Mercury Transit: ಧನು ರಾಶಿಗೆ ಬುಧನ ಪ್ರವೇಶ, ಈ 5 ರಾಶಿಯವರಿಗೆ ಶುಭ ದಿನಗಳು ಆರಂಭ

Mercury Transit: ಬುಧ ಗ್ರಹದ ಸಂಚಾರವು ವೃತ್ತಿಜೀವನದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇತ್ತೀಚೆಗಷ್ಟೇ ಬುಧ ಗ್ರಹವು ಧನು ರಾಶಿಗೆ ಪ್ರವೇಶಿಸಿದ್ದು, ಡಿಸೆಂಬರ್ 29 ರವರೆಗೆ ಈ ರಾಶಿಯಲ್ಲಿದ್ದು, 5 ರಾಶಿಯವರಿಗೆ ಅವರ ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ನೀಡುತ್ತದೆ. 

Written by - Yashaswini V | Last Updated : Dec 13, 2021, 07:50 AM IST
  • ಧನು ರಾಶಿಗೆ ಬುಧನ ಪ್ರವೇಶ
  • ವೃತ್ತಿಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ
  • 5 ರಾಶಿಚಕ್ರ ಚಿಹ್ನೆಯ ಜನರು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ
Mercury Transit: ಧನು ರಾಶಿಗೆ ಬುಧನ ಪ್ರವೇಶ, ಈ 5 ರಾಶಿಯವರಿಗೆ ಶುಭ ದಿನಗಳು ಆರಂಭ title=
Budha Rashi Parivartan Effect

Mercury Transit: ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಮತ್ತು ನಕ್ಷತ್ರಪುಂಜಗಳು ತಮ್ಮ ಸ್ಥಾನಗಳನ್ನು ಬದಲಾಯಿಸುತ್ತಲೇ ಇರುತ್ತವೆ ಮತ್ತು ಅವು ದೇಶ ಮತ್ತು ಪ್ರಪಂಚದ ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ನೇರ ಪರಿಣಾಮ ಬೀರುತ್ತವೆ. ಈ ಕೆಲವು ಬದಲಾವಣೆಗಳು ಬಹಳ ಮುಖ್ಯ. ಡಿಸೆಂಬರ್ 11, 2021 ರಂದು, ಬುಧ ಗ್ರಹವು ತನ್ನ ರಾಶಿಯನ್ನು ಬದಲಾಯಿಸಿತು ಮತ್ತು ಧನು ರಾಶಿಯನ್ನು ಪ್ರವೇಶಿಸಿತು. ಬುಧವು 29ನೇ ಡಿಸೆಂಬರ್ 2021 ರವರೆಗೆ ಈ ರಾಶಿಯಲ್ಲಿ ಇರುತ್ತಾನೆ. ಬುಧನು ಬುದ್ಧಿವಂತಿಕೆ, ತರ್ಕ, ಸಂವಹನ ಮತ್ತು ಸ್ನೇಹಕ್ಕೆ ಕಾರಣವಾದ ಗ್ರಹವಾಗಿದ್ದು, ಈ ತಿಂಗಳ ಅಂತ್ಯದವರೆಗೆ ಈ 5 ರಾಶಿಯ ಜನರಿಗೆ ಶುಭ ಫಲಗಳನ್ನು ನೀಡುತ್ತಾರೆ.

ಧನು ರಾಶಿಗೆ ಬುಧನ ಪ್ರವೇಶ, ಈ 5 ರಾಶಿಯವರಿಗೆ ಶುಭ ದಿನಗಳು ಆರಂಭ:
ಮಿಥುನ ರಾಶಿ (Gemini):
ಬುಧನ ರಾಶಿಚಕ್ರ ಬದಲಾವಣೆಯಿಂದ (Mercury Transit) ಮಿಥುನ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ಅದ್ಭುತವಾದ ಲಾಭಗಳನ್ನು ಪಡೆಯಲಿದ್ದಾರೆ. ಉದ್ಯೋಗವಿರಲಿ, ವ್ಯಾಪಾರವೇ ಆಗಿರಲಿ, ಎಲ್ಲಾ ಕ್ಷೇತ್ರಗಳಲ್ಲಿಯೂ ಅವರು ಯಶಸ್ವಿಯಾಗುತ್ತಾರೆ. ಹಣವು ಪ್ರಯೋಜನಕಾರಿಯಾಗಲಿದೆ. ಮನೆಯಲ್ಲಿ ಒಳ್ಳೆಯ ಸಮಯವನ್ನು ಕಳೆಯುವಿರಿ. ಎಲ್ಲೆಲ್ಲೂ ಸುಖ ಇರುತ್ತದೆ. 

ಸಿಂಹ ರಾಶಿ (Leo): ಈ ಸಮಯವು ಸಿಂಹ ರಾಶಿಯವರಿಗೆ ವೃತ್ತಿಜೀವನಕ್ಕೆ ತುಂಬಾ ಉತ್ತಮವಾಗಿರುತ್ತದೆ. ಆದಾಯ ಹೆಚ್ಚಲಿದೆ. ಹಲವು ರೀತಿಯ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುತ್ತಾರೆ. ನೀವು ತಿಂಗಳು ಪೂರ್ತಿ ಉತ್ಸಾಹದಿಂದ ಇರುತ್ತೀರಿ ಮತ್ತು ಈ ಉತ್ಸಾಹವು ನಿಮಗೆ ದೊಡ್ಡ ಕೆಲಸವನ್ನು ಸುಲಭವಾಗಿ ಮಾಡುವಂತೆ ಮಾಡುತ್ತದೆ. ವೈವಾಹಿಕ ಜೀವನವೂ ಉತ್ತಮವಾಗಿರುತ್ತದೆ. 

ಇದನ್ನೂ ಓದಿ-  ಸಂಜೆ ಈ ಎಲೆಗಳ ಉಪಾಯ ಮಾಡಿ, ಇದರಿಂದ ನಿಮ್ಮ ಮನೆ ಸಂಪತ್ತು ಹೆಚ್ಚುತ್ತದೆ!

ಕನ್ಯಾ ರಾಶಿ (Virgo): ಬುಧನ ರಾಶಿ ಪರಿವರ್ತನೆಯು (Budha Rashi Parivarthan) ಕನ್ಯಾ ರಾಶಿಯವರಿಗೆ ಅವರ ವೃತ್ತಿಜೀವನದಲ್ಲಿ ಅದ್ಭುತವಾದ ಲಾಭಗಳನ್ನು ನೀಡಲಿದೆ. ನೀವು ಬಡ್ತಿ-ಹೆಚ್ಚಳವನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಕಾಣಬಹುದು. ಬಿಡುವಿಲ್ಲದ ಕೆಲಸದ ನಡುವೆಯೂ ಕುಟುಂಬಕ್ಕಾಗಿ ಸಮಯ ತೆಗೆದುಕೊಳ್ಳಿ. ಇದು ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸುತ್ತದೆ. 

ಧನು ರಾಶಿ (Sagittarius): ಧನು ರಾಶಿಯವರಿಗೆ ಎಲ್ಲದರಲ್ಲೂ ಯಶಸ್ಸು ಸಿಗುತ್ತದೆ. ಈ ರಾಶಿಯ ಜನರು ವೃತ್ತಿ, ಕುಟುಂಬ ಜೀವನ ಅಥವಾ ವಿದ್ಯಾಭ್ಯಾಸವೇ ಆಗಿರಲಿ ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ ಮತ್ತು ಸಾಕಷ್ಟು ಲಾಭವನ್ನು ಗಳಿಸಿ. 

ಇದನ್ನೂ ಓದಿ- Weekly Horoscope : ಮುಂದಿನ ವಾರ ಈ 3 ರಾಶಿಯವರಿಗೆ ಒಲಿಯಲಿದೆ ಅದೃಷ್ಟ : ನಿಮ್ಮ ರಾಶಿ ಹೇಗಿದೆ?

ಮೀನ ರಾಶಿ  (Pisces): ಮೀನ ರಾಶಿಯವರಿಗೆ ಆದಾಯ ಹೆಚ್ಚಾಗಲಿದೆ. ವೃತ್ತಿ ಜೀವನದಲ್ಲಿ ಲಾಭವಾಗಲಿದೆ. ನೀವು ಎಲ್ಲವನ್ನೂ ಎಷ್ಟು ಚೆನ್ನಾಗಿ ಮಾಡುತ್ತೀರಿ ಎಂದರೆ ಶತ್ರುಗಳು ಸಹ ನಿಮ್ಮನ್ನು ಪ್ರಶಂಸಿಸುತ್ತಾರೆ. ಕೌಟುಂಬಿಕ ಜೀವನವೂ ಉತ್ತಮವಾಗಿರುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News