ನವದೆಹಲಿ : ಸಾಮುದ್ರಿಕ ಶಾಸ್ತ್ರದ ಪ್ರಕಾರ (Samudrika Shastra), ದೇಹದ ಪ್ರತಿಯೊಂದು ಅಂಗಗಳ ವಿನ್ಯಾಸದ ಪ್ರಕಾರ, ವ್ಯಕ್ತಿಯ ಸ್ವಭಾವ, ನಡವಳಿಕೆ ಮತ್ತು ಭವಿಷ್ಯವನ್ನು ಹೇಳಲಾಗುತ್ತದೆ. ಇದರೊಂದಿಗೆ, ಯಾವುದೇ ವ್ಯಕ್ತಿಯ ಬಗೆಗಿನ ಅನೇಕ ರಹಸ್ಯಗಳನ್ನು ತಿಳಿದುಕೊಳ್ಳಬಹುದು. ಇಂದು ನಾವು ಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖಿಸಲಾದ ವಿಧಾನಗಳಿಂದ ಮೂಗಿನ ವಿವಿಧ ವಿನ್ಯಾಸಗಳ ಆಧಾರದ ಮೇಲೆ ತಿಳಿಸಲಾದ ಸ್ವಭಾವ ಮತ್ತು ಭವಿಷ್ಯಡ ಬಗ್ಗೆ ಹೇಳಲಿದ್ದೇವೆ (Nose shapes meaning).
ಮೂಗಿನ ಆಕಾರದಿಂದ ಭವಿಷ್ಯವನ್ನು ತಿಳಿಯಿರಿ :
ಸಣ್ಣ ಮೂಗು ಹೊಂದಿರುವ ಜನರು :
ಸಾಮುದ್ರಿಕ ಶಾಸ್ತ್ರದ ಪ್ರಕಾರ (Samudrika Shastra), ಮೂಗು ತುಂಬಾ ಚಿಕ್ಕದಾಗಿದ್ದರೆ, ಅವರು ಚೇಷ್ಟೆಯ ಸ್ವಭಾವವನ್ನು ಹೊಂದಿರುತ್ತಾರೆ. ಅವರು ನಿರಾತಂಕವಾಗಿರುತ್ತಾರೆ ಮತ್ತು ಸ್ನೇಹಪರ ಜೀವನವನ್ನು ನಡೆಸುತ್ತಾರೆ. ಆದರೆ ಅವರ ದೂರದೃಷ್ಟಿ ಸಮಾಜದಲ್ಲಿ ಅವರಿಗೆ ವಿಭಿನ್ನದ ಗುರುತನ್ನು ನೀಡುತ್ತದೆ.
ಇದನ್ನೂ ಓದಿ : Jupiter Transit Effect On Zodiac: ಅಸ್ತನಾದ ಗುರು ಕೂಡ ಈ 4 ರಾಶಿಗಳ ಜನರ ಭಾಗ್ಯ ಬೆಳಗಲಿದ್ದಾನೆ
ಉದ್ದನೆಯ ಮೂಗು ಹೊಂದಿರುವವರು:
ಉದ್ದನೆಯ ಮೂಗು ಹೊಂದಿರುವವರು (Long nose shape)ಯಾವುದೇ ವಿಷಯದಲ್ಲಿ ದೃಢ ನಿರ್ಧಾರ ಹೊಂದಿರುತ್ತಾರೆ . ಅವರು ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚು ಆಸಕ್ತಿ ವಹಿಸುವುದಿಲ್ಲ. ಧಾರ್ಮಿಕ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅವರು ದುಬಾರಿ ವಸ್ತುಗಳನ್ನು ಬಳಸಲು ಇಷ್ಟಪಡುತ್ತಾರೆ.
ತೆಳ್ಳಗಿನ ಮೂಗು ಇರುವವರು:
ತುಂಬಾ ತೆಳ್ಳಗಿನ ಮೂಗು ಹೊಂದಿರುವವರು ಬಹಳ ಬೇಗ ಕೋಪಗೊಳ್ಳುತ್ತಾರೆ. ಅಲ್ಲದೆ, ಈ ಜನರು ಸ್ವಲ್ಪ ಯಶಸ್ಸು ಪಡೆದ ತಕ್ಷಣ ಹಳೆಯ ಜನರನ್ನು ಮರೆತುಬಿಡುತ್ತಾರೆ. ಫ್ಯಾಶನ್ (Fashion) ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಾರೆ.
ದಪ್ಪ ಮೂಗು ಹೊಂದಿರುವ ಜನರು:
ದಪ್ಪ ಮೂಗು ಹೊಂದಿರುವ ಜನರು ಯಾವಾಗಲೂ ಸಂತೋಷವಾಗಿರುತ್ತಾರೆ. ಮಾತ್ರವಲ್ಲ, ಇತರರನ್ನು ಕೂಡಾ ಸಂತೋಷವಾಗಿಡಲು ಪ್ರಯತ್ನಿಸುತ್ತಾರೆ. ಇತರರು ಏನು ಹೇಳುತ್ತಾರೆ ಎನ್ನುವುದರ ಬಗ್ಗೆ ಅವರು ಯೋಚಿಸುವುದಿಲ್ಲ.
ಇದನ್ನೂ ಓದಿ : ಸೂರ್ಯ, ಮಂಗಳ ಮತ್ತು ಶುಕ್ರರು ಒಟ್ಟಾಗಿ ಬದಲಾಯಿಸುತ್ತಾರೆ ಈ ರಾಶಿಯವರ ಭವಿಷ್ಯ!
ಚಪ್ಪಟೆ ಮೂಗು ಹೊಂದಿರುವ ಜನರು:
ಯಾರ ಮುಗು ಚಪ್ಪಟೆಯಾಗಿರುತ್ತದೆಯೋ, ಅವರು ತುಂಬಾ ಭಾವನಾತ್ಮಕವಾಗಿರುತ್ತಾರೆ (emotional people). ಬೇರೆಯವರು ನೋವಿನಲ್ಲಿದ್ದರೆ ಇವರು ಸಹಿಸುವುದಿಲ್ಲ. ಸಾಮಾನ್ಯವಾಗಿ ಈ ಜನರ ಬಳಿ ಹೆಚ್ಚು ಹಣ ಇರುವುದಿಲ್ಲ. ಈ ಜನರು ಪೂಜೆ, ಪುನಸ್ಕಾರಗಳಲ್ಲಿ ಅಪಾರ ನಂಬಿಕೆಯನ್ನು ಹೊಂದಿರುತ್ತಾರೆ.
ಮೂಗು ಮೇಲಕ್ಕೆ ಎತ್ತಿದ್ದಂತಿದ್ದರೆ :
ಇವರು ತುಂಬಾ ಚುರುಕಾಗಿರುತ್ತಾರೆ. ಎಲ್ಲಾ ವಿಷಯಗಳಲ್ಲೂ ಇತರರಿಗಿಂತ ಮುಂದಿರುತ್ತಾರೆ. ಈ ಜನರು ಬೇಗನೆ ಇತರರನ್ನು ನಂಬುವುದಿಲ್ಲ. ಇವರು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ.
ಗಿಣಿ ಮೂಗು ಹೊಂದಿರುವವರು :
ಗಿಣಿಯಂತೆ ಚೂಪಾದ ಮೂಗು ಹೊಂದಿರುವವರ ಹೃದಯ ಶುದ್ಧವಾಗಿರುತ್ತದೆ. ಅವರುಬಹಳ ಶ್ರಮಪಟ್ಟು ಯಶಸ್ಸು ಪಡೆಯುವುದರಲ್ಲಿ ನಂಬಿಕೆ ಇಟ್ಟಿರುತ್ತಾರೆ. ತಾವು ಹಿಡಿದ ಕಾರ್ಯವನ್ನು ಪೂರ್ಣಗೊಳಿಸಿದ ನಂತರವೇ ಇವರು ನಿಟ್ಟಿಸಿರು ಬಿಡುತ್ತಾರೆ. ಯಾರು ಏನು ಯೋಚಿಸುತ್ತಾರೆ ಎನ್ನುವುದರ ಬಗ್ಗೆ ಇವರು ತಲೆಕೆಡಿಸಿಕೊಳ್ಳುವುದಿಲ್ಲ. ತಾವು ಮಾಡಬೇಕು ಎಂದು ಅಂದುಕೊಂಡಿದ್ದರೆ ಅದನ್ನು ಮಾಡಿಯೇ ಮುಗಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.