ಹಸ್ತದಲ್ಲಿ ಈ ಚಿಹ್ನೆ ಇದ್ದರೆ ಜೀವನಪೂರ್ತಿ ನಡೆಸುತ್ತಾರೆ ಐಶಾರಾಮಿ ಜೀವನ

 ವ್ಯಕ್ತಿಯ ಹಸ್ತದಲ್ಲಿ ಈ ರೀತಿಯ ಆಕಾರ ಮೂಡಿದ್ದರೆ ಇದು ಆತನ ಆರ್ಥಿಕ ಸ್ಥಿತಿಯ ಬಗ್ಗೆ ಬಹಳಷ್ಟು ಹೇಳುತ್ತದೆ. ಆ ಆಕಾರ ಯಾವುದೆಂದರೆ ಇಂಗ್ಲಿಷ್‌ನ Y ಅಕ್ಷರದ ಆಕಾರವಾಗಿದೆ.

Written by - Ranjitha R K | Last Updated : Jun 16, 2022, 01:43 PM IST
  • ಹಸ್ತದಲ್ಲಿ ಇದೆಯಾ ಈ ರೀತಿಯ ಆಕಾರ ?
  • ಅಂಗೈಯಲ್ಲಿ Y ಆಕಾರವಿದ್ದರೆ ಏನರ್
  • ಈ ಆಕಾರ ಇದ್ದರೆ ಉತ್ತಮವಾಗಿರುತ್ತದೆ ಆರ್ಥಿಕ ಸ್ಥಿತಿ
ಹಸ್ತದಲ್ಲಿ ಈ ಚಿಹ್ನೆ ಇದ್ದರೆ ಜೀವನಪೂರ್ತಿ ನಡೆಸುತ್ತಾರೆ ಐಶಾರಾಮಿ ಜೀವನ  title=
Palmistry (file photo)

ಬೆಂಗಳೂರು : ಅಂಗೈಯ ರೇಖೆಗಳಿಂದ ರೂಪುಗೊಂಡ ಆಕಾರಗಳು ವ್ಯಕ್ತಿಯ ಭವಿಷ್ಯದ ಬಗ್ಗೆ ಅನೇಕ ಪ್ರಮುಖ ಸೂಚನೆಗಳನ್ನು ನೀಡುತ್ತವೆ. ಈ ರೇಖೆಗಳು, ಆಕಾರಗಳು ಮತ್ತು ಗುರುತುಗಳು ಒಬ್ಬ ವ್ಯಕ್ತಿಯು ಯಾವ ರೀತಿಯ ಜೀವನವನ್ನು ನಡೆಸುತ್ತಾನೆ ಎಂದು ಹೇಳುತ್ತದೆ.  ವ್ಯಕ್ತಿಯ ಹಸ್ತದಲ್ಲಿ ಈ ರೀತಿಯ ಆಕಾರ ಮೂಡಿದ್ದರೆ ಇದು ಆತನ ಆರ್ಥಿಕ ಸ್ಥಿತಿಯ ಬಗ್ಗೆ ಬಹಳಷ್ಟು ಹೇಳುತ್ತದೆ. ಆ ಆಕಾರ ಯಾವುದೆಂದರೆ ಇಂಗ್ಲಿಷ್‌ನ Y ಅಕ್ಷರದ ಆಕಾರವಾಗಿದೆ. 

ಅಂಗೈಯಲ್ಲಿ Y ಆಕಾರವಿದ್ದರೆ ಏನರ್ಥ : 
ಚಂದ್ರನ ಪರ್ವತದ ಕಡೆಗೆ ಹೋಗುವಾಗ ಅಂಗೈಯಲ್ಲಿನ ಜೀವನ ರೇಖೆಯಿಂದ ಒಂದು ರೇಖೆಯು ಹೊರಹೊಮ್ಮುತ್ತದೆ. ಅದನ್ನು ತಲೆಕೆಳಗಾಗಿ ನೋಡುವಾಗ Y ಆಕಾರ ಕಂಡರೆ, ಅಂತಹ ವ್ಯಕ್ತಿಯನ್ನು ಅದೃಷ್ಟವಂತ ಎಂದು ಹೇಳಲಾಗುತ್ತದೆ. ಆ ವ್ಯಕ್ತಿ ತನ್ನ ಜೀವನದಲ್ಲಿ ಬಹಳಷ್ಟು ಆಸ್ತಿ ಹೊಂದುತ್ತಾನೆ ಎನ್ನಲಾಗುತ್ತದೆ. ಅಲ್ಲದೆ ಕೈಯಲ್ಲಿ ಈ ಚಿಹ್ನೆ ಇದ್ದರೆ ವ್ಯಕ್ತಿಗೆ  ವಿದೇಶ ಪ್ರಯಾಣ ಯೋಗ ಕೂಡಾ ಕುಉಡಿ ಬರುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ :  ಈ ಮೂರು ರಾಶಿಯ ಹುಡುಗಿಯರಿಗೆ ಭಯವೆಂಬುದೇ ಇಲ್ಲ, ಕಠಿಣ ಸವಾಲು ಗಳನ್ನು ಧೈರ್ಯದಿಂದ ಎದುರಿಸುತ್ತಾರೆ

ಜೀವನ ರೇಖೆಯಿಂದ ಚಂದ್ರನ ಪರ್ವತಕ್ಕೆ ರೇಖೆ ಹೋಗಿ Y ಆಕಾರವನ್ನು ಸ್ಪಷ್ಟವಾಗಿ ರೂಪಿಸಿದರೆ, ಅಂತಹವರು ವ್ಯಾಪಾರ ಮಾಡುತ್ತಾರೆ. ವ್ಯಾಪಾರ ಕೂಡಾ ಸಣ್ಣ ಮಟ್ಟ ದ್ದಾಗಿರುವುದಿಲ್ಲ. ಈ ಜನರು ವ್ಯಾಪಾರದಿಂದಲೂ ಸಾಕಷ್ಟು ಹಣವನ್ನು ಗಳಿಸುತ್ತಾರೆ ಮತ್ತು ಸಂತೋಷದ ಜೀವನವನ್ನು ನಡೆಸುತ್ತಾರೆ. 

ಒಂದು ರೇಖೆಯು ಜೀವನದ ರೇಖೆಯನ್ನು ಕತ್ತರಿಸಿ Y ಆಕಾರವನ್ನು ಮೂಡಿದ್ದರೆ, ಅದನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಅಂತಹ ಸಾಲು ಅಶುಭ ಎನ್ನಲಾಗುತ್ತದೆ. ಕೆಲವು ಕಾಯಿಲೆಗಳಿಗೆ ಬಲಿಯಾಗಬಹುದು ಅಥವಾ ಅನೇಕ ತೊಂದರೆಗಳಿಂದ ಕೂಡಿರಬಹುದು. 

ಇದನ್ನೂ ಓದಿ : ಈ ತಾರೀಕಿಗೆ ಹುಟ್ಟಿದ ಮಕ್ಕಳು ತಂದೆಯ ಅದೃಷ್ಟವನ್ನೇ ಬದಲಾಯಿಸುತ್ತಾರೆ.. !

 
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News