Kiss Day 2022: ಶರೀರದ ವಿವಿಧ ಭಾಗಗಳ ಮೇಲೆ ನೀಡಲಾಗುವ ಮುತ್ತಿನ ಹಿಂದೆಯೂ ವಿಶೇಷತೆ ಅಡಗಿದೆ, ಇಲ್ಲಿದೆ ವಿವರ

Kiss Day 2022: ಸಂಗಾತಿಗೆ ಮಾಡುವ ಪ್ರತಿಯೊಂದು ಕಿಸ್ ಹಿಂದೆಯೂ ಕೂಡ ಒಂದು ವಿಶೇಷತೆ ಅಡಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ. ಮುತ್ತು ನೀಡುವ  ಮೂಲಕ ನೀವು ನಿಮ್ಮ ಸಂಗಾತಿಯ ಬಗ್ಗೆ ನಿಮ್ಮ ನಂಬಿಕೆ, ಪ್ರೇಮ ಮತ್ತು ಪ್ರೀತಿಯನ್ನು ಸಹ ವ್ಯಕ್ತಪಡಿಸಬಹುದು.

Written by - Nitin Tabib | Last Updated : Feb 13, 2022, 01:37 PM IST
  • ಹತ್ತಿರವಾಗಲು ಬಯಕೆಯನ್ನು ತೋರಿಸುತ್ತದೆ.
  • ಮುತ್ತು ಆಕರ್ಷಣೆಯನ್ನು ತೋರಿಸುವ ಒಂದು ಸಾಧನವಾಗಿದೆ.
  • ಯಾವುದನ್ನು ನಂಬಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
Kiss Day 2022: ಶರೀರದ ವಿವಿಧ ಭಾಗಗಳ ಮೇಲೆ ನೀಡಲಾಗುವ ಮುತ್ತಿನ ಹಿಂದೆಯೂ ವಿಶೇಷತೆ ಅಡಗಿದೆ, ಇಲ್ಲಿದೆ ವಿವರ title=
Kiss Day 2022 (File Photo)

ನವದೆಹಲಿ: Valantine Week - ಇಂದು (ಫೆಬ್ರವರಿ 13 ) ಪ್ರೇಮಿಗಳ (Valentine Day 2022) ವಾರದ ಅತ್ಯಂತ ವಿಶೇಷ ಮತ್ತು ರೋಮ್ಯಾಂಟಿಕ್ ದಿನ. ಇಂದು Kis Day 2022 ಆಚರಿಸಲಾಗುತ್ತದೆ. ಕಿಸ್ ದಿನದಂದು, ದಂಪತಿಗಳು ಪರಸ್ಪರ ಚುಂಬಿಸುತ್ತಾರೆ ಮತ್ತು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಆದರೆ ದೇಹದ ವಿವಿಧ ಭಾಗಗಳಲ್ಲಿ ನೀಡಲಾಗುವ ಚುಂಬನ (Types Of Kisses) ವಿಭಿನ್ನ ಸಂದೇಶವನ್ನು ನೀಡುತ್ತದೆ ಎಂಬ ಸಂಗತಿ ನಿಮಗೆಷ್ಟು ತಿಳಿದಿದೆ? ದೇಹದ ವಿವಿಧ ಸ್ಥಳಗಳಲ್ಲಿ ಚುಂಬನದ ಅರ್ಥವೇನು (Mesage Of KIss) ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

>> ತುಟಿಗಳ ಮೇಲೆ ಚುಂಬನ - ತುಟಿಗಳ ಮೇಲೆ ಚುಂಬನವು ನಿಮ್ಮ ಉತ್ಸಾಹವನ್ನು ತೋರಿಸುತ್ತದೆ. ನಿಮ್ಮ ಪ್ರೀತಿಯನ್ನು ತೋರಿಸಲು ಇದು ಅತ್ಯುತ್ತಮ ಮಾರ್ಗಗಳಲ್ಲಿ ಇದು  ಒಂದಾಗಿದೆ. ನೀವು ನಿಮ್ಮ ಸಂಗತಿಗೆ ಚುಂಬಿಸಿದರೆ, ಅದು ನಿಮ್ಮಲ್ಲಿರುವ ಹತ್ತಿರವಾಗುವಿಕೆಯ  ಬಯಕೆಯ ಬಗ್ಗೆ ಹೇಳುತ್ತದೆ.

>> ಕಿವಿಯ ಮೇಲೆ ಚುಂಬನ - ಕಿವಿಯ ಮೇಲಿನ ಚುಂಬನವು ನಿಮ್ಮ ಲೈಂಗಿಕ ಬಯಕೆಯನ್ನು ತೋರಿಸುತ್ತದೆ. ಅನ್ಯೋನ್ಯವಾಗಿರುವ ಸಂದೇಶವನ್ನು ನೀಡಲು ಹೆಚ್ಚಿನ ಜನರು ಸಂಗಾತಿಯ ಕಿವಿಗೆ ಮುತ್ತು ನೀಡುತ್ತಾರೆ.

>> ಕೆನ್ನೆಯ ಮೇಲೆ ಮುತ್ತು - ಕೆನ್ನೆಯ ಮೇಲೆ ಮುತ್ತು ನಿಮ್ಮ ಸಂಗಾತಿಯ ಕಡೆಗೆ ನಿಮ್ಮ  ಪ್ರೀತಿಯನ್ನು ತೋರಿಸುತ್ತದೆ. ಕೆನ್ನೆಯ ಮೇಲೆ ಮುತ್ತು ಕೂಡ ನಿಮ್ಮ ಆಕರ್ಷಣೆಯನ್ನು ತೋರಿಸುತ್ತದೆ. ಜನರು ತಮ್ಮ ಸಂಗಾತಿಯ ಮೇಲೆ ಪ್ರೀತಿಯಲ್ಲಿ ಬಿದ್ದಾಗ, ಅವರು ಅವರ ಕೆನ್ನೆಗೆ ಮುತ್ತು ಕೊಡುವುದನ್ನು ನಾವು ಗಮನಿಸಬಹುದು.

>> ಕಾಲರ್‌ಬೋನ್ ಮೇಲೆ ಚುಂಬಿಸುವುದು - ನೀವು ಸಂಗಾತಿಯ ಕೊರಳೆಲುಬಿನ ಮೇಲೆ ಚುಂಬಿಸಿದರೆ, ಅದು ನಿಮ್ಮ ಆತ್ಮೀಯತೆಯನ್ನು ತೋರಿಸುತ್ತದೆ. ಜನರು ಇದನ್ನು ಖಾಸಗಿ ಜಾಗದಲ್ಲಿ ಮಾತ್ರ ಮಾಡಲು ಬಯಸುತ್ತಾರೆ.

>> ಫ್ಲೈಯಿಂಗ್ ಕಿಸ್ - ಹೆಚ್ಚಿನ ಜನರು ಪರಸ್ಪರ ದೂರಾಗುವ ವೇಳೆ ಫ್ಲೈಯಿಂಗ್ ಕಿಸ್ ಮಾಡುತ್ತಾರೆ. ಫ್ಲೈಯಿಂಗ್ ಕಿಸ್‌ಗಳೊಂದಿಗಿನ ದಂಪತಿಗಳ ಸಂಬಂಧವು ತುಂಬಾ ಪ್ರಬಲವಾಗಿದೆ ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ-#JamesTeaser: ಬಹುನಿರೀಕ್ಷಿತ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್

>> ಕೈ ಮೇಲೆ ಚುಂಬನ - ಕೈ ಮೇಲೆ ಮಾಡಲಾಗುವ ಚುಂಬನ ನಂಬಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅನೇಕ ಬಾರಿ ಜನರು ತಮ್ಮ ಆಯ್ಕೆಯನ್ನು ವ್ಯಕ್ತಪಡಿಸಲು ಸಂಗಾತಿಯ  ಕೈಗಳಿಗೆ ಚುಂಬಿಸುತ್ತಾರೆ. ಕೆಲವು ಜನರು ತಮ್ಮ ಸಂಗಾತಿಯನ್ನು ವಿಭಿನ್ನವಾಗಿಸಲು ಇದನ್ನು ಮಾಡುತ್ತಾರೆ.

ಇದನ್ನೂ ಓದಿ-ಪ್ರತಿ ದಿನ ರಾತ್ರಿ ಈ ಕೆಲಸ ಮಾಡಿ ದೇಹ ಸೊಂಟದ ತೂಕ ಕಳೆದುಕೊಳ್ಳಿ!

>> ಹಣೆಯ ಮೇಲಿನ ಚುಂಬನ - ಹಣೆಯ ಮೇಲೆ ನೀಡಲಾಗುವ ಮುತ್ತು ಸಂಗಾತಿಯ ಜೊತೆಗೆ ನಿಮ್ಮ ಕನೆಕ್ಷನ್ ಎತ್ತಿ ತೋರಿಸುತ್ತದೆ.  ಅನೇಕರು ಭಾವುಕರಾದಾಗ ಸಂಗಾತಿಯ ಹಣೆಗೆ ಮುತ್ತು ಕೊಡುತ್ತಾರೆ. ಹಣೆಯ ಮೇಲೆ ಚುಂಬಿಸುವುದರಿಂದ ಸಂಗಾತಿಗೆ ನೀವು ಪ್ರತಿ ಬಿಕ್ಕಟ್ಟಿನಲ್ಲೂ ಅವನೊಂದಿಗೆ ನಿಲ್ಲುತ್ತೀರಿ ಎಂಬ ಸಂದೇಶವನ್ನು ನೀಡುತ್ತದೆ.

ಇದನ್ನೂ ಓದಿ-Dream Astrology : ಕನಸಿನಲ್ಲಿ ಈ 5 ಪ್ರಾಣಿಗಳು ಕಂಡರೆ ಎಚ್ಚರ! ಜೀವನದಲ್ಲಿ ಭಾರೀ ಬದಲಾವಣೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News