Monday Fasting: ಸೋಮವಾರ 'ಉಪವಾಸ ವ್ರತ' ಮಾಡುವುದರಿಂದ ಸಂಪತ್ತು ಪ್ರಾಪ್ತಿ!

Last Updated : Mar 21, 2021, 05:55 PM IST
  • ಸೋಮವಾರ ಮಾಡುವ ವ್ರತವು‌ ಶಿವನಿಗೆ ಅರ್ಪಿಸಲಾಗಿದೆ.
  • ಸೋಮವಾರದ ಉಪವಾಸ ಅಥವಾ ಪೂಜೆಯನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾಡಲಾಗುತ್ತದೆ.
  • ಕನ್ಯೆಯರು ಈ ಆಸೆಯಿಂದ ಸೋಮವಾರ ಉಪವಾಸ ವ್ರತವನ್ನು ಮಾಡುತ್ತಾರೆ.
Monday Fasting: ಸೋಮವಾರ 'ಉಪವಾಸ ವ್ರತ' ಮಾಡುವುದರಿಂದ ಸಂಪತ್ತು ಪ್ರಾಪ್ತಿ! title=

ಸೋಮವಾರ ಮಾಡುವ ವ್ರತವು‌ ಶಿವನಿಗೆ ಅರ್ಪಿಸಲಾಗಿದೆ. ನಾವು ಸೋಮವಾರ ಶಿವನನ್ನು ಪೂಜಿಸಿದರೆ, ಆಗ ಶಿವನು ಸಂತಸಗೊಂಡು ನಮಗೆ ಬೇಕಾದ ಆಶೀರ್ವಾದವನ್ನು ನೀಡುತ್ತಾನೆ. ಹೊಸ ಮನೆಗೆ ಪ್ರವೇಶಿಸಲು ಮತ್ತು ಮದುವೆಗೆ ಸಂಬಂಧಿಸಿದ ವ್ಯವಸ್ಥೆಗಳನ್ನು ಮಾಡಲು ಮತ್ತು ಕ್ರೀಡಾ ಸಂಬಂಧಿತ ಕೆಲಸಗಳಿಗೆ ಸೋಮವಾರ ಅತ್ಯಂತ ಸೂಕ್ತ ದಿನವೆಂದು ಪರಿಗಣಿಸಲಾಗುತ್ತದೆ. ಸೋಮವಾರದ ಉಪವಾಸ ಅಥವಾ ಪೂಜೆಯನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾಡಲಾಗುತ್ತದೆ.

ಸೋಮವಾರ ವ್ರತ: ಸೋಮವಾರದಂದು ಭಗವಾನ್‌ ಶಿವನನ್ನು ಪೂಜಿಸಿ ಉಪವಾಸ(Fasting) ವ್ರತವನ್ನು ಆಚರಿಸುವ ಮೂಲಕ ಓರ್ವ ವ್ಯಕ್ತಿಯ ಎಲ್ಲಾ ಆಸೆಗಳನ್ನು ಈಡೇರಿಸಲಾಗುತ್ತದೆ ಮತ್ತು ವ್ಯಕ್ತಿಯು ಸದ್ಭಾವನೆ ಪಡೆಯುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದ ಹೆಚ್ಚಿನ ಜನರು ಸೋಮವಾರ ವ್ರತವನ್ನು ಆಚರಿಸುತ್ತಾರೆ.

Salt Vaastu Tips: ಮನೆಯಲ್ಲಿ 'ನೆಗಟಿವ್ ಎನರ್ಜಿ' ತೆಗೆದು ಹಾಕಲು ಉಪ್ಪಿನ ವಾಸ್ತು ಪರಿಹಾರ!

ಸೋಮವಾರ ಶಿವ ಪೂಜೆ: ಶಿವ ಭಕ್ತರು ಸೋಮವಾರದ ದಿನದಂದು ಪಾರ್ವತಿ ದೇವಿಯನ್ನು ಮತ್ತು ಭಗವಾನ್ ಶಿವನ(Lord Shiva)ನ್ನು ಪೂಜಿಸಲು ಇಷ್ಟಪಡುತ್ತಾರೆ. ಶ್ರಾವಣ ತಿಂಗಳಲ್ಲಿ ಸೋಮವಾರ ಉಪವಾಸವನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಸೋಮವಾರ ಶಿವನನ್ನು ಪೂಜಿಸುವುದರಿಂದ ನಮ್ಮೆಲ್ಲಾ ಮನದಾಸೆಯು ಈಡೇರುತ್ತದೆ ಎನ್ನುವ ನಂಬಿಕೆಯಿದೆ.

Daily Horoscope: ದಿನಭವಿಷ್ಯ 21-03-2021 Today astrology

ಆರೋಗ್ಯಕ್ಕೆ ಸೋಮವಾರ ವ್ರತ: ಉತ್ತಮ ಆರೋಗ್ಯಕ್ಕಾಗಿ ಸೋಮವಾರ ಶಿವ ಪೂಜೆಯನ್ನು ಮಾಡಬೇಕು. ಈ ಪೂಜೆಯಿಂದ ಆರೋಗ್ಯದ ಸಮಸ್ಯೆ(Health Problem)ಗಳು ನಿವಾರಣೆಯಾಗುತ್ತದೆ. ಮತ್ತು ಸೋಮವಾರದ ಶಿವ ಪೂಜೆಯಿಂದ ಶಿವನು ನಕಾರಾತ್ಮಕತೆಯನ್ನು ದೂರಾಗಿಸುತ್ತಾನೆ. ಮತ್ತು ಶನಿಯಿಂದಾಗುವ ಸಮಸ್ಯೆಗಳನ್ನು ದೂರಾಗಿಸುತ್ತಾನೆ.

Vastu Tips: ಮನೆಯಲ್ಲಿ ಒಂದು ನವಿಲುಗರಿ ಇಡುವುದರಿಂದಾಗುವ ಲಾಭಗಳು

ಕನ್ಯೆಯರ ಸೋಮವಾರ ವ್ರತ: ಸೋಮವಾರದ ದಿನದಂದು ಶಿವನನ್ನು ಪೂಜಿಸಿ ಉಪವಾಸ ವ್ರತವನ್ನು ಮಾಡುವ ಅವಿವಾಹಿತ ಹುಡುಗಿಯರಿಗೆ(Unmarried Girl) ಆದರ್ಶ ಪತಿಯನ್ನು ನೀಡುತ್ತಾನೆ ಅಥವಾ ಆ ಕನ್ಯೆಗೆ ಸದ್ಗುಣಶೀಲ ವರನನ್ನು ನೀಡುತ್ತಾನೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಹೆಚ್ಚಿನ ಕನ್ಯೆಯರು ಈ ಆಸೆಯಿಂದ ಸೋಮವಾರ ಉಪವಾಸ ವ್ರತವನ್ನು ಮಾಡುತ್ತಾರೆ.

Rahu Planet Bad Effects: ರಾಹು ಗ್ರಹದ ನಕ್ಷತ್ರ ಪರಿವರ್ತನೆ: ಐದು ರಾಶಿಯವರಿಗೆ ಸಂಕಷ್ಟ ಮತ್ತೆ ಕೆಲವರಿಗೆ ಅದೃಷ್ಟ!

ಸಂಪತ್ತಿಗಾಗಿ ಉಪವಾಸ ವ್ರತ: ಸೋಮವಾರ ಉಪವಾಸಕ್ಕೆ ಸಂಬಂಧಿಸಿದ ಅನೇಕ ಕಥೆಗಳು ಪ್ರಸಿದ್ಧವಾಗಿವೆ, ಅದರಲ್ಲಿ ಮೊದಲನೆಯ(Brahmin)ದು ಬಡ ಬ್ರಾಹ್ಮಣನ ಕಥೆ. ಈ ಕಥೆಯ ಪ್ರಕಾರ, ಓರ್ವ ಬಡ ಬ್ರಾಹ್ಮಣನು ಸೋಮವಾರದಂದು ಉಪವಾಸ ವ್ರತವನ್ನು ಮಾಡುತ್ತಾನೆ. ಆತನು ತನ್ನ ಮನಸ್ಸಿನಲ್ಲಿ ಯಾವುದೇ ಕಲ್ಮಶವನ್ನು ಇಟ್ಟುಕೊಳ್ಳದೇ ಉಪವಾಸ ವ್ರತವನ್ನು ಮಾಡಿರುವುದರಿಂದ ಅವನು ಬಹುಬೇಗ ಅಪಾರ ಸಂಪತ್ತನ್ನು ಪಡೆಯುತ್ತಾನೆ. ಈ ಕಥಯ ಪ್ರಕಾರ, ನಾವು ಸೋಮವಾರ ಉಪವಾಸ ವ್ರತವನ್ನು ಮಾಡಿ ಶಿವನನ್ನು ಪೂಜಿಸುವುದರಿಂದ ಅಪಾರ ಸಂಪತ್ತನ್ನು ಪಡೆದುಕೊಳ್ಳಬಹುದು.

Daily Horoscope: ದಿನಭವಿಷ್ಯ 20-03-2021 Today astrology

ಸಂತಾನಕ್ಕಾಗಿ ಸೋಮವಾರ ವ್ರತ: ಎರಡನೆಯ ಕಥೆ ಶ್ರೀಮಂತ ಮತ್ತು ಹಣದಾಸೆಗಾರನ ಕುರಿತಾಗಿದೆ, ಕಥೆಯ ಪ್ರಕಾರ, ಹಣದಾಸೆಗಾರನ ಬಳಿ ಸಕಲ ಸಂಪತ್ತಿದ್ದರೂ ಕೂಡ ಆತನಿಗೆ ಮಕ್ಕಳಿರುವುದಿಲ್ಲ. ಆದ್ದರಿಂದ ಅವನು ಸೋಮವಾರದಂದು ಭಗವಾನ್‌ ಶಿವನನ್ನು ಪೂಜಿಸಿ ಉಪವಾಸ ವ್ರತವನ್ನು ಮಾಡಿದ ಪರಿಣಾಮದಿಂದಾಗಿ ಅವನಿಗೆ ಗಂಡು ಮಗು(Baby Boy) ಜನಿಸುತ್ತದೆ. ಆದರೆ ಈ ಮಗು ಅಕಾಲಿಕ ಮರಣಕ್ಕೆ ತುತ್ತಾಗುತ್ತದೆ. ಆಗ ಈ ಹಣದಾಸೆಗಾರನು ಶಿವ ಮತ್ತು ಪಾರ್ವತಿಯನ್ನು ಪೂಜಿಸಿ ಮತ್ತೊಮ್ಮೆ ತನ್ನ ಮಗನನ್ನು ಜೀವಂತವಾಗಿ ಪಡೆದುಕೊಳ್ಳುತ್ತಾನೆ. ಸಂತಾನ ಇಲ್ಲದ ಪತಿ - ಪತ್ನಿಯರು ಅಥವಾ ದಂಪತಿಗಳು ಸೋಮವಾರದಂದು ಉಪವಾಸ ವ್ರತವನ್ನು ಆಚರಿಸುವುದರಿಂದ ಮಕ್ಕಳ ಭಾಗ್ಯವನ್ನು ಪಡೆದುಕೊಳ್ಳುತ್ತಾರೆ.

Housing - ಕಡಿಮೆ ವೆಚ್ಚದಲ್ಲಿ ಸುಂದರ ಮನೆ ನಿರ್ಮಾಣ ಹೇಗೆ ಮಾಡಬೇಕು?

ಸೋಮವಾರ ಶಿವ ಮಂತ್ರ: ಸೋಮವಾರದಂದು ಶಿವ ಮಂತ್ರವನ್ನು ಪಠಿಸುವುದು, ಶಿವಲಿಂಗಕ್ಕೆ ನೀರು(Water), ಬಿಲ್ವಪತ್ರೆ, ದಾತುರಾವನ್ನು ಅರ್ಪಿಸುವುದರಿಂದ ವ್ಯಕ್ತಿಯು ಶಾಂತ ಸ್ವಭಾವವನ್ನು ಹೊಂದುತ್ತಾನೆ ಮತ್ತು ಪ್ರೀತಿಯನ್ನು ಪಡೆಯುತ್ತಾನೆ.

ಚಹಾಗೆ ಸಂಬಂಧಿಸಿದ ಈ General Knowledge ನಿಮಗೆ ತಿಳಿದಿದೆಯಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

, Benefits, Lord Shiva, Life Style, Astrology,

 

 

 

Trending News