ಕೇತುವಿನ ಚಲನೆಯಲ್ಲಿ ಬದಲಾವಣೆ , ಬಹಳ ಎಚ್ಚರದಿಂದ ಇರಬೇಕು ಈ ರಾಶಿಯವರು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಶಿ ಬದಲಾವಣೆಯ ಪರಿಣಾಮ ಪ್ರತಿಯೊಬ್ಬ ವ್ಯಕ್ತಿಯ ಮೇಲೆಯೂ ಬೀರುತ್ತದೆ. ಒಂದು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಕ್ರಮಣಗೊಂಡಾಗ, ಎಲ್ಲಾ 12 ರಾಶಿಚಕ್ರದ ಮೇಲೂ ಪರಿಣಾಮ ಬೀರುತ್ತದೆ.

Written by - Ranjitha R K | Last Updated : Jan 24, 2022, 05:32 PM IST
  • ಜೀವನವೇ ಬದಲಾಗಲಿದೆ ಕೇತು ಸಂಕ್ರಮಣದಿಂದ
  • ಈ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು
  • ಕೇತುವವನ್ನು ಛಾಯಾ ಗ್ರಹ ಎಂದು ಕರೆಯಲಾಗುತ್ತದೆ
ಕೇತುವಿನ ಚಲನೆಯಲ್ಲಿ ಬದಲಾವಣೆ , ಬಹಳ ಎಚ್ಚರದಿಂದ ಇರಬೇಕು ಈ ರಾಶಿಯವರು  title=
ಜೀವನವೇ ಬದಲಾಗಲಿದೆ ಕೇತು ಸಂಕ್ರಮಣದಿಂದ (file photo)

ನವದೆಹಲಿ : ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಗ್ರಹಗಳ ರಾಶಿ ಬದಲಾವಣೆಯ ಪರಿಣಾಮ ಪ್ರತಿಯೊಬ್ಬ ವ್ಯಕ್ತಿಯ ಮೇಲೆಯೂ ಬೀರುತ್ತದೆ. ಒಂದು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಕ್ರಮಣಗೊಂಡಾಗ, ಎಲ್ಲಾ 12 ರಾಶಿಚಕ್ರದ (Zodiac sign) ಮೇಲೂ ಪರಿಣಾಮ ಬೀರುತ್ತದೆ. ಕೇತುವನ್ನು ಛಾಯ ಗ್ರಹವೆಂದು ಕರೆಯಲಾಗುತ್ತದೆ. ಕೇತು ಏಪ್ರಿಲ್ 12 ರಂದು ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಕೇತುವು (Ketu) ಜಾತಕದಲ್ಲಿ ಯಾವ ಸ್ಥಾನದಲ್ಲಿದ್ದಾನೆ ಎನ್ನುವುದರ ಮೇಲೆ ಅವನು ನೀಡುವ ಫಲ ನಿರ್ಧಾರವಾಗುತ್ತದೆ. ಕೇತುವಿನ ರಾಶಿ ಬದಲಾವಣೆಯು ಮೇಷ ರಾಶಿಯವರ (Aries) ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಿದೆ. 

ಜೀವನದಲ್ಲಿ ಬರಲಿವೆ ಈ ಬದಲಾವಣೆಗಳು :
ಕೇತುವಿನ ಸಂಚಾರವು ಮೇಷ ರಾಶಿಯ (Aries) ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಇದಲ್ಲದೇ ಈ ರಾಶಿಯವರು (Zodiac sign) ಕೇತು ಸಂಕ್ರಮಣದ ಅವಧಿಯಲ್ಲಿ ಇನ್ನೂ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೇತು ಸಂಕ್ರಮಣದ ಸಮಯದಲ್ಲಿ ಕಾರ್ಯಶೈಲಿಯಲ್ಲಿ ಬದಲಾವಣೆಯಾಗಲಿದೆ.   ಕಠಿಣ ಪರಿಶ್ರಮಕ್ಕೆ ತಕ್ಕಂತೆ ಫಲ ಸಿಗುವುದಿಲ್ಲ. ಕೆಲಸದಲ್ಲಿ ಅಡೆತಡೆಗಳು ಎದುರಾಗಲಿದೆ. 

ಇದನ್ನೂ ಓದಿ : ಇವರು ಜೀವನದ ಪ್ರತಿ ಸಂತೋಷವನ್ನು ಅನುಭವಿಸುತ್ತಾರೆ, ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ, ನೀವೊಮ್ಮೆ ಪರಿಶೀಲಿಸಿಕೊಳ್ಳಿ

ನೆನೆಪಿನಲ್ಲಿರಲಿ ಈ ವಿಚಾರಗಳು : 
ಕೇತು ಸಂಕ್ರಮಣದ (Ketu transit) ಸಮಯದಲ್ಲಿ, ಮೇಷ ರಾಶಿಯವರು ಕೋಪ ಮತ್ತು ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು. ಕೆಲವು ವಿಚಾರಗಳಲ್ಲಿ ಅತ್ತೆ ಮನೆಯಲ್ಲಿ ಮನಸ್ತಾಪ ಉಂಟಾಗಬಹುದು. ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈಗಾಗಲೇ ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಹೊಂದಿದ್ದರೆ, ವೈದ್ಯರನ್ನು ಸಂಪರ್ಕಿಸಬೇಕು.   

ಇದನ್ನೂ ಓದಿ : Magh Month 2022 : ಮಾಘ ಮಾಸದಲ್ಲಿ ಈ 4 ಕೆಲಸ ಮಾಡಿ : ಮನೆಯಲ್ಲಿ ಸುಖ ಶಾಂತಿ, ಅದೃಷ್ಟ ಒಲಿಯುತ್ತದೆ!

(ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News