ದಿನಕ್ಕೆ ಒಂದು ಕೆ.ಜಿ ತೂಕ ಕಳೆದುಕೊಳ್ಳಬೇಕೆ ? ಈ ಜ್ಯೂಸ್ ಕುಡಿಯಿರಿ

 Weight Lose Easy Tips :ಇಂದು ನಾವು ಅನುಸರಿಸುತ್ತಿರುವ ಆಹಾರ ಪದ್ದತಿಯೇ ತೂಕ ಹೆಚ್ಚಾಗಲು ಮುಖ್ಯ ಕಾರಣವಾಗಿದೆ. ದೈನಂದಿನ ಜೀವನದಲ್ಲಿ ಅನಗತ್ಯ ಮತ್ತು ಅನಾರೋಗ್ಯಕರ ಆಹಾರವನ್ನು ಸೇವಿಸುವುದರಿಂದ ದೇಹದ ಮೇಲೆ ಕೆಟ್ಟ  ಪರಿಣಾಮ ಬೀರುತ್ತದೆ. ತೂಕ ಹೆಚ್ಚಾಗುವುದರಿಂದ  ಅನೇಕ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ. 

Written by - Ranjitha R K | Last Updated : Mar 14, 2023, 02:47 PM IST
  • ಹೆಚ್ಚಿನ ಜನರು ತೂಕ ಇಳಿಸಿಕೊಳ್ಳಲು ವಿವಿಧ ವ್ಯಾಯಾಮ ಮಾಡುತ್ತಾರೆ.
  • ತೂಕ ಇಳಿಸಿಕೊಳ್ಳಲು ಜನರು ಕಟ್ಟುನಿಟ್ಟಿನ ಆಹಾರಕ್ರಮವನ್ನು ಸಹ ಅನುಸರಿಸುತ್ತಾರೆ.
  • ಸರಳವಾದ ಮನೆಮದ್ದುಗಳು ತೂಕ ಇಳಿಸುವಲ್ಲಿ ಪರಿಣಾಮಕಾರಿ.
ದಿನಕ್ಕೆ ಒಂದು ಕೆ.ಜಿ ತೂಕ ಕಳೆದುಕೊಳ್ಳಬೇಕೆ ? ಈ ಜ್ಯೂಸ್  ಕುಡಿಯಿರಿ    title=

Weight Lose Easy Tips : ತೂಕ ಇಳಿಸಿಕೊಳ್ಳುವುದು ಇಂದು ಪ್ರತಿಯೊಬ್ಬರು ಎದುರಿಸುವ ಸಾಮಾನ್ಯ ಸಭೆ. ಅದರಲ್ಲೂ ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಇನ್ನೂ ಕಷ್ಟ. ತೂಕ ಇಳಿಸಿಕೊಳ್ಳಲು ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರುವುದು ಬಹಳ ಮುಖ್ಯ. ಇಂದು ನಾವು ಅನುಸರಿಸುತ್ತಿರುವ ಆಹಾರ ಪದ್ದತಿಯೇ ತೂಕ ಹೆಚ್ಚಾಗಲು ಮುಖ್ಯ ಕಾರಣವಾಗಿದೆ. ದೈನಂದಿನ ಜೀವನದಲ್ಲಿ ಅನಗತ್ಯ ಮತ್ತು ಅನಾರೋಗ್ಯಕರ ಆಹಾರವನ್ನು ಸೇವಿಸುವುದರಿಂದ ದೇಹದ ಮೇಲೆ ಕೆಟ್ಟ  ಪರಿಣಾಮ ಬೀರುತ್ತದೆ. ತೂಕ ಹೆಚ್ಚಾಗುವುದರಿಂದ  ಅನೇಕ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ.  

ಹೆಚ್ಚಿನ ಜನರು ತೂಕ ಇಳಿಸಿಕೊಳ್ಳಲು ವಿವಿಧ ವ್ಯಾಯಾಮ ಮತ್ತು ಕಸರತ್ತುಗಳ ಮೊರೆ ಹೋಗುತ್ತಾರೆ. ತೂಕ ಇಳಿಸಿಕೊಳ್ಳಲು ಜನರು ಕಟ್ಟುನಿಟ್ಟಿನ ಆಹಾರಕ್ರಮವನ್ನು ಸಹ ಅನುಸರಿಸುತ್ತಾರೆ. ಆದರೆ, ಅನೇಕ ಬಾರಿ ಸರಳವಾದ ಮನೆಮದ್ದುಗಳು ಕೂಡಾ ತೂಕ ಇಳಿಸುವಲ್ಲಿ ಪರಿಣಾಮಕಾರಿಯಾಗಿರುತ್ತದೆ.  ಅತ್ಯಂತ ಸುಲಭವಾದ ಮಾರ್ಗವನ್ನು ಅನುಸರಿಸುವ ಮೂಲಕ ದಿನಕ್ಕೆ 1 ಕೆಜಿ ತೂಕವನ್ನು ಕಳೆದುಕೊಳ್ಳಬಹುದು.  

ಇದನ್ನೂ ಓದಿ : ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಈ ಒಂದು ಹಣ್ಣಿನ ಬೀಜ ಸಾಕು

ಒಂದು ದಿನದಲ್ಲಿ 1 ಕೆಜಿ ಕಳೆದುಕೊಳ್ಳುವುದು ಹೇಗೆ ? :
ತೂಕ ಇಳಿಸುವ ಪ್ರಯತ್ನದಲ್ಲಿ ಲೆಮನೇಡ್ ಫಾಸ್ಟ್ ಡಯಟ್ ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ಸೂಚಿಸುತ್ತವೆ.
ದೇಹದಿಂದ ಕೊಬ್ಬನ್ನು ವೇಗವಾಗಿ  ಕರಗಿಸಲು ನಿಂಬೆ ಸಹಾಯ ಮಾಡುತ್ತದೆ ಎನ್ನುವುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. ಆದ್ದರಿಂದ ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಬಯಸಿದರೆ,  ಲೆಮನ್  ಡಿಟಾಕ್ಸ್ ಡಯಟ್  ಅನ್ನು ಅನುಸರಿಸಬಹುದು. 

ಲೆಮನೇಡ್ ಡಯಟ್ : 
ಈ ಡಯೆಟ್ ನಲ್ಲಿ 4 ಗ್ಲಾಸ್ ನಿಂಬೆ ಪಾನಕವನ್ನು ಕುಡಿಯಬೇಕು. ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ  ಅಂಶವೆಂದರೆ ನಿಂಬೆ  ಪಾನಕ ತಯಾರಿಸುವಾಗ ಸಕ್ಕರೆಯ ಬದಲಿಗೆ ಜೇನುತುಪ್ಪವನ್ನು ಬಳಸಬೇಕು. ಇದು ಡಿಟಾಕ್ಸ್ ಪಾನೀಯವಾಗಿದೆ. ಇದು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ :  ಕಿಡ್ನಿ ಸ್ಟೋನ್ ಇದ್ದವರು ನಿತ್ಯ ಈ ಹಣ್ಣನ್ನು ತಿಂದರೆ ಔಷಧಿಯ ಅಗತ್ಯವೇ ಇರುವುದಿಲ್ಲ

ಲೆಮನೇಡ್ ಡಯಟ್ ರೆಸಿಪಿ : 
- 8 ಕಪ್ ನೀರು
- 6 ನಿಂಬೆಹಣ್ಣು
- 1/2 ಕಪ್ ಜೇನುತುಪ್ಪ
- ಕೆಲವು ಐಸ್ ತುಂಡುಗಳು
- 10 ಪುದೀನ ಎಲೆಗಳು

 ಈ ಜ್ಯೂಸ್ ಅನ್ನು ಯಾವಾಗ ಕುಡಿಯಬೇಕು ಮತ್ತು ಆಹಾರ ಕ್ರಮ ಹೇಗಿರಬೇಕು ? : 
 ಬೆಳಗಿನ ಉಪಾಹಾರ: 
ಬೆಳಗಿನ ಉಪಾಹಾರದಲ್ಲಿ ಹಣ್ಣುಗಳನ್ನು ಮಾತ್ರ ಸೇವಿಸಿ . ಆದರೆ ಬೆಳಗಿನ ಉಪಾಹಾರಕ್ಕೆ 30 ನಿಮಿಷಗಳ ಮೊದಲು, ಖಾಲಿ ಹೊಟ್ಟೆಯಲ್ಲಿ 1 ಗ್ಲಾಸ್ ನಿಂಬೆ ನೀರನ್ನು ಕುಡಿಯಬೇಕು. 

೧೧ ಗಂಟೆಯ ಸುಮಾರಿಗೆ ಮತ್ತೆ 1 ಗ್ಲಾಸ್ ನಿಂಬೆ ನೀರು, 1 ಬಾಳೆಹಣ್ಣು ಮತ್ತು 50 ಗ್ರಾಂ ಬಾದಾಮಿ  ಸೇವಿಸಿ.  

ಇದನ್ನೂ ಓದಿ :  Curry Leaves: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಈ 5 ಕಾಯಿಲೆ ಬರುವುದಿಲ್ಲ

ಮಧ್ಯಾಹ್ನದ ಭೋಜನ : 
ಊಟದಲ್ಲಿ ನೀವು ತರಕಾರಿ ಸಲಾಡ್ ತೆಗೆದುಕೊಳ್ಳಬೇಕು. ಇದಕ್ಕೆ ಆಲಿವ್ ಎಣ್ಣೆ ಮತ್ತು ನಿಂಬೆ ರಸವನ್ನು ಸೇರಿಸಿ.

ಸಂಜೆಯ ತಿಂಡಿ : 
ಸುಮಾರು 4 ಗಂಟೆಗೆ ಮತ್ತೆ 1 ಗ್ಲಾಸ್ ನಿಂಬೆ ನೀರು ಮತ್ತು ಸ್ವಲ್ಪ ಹಣ್ಣುಗಳನ್ನು ಸೇವಿಸಬೇಕು.

ರಾತ್ರಿ ಭೋಜನ: 
ಊಟಕ್ಕೆ ಕೆಲವು ನಿಂಬೆ ಹೋಳುಗಳು, ಹಸಿರು ಸಲಾಡ್ ಮತ್ತು ಮೀನು  ಸೇವಿಸಿ. ಅಲ್ಲದೆ, ಮಲಗುವ 2 ಗಂಟೆಗಳ ಮೊದಲು ನಿಂಬೆ ಪಾನಕ ಸೇವಿಸಬೇಕು.

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News