ʼಬಂಧಗಳ ಬೆಸೆಯುವ ಸ್ನೇಹಲೋಕʼ: ಈ ದಿನದ ಮಹತ್ವ ಇತಿಹಾಸವೇ ವಿಶೇಷ

ಹೆಚ್ಚಿನ ದೇಶಗಳು ಜುಲೈ 30 ರಂದು ಅಂತಾರಾಷ್ಟ್ರೀಯ ಫ್ರೆಂಡ್‌ಶಿಪ್‌ ಡೇಯನ್ನು ಆಚರಿಸುತ್ತವೆ. ಈ ದಿನವನ್ನು ಮೊದಲು 1958ರಲ್ಲಿ ಅಂತಾರಾಷ್ಟ್ರೀಯ ನಾಗರಿಕ ಸಂಸ್ಥೆ - ವರ್ಲ್ಡ್ ಫ್ರೆಂಡ್‌ಶಿಪ್ ಕ್ರುಸೇಡ್‌ನಿಂದ ಪ್ರಸ್ತಾಪಿಸಲಾಯಿತು. ಇದು ಸ್ನೇಹವನ್ನು ಉತ್ತೇಜಿಸುವ ಮೂಲಕ ಶಾಂತಿಯ ಸಂಸ್ಕೃತಿಯನ್ನು ಬೆಳೆಸಲು ಪ್ರೇರೇಪಣೆ ನೀಡುತ್ತದೆ. 

Written by - Bhavishya Shetty | Last Updated : Jul 30, 2022, 08:54 AM IST
  • ಜುಲೈ 30 ರಂದು ಅಂತಾರಾಷ್ಟ್ರೀಯ ಫ್ರೆಂಡ್‌ಶಿಪ್‌ ಡೇಯನ್ನು ಆಚರಿಸುತ್ತವೆ
  • ಈ ಸುದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಸಿ
  • 65 ನೇ ಯುಎನ್‌ ಅಧಿವೇಶನದಲ್ಲಿ ಅಧಿಕೃತವಾಗಿ ಅಂತರರಾಷ್ಟ್ರೀಯ ಸ್ನೇಹ ದಿನವನ್ನು ಅಂಗೀಕರಿಸಲಾಯಿತು
ʼಬಂಧಗಳ ಬೆಸೆಯುವ ಸ್ನೇಹಲೋಕʼ: ಈ ದಿನದ ಮಹತ್ವ ಇತಿಹಾಸವೇ ವಿಶೇಷ title=
Friendship Day

ಸ್ನೇಹವು ಎರಡು ಜೀವಗಳ ನಡುವೆ ಬೆಸೆಯುವ ಅತ್ಯಂತ ಸುಂದರವಾದ ಸಂಬಂಧಗಳಲ್ಲಿ ಒಂದು. ಸ್ನೇಹಿತ ಎಂದರೆ ಕಷ್ಟದ ಸಮಯದಲ್ಲಿ ಯಾವಾಗಲೂ ಇರುವ ವ್ಯಕ್ತಿ ಎಂದು ಹೇಳಲಾಗುತ್ತದೆ. ಸ್ನೇಹಿತರು ಕಷ್ಟದ ಸಮಯದಲ್ಲಿ ನಿಮ್ಮನ್ನು ಬೆಂಬಲಿಸುವ ಮತ್ತು ಮಾರ್ಗದರ್ಶನ ಮಾಡುವ ಸಹಚರರು. ವರ್ಷವಿಡೀ ನಮ್ಮ ಸ್ನೇಹಿತರೊಂದಿಗೆ ಕಳೆದ ಕ್ಷಣಗಳನ್ನು ಆನಂದಿಸುತ್ತಿರುವಾಗ, ಅವರಿಗಾಗಿ ಒಂದು ದಿನವನ್ನು ಮೀಸಲಿಡಲೇಬೇಕು. ಹೀಗಾಗಿ ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನು ಜುಲೈ 30ರಂದು ಆಚರಿಸಲಾಗುತ್ತಿದೆ. ಈ ಸುದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಸಿ ಅವರ ಹಿತಕ್ಕಾಗಿ ಹಾರೈಸಿ.  

ಇದನ್ನೂ ಓದಿ: Hair Fall Problem: ಇದನ್ನು ತಿನ್ನುವುದರಿಂದ ನಿಮ್ಮ ಕೂದಲು ಉದುರುವುದಿಲ್ಲ, ಟ್ರೈ ಮಾಡಿ

ಹೆಚ್ಚಿನ ದೇಶಗಳು ಜುಲೈ 30 ರಂದು ಅಂತಾರಾಷ್ಟ್ರೀಯ ಫ್ರೆಂಡ್‌ಶಿಪ್‌ ಡೇಯನ್ನು ಆಚರಿಸುತ್ತವೆ. ಈ ದಿನವನ್ನು ಮೊದಲು 1958ರಲ್ಲಿ ಅಂತಾರಾಷ್ಟ್ರೀಯ ನಾಗರಿಕ ಸಂಸ್ಥೆ - ವರ್ಲ್ಡ್ ಫ್ರೆಂಡ್‌ಶಿಪ್ ಕ್ರುಸೇಡ್‌ನಿಂದ ಪ್ರಸ್ತಾಪಿಸಲಾಯಿತು. ಇದು ಸ್ನೇಹವನ್ನು ಉತ್ತೇಜಿಸುವ ಮೂಲಕ ಶಾಂತಿಯ ಸಂಸ್ಕೃತಿಯನ್ನು ಬೆಳೆಸಲು ಪ್ರೇರೇಪಣೆ ನೀಡುತ್ತದೆ. 

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2011 ರಲ್ಲಿ ಅಂತಾರಾಷ್ಟ್ರೀಯ ಫ್ರೆಂಡ್‌ಶಿಪ್‌ ಡೇಯನ್ನು ಔಪಚಾರಿಕವಾಗಿ ಅಂಗೀಕರಿಸಿತು. ಭಾರತ ಸೇರಿದಂತೆ ಕೆಲವು ದೇಶಗಳು ಪ್ರತಿ ಆಗಸ್ಟ್‌ನ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸುತ್ತವೆ. ಈ ವರ್ಷ, ದಿನವನ್ನು ಆಗಸ್ಟ್ 7, 2022 ರಂದು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಸ್ನೇಹ ದಿನದ ಇತಿಹಾಸ: 
ಸ್ನೇಹದ ಸುಂದರ ಬಂಧದ ಆಚರಣೆ ಎಂದು ಕರೆಯಲ್ಪಡುವ, ಅಂತಾರಾಷ್ಟ್ರೀಯ ಸ್ನೇಹ ದಿನವನ್ನು 1958ರಲ್ಲಿ ಪರಾಗ್ವೆಯಲ್ಲಿ ಆಚರಿಸಲಾಯಿತು. ಸಂಬಂಧವನ್ನು ಗೌರವಿಸುವ, ಸ್ನೇಹವನ್ನು ಆಚರಿಸುವುದೇ ಈ ದಿನದ ವಿಶೇಷತೆ. ವಿನ್ನಿ ದಿ ಪೂಹ್ ಅವರನ್ನು 1988 ರಲ್ಲಿ ವಿಶ್ವಸಂಸ್ಥೆಯು ಫ್ರೆಂಡ್‌ಶಿಪ್‌ ಡೇಯ ರಾಯಭಾರಿಯಾಗಿ ನೇಮಿಸಿತು. ಜುಲೈ 30, 2011 ರಲ್ಲಿ ನಡೆದ 65 ನೇ ಯುಎನ್‌ ಅಧಿವೇಶನದಲ್ಲಿ ಅಧಿಕೃತವಾಗಿ ಅಂತರರಾಷ್ಟ್ರೀಯ ಸ್ನೇಹ ದಿನವನ್ನು ಅಂಗೀಕರಿಸಲಾಯಿತು. 

ಸ್ನೇಹ ದಿನದ ಮಹತ್ವ: 
ಸ್ನೇಹಿತರ ದಿನವು ಜನರ ನಡುವಿನ ಸ್ನೇಹದ ಬಾಂಧವ್ಯದ ಆಚರಣೆಯಾಗಿದೆ. ಅನೇಕ ಜನರು ತಮ್ಮ ಕುಟುಂಬದಂತೆಯೇ ಆತ್ಮೀಯರಾಗಿರುವ ಸ್ನೇಹಿತರನ್ನು ವಿವರಿಸಲು 'Friends Like Family' ಎಂಬ ಪದವನ್ನು ಬಳಸುತ್ತಾರೆ. ಇದು ಅತ್ಯಂತ ಪ್ರೀತಿಯ ಮತ್ತು ಆತ್ಮೀಯ ಸ್ನೇಹಿತರಿಗೆ ಮೆಚ್ಚುಗೆಯನ್ನು ತೋರಿಸಲು ಹೇಳುವ ಪದಗಳಾಗಿವೆ. 

ಇದನ್ನೂ ಓದಿ: Vegetable Price: ಹೇಗಿದೆ ಗೊತ್ತಾ ಇಂದಿನ ತರಕಾರಿ ಬೆಲೆ! ದಿನೋಪಯೋಗಿ ತರಕಾರಿಗಳ ದರ ವಿವರ ಇಲ್ಲಿದೆ

ಈ ದಿನ, ನಿಮ್ಮ ಸ್ನೇಹಿತರಿಗೆ ಅವರ ಉಪಸ್ಥಿತಿಯು ನಿಮ್ಮ ಜೀವನದಲ್ಲಿ ಮುಖ್ಯವಾಗಿದೆ ಎಂದು ನೀವು ಹೇಳಿ. ನಿಮ್ಮ ಅಗತ್ಯದ ಸಮಯದಲ್ಲಿ ಜೊತೆಗಿದ್ದ ಎಲ್ಲರಿಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿ. ನಿಮ್ಮ ಸ್ನೇಹಿತರ ಒಳಿತಿಗಾಗಿ ಶುಭಹಾರೈಸಿ. ಹಳೆಯ ಸ್ನೇಹಿತರನ್ನು ಭೇಟಿಯಾಗಲು, ಅವರ ಜೊತೆ ಕಾಲ ಕಳೆಯಲು ಮತ್ತು ನೆನಪುಗಳನ್ನು ಮರುಕಳಿಸಲು ಇದು ಒಂದು ಅವಕಾಶ. ಈ ದಿನದಂದು ನಿಮ್ಮ ಸ್ನೇಹಿತರಿಗೆ ಏನಾದರೂ ವಿಶೇಷವಾದದ್ದನ್ನು ಮಾಡುವ ಮೂಲಕ ನೀವು ಮುರಿದುಹೋದ ಸಂಬಂಧವನ್ನು ಮತ್ತೆ ಕಾಪಾಡಿಕೊಳ್ಳಿ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News