Peacock Feather Vastu : ಹಿಂದೂ ಧರ್ಮದಲ್ಲಿ ನವಿಲು ಗರಿಯನ್ನು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ನವಿಲು ಗರಿ ಧನಾತ್ಮಕ ಶಕ್ತಿಯ ಸಂಕೇತವಾಗಿದೆ. ಆದ್ದರಿಂದ ನೀವು ಮನೆಯಲ್ಲಿ ನವಿಲು ಗರಿಯನ್ನು ಇಟ್ಟುಕೊಂಡರೆ ಅದು ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳುತ್ತದೆ. ನಂಬಿಕೆಯ ಪ್ರಕಾರ, ಮನೆಯಲ್ಲಿ ನವಿಲು ಗರಿಗಳನ್ನು ಇಡುವ ವ್ಯಕ್ತಿಯ ಎಲ್ಲಾ ತೊಂದರೆಗಳು ಶೀಘ್ರದಲ್ಲೇ ಕೊನೆಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಶ್ರೀ ಕೃಷ್ಣನು ತನ್ನ ತಲೆಯ ಮೇಲೆ ನವಿಲು ಗರಿಯನ್ನು ಧರಿಸಿರುವುದನ್ನು ನಾವು ಪುರಾಣಗಳಲ್ಲಿ ಕೇಳಿದ್ದೇವೆ. ಫೋಟೋಗಳಲ್ಲಿ ನೋಡಿದ್ದೇವೆ. ಶ್ರೀ ಕೃಷ್ಣ ತನ್ನ ತಲೆಯ ಮೇಲೆ ನವಿಲು ಗರಿ ಇಟ್ಟುಕೊಂಡಿದ್ದ ಎನ್ನುವುದು ಕೇವಲ ಕಲ್ಪನೆಯಲ್ಲ. ಇದರ ಹಿಂದೆ ಕೂಡಾ ಒಂದು ಕತೆಯಿದೆ. ಇಷ್ಟೇ ಅಲ್ಲ, ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಗೆ ನವಿಲು ಗರಿಯು ತುಂಬಾ ಪ್ರಿಯ. ಆದ್ದರಿಂದ ಇದನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ ಎಂದು ಹೇಳಲಾಗುತ್ತದೆ.
ರಾಹು ದೋಷ ನಿವಾರಣೆ :
ನಿಮ್ಮ ಜಾತಕದಲ್ಲಿ ರಾಹು ದೋಷವಿದ್ದರೆ ಮನೆಯ ಪೂರ್ವ ಅಥವಾ ವಾಯುವ್ಯ ದಿಕ್ಕಿನಲ್ಲಿ ನವಿಲು ಗರಿಯನ್ನು ಇಡಬೇಕು. ಹೀಗೆ ಮಾಡುವುದರಿಂದ ರಾಹು ದೋಷದ ಪ್ರಭಾವವು ಕಡಿಮೆಯಾಗಲು ಪ್ರಾರಂಭಿಸುತ್ತದೆ ಎನ್ನುವ ನಂಬಿಕೆಯಿದೆ. ರಾಹುದೋಷದಿಂದ ಮುಕ್ತಿ ಹೊಂದಲು ಬಯಸುವವರು ಮನೆಯಲ್ಲಿ ನವಿಲು ಗರಿಗಳನ್ನು ಇಡಬೇಕು.
ಇದನ್ನೂ ಓದಿ : ಮನೆಯ ದಕ್ಷಿಣ ದಿಕ್ಕಿಗೆ ತಪ್ಪಿಯೂ ಈ ಮೂರು ಸಸಿಗಳನ್ನು ಇಡಲೇಬಾರದು !
ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ :
ಹಿಂದೂ ಧರ್ಮದಲ್ಲಿ ನವಿಲು ಗರಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಸದಾ ಜಗಳವಾಡುವ ಪರಿಸ್ಥಿತಿ ಇದ್ದರೆ ಮನೆಯಲ್ಲಿ ನವಿಲು ಗರಿಗಳನ್ನು ಇಟ್ಟುಕೊಳ್ಳಿ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ ಶಾಂತಿಯನ್ನು ಕಾಪಾಡುತ್ತದೆ. ನವಿಲು ಗರಿಗಳನ್ನು ನಿಮ್ಮ ಮನೆಯ ಸುರಕ್ಷಿತವಾಗಿಟ್ಟರೆ, ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯು ಸಂತೋಷವಾಗಿರುತ್ತಾಳೆಯಂತೆ.
ವ್ಯಾಪಾರದಲ್ಲಿ ಸಮೃದ್ಧಿ ಇರುತ್ತದೆ :
ನಿಮ್ಮ ವ್ಯಾಪಾರದಲ್ಲಿ ಏರುಪೇರು ಕಾಣಿಸಿಕೊಳ್ಳುತ್ತಿದ್ದರೆ, ಕೆಲಸದ ಸ್ಥಳದಲ್ಲಿ ಅಥವಾ ಮುಖ್ಯ ದ್ವಾರದಲ್ಲಿ ನವಿಲು ಗರಿಗಳನ್ನು ಇರಿಸಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕಿನಲ್ಲಿ ನವಿಲು ಗರಿಗಳನ್ನು ಇಡುವುದು ಒಳ್ಳೆಯದು. ಇದರೊಂದಿಗೆ ವ್ಯವಹಾರದಲ್ಲಿ ಪ್ರಚಂಡ ಪ್ರಯೋಜನಗಳನ್ನು ಪಡೆಯುವುದು ಸಾಧ್ಯವಾಗುತ್ತದೆ.
ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚುತ್ತದೆ :
ಮನೆ ಮಂದಿಯ ಮಧ್ಯೆ ಮನಸ್ತಾಪವಿದ್ದು ಮನೆಯ ಶಾಂತಿ ಹಾಳಾಗಿದ್ದರೆ ಮನೆಯೊಳಗೆ ಕೊಳಲಿನ ಜೊತೆಗೆ ನವಿಲು ಗರಿಯನ್ನು ಇಡಬೇಕು. ಇದು ಯಾವಾಗಲೂ ಸಂಬಂಧಗಳಲ್ಲಿ ಮಾಧುರ್ಯವನ್ನು ಕಾಪಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೀಗೆ ಕೊಳಲಿನ ಜೊತೆಗೆ ನವಿಲು ಗರಿ ಇಡುವುದಾದರೆ ಅದು ಪೂರ್ವಾಭಿಮುಖವಾಗಿರಬೇಕು.
ಇದನ್ನೂ ಓದಿ : ಕ್ರಿಸ್‌ಮಸ್ ದಿನವನ್ನು 'ಬಿಗ್ ಡೇ' ಎಂದು ಏಕೆ ಕರೆಯುತ್ತಾರೆ ? ನಿಮಗೆ ಇದು ತಿಳಿದಿದೆಯೇ
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ