ಕಲಬೆರಕೆ ತುಪ್ಪ ಹೃದಯಕ್ಕೆ ಅಪಾಯಕಾರಿ..! ತುಪ್ಪ ಅಸಲಿಯೋ ಕಲಬೆರಕೆಯೋ ಕಂಡು ಹಿಡಿಯುವುದು ಹೇಗೆ?

ತುಪ್ಪ ತಿನ್ನುವುದು ಅನೇಕ ಜನರ ನೆಚ್ಚಿನ ಹವ್ಯಾಸವಾಗಿರುತ್ತದೆ. ಆದರೆ ಕೆಲವೇ ಜನರಿಗೆ ಅಸಲಿ ಮತ್ತು ನಕಲಿ ತುಪ್ಪದ ನಡುವಿನ ವ್ಯತ್ಯಾಸವನ್ನು ತಿಳಿಯುವುದು ಗೊತ್ತಿರುತ್ತದೆ.  ಇದನ್ನು  ಮನೆಯಲ್ಲಿಯೇ ಸುಲಭವಾಗಿ ಪರೀಕ್ಷಿಸಬಹುದು.

Written by - Ranjitha R K | Last Updated : Mar 3, 2022, 03:05 PM IST
  • ತುಪ್ಪ ಆರೋಗ್ಯಕ್ಕೆ ಪ್ರಯೋಜನಕಾರಿ
  • ನಿಜವಾದ ತುಪ್ಪವನ್ನು ಗುರುತಿಸುವುದು ಹೇಗೆ?
  • ಮನೆಯಲ್ಲಿಯೇ ಪರೀಕ್ಷೆ ಮಾಡಿ ತಿಳಿದುಕೊಳ್ಳಬಹುದು
ಕಲಬೆರಕೆ ತುಪ್ಪ ಹೃದಯಕ್ಕೆ ಅಪಾಯಕಾರಿ..! ತುಪ್ಪ ಅಸಲಿಯೋ ಕಲಬೆರಕೆಯೋ ಕಂಡು ಹಿಡಿಯುವುದು  ಹೇಗೆ? title=
ನಿಜವಾದ ತುಪ್ಪವನ್ನು ಗುರುತಿಸುವುದು ಹೇಗೆ? (file photo)

ಬೆಂಗಳೂರು : ಭಾರತದಲ್ಲಿ ತುಪ್ಪವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಹಳ್ಳಿಗಳಿಂದ ನಗರಗಳವರೆಗೆ ಪ್ರತಿ ಮನೆಯಲ್ಲೂ ತುಪ್ಪದ ಬಳಕೆ ಇದ್ದೇ ಇರುತ್ತದೆ. ತುಪ್ಪ ಊಟದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ (Benefits of ghee). ತುಪ್ಪದಲ್ಲಿ ಉತ್ತಮ ಕೊಲೆಸ್ಟ್ರಾಲ್ ಇರುವುದರಿಂದ ಇದು ಹೃದಯದ ಆರೋಗ್ಯಕ್ಕೂ ಸಹಕಾರಿಯಾಗಿದೆ (Health benefits of ghee). 

ಅಸಲಿ ತುಪ್ಪವನ್ನು ಗುರುತಿಸುವುದು ಹೇಗೆ?
ಭಾರತದಲ್ಲಿ ತುಪ್ಪದ ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ವಿವಿಧ  ಬ್ರಾಂಡ್ ನ ತುಪ್ಪ ಲಭ್ಯವಿದೆ. ಮಾತ್ರವಲ್ಲ ಕಲಬೆರಕೆ ತುಪ್ಪ ಕೂಡಾ ಮಾರುಕಟ್ಟೆಯಲ್ಲಿ ಸಿಗುತ್ತದೆ (adulterated ghee) . ಆದರೆ ಇದು ಕಲಬೆರಕೆ ತುಪ್ಪ ಎನ್ನುವುದು ನೋಡಿದ ಕೂಡಲೇ ತಿಳಿಯುವುದಿಲ್ಲ. ಅದನ್ನು ತಿಂದರೆ ಹೃದಯದ ಆರೋಗ್ಯಕ್ಕೆ ಹಾನಿಕಾರವಾಗಿ ಪರಿಣಮಿಸಬಹುದು (Side effects of adulterated ghee). ಈ ಕಾರಣದಿಂದ ತುಪ್ಪವನ್ನು ನೇರವಾಗಿ ಅಡುಗೆಗೆ ಬಳಸುವ ಮೊದಲು ಕೆಲವು ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಅದು ಅಸಲಿ ತುಪ್ಪವೇ ಅಥವಾ ಕಲಬೆರಕೆ ತುಪ್ಪವೇ ಎನ್ನುವುದುನ್ನು ಕಂಡು ಹಿಡಿಯಬಹುದು. 

ಇದನ್ನೂ ಓದಿ  : Diabetes: ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ಅರಿಶಿನದೊಂದಿಗೆ ಈ 2 ಪದಾರ್ಥಗಳನ್ನು ಬೆರೆಸಿ ಸೇವಿಸಿ

1. ಬಿಸಿ ಪಾತ್ರೆ ಮೂಲಕ ಪರೀಕ್ಷಿಸಿ
ತುಪ್ಪದ ಶುದ್ಧತೆಯನ್ನು ಪರೀಕ್ಷಿಸಲು, ಬಿಸಿ ಬಾಣಲೆಯಲ್ಲಿ ಒಂದು ಚಮಚ ತುಪ್ಪವನ್ನು (Ghee) ಹಾಕಿ.  ತುಪ್ಪ ತಕ್ಷಣವೇ ಕರಗಿ ಕಂದು ಬಣ್ಣದಲ್ಲಿ ಕಾಣುತ್ತಿದ್ದರೆ, ಅದು ಅಸಲಿ ತುಪ್ಪ ಎಂದರ್ಥ. ಕರಗುವ ಸಮಯದಲ್ಲಿ  ತುಪ್ಪ ಹಳದಿ ಬಣ್ಣಕ್ಕೆ ತಿರುಗಿದರೆ,  ಅದು ಕಲಬೆರಕೆ ತುಪ್ಪ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು (Ghee purity Test At Home). 

2.  ಬಾಟಲಿ ಪರೀಕ್ಷೆ
ಒಂದು ಚಮಚ ತುಪ್ಪವನ್ನು ಕರಗಿಸಿ ಮತ್ತು ಅದನ್ನು ಪಾರದರ್ಶಕ ಬಾಟಲಿಗೆ ಹಾಕಿ. ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ. ಸಕ್ಕರೆ ಬೆರೆಸಿದ ನಂತರ ಬಾಟಲಿಯನ್ನು ಮುಚ್ಚಿ. ಸ್ವಲ್ಪ ಸಮಯ ಈ ಮಿಶ್ರಣವನ್ನು ಹಾಗೆಯೇ ಬಿಡಿ. ಬಾಟಲಿಯ ತಳದಲ್ಲಿ ಕೆಂಪು ಬಣ್ಣ ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ, ತುಪ್ಪ ನಕಲಿ ಎಂದು ಅರ್ಥ (How to find  adultred ghee).

ಇದನ್ನೂ ಓದಿ  : ಬೆಳಗ್ಗೆ ಈ ಆಹಾರಗಳನ್ನು ತಿಂದರೆ ಬೊಜ್ಜು ಸುಲಭವಾಗಿ ಕರಗುತ್ತದೆ

3.  ಅಂಗೈ ಮೇಲೆ ಹಾಕಿ ಗುರುತಿಸಿ
ಸ್ವಲ್ಪ ತುಪ್ಪವನ್ನು ನಿಮ್ಮ ಅಂಗೈ ಮೇಲೆ ಹಾಕಿಕೊಳ್ಳಿ. ಸ್ವಲ್ಪ ಸಮಯದ ನಂತರ ಅದು ಕರಗಲು ಪ್ರಾರಂಭಿಸಿದರೆ ಅದು ಶುದ್ಧ ತುಪ್ಪವಾಗಿರುತ್ತದೆ. ಇದು ಹೆಚ್ಚು ವ್ಯತ್ಯಾಸವನ್ನು ಉಂಟುಮಾಡದಿದ್ದರೆ,  ತುಪ್ಪ ಕಲಬೆರಕೆಯಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. 
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News