ನವದೆಹಲಿ : ಈಗ ಪಿತೃ ಪಕ್ಷ ನಡೆಯುತ್ತಿದೆ. ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 6 ರವರೆಗೆ ಪಿತೃ ಪಕ್ಷ (Pitru paksha 2021) ನಡೆಯಲಿದೆ. ಹಿಂದೂ ಧರ್ಮದ ಪ್ರಕಾರ ಪೂರ್ವಜರ ಶಾಂತಿಗಾಗಿ, ಪಿತೃ ಪಕ್ಷದಲ್ಲಿ ತರ್ಪಣ ಬಿಡುವುದು ಮತ್ತು ಶ್ರಾದ್ಧ (Shraddha) ಮಾಡುವುದು ಮಾಡಲಾಗುತ್ತದೆ. ಆದರೆ, ನಿಮ್ಮ ತರ್ಪಣದಿಂದಲೇ ನಿಮ್ಮ ಪೂರ್ವಜರು ಸಂತೋಷವಾಗಿದ್ದಾರೆಯೇ ಇಲ್ಲವೇ, ಎನ್ನುವುದನ್ನು ತಿಳಿದುಕೊಳ್ಳಬಹುದು. ಪೂರ್ವಜರು ಸಂತೋಷವಾಗಿರದಿದ್ದರೆ ನೀವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗಬಹುದು. ಹಣದ ನಷ್ಟದ ಸಾಧ್ಯತೆಯೂ ಇದೆ.
ವಿಷ್ಣು ಪುರಾಣದಲ್ಲಿ ಪಿತೃ ಪಕ್ಷದ ಬಗ್ಗೆ ಏನು ಹೇಳಲಾಗಿದೆ?
ಪಿತೃ ಪಕ್ಷದಲ್ಲಿ (Pitru paksha 2021) ಕಾಗೆಗಳು ಬಹಳ ಮುಖ್ಯವಾಗಿರುತ್ತವೆ. ಶ್ರಾದ್ಧ ಪಕ್ಷದಲ್ಲಿ, ಕಾಗೆಗಳಿಗೆ ಆಹಾರ ನೀಡುವುದನ್ನು ವಿಷ್ಣು ಪುರಾಣದಲ್ಲಿ (Vishnu purana) ಹೇಳಲಾಗಿದೆ. ಕಾಗೆಯನ್ನು ಪೂರ್ವಜರ ಸಂಕೇತವೆಂದು ಪರಿಗಣಿಸಲಾಗಿದೆ. ಪಿತೃ ಪಕ್ಷದ ಸಮಯದಲ್ಲಿ ಕಾಗೆಯ ಸಹಾಯದಿಂದ ನಿಮ್ಮ ಪೂರ್ವಜರು ನಿಮ್ಮೊಂದಿಗೆ ಸಂತೋಷವಾಗಿರುತ್ತಾರೋ ಇಲ್ಲವೋ ಎಂದು ತಿಳಿಯಬಹುದು.
ಇದನ್ನೂ ಓದಿ : Tirumala Tirupati Temple: ತಿರುಪತಿಗೆ ಹೋಗಲು ಯೋಜಿಸುತ್ತಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ
ಇವು ಸಂತೋಷದ ಪೂರ್ವಜರ ಚಿಹ್ನೆಗಳು :
ಪಿತೃ ಪಕ್ಷದಲ್ಲಿ ನಿಮ್ಮ ಮನೆಯ ಛಾವಣಿಯ ಮೇಲೆ ಕಾಗೆ (Crow) ಹೂ ಮತ್ತು ಎಲೆಗಳನ್ನು ಕೊಕ್ಕಿನಲ್ಲಿಟ್ಟುಕೊಂಡು ಕೂತರೆ, ಪೂರ್ವಜರು ನಿಮ್ಮಿಂದ ಸಂತೋಷವಾಗಿದ್ದಾರೆ ಮತ್ತು ನಿಮ್ಮ ಆಸೆ ಈಡೇರುತ್ತದೆ ಎಂದರ್ಥ. ಇದಲ್ಲದೆ, ಹಸುವಿನ ಹಿಂಭಾಗದಲ್ಲಿ ಕುಳಿತು ಕಾಗೆ ತನ್ನ ಕೊಕ್ಕನ್ನು ಉಜ್ಜುತ್ತಿರುವುದು ಕಂಡುಬಂದರೆ, ತಿನ್ನಲು ರುಚಿಕರವಾದ ಆಹಾರ (Food) ಸಿಗುತ್ತದೆ ಎನ್ನಲಾಗುತ್ತದೆ. ಕಾಗೆ ತನ್ನ ಒಣ ಕೊಕ್ಕೆಯಲ್ಲಿ ಒಣಹುಲ್ಲನ್ನು ಹೊತ್ತುಕೊಂಡಿದ್ದರೆ, ಅದು ನೀವು ಹಣ ಗಳಿಸುವ ಮುನ್ಸೂಚನೆಯಾಗಿದೆ. ಇನ್ನು ಕಾಗೆಯು ಧಾನ್ಯಗಳ ರಾಶಿಯ ಮೇಲೆ ಕುಳಿತಿರುವುದು ಕಂಡುಬಂದರೆ, ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ನಂಬಲಾಗಿದೆ.
ಕಾಗೆ ಬಲಭಾಗದಿಂದ ಹಾರಿ ಎಡಕ್ಕೆ ಬಂದು ಆಹಾರ ಸೇವಿಸಿದರೆ, ನಿಮ್ಮ ಪ್ರಯಾಣ ಯಶಸ್ವಿಯಾಗುತ್ತದೆ. ಆಹಾರ ಸೇವಿಸಿದ ನಂತರ ಕಾಗೆ ತಲೆ ಕೆರೆದುಕೊಂಡರೆ, ನಿಮ್ಮ ಕೆಲಸ ಪೂರ್ಣಗೊಳ್ಳುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ನಿಮ್ಮ ಪೂರ್ವಜರು ಸಂತೋಷವಾಗಿದ್ದಾರೆ ಎನ್ನುವುದನ್ನು ಈ ಸಂಕೇತಗಳು ತಿಳಿಸುತ್ತವೆ.
ಇದನ್ನೂ ಓದಿ : Gurudosh Parihar: ಜಾತಕದಲ್ಲಿ ಗುರು ದೋಷವಿದ್ದರೆ ಈ ರೀತಿ ಪರಿಹರಿಸಿಕೊಳ್ಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ