Lakshmana Plant: ದೇವಿ ಲಕ್ಷ್ಮಿಗೆ ಈ ಸಸ್ಯ ತುಂಬಾ ಇಷ್ಟ, ನಿಮ್ಮ ಮನೆಯಲ್ಲಿಯೂ ಇದ್ದರೆ ಹಣದ ಹೊಳೆಯೇ ಹರಿಯಲಿದೆ

Benefits Of Lakshman Plant - ಲಕ್ಷ್ಮಣ ಸಸ್ಯ ದೇವಿ ಲಕ್ಷ್ಮಿಯ (Goodess Lakshmi) ಪ್ರಿಯ ಸಸ್ಯಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಇದನ್ನು ಮನೆಯಲ್ಲಿ ಹಚ್ಚುವುದರಿಂದ ಹಣದ (Money Making Tips) ಕೊರತೆ ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ. ಇದರೊಂದಿಗೆ ದೇವಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರಲಿದೆ.  

Written by - Nitin Tabib | Last Updated : Mar 13, 2022, 07:36 PM IST
  • ಮನೆಯಲ್ಲಿ ದೇವಿ ಲಕ್ಷ್ಮಿಯ ವಾಸ
  • ಜೀವನದಲ್ಲಿ ಸುಖ-ಸಂತೋಷಗಳ ಆಗಮನ
  • ಮನೆಯಲ್ಲಿ ಹಣದ ಹೊಳೆಯೇ ಹರಿಯಲಿದೆ
Lakshmana Plant: ದೇವಿ ಲಕ್ಷ್ಮಿಗೆ ಈ ಸಸ್ಯ ತುಂಬಾ ಇಷ್ಟ, ನಿಮ್ಮ ಮನೆಯಲ್ಲಿಯೂ ಇದ್ದರೆ ಹಣದ ಹೊಳೆಯೇ ಹರಿಯಲಿದೆ title=
Lakshmana Plant Benefits (File Photo)

ನವದೆಹಲಿ: Lakshman Plant Benefits - ಮನೆಯಲ್ಲಿ ಈ ಸಸಿಯನ್ನು ನೆಡುವುದು ಎಲ್ಲಾ ದೃಷ್ಟಿಯಿಂದಲೂ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದು ಗಿಡ-ಮರಗಳಲ್ಲಿ ಕೆಲವು ದೈವಿಕ ಶಕ್ತಿ ಇರುತ್ತದೆ ಎಂದು ನಂಬಲಾಗಿದೆ. ಈ ಗಿಡ-ಮರಗಳ ಕಾರಣ ಮನೆ ಅಥವಾ ಅದರ ಸುತ್ತಮುತ್ತಲಿನ ಪರಿಸರದಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಉಂಟಾಗುತ್ತದೆ. ಅಂತಹುದೇ ಒಂದು ಸಸ್ಯ ಎಂದರೆ ಅದುವೇ ಲಕ್ಷ್ಮಣ ಸಸ್ಯ. ಮನೆಯಲ್ಲಿ ಈ ಗಿಡವನ್ನು ನೆಟ್ಟರೆ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ. ಇದು ಮನೆಗೆ ಸಂಪತ್ತನ್ನು ತರುತ್ತದೆ ಎನ್ನಲಾಗಿದೆ. ಹಾಗಾದರೆ ಬನ್ನಿ ಈ ಸಸ್ಯದ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ, 

ಲಕ್ಷ್ಮಣ ಸಸ್ಯ ದೇವಿ ಲಕ್ಷ್ಮಿಗೆ ನೇರವಾಗಿ ಸಂಬಂಧಿಸಿದೆ
ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮಣ ಸಸ್ಯವು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ (Goddess Lakshmi) ನೇರವಾಗಿ ಸಂಬಂಧಿಸಿದೆ. ಇದನ್ನು  ಮನೆಯಲ್ಲಿ ಇಟ್ಟರೆ, ಮನೆಯಲ್ಲಿ ಸಂಪತ್ತು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದಲ್ಲದೆ, ಈ ಸಸ್ಯವು ಎಲ್ಲಿದ್ದರೂ, ನಕಾರಾತ್ಮಕ ಶಕ್ತಿಯು ನಾಶವಾಗುತ್ತದೆ. ಇದರೊಂದಿಗೆ ಈ ಗಿಡ ನೆಟ್ಟ ಮನೆಯಲ್ಲಿ ತಾಯಿ ಲಕ್ಷ್ಮಿ ಸದಾ ನೆಲೆಸುತ್ತಾಳೆ.

ಇದನ್ನೂ ಓದಿ-HOLI 2022: ಮೊಟ್ಟಮೊದಲ ಬಾರಿಗೆ ಹೋಳಿ ಹಬ್ಬ ಎಲ್ಲಿ ಆಚರಿಸಲಾಗಿದೆ ಗೊತ್ತಾ?

ಲಕ್ಷ್ಮಣ ಸಸ್ಯ ಹೇಗಿರುತ್ತದೆ?
ಲಕ್ಷ್ಮಣ ಸಸ್ಯ ಬಳ್ಳಿ ಜಾತಿಗೆ ಸೇರಿದೆ ಒಂದು ಸಸ್ಯವಾಗಿದೆ ಎಂದು ಹೇಳಲಾಗುತ್ತದೆ.. ಇದರ ಎಲೆಗಳು ವೀಳ್ಯದೆಲೆ ಅಥವಾ ಆಲದ ಮರದ ಎಲೆಗಳನ್ನು ಹೋಲುತ್ತವೆ. ಈ ಸಸ್ಯವನ್ನು ಆಯುರ್ವೇದದಲ್ಲಿಯೂ ಬಳಸಲಾಗುತ್ತದೆ. ಇದನ್ನು ಲಕ್ಷ್ಮಣ ಬೂಟಿ ಎಂದು ಕೂಡ ಕರೆಯಲಾಗುತ್ತದೆ. ಈ ಸಸ್ಯವು ಹಣವನ್ನು ತನ್ನತ್ತ ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಮನೆಯಲ್ಲಿ ಇಟ್ಟರೆ ಆರ್ಥಿಕ ಸಮಸ್ಯೆ ಬರುವುದಿಲ್ಲ. ಕುಟುಂಬದ ಸದಸ್ಯರ ಆದಾಯವು ಹೆಚ್ಚಾಗುತ್ತದೆ ಮತ್ತು ಕುಟುಂಬದ ವಾತಾವರಣವು ಸಂತೋಷದಿಂದ  ಕೂಡಿರುತ್ತದೆ.

ಇದನ್ನೂ ಓದಿ-Palmistry: ಅಂಗೈಯಲ್ಲಿ ಈ ರೇಖೆ ಇರುವವರು ಹುಟ್ಟು ಶ್ರೀಮಂತರಾಗಿರುತ್ತಾರೆ, ನಿಮ್ಮ ಕೈಯಲ್ಲಿ ಇದೆಯಾ?

ಮನೆಯಲ್ಲಿ ಈ ಸಸ್ಯವನ್ನು ಎಲ್ಲಿ ನೆಡಬೇಕು?
ಮನೆಯಲ್ಲಿ ಪೂರ್ವ ಅಥವಾ ಪೂರ್ವೋತ್ತರ ದಿಕ್ಕಿನಲ್ಲಿ ಲಕ್ಷ್ಮಣ ಸಸ್ಯವನ್ನು ನೆಡಬೇಕು. ಉತ್ತರ ದಿಕ್ಕು ಸಂಪತ್ತಿನ ಅಂಶವಾಗಿದೆ ಮತ್ತು ಸಂಪತ್ತಿನ ದೇವರು ಕುಬೇರನೂ ಈ ದಿಕ್ಕಿನ ಜೊತೆಗೆ ಸಂಬಂಧ ಹೊಂದಿದ್ದಾನೆ. ಈ ದಿಕ್ಕಿಗೆ ಲಕ್ಷ್ಮಣ ಗಿಡ ನೆಟ್ಟರೆ ಮನೆಯಲ್ಲಿ ಹಣ ಹರಿದು ಬರುತ್ತಲೇ ಇರುತ್ತದೆ. ಹೀಗಾಗಿ ಮನೆಯಲ್ಲಿ ಹಣದ ಕೊರತೆ ಎದುರಾಗುವುದಿಲ್ಲ.

ಇದನ್ನೂ ಓದಿ-Weekly Horoscope : ಮುಂದಿನ ವಾರ ಈ ರಾಶಿಯವರಿಗೆ ಆರ್ಥಿಕ ಪ್ರಗತಿ : ನಿಮ್ಮ ವಾರದ ಭವಿಷ್ಯ ಹೇಗಿದೆ ನೋಡಿ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ, ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News