Lakshmi Panchami: ಈ ಸುಲಭ ಕೆಲಸ ಮಾಡಿದ್ರೆ ಲಕ್ಷ್ಮಿದೇವಿಯ ಕೃಪೆ, ಹಣದ ಮಳೆಯಾಗುತ್ತದೆ!

ಪಂಚಾಂಗದ ಪ್ರಕಾರ ಲಕ್ಷ್ಮಿ ಪಂಚಮಿ ಏಪ್ರಿಲ್ 6ರಂದು ನಡೆಯಲಿದೆ. ಈ ದಿನದಂದು ಲಕ್ಷ್ಮಿ ದೇವಿಯ ಆರಾಧನೆಯು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗಿದೆ. ಇದಲ್ಲದೇ ಈ ದಿನದಂದು ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ತಾಯಿ ಲಕ್ಷ್ಮಿದೇವಿಯ ಕೃಪೆ ಲಭಿಸುತ್ತದೆ.

Written by - Puttaraj K Alur | Last Updated : Apr 5, 2022, 08:02 PM IST
  • ಚೈತ್ರ ಪಂಚಮಿಯಂದು ಲಕ್ಷ್ಮಿ ಪಂಚಮಿ ಉಪವಾಸವನ್ನು ಆಚರಿಸಲಾಗುತ್ತದೆ
  • ಈ ದಿನ ಹಸುವಿಗೆ ಆಹಾರ ನೀಡುವುದರಿಂದ ಲಕ್ಷ್ಮಿದೇವಿ ಆಶೀರ್ವಾದ ಸಿಗುತ್ತದೆ
  • ಲಕ್ಷ್ಮಿದೇವಿಗೆ ಕೆಂಪು ಹೂಗಳು ಮತ್ತು ವಿಷ್ಣುವಿಗೆ ಹಳದಿ ಬಣ್ಣದ ಬಟ್ಟೆಗಳನ್ನು ಅರ್ಪಿಸಿರಿ
Lakshmi Panchami: ಈ ಸುಲಭ ಕೆಲಸ ಮಾಡಿದ್ರೆ ಲಕ್ಷ್ಮಿದೇವಿಯ ಕೃಪೆ, ಹಣದ ಮಳೆಯಾಗುತ್ತದೆ!  title=
ಲಕ್ಷ್ಮಿ ಪಂಚಮಿ ಪೂಜೆ ವಿಧಾನ

ನವದೆಹಲಿ: ಚೈತ್ರ ಶುಕ್ಲ ಪಂಚಮಿಯನ್ನು ಲಕ್ಷ್ಮಿ ಪಂಚಮಿ(Lakshmi Panchami 2022) ಎಂದು ಆಚರಿಸಲಾಗುತ್ತದೆ. ಇದರೊಂದಿಗೆ ಲಕ್ಷ್ಮಿ ಪಂಚಮಿಯ ಉಪವಾಸವನ್ನು ಈ ದಿನ ಆಚರಿಸಲಾಗುತ್ತದೆ. ಈ ಉಪವಾಸವನ್ನು ಆಚರಿಸುವುದರಿಂದ ಲಕ್ಷ್ಮಿದೇವಿಯ ಆಶೀರ್ವಾದ ಲಭಿಸುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಮನೆಯಲ್ಲಿ ಸಂಪತ್ತು-ಸಮೃದ್ಧಿ ಮತ್ತು ಸುಖ-ಸಂತೋಷವಿರುತ್ತದೆ. ಶಾಸ್ತ್ರಗಳ ಪ್ರಕಾರ ಈ ದಿನ ಲಕ್ಷ್ಮಿದೇವಿಯನ್ನು ಪೂಜಿಸುವುದರಿಂದ ಆರ್ಥಿಕ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ಈ ವರ್ಷ ಲಕ್ಷ್ಮಿಪಂಚಮಿ ಏಪ್ರಿಲ್ 6 ರಂದು ನಡೆಯಲಿದೆ. ಈ ದಿನ ಲಕ್ಷ್ಮಿದೇವಿಯನ್ನು ಹೇಗೆ ಪೂಜಿಸಬೇಕು(Lakshmi Panchami Puja Vidhi) ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.

ಲಕ್ಷ್ಮಿ ಪಂಚಮಿ ಪೂಜೆ ವಿಧಾನ

ಈ ದಿನ ಸ್ನಾನದ ನಂತರ ಶುಭ್ರವಾದ ಬಟ್ಟೆಯನ್ನು ಧರಿಸಿ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಿ. ಪೂಜೆಯ ಸಮಯದಲ್ಲಿ ತಾಯಿಗೆ ಧಾನ್ಯಗಳು, ಅರಿಶಿನ ಮತ್ತು ಬೆಲ್ಲವನ್ನು ಅರ್ಪಿಸಿ. ಈ ದಿನ ಮನೆಯಲ್ಲಿ ಶ್ರೀ ಯಂತ್ರವನ್ನು ಸ್ಥಾಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಯಂತ್ರವನ್ನು ಸ್ಥಾಪಿಸಿದ ನಂತರ ಶ್ರೀಸೂಕ್ತ ಮತ್ತು ಕಮಲದ ಹೂವುಗಳ ಮಂತ್ರ(Lakshmi Panchami Mantra)ದಿಂದ ಹವನವನ್ನು ಮಾಡಿ. ಹವನದ ನಂತರ ತಾಯಿಗೆ ಮೇಕಪ್ ವಸ್ತುಗಳನ್ನು ಅರ್ಪಿಸಿ. ಇದರ ನಂತರ ಲಕ್ಷ್ಮಿ ದೇವಿಗೆ ಕೆಂಪು ಹೂವುಗಳನ್ನು ಮತ್ತು ವಿಷ್ಣುವಿಗೆ ಹಳದಿ ಬಣ್ಣದ ಬಟ್ಟೆಗಳನ್ನು ಅರ್ಪಿಸಿ. ಇದಲ್ಲದೆ ಈ ದಿನ ಲಕ್ಷ್ಮಿದೇವಿಗೆ ಖೀರ್ ನೈವೇದ್ಯ ಮಾಡಬೇಕು.

ಇದನ್ನೂ ಓದಿ: ಈ ತಿಂಗಳಿನಿಂದಲೇ ಶನಿ ಮಹಾತ್ಮನ ಕೃಪೆಯಿಂದ ಈ ರಾಶಿಯವರಿಗೆ ರಾಜ ಯೋಗ..!

ಲಕ್ಷ್ಮಿ ಪಂಚಮಿ ಮಂತ್ರ

ಲಕ್ಷ್ಮಿ ಬೀಜ ಮಂತ್ರ – ‘ಓಂ ಹ್ರೀಂ ಶ್ರೀ ಲಕ್ಷ್ಮೀಭಯೋ ನಮಃ’

ಮಹಾ ಲಕ್ಷ್ಮಿ ಮಂತ್ರ – ‘ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್‌ ಪ್ರಸೀದ್‌, ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ’

ಓಂ ಲಕ್ಷ್ಮಿ ಗಾಯತ್ರಿ ಮಂತ್ರ – ‘ಓಂ ಶ್ರೀ ಮಹಾಲಕ್ಷ್ಮಿ ಚ ವಿದ್ಮಹೇ ವಿಷ್ಣು ಪತ್ನ್ಯೈ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್’

ದಾನಕ್ಕೆ ವಿಶೇಷ ಮಹತ್ವವಿದೆ

ಶಾಸ್ತ್ರಗಳ ಪ್ರಕಾರ ಲಕ್ಷ್ಮಿ ಪಂಚಮಿ(Lakshmi Panchami)ಯ ದಿನದಂದು ದಾನ ಮಾಡಬೇಕು. ಅಲ್ಲದೆ ಈ ದಿನದಂದು ಹಸುವಿಗೆ ಆಹಾರ ನೀಡಿ, ಏಕೆಂದರೆ ಈ ದಿನ ಹಸುವಿಗೆ ಆಹಾರ ನೀಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಇದನ್ನೂ ಓದಿ: ವಾರದ ನಂತರ ಬದಲಾಗಲಿದೆ ಈ 6 ರಾಶಿಯವರ ಜೀವನ! ಗುರು ಗ್ರಹದ ದಯೆಯಿಂದ ಹೊಳೆಯುತ್ತದೆ ಅದೃಷ್ಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News