ನಮ್ಮ ಸಮಾಜದಲ್ಲಿ ಅನೇಕ ವಿಷಯಗಳನ್ನು ಶುಭ ಮತ್ತು ಅಶುಭವೆಂದು ಪರಿಗಣಿಸಲಾಗುತ್ತದೆ. ನಾವು ಬೆಕ್ಕಿನ ಬಗ್ಗೆ ಮಾತನಾಡುತ್ತಿದ್ದೇವೆ. ನಮ್ಮ ಸಮಾಜದಲ್ಲಿ ಬೆಕ್ಕುಗಳಿಗೆ ಸಂಬಂಧಿಸಿದ ಎಷ್ಟೋ ಮೂಢನಂಬಿಕೆಗಳಿವೆ. ಆದರೆ ಅವುಗಳಿಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ ಜನರು ಹಳೆಯ ವಿಚಾರಗಳನ್ನು ನಂಬುತ್ತಾರೆ.
ಇದನ್ನೂ ಓದಿ: ಮುಂದಿನ 119 ದಿನಗಳವರೆಗೆ ಈ ಎರಡು ರಾಶಿಯವರ ಸಂಕಷ್ಟ ಹೆಚ್ಚಿಸಲಿದ್ದಾನೆ ವಕ್ರೀ ಗುರು
ಯಾರೊಬ್ಬರ ಮನೆಯಲ್ಲಿ ಬೆಕ್ಕು ಅಳುತ್ತಿದ್ದರೆ ಅದು ಸಾವಿನ ಸಂಕೇತ ತೋರಿಸುತ್ತದೆ ಎಂದು ನಂಬಲಾಗಿದೆ. ಕುಟುಂಬದಲ್ಲಿ ಯಾರೋ ಒಬ್ಬರು ಸಾಯುತ್ತಾರೆ ಅನ್ನಲಾಗಿದೆ. ಹಿಂದೂ ನಂಬಿಕೆಗಳ ಪ್ರಕಾರ, ಬೆಕ್ಕು ಜಗಳವಾಡುವುದು ಅಥವಾ ಅಳುವುದು ಕಂಡುಬಂದರೆ, ಕುಟುಂಬದಲ್ಲಿ ಇರುವ ವ್ಯಕ್ತಿಯ ಕೆಲಸವು ಯಶಸ್ವಿಯಾಗುವುದಿಲ್ಲ. ಬೆಕ್ಕು ಮಲಗಿರುವ ವ್ಯಕ್ತಿಯ ಪಾದಗಳ ವಾಸನೆಯನ್ನು ನೋಡಿದರೆ, ಆ ವ್ಯಕ್ತಿಯು ಶೀಘ್ರದಲ್ಲೇ ಅನಾರೋಗ್ಯಕ್ಕೆ ಒಳಗಾಗುತ್ತಾನೆ ಎಂಬ ನಂಬಿಕೆಯಿದೆ. .
ಯಾವುದೇ ಶುಭ ಕಾರ್ಯಕ್ಕೆ ಹೋಗುವಾಗ ಬೆಕ್ಕು ರಸ್ತೆ ದಾಟಿದರೆ ಅದು ತುಂಬಾ ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯು ಯಾವ ಕೆಲಸಕ್ಕಾಗಿ ಹೋಗುತ್ತಾನೋ ಆ ಕೆಲಸವು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ನಂಬಲಾಗಿದೆ.
ಇದನ್ನೂ ಓದಿ: Zodiac Sign: ಮಾತಿನಿಂದಲೇ ಹುಡುಗಿಯರ ಹೃದಯ ಗೆಲ್ಲುತ್ತಾರೆ ಈ ರಾಶಿಯ ಹುಡುಗರು
ಇನ್ನೂ ಕೆಲವು ನಂಬಿಕೆಗಳ ಪ್ರಕಾರ, ದೀಪಾವಳಿಯ ರಾತ್ರಿ ಬೆಕ್ಕು ಕಾಣಿಸಿಕೊಂಡರೆ, ಅದು ತುಂಬಾ ಮಂಗಳಕರ ಸಂಕೇತವಾಗಿದೆ. ಯಾರಾದರೂ ಮನೆಯಲ್ಲಿ ಬೆಕ್ಕಿನ ಮರಿಗಳು ಜನಿಸಿದರೆ, ಅದು ತುಂಬಾ ಶುಭ ಸಂಕೇತವಾಗಿದೆ ಎಂಬ ನಂಬಿಕೆಗಳಿವೆ.
(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.