ಬೆಂಗಳೂರು: ಮಹಾನ್ ಅರ್ಥಶಾಸ್ತ್ರಜ್ಞ ಆಚಾರ್ಯ ಚಾಣಕ್ಯರು ತಮ್ಮ ನೀತಿಶ್ತಾಸ್ತ್ರವಾಗಿರುವ ಚಾಣಕ್ಯ ನೀತಿಯಲ್ಲಿ ಹಣಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ವಿಷಯಗಳ ಕುರಿತು ಉಲ್ಲೇಖಿಸಿದ್ದಾರೆ. ಸಂಪತ್ತಿನ ಅಧಿದೆವತೆಯಾಗಿರುವ ಲಕ್ಷ್ಮಿ ಯಾರ ಮೇಲೆ ಪ್ರಸನ್ನಳಾಗುತ್ತಾಳೆ ಎಂಬುದನ್ನು ಕೂಡ ಚಾಣಕ್ಯರು ತನ್ನ ನೀತಿಯಲ್ಲಿ ಹೇಳಿದ್ದಾರೆ. ಇದರ ಜೊತೆಗೆ ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಏನು ಮಾಡಬೇಕು ಎಂಬುದನ್ನು ಕೂಡ ಹೇಳಿದ್ದಾರೆ. ಹಣವಿಲ್ಲದೆ ಜೀವನ ಸಾಧ್ಯವಿಲ್ಲ ಎಂಬ ಸಂಗತಿ ಯಾರಿಗೂ ಹೇಳಬೇಕಾಗಿಲ್ಲ, ಆದರೆ ತಪ್ಪು ದಾರಿಯಲ್ಲಿ ಗಳಿಸಿದ ಹಣವು ಜೀವನದಲ್ಲಿ ಹಲವು ತೊಂದರೆಗಳಿಗೆ ಕಾರಣವಾಗುತ್ತದೆ. ಇದೇ ವೇಳೆ ಹಣದ ತಪ್ಪು ಬಳಕೆ ಉತ್ತಮ ಜೀವನವನ್ನು ಹಾಳುಮಾಡುತ್ತದೆ. ಆದ್ದರಿಂದ ಸದಾ ಶ್ರೀಮಂತರಾಗಿ ಉಳಿಯಲು ಮತ್ತು ಸುಖಮಯ ಜೀವನ ನಡೆಸಲು ಸರಿಯಾದ ಮಾರ್ಗದಲ್ಲಿ ಹಣ ಸಂಪಾದಿಸಿ ಅದನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ಚಾಣಕ್ಯರು ಹೇಳಿದ್ದಾರೆ .
ತಾಯಿ ಲಕ್ಷ್ಮಿ ಈ ಜನರ ಮೇಲೆ ಅಪಾರ ಕೃಪೆ ತೋರುತ್ತಾಳೆ
ಚಾಣಕ್ಯ ನೀತಿಯ ಪ್ರಕಾರ, ತಾಯಿ ಲಕ್ಷ್ಮಿ ಇಷ್ಟಪಡುವಂತಹ ಗುಣಗಳನ್ನು ಹೊಂದಿದವರ ಮೇಲೆ ಖಂಡಿತವಾಗಿಯೂ ಕೂಡ ತನ್ನ ಅಪಾರ ದಯೆ ತೋರುತ್ತಾಳೆ ಎನ್ನಲಾಗಿದೆ.
>> ಶ್ರದ್ಧೆಯುಳ್ಳವರು- ಕಷ್ಟಪಟ್ಟು ದುಡಿಯುವವರ ಮೇಲೆ ತಾಯಿ ಲಕ್ಷ್ಮಿ ಖಂಡಿತವಾಗಿಯೂ ಕೃಪೆ ತೋರುತ್ತಾಳೆ. ಇಂತಹ ಜನರು ತಮ್ಮ ಜೀವನದಲ್ಲಿ ತಡವಾಗಿ ಯಶಸ್ಸನ್ನು ಪಡೆಯಬಹುದು. ಆದರೆ ಅವರು ಅದನ್ನು ಖಂಡಿತವಾಗಿ ಪಡೆದೇ ತೀರುತ್ತಾರೆ. ಈ ಜನರು ತಮ್ಮ ಕಠಿಣ ಪರಿಶ್ರಮದ ಆಧಾರದ ಮೇಲೆ ಶ್ರೀಮಂತರಾಗುತ್ತಾರೆ. ಇಂತಹ ಜನರಿಗೆ ಅವರ ಶ್ರಮದ ಫಲವನ್ನು ತಾಯಿ ಲಕ್ಷ್ಮಿ ಖಂಡಿತವಾಗಿಯೂ ನೀಡುತ್ತಾಳೆ.
>> ಪ್ರಾಮಾಣಿಕ: ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಜನರು. ಹಾಗೆಯೇ ಯಾರಿಗೂ ಮೋಸ ಮಾಡದ ಜನರ ಮೇಲೆ ತಾಯಿ ಲಕ್ಷ್ಮಿ ಯಾವಾಗಲೂ ಕೃಪೆ ತೋರುತ್ತಾಳೆ, ಹಣ ಸಂಪಾದಿಸಲು ತಪ್ಪು ಮಾರ್ಗಗಳನ್ನು ಅಳವಡಿಸಿಕೊಳ್ಳದ ಇಂತಹ ಜನರ ಮೇಲೆ ತಾಯಿ ಲಕ್ಷ್ಮಿ ಖಂಡಿತವಾಗಿಯೂ ಒಂದು ಹಂತದಲ್ಲಿ ಅಥವಾ ಇನ್ನೊಂದರಲ್ಲಿ ಶ್ರೀಮಂತರನ್ನಾಗಿ ಮಾಡುತ್ತಾಳೆ. ಇದಲ್ಲದೆ ಇಂತಹ ಜನರಿಗೆ ಅವರ ಒಳ್ಳೆಯ ಕಾರ್ಯಗಳಿಂದ ಗೌರವವೂ ಸಿಗುತ್ತದೆ.
ಇದನ್ನೂ ಓದಿ-ರೈತರ ಆದಾಯ ಹೆಚ್ಚಿಸಲು ಸರ್ಕಾರ ಕೈಗೊಂಡಿದೆ ಈ ಕ್ರಮ, ಈ ಕೆಲಸಕ್ಕೆ ಸಿಗಲಿದೆ 2.5 ಲಕ್ಷ ರೂ.ಗಳು!
>> ದಾನ ಮಾಡುವ ಜನರು: ತಮ್ಮ ಆದಾಯದ ಒಂದು ಭಾಗವನ್ನು ದಾನಕ್ಕೆ ಮೀಸಲಿಡುವ ಜನರು ಬಡವರಿಗೆ ಸಹಾಯ ಮಾಡುತ್ತಾರೆ. ಅವರಿಗೆ ಎಂದೂ ಹಣದ ಕೊರತೆ ಎದುರಾಗುವುದಿಲ್ಲ, ಹೀಗಾಗಿ ತಾಯಿ ಲಕ್ಷ್ಮಿ ಅಂತಹವರಿಗೆ ಸಾಕಷ್ಟು ಸಂಪತ್ತನ್ನು ನೀಡುತ್ತಾಳೆ.
>> ನಿರಂತರವಾಗಿ ಜ್ಞಾನವನ್ನು ಪಡೆಯುವ ಜನರು: ಯಾವಾಗಲೂ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಳು ಪ್ರಯತ್ನಿಸುವ ಜನರು ತಮ್ಮ ಜೀವನದಲ್ಲಿ ಬಹಳ ಯಶಸ್ವಿಯಾಗುತ್ತಾರೆ. ತಮ್ಮ ಜ್ಞಾನದಿಂದಾಗಿ, ಅವರು ಘನತೆ ಗೌರವವನ್ನು ಪಡೆಯುತ್ತಾರೆ ಮತ್ತು ಶ್ರೀಮಂತರಾಗುತ್ತಾರೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ