Makar Sankranti 2022: ಮಕರ ಸಂಕ್ರಾಂತಿಯಂದು ನಿರ್ಮಾಣಗೊಳ್ಳುತ್ತಿದೆ ಈ ತ್ರಿಗ್ರಹಿ ಯೋಗ, ಈ ಐದು ರಾಶಿ ಜನರಿಗೆ ಲಾಭ ತರಲಿದೆ

Makar Sankranti 2022: ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯನು (Sun Transit 2022) ಜನವರಿ 14, 2022 ರಂದು ಮಧ್ಯಾಹ್ನ 2:28 ಕ್ಕೆ ಅವನ ಪುತ್ರ ಶನಿಯ ಮಾಲೀಕತ್ವದ ಮಕರ ರಾಶಿಗೆ (Astrology) ಪ್ರವೇಶಿಸಲಿದ್ದಾನೆ. ಮಾರ್ಚ್ 14 ರ ರಾತ್ರಿ 12.15 ನಿಮಿಷಗಳವರೆಗೆ ಸೂರ್ಯನು ಮಕರ ರಾಶಿಯಲ್ಲಿಯಲ್ಲಿಯೇ (Zodiac Sign) ಇರಲಿದ್ದಾನೆ.

Written by - Nitin Tabib | Last Updated : Jan 7, 2022, 05:00 PM IST
  • ಈ ಬಾರಿಯ ಮಕರ ಸಂಕ್ರಾಂತಿಯಂದು ನಿರ್ಮಾಣಗೊಳ್ಳುತ್ತಿದೆ ಈ ಯೋಗ.
  • ಕೆಲ ರಾಶಿಗಳಿಗೆ ಶುಭಫಲ ಪ್ರಾಪ್ತಿ, ಕೆಲವರು ಎಚ್ಚರಿಕೆಯಿಂದ ಇರಬೇಕು.
  • ನಿಮ್ಮ ರಾಶಿಗೆ ಯಾವ ಫಲ ಪ್ರಾಪ್ತಿ ತಿಳಿಯಲು ಸುದ್ದಿ ಓದಿ.
Makar Sankranti 2022: ಮಕರ ಸಂಕ್ರಾಂತಿಯಂದು ನಿರ್ಮಾಣಗೊಳ್ಳುತ್ತಿದೆ ಈ ತ್ರಿಗ್ರಹಿ ಯೋಗ, ಈ ಐದು ರಾಶಿ ಜನರಿಗೆ ಲಾಭ ತರಲಿದೆ title=
Makar Sankranti 2022 (File Photo)

Makar Sankranti 2022: ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯನು (Sun Transit 2022) ಜನವರಿ 14, 2022 ರಂದು ಮಧ್ಯಾಹ್ನ 2:28 ಕ್ಕೆ ಅವನ ಪುತ್ರ ಶನಿಯ ಮಾಲೀಕತ್ವದ ಮಕರ ರಾಶಿಗೆ (Astrology) ಪ್ರವೇಶಿಸಲಿದ್ದಾನೆ. ಮಾರ್ಚ್ 14 ರ ರಾತ್ರಿ 12.15 ನಿಮಿಷಗಳವರೆಗೆ ಸೂರ್ಯನು ಮಕರ ರಾಶಿಯಲ್ಲಿಯಲ್ಲಿಯೇ (Zodiac Sign) ಇರಲಿದ್ದಾನೆ. ಇದೇ ವೇಳೆ ಶನಿದೇವ (Shani Dev) ಈಗಾಗಲೇ ತನ್ನದೇ ಆದ ಮಕರ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಡಿಸೆಂಬರ್ 2021 ರಲ್ಲಿ ಬುಧ ಕೂಡ ಮಕರ ರಾಶಿಗೆ ಪ್ರವೇಶಿಸಿದ್ದ. ಇಂತಹ ಪರಿಸ್ಥಿತಿಯಲ್ಲಿ ಮಕರ ರಾಶಿಯಲ್ಲಿ ಮೂರು ಗ್ರಹಗಳ ಸಂಯೋಜನೆ (Planatory Transit 2022) ನಡೆಯಲಿದ್ದು, ತ್ರಿಗ್ರಹಿ ಯೋಗ (Trigrahi Yog) ನಿರ್ಮಾಣಗೊಳ್ಳಲಿದೆ. ಈ ಯೋಗವು 5 ರಾಶಿಗಳಿಗೆ ಮಂಗಳಕರ ಮತ್ತು 7 ರಾಶಿಗಳಿಗೆ ಅಶುಭಕರ ಎಂದು ಸಾಬೀತಾಗಲಿದೆ.  ಈ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ, 

ಈ ರಾಶಿಗಳ ಜನರ ಅದೃಷ್ಟ ಖುಲಾಯಿಸಲಿದೆ
ಕರ್ಕ - ಈ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ. ನೀವು ಒಳ್ಳೆಯ ಸುದ್ದಿ ಪಡೆಯಬಹುದು. ವ್ಯಾಪಾರದಲ್ಲಿ ಲಾಭವಾಗಲಿದೆ.
ಸಿಂಹ - ನೀವು ಹಳೆಯ ವಿವಾದಗಳಿಂದ ಮುಕ್ತರಾಗುತ್ತೀರಿ. ಧನಲಾಭ ಪ್ರಾಪ್ತಿಯಾಗಲಿದ. ಅತ್ತೆಯ ಕಡೆಯಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.
ತುಲಾ - ನಿಮ್ಮ ಪಾಲಿಗೆ ದೊಡ್ಡ ಲಾಭ ಕಾದಿದೆ. ವ್ಯವಹಾರದಲ್ಲಿ ಯಶಸ್ಸಿನ ಅವಕಾಶವಿರುತ್ತದೆ. ನೀವು ವಿದೇಶಿ ಪ್ರವಾಸಕ್ಕೆ ಹೋಗಬಹುದು. ನಿಂತುಹೋದ ಹಣ ನಿಮ್ಮ ಕೈಸೇರಲಿದೆ.
ವೃಶ್ಚಿಕ ರಾಶಿ- ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವ್ಯಾಪಾರದಲ್ಲಿ ಲಾಭದ ಸೂಚನೆಗಳಿವೆ. ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು.
ಕುಂಭ- ಸೌಕರ್ಯಗಳು ಹೆಚ್ಚಾಗಲಿವೆ. ವಿದೇಶ ಪ್ರಯಾಣದ ಅವಕಾಶವಿರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಗಿರಲಿದೆ.

ಇದನ್ನೂ ಓದಿ-Japa Mala: ಜಪಮಾಲೆಯಲ್ಲಿ ಕೇವಲ 108 ಮಣಿಗಳು ಮಾತ್ರ ಏಕಿವೆ ಎಂದು ಎಂದಾದರೂ ಯೋಚಿಸಿದ್ದೀರಾ?

ಈ ರಾಶಿಯ ಜನರು ಎಚ್ಚರಿಕೆ ವಹಿಸಬೇಕು
ಮೇಷ ರಾಶಿ- ಮೇಷ ರಾಶಿಯಲ್ಲಿ ಹತ್ತನೇ ಮನೆಯಲ್ಲಿ ಸೂರ್ಯ ಮತ್ತು ಬುಧ ಇರುವುದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಕೆಲಸದ ಸ್ಥಳದಲ್ಲಿ ತೊಂದರೆಗಳು ಎದುರಾಗಬಹುದು. ಹಣ ಕೈಯಿಂದ ಜಾರಲಿದೆ.
ವೃಷಭ ರಾಶಿ- ಸೂರ್ಯನು ಒಂಬತ್ತನೇ ಮನೆಯಲ್ಲಿರುವುದರಿಂದ ಕುಟುಂಬದ ಸಂತೋಷ ಮತ್ತು ಶಾಂತಿ ಭಂಗವಾಗುವ ಸಾಧ್ಯತೆ ಇದೆ. ತಂದೆಯೊಂದಿಗಿನ ಸಂಬಂಧವು ಹಳಸಬಹುದು. ಕುಟುಂಬದಲ್ಲಿ ಕಲಹ ಉಂಟಾಗಬಹುದು.
ಮಿಥುನ ರಾಶಿ - ಸೂರ್ಯ ಮತ್ತು ಶನಿ ಎಂಟನೇ ಮನೆಯಲ್ಲಿರುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ದೂರ ಪ್ರಯಾಣ ಸಂಭವಿಸಬಹುದು.
ಕನ್ಯಾ ರಾಶಿ - ಈ ಸಮಯದಲ್ಲಿ ನೀವು ಮಕ್ಕಳಿಂದ ತೊಂದರೆ ಅನುಭವಿಸಬಹುದು. ಜೀವನದಲ್ಲಿ ಏರಿಳಿತಗಳಿರುತ್ತವೆ. ವಿದ್ಯಾರ್ಥಿಗಳು ಅಧ್ಯಯನದಿಂದ ವಿಚಲಿತರಾಗಬಹುದು.
ಧನು ರಾಶಿ - ಈ ಸಮಯವು ನಿಮಗೆ ಶುಭಕರವೆಂದು ಹೇಳಲಾಗುವುದಿಲ್ಲ. ಕುಟುಂಬದಲ್ಲಿ ಉದ್ವಿಗ್ನ ವಾತಾವರಣವಿರುತ್ತದೆ. ಹಣವನ್ನು ಉಳಿಸುವಲ್ಲಿ ಸಮಸ್ಯೆಗಳಿರುತ್ತವೆ.
ಮಕರ ರಾಶಿ - ನೀವು ಹಣಕಾಸಿನ ಸಮಸ್ಯೆಗಳಿಂದ ಸುತ್ತುವರೆದಿರಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಮೀನ ರಾಶಿ - ಈ ಸಮಯದಲ್ಲಿ ಸಂಗಾತಿಯೊಂದಿಗೆ ವಾಗ್ವಾದ ಉಂಟಾಗಬಹುದು. ಉದ್ಯೋಗದಲ್ಲಿ ಸಮಸ್ಯೆಗಳು ಉಂಟಾಗಬಹುದು.

ಇದನ್ನೂ ಓದಿ-Money Remedies: ಶುಕ್ರವಾರ ಹಣಕ್ಕೆ ಸಂಬಂಧಿಸಿದ ಈ ಕೆಲಸವನ್ನು ಮರೆತೂ ಮಾಡಬೇಡಿ

(Disclaimer:ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ)

ಇದನ್ನೂ ಓದಿ-Calendar 2022: ಕ್ಯಾಲೆಂಡರ್ ವಿಚಾರದಲ್ಲಿ ನೀವೂ ಈ ತಪ್ಪನ್ನು ಮಾಡುತ್ತಿದ್ದೀರಾ? ಈಗಲೇ ಎಚ್ಚೆತ್ತುಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News