ಬುಧವು ನಾಳೆ ಅಂದರೆ ಮಾರ್ಚ್ 24, 2022 ರಂದು ರಾಶಿಚಕ್ರವನ್ನು ಬದಲಾಯಿಸಲಿದೆ. ಬುಧ ಗ್ರಹವು ಮಾತು, ಬುದ್ಧಿವಂತಿಕೆ ಮತ್ತು ವ್ಯವಹಾರವನ್ನು ನೀಡುವವನು ಎಂದು ಹೇಳಲಾಗುತ್ತದೆ. ಜಾತಕದಲ್ಲಿ ಬುಧನು ಲಾಭದಾಯಕನಾಗಿದ್ದರೆ, ವ್ಯಕ್ತಿಯು ವಾಕ್ಚಾತುರ್ಯ ಮತ್ತು ಬುದ್ಧಿವಂತಿಕೆಯಿಂದ ಶ್ರೀಮಂತನಾಗಿರುತ್ತಾನೆ. ವ್ಯಾಪಾರಸ್ಥರು ಸಾಕಷ್ಟು ಹಣವನ್ನು ಗಳಿಸುತ್ತಾರೆ ಎನ್ನಲಾಗುತ್ತದೆ. ಮಾರ್ಚ್ 24 ರಂದು ಬುಧ ಗ್ರಹವುವು (Budh Grah) ಮೀನ ರಾಶಿಯನ್ನು ಪ್ರವೇಶಿಸಲಿದೆ, ಗ್ರಹಗಳ ರಾಜ ಸೂರ್ಯ ಈಗಾಗಲೇ ಈ ರಾಶಿಯಲ್ಲಿ ನೆಲೆಸಿದ್ದಾನೆ. 4 ರಾಶಿಯವರಿಗೆ ಬುಧ ಸಂಕ್ರಮಣವು (Budh Transit) ತುಂಬಾ ಶುಭಕರವಾಗಿರುತ್ತದೆ ಎಂದು ಹೇಳಲಾಗುತ್ತಿದೆ. 

ಬುಧನು ಈ ರಾಶಿಗಳ ಅದೃಷ್ಟವನ್ನು ಬೆಳಗುತ್ತಾನೆ :
ವೃಷಭ ರಾಶಿ : 

ಬುಧನ ರಾಶಿ ಪರಿವರ್ತನೆಯು (Budh Rashi Parivartan) ವೃಷಭ ರಾಶಿಯವರಿಗೆ ಗಳಿಕೆಯ ಸಾಧನವನ್ನು ಹೆಚ್ಚಿಸಬಹುದು. ಹಣವು ಪ್ರಯೋಜನಕಾರಿಯಾಗಲಿದೆ. ವೃತ್ತಿ ಜೀವನದಲ್ಲಿ ಲಾಭವಾಗಲಿದೆ. ಆದಾಯ ಹೆಚ್ಚಲಿದೆ. ಇದ್ದಕ್ಕಿದ್ದಂತೆ ದೊಡ್ಡ ಲಾಭ ಮತ್ತು ಸಾಧನೆಯನ್ನು ಸಾಧಿಸಬಹುದು. 

ಇದನ್ನೂ ಓದಿ- Guru Gochar: ಗುರುವಿನ ರಾಶಿಯಲ್ಲಿ ರೂಪುಗೊಳ್ಳುತ್ತಿದೆ ಶ್ರೀಮಂತರಾಗುವ ಯೋಗ; ಯಾವ ರಾಶಿಯವರಿಗೆ ಲಾಭ!

ಮಿಥುನ ರಾಶಿ: 
ಮಿಥುನ ರಾಶಿಯವರಿಗೆ ಬುಧ ರಾಶಿಯ ಬದಲಾವಣೆಯು ತುಂಬಾ ಶುಭಕರವಾಗಿರುತ್ತದೆ. ಅವರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿಯನ್ನು ಪಡೆಯಬಹುದು. ಹೊಸ ಉದ್ಯೋಗಕ್ಕಾಗಿ ಆಫರ್ ಬರಬಹುದು. ಬಡ್ತಿ-ಹೆಚ್ಚಳ ಪಡೆಯುವ ಸಂಪೂರ್ಣ ಅವಕಾಶಗಳಿವೆ. ವ್ಯಾಪಾರಸ್ಥರು ಸಹ ಉತ್ತಮ ಲಾಭವನ್ನು ಗಳಿಸಬಹುದು. 

ಸಿಂಹ ರಾಶಿ: 
ಬುಧ ಸಂಕ್ರಮಣವು (Mercury Transit) ಸಿಂಹ ರಾಶಿಯವರಿಗೆ ಸಂಪತ್ತಿನ ಲಾಭವನ್ನು ತರುತ್ತದೆ ಮತ್ತು ಬಹಳಷ್ಟು ಸಂತೋಷವನ್ನು ನೀಡುತ್ತದೆ. ಈ ಸಮಯವು ಕುಟುಂಬಕ್ಕೆ ಅದ್ಭುತವಾಗಿರುತ್ತದೆ. ಜೀವನದಲ್ಲಿ ಮಹತ್ತರವಾದ ಬದಲಾವಣೆಗಳಾಗುತ್ತವೆ, ಅದು ಸ್ಥಾನಮಾನ, ಹಣ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ಉದ್ಯೋಗಾಕಾಂಕ್ಷಿಗಳು ಉದ್ಯೋಗವನ್ನು ಬದಲಾಯಿಸಬಹುದು. ಹಠಾತ್ ಹಣಕಾಸಿನ ಲಾಭ ಇರುತ್ತದೆ. 

ಇದನ್ನೂ ಓದಿ- ಈ ರಾಶಿಯವರಿಗೆ ಭಾರೀ ಅದೃಷ್ಟ ಕರುಣಿಸಲಿದ್ದಾನೆ ಶನಿ ಮಹಾತ್ಮ .!

ಕುಂಭ ರಾಶಿ: ಬುಧ ಸಂಕ್ರಮಣ ಕುಂಭ ರಾಶಿಯವರಿಗೆ ದಿಢೀರ್ ಹಣ ತರಲಿದೆ. ತಡೆಹಿಡಿಯಲಾದ ಹಣ ನಿಮ್ಮ ಕೈ ಸೇರಲಿದೆ. ಆದಾಯ ಹೆಚ್ಚಾಗಬಹುದು. ವಿಶೇಷವಾಗಿ ಉದ್ಯಮಿಗಳು ಲಾಭ ಪಡೆಯಬಹುದು. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಎಲ್ಲಾ ಕೆಲಸಗಳು ಸುಲಭವಾಗಿ ನಡೆಯಲಿದೆ.  

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News