Rakhi Mantra : ನಾಳೆ ರಾಖಿ ಹಬ್ಬ.. ಅಣ್ಣನಿಗೆ ಯಾವುದೇ ಕೇಡು ಬಾರದಿರಲಿ ಅಂತ ರಕ್ಷಾ ಕವಚ ಕಟ್ಟುತ್ತಾಳೆ ಸಹೋದರಿ. ಸಹೋದರ ತಂಗಿ-ಅಕ್ಕನಿಗೆ ಉಡುಗೊರೆಗಳನ್ನು ನೀಡುವ ಮೂಲಕ ಸದಾ ನಿನ್ನ ನಗುವಿಗಾಗಿ ಶ್ರಮಿಸುತ್ತೇನೆ ಎಂದು ಅಭಯ ನೀಡುತ್ತಾನೆ. ಒಂದು ಕಾಲದಲ್ಲಿ ಒಡ ಹುಟ್ಟಿದವರು ಮಾತ್ರ ಈ ಹಬ್ಬ ಆಚರಿಸುತ್ತಿದ್ದರು.. ಈಗ ಅಣ್ಣ-ತಮ್ಮ ಎಂದು ಭಾವಿಸುವ ಎಲ್ಲರಿಗೂ ಸಹೋದರಿ ಪ್ರೀತಿಯಿಂದ ರಾಖಿ ಕಟ್ಟಿ ಸಂಭ್ರಮಿಸುತ್ತಾಳೆ..
ಬಂಧು-ಬಳಗವಿದ್ದರೂ ಪರವಾಗಿಲ್ಲ.. ರಕ್ತಸಂಬಂಧ ಬೇಕಿಲ್ಲ... ಆತ್ಮ ಬಂಧ ಸಾಕು... ರಾಖಿ ಕಟ್ಟಿ.... ಅವರನ್ನೇ ತಮ್ಮ ಕುಟುಂಬವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಇಂದಿನ ದಿನಗಳಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಸಾಲು ಸಾಲು ಅತ್ಯಾಚಾರಗಳು.. ಕೊಲೆಗಳು.. ಮಹಿಳೆಯರ ಮೇಲೆ ನಡೆಯುತ್ತಲೇ ಇವೆ. ಈ ಹೊತ್ತಿನಲ್ಲಿ ಈ ರಕ್ಷಾ ಬಂಧನದ ಫಲವಾಗಿ ಮಹಿಳೆಯರ ರಕ್ಷಣೆಗೆ ಪ್ರತಿಯೊಬ್ಬ ಸಹೋದರನೂ ಸೈನಿಕನಾಗಬೇಕು.
ಇದನ್ನೂ ಓದಿ:
ರಕ್ಷಾಬಂಧನವು ಸಂಬಂಧಗಳು, ಏಕತೆ ಮತ್ತು ಸಂಬಂಧಿಕರ ನಡುವಿನ ಪರಸ್ಪರ ಸಹಕಾರದ ಸಂಕೇತವಾಗಿದೆ. ನಮ್ಮ ಭಾರತೀಯ ಸಹೋದರ ಸಹೋದರಿಯರು ರಾಖಿ ಹಬ್ಬವನ್ನು ಒಂದು ವಿಧಾನದ ಪ್ರಕಾರ ಆಚರಿಸುತ್ತಾರೆ. ರಾಖಿ ಹಬ್ಬದ ದಿನ ಬೆಳಿಗ್ಗೆ ಸಹೋದರಿಯರು ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸಿ ರಾಖಿ ಕಟ್ಟಲು ಸಿದ್ಧರಾಗುತ್ತಾರೆ. ಸಹೋದರರು ತಮ್ಮ ಪ್ರೀತಿಯ ಸಹೋದರಿಯರು ಕಟ್ಟುವ ರಾಖಿಗಳನ್ನು ಸ್ವೀಕರಿಸಿ ಅವಳನ್ನು ಸಂತೋಷಪಡಿಸಲು ಉಡುಗೊರೆಗಳನ್ನು ನೀಡುತ್ತಾರೆ..
ಆದರೆ ರಾಖಿ ಕಟ್ಟುವ ಮುನ್ನ ಸಹೋದರಿ ಹೇಳಬೇಕಾದ ಮಂತ್ರವೊಂದಿದೆ. ಇದನ್ನು ಕೆಲವೇ ಕೆಲವು ಪ್ರದೇಶಗಳಲ್ಲಿ ಇಂದಿಗೂ ಹೇಳುತ್ತಾರೆ.. ಸಹೋದರನಿಗೆ ಕಟ್ಟುವ ಈ ರಕ್ಷೆಯು ಅವನನ್ನು ರಕ್ಷಿಸಲಿ ಎಂಬುವುದು ಈ ಮಂತ್ರದ ಅರ್ಥ.. ಶ್ಲೋಕ ಈ ಕೆಳಗಿನಂತಿದೆ..
ಯೇನ ಬದ್ಧೋ ಬಲಿ: ದನವೇಂದ್ರೋ ಮಹಾಬಲ:!
ತೇನ ತ್ವಮಭಿಬಧ್ನಾಮಿ ರಕ್ಷೇ ಮಾ ಕಾಲ ಮಾ ಕಾಲ !!
ಹಿಂದೂ ಸಂಪ್ರದಾಯದ ಪ್ರಕಾರ, ಈ ಹಬ್ಬವನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ನಮ್ಮ ದೇಶದಾದ್ಯಂತ ಸಹೋದರ ಸಹೋದರಿಯರು ತಮ್ಮ ನಡುವಿನ ಪ್ರೀತಿಯ ಸಂಕೇತವಾಗಿ ಆಚರಿಸುತ್ತಾರೆ. ಸಮಾಜದಲ್ಲಿ ಮಾನವೀಯ ಮೌಲ್ಯಗಳು ಹೊತ್ತಿ ಉರಿಯುತ್ತಿರುವ ಇಂದಿನ ದಿನಗಳಲ್ಲಿ ರಾಖಿ ಹಬ್ಬವನ್ನು ಆಚರಿಸುವ ಅಗತ್ಯವಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ