ಕಿರಿಯ ವಯಸ್ಸಿನಲ್ಲಿಯೇ ಹಾರ್ಟ್ ಅಟ್ಯಾಕ್ ಬಾರದಂತೆ ನೋಡಿಕೊಳ್ಳುವುದು ಹೇಗೆ ?

 ಮೊದಲೇ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಚಿಕ್ಕ ವಯಸ್ಸಿನಲ್ಲಿ ಸಂಭವಿಸುವ ಸುಮಾರು 80 ಪ್ರತಿಶತದಷ್ಟು ಹೃದಯಾಘಾತಗಳನ್ನು ತಡೆಗಟ್ಟಬಹುದು.

Written by - Ranjitha R K | Last Updated : Mar 11, 2022, 05:03 PM IST
  • ಚಿಕ್ಕ ವಯಸ್ಸಿನಲ್ಲೂ ಹೃದಯಾಘಾತದ ಅಪಾಯವಿದೆ
  • ಪರಿಧಮನಿಯ ಕಾಯಿಲೆಯು ಮಾರಣಾಂತಿಕವಾಗಿದೆ
  • ಹೃದಯದ ಕಾಳಜಿ ವಹಿಸುವುದು ಹೇಗೆ ?
ಕಿರಿಯ ವಯಸ್ಸಿನಲ್ಲಿಯೇ ಹಾರ್ಟ್ ಅಟ್ಯಾಕ್ ಬಾರದಂತೆ ನೋಡಿಕೊಳ್ಳುವುದು ಹೇಗೆ ?  title=
ಚಿಕ್ಕ ವಯಸ್ಸಿನಲ್ಲೂ ಹೃದಯಾಘಾತದ ಅಪಾಯವಿದೆ (file photo)

ಬೆಂಗಳೂರು : ವಯಸ್ಸಾದಂತೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ  ಹೆಚ್ಚುತ್ತದೆ (heart disease). ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ, ಈ ರೋಗವನ್ನು ತಪ್ಪಿಸಬಹುದು. ಇತ್ತೀಚೆಗೆ ಜಗತ್ತಿನಲ್ಲಿ ಅತಿ ಹೆಚ್ಚು ಸಂಖ್ಯೆಯ ಜನರು ಹೃದಯಾಘಾತಕ್ಕೆ (heart attack) ಬಲಿಯಾಗುತ್ತಿದ್ದಾರೆ. 

ಹೃದ್ರೋಗದಿಂದ ಸಾವಿನ ಅಪಾಯ :
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, Coronary Artery Disease , ಹೃದಯಾಘಾತ  ( heart attack) ಮತ್ತು ಅಧಿಕ ರಕ್ತದೊತ್ತಡ 45 ಪ್ರತಿಶತದಷ್ಟು ಸಾವುಗಳಿಗೆ ಕಾರಣವಾಗಿದೆ. ಇನ್ನು ಶೇಕಡಾ 22 ರಷ್ಟು ಜನರು ಉಸಿರಾಟದ ಕಾಯಿಲೆಗಳಿಂದ, ಶೇಕಡಾ 12 ರಷ್ಟು ಜನ ಕ್ಯಾನ್ಸರ್ ನಿಂದ (Cnacer)ಮತ್ತು ಶೇಕಡಾ 3 ರಷ್ಟು ಜನರು ಮಧುಮೇಹದಿಂದ (Diabetes) ಸಾವನ್ನಪ್ಪುತ್ತಾರೆ.  

ಇದನ್ನೂ ಓದಿ : Bathing Tips: ಅರಿಶಿನ ನೀರಿನಿಂದ ಸ್ನಾನ ಮಾಡುವುದರಿಂದ ಆಗುವ ಪ್ರಯೋಜನಗಳು

ಚಿಕ್ಕ ವಯಸ್ಸಿನಲ್ಲೇ ಹೃದ್ರೋಗವನ್ನು ತಡೆಯಬಹುದು :
ಮೊದಲೇ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಚಿಕ್ಕ ವಯಸ್ಸಿನಲ್ಲಿ ಸಂಭವಿಸುವ ಸುಮಾರು 80 ಪ್ರತಿಶತದಷ್ಟು ಹೃದಯಾಘಾತಗಳನ್ನು ತಡೆಗಟ್ಟಬಹುದು. ಆರೋಗ್ಯ ತಜ್ಞರ ಪ್ರಕಾರ, ಧೂಮಪಾನವನ್ನು ತ್ಯಜಿಸುವುದು, ಆರೋಗ್ಯಕರ ಆಹಾರ ಸೇವನೆ, ನಿಯಮಿತವಾಗಿ ವ್ಯಾಯಾಮ ಮಾಡುವುದು (Exercise), ಸರಿಯಾದ ತೂಕವನ್ನು ಹೊಂದುವುದು , ರಕ್ತದೊತ್ತಡ (Blood pressure), ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ (Sugar level) ಚಿಕ್ಕ ವಯಸ್ಸಿನಲ್ಲಿ ಎದುರಾಗಬಹುದಾದ ಹೃದ್ರೋಗ ಸಮಸ್ಯೆಯನ್ನು ತಡೆಯಬಹುದು.  

ಹೃದ್ರೋಗ ಏಕೆ ಸಂಭವಿಸುತ್ತದೆ?
ಹೃದ್ರೋಗವು ಮುಖ್ಯವಾಗಿ ಅಪಧಮನಿಯ ಗೋಡೆಯ ಮೇಲೆ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಇತರ ಪದಾರ್ಥಗಳ ಸಂಗ್ರಹದಿಂದ ಉಂಟಾಗುತ್ತದೆ. ಇದನ್ನು Atherosclerosis ಎಂದು ಕರೆಯಲಾಗುತ್ತದೆ. ಇದು ಚಿಕ್ಕ ವಯಸ್ಸಿನಲ್ಲೇ ರಚನೆಯಾಗಲು ಆರಂಭವಾಗುತ್ತದೆ. ನಂತರ ಹೃದಯವು ದೇಹದ ಅಂಗಾಂಶಗಳಿಗೆ ಸಾಕಷ್ಟು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಂತೆ ಸ್ಥಳವನ್ನು ನಿರ್ಬಂಧಿಸುತ್ತದೆ. ಇದು ಹೃದಯ ಮತ್ತು ರಕ್ತನಾಳಗಳಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ :  Skin Care Tips: ತ್ವಚೆಯ ಈ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ನಿಂಬೆಹಣ್ಣು

ಹೃದಯ ಕಾಯಿಲೆಯ ಲಕ್ಷಣಗಳು :
ವೈದ್ಯರ ಪ್ರಕಾರ, ವಿಶೇಷ ಹೃದಯ ಕಾಯಿಲೆಗಳ ಲಕ್ಷಣಗಳೆಂದರೆ ವ್ಯಾಯಾಮ ಸಮಯದಲ್ಲಿ ಎದೆ ನೋವು ಕಾಣಿಸಿಕೊಳ್ಳುವುದು, ಉಸಿರಾಟದ ತೊಂದರೆ, ಬೆವರುವಿಕೆ, ಹೆದರಿಕೆ, ಎಪಿಗ್ಯಾಸ್ಟ್ರಿಕ್ ಅನ್ನು ಒಳಗೊಂಡಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News