ದಿನಭವಿಷ್ಯ 25-04-2022: ಈ ರಾಶಿಯ ಜನರು ಇಂದು ಶಾಖದ ಬಗ್ಗೆ ಎಚ್ಚರದಿಂದಿರಿ

Horoscope April 25, 2022: ಸೋಮವಾರದಂದು ಕೆಲವು ರಾಶಿಯವರಿಗೆ ತುಂಬಾ ಶುಭ ದಿನ. ಕೆಲವರು ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಮನ್ನಣೆ ಪಡೆಯುವರು. ಇನ್ನೂ ಕೆಲವರಿಗೆ ಸಂಗಾತಿಯ ಬೆಂಬಲ ಸಿಗಲಿದೆ.

Written by - Zee Kannada News Desk | Last Updated : Apr 25, 2022, 05:58 AM IST
  • ವೃಷಭ ರಾಶಿಯವರು ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸಿ.
  • ಕನ್ಯಾ ರಾಶಿಯವರಿಗೆ ನಿಮ್ಮ ಬಹುದಿನದ ಸಮಸ್ಯೆಗಳಿಗೆ ಇಂದು ಪರಿಹಾರ ದೊರೆಯಲಿದೆ.
  • ಧನು ರಾಶಿಯವರು ನಿಮ್ಮ ನಿಗದಿತ ಗುರಿಯನ್ನು ಮುಟ್ಟಲು ಏಕಾಗ್ರತೆಯಿಂದ ಕೆಲಸ ಮಾಡಿ.
ದಿನಭವಿಷ್ಯ 25-04-2022: ಈ ರಾಶಿಯ ಜನರು ಇಂದು ಶಾಖದ ಬಗ್ಗೆ ಎಚ್ಚರದಿಂದಿರಿ title=
Horoscope April 25, 2022

Daily Horoscope (ದಿನಭವಿಷ್ಯ 25-04-2022) :    ಏಪ್ರಿಲ್ ಮಾಸದ ಕೊನೆಯ ಸೋಮವಾರ ಕೆಲವು ರಾಶಿಯವರಿಗೆ ತುಂಬಾ ಒಳ್ಳೆಯ ದಿನ ಎಂದು ಸಾಬೀತು ಪಡಿಸಬಹುದು. ಈ ದಿನ ಯಾವ ರಾಶಿಯವರಿಗೆ ಹೇಗಿರಲಿದೆ ಎಂದು ತಿಳಿಯೋಣ... 

ಮೇಷ ರಾಶಿ- ಈ ರಾಶಿಯ ಜನರು ನಿಮ್ಮ ಕೆಲಸದ ಬಗ್ಗೆ ನಿಷ್ಠೆಯಿಂದಿರಿ. ಅದರಲ್ಲೂ ಟೆಕ್ನಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಬೇರೆ ನಿಮ್ಮ ಕೆಲಸದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನಿಗಾವಹಿಸಿ. ಸೋಮವಾರದ ದಿನವು ತೈಲ ಸಂಬಂಧಿತ ವ್ಯಾಪಾರಿಗಳಿಗೆ ಒಳ್ಳೆಯದು. ಆದಾಗ್ಯೂ, ಶಾಖದ ಬಗ್ಗೆ ಎಚ್ಚರದಿಂದಿರಿ. 

ವೃಷಭ ರಾಶಿ - ಅನಾವಶ್ಯಕ ಕೋಪ ಒಳ್ಳೆಯದಲ್ಲ ಎಂಬುದನ್ನು ನೆನಪಿಡಿ. ಇದರಿಂದ ನಿಮ್ಮ ವ್ಯಾಪಾರ-ವ್ಯವಹಾರದಲ್ಲಿ ಭಾರೀ ನಷ್ಟವಾಗುವ ಸಾಧ್ಯತೆ ಇದೆ. ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರಿ. ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸಿ. 

ಮಿಥುನ ರಾಶಿ- ಅತಿಯಾದ ಆತ್ಮವಿಶ್ವಾಸ ನಿಮ್ಮನ್ನು ತಪ್ಪು ನಿರ್ಧಾರ ಕೈಗೊಳ್ಳುವಂತೆ ಮಾಡಬಹುದು. ತುಂಬಾ ಶಿಸ್ತುಬದ್ಧಾವಾದ ವಾತಾವರಣ ಉಸಿರು ಗಟ್ಟಿಸುತ್ತದೆ. ಹಾಗಾಗಿ ಮನೆಯ ವಾತಾವರಣ ತಿಳಿಯಾಗಿರುವುವಂತೆ ನೋಡಿಕೊಳ್ಳಿ. ಇದಲ್ಲದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸೂಕ್ತ. 

ಕರ್ಕ ರಾಶಿ - ಅನಾವಶ್ಯಕ ಚಿಂತೆ ಮಾಡದಿರಿ. ಆಗಬೇಕಾದ ಸಮಯಕ್ಕೆ ಎಲ್ಲವೂ ಆಗೇ ಆಗುತ್ತದೆ. ನಿಮ್ಮ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಬೇರೆಯವರನು ದೂಷಿಸದಿರಿ. ಈ ರಾಶಿಯ ಅವಿವಾಹಿತ ಯುವಕ-ಯುವತಿಯರಿಗೆ ಮದುವೆ ಮಾತು-ಕತೆ ಮುಂದುವರೆಸುವುದರಿಂದ ಶುಭ.

ಇದನ್ನೂ ಓದಿ- Vastu Tips: ಮನೆಯ ಸರಿಯಾದ ಜಾಗದಲ್ಲಿರುವ ಕನ್ನಡಿ ಹಣದ ಹೊಳೆಯೇ ಹರಿಸುತ್ತದೆ

ಸಿಂಹ ರಾಶಿ- ನೀವು ಭವಿಷ್ಯದ ಬಗ್ಗೆ ಚಿಂತಿಸುತ್ತಾ ವರ್ತಮಾನದ ಖುಷಿಯನ್ನು ಕಳೆದುಕೊಳ್ಳಬೇಡಿ. ಯಾವುದೇ ಸ್ವಯಂ ಉದ್ಯೋಗ ಮಾಡುವವರಿಗೆ ಈ ದಿನ ತುಂಬಾ ಶುಭ. ನೀವು ನಿಮ್ಮ ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವ ಅವಕಾಶಗಳಿವೆ.  

ಕನ್ಯಾ ರಾಶಿ- ನಿಮ್ಮ ಬಹುದಿನದ ಸಮಸ್ಯೆಗಳಿಗೆ ಇಂದು ಪರಿಹಾರ ದೊರೆಯಲಿದೆ. ನಿಮ್ಮ ಮನಸ್ಸು ಉತ್ಸಾಹದಿಂದ ಕೂಡಿರುತ್ತದೆ. ಈ ರಾಶಿಯವರಿಗೆ ಇಂದು ದಿಢೀರ್ ಲಾಭ ಸಾಧ್ಯತೆಯೂ ಇದೆ. ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ, ಯೋಗ ಮಾಡುವುದನ್ನು ತಪ್ಪಿಸಬೇಡಿ. 

ತುಲಾ ರಾಶಿ- ಈ ರಾಶಿಯವರು ಸಮ್ಮನೆ ಕುಳಿತು ಬೇಡದ್ದನ್ನು ಯೋಚಿಸುವ ಬದಲಿಗೆ ನಿಮ್ಮ ಮನಸ್ಸು ಚಟುವಟಿಕೆಯಿಂದ ಇರುವಂತೆ ಕೆಲಸದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಇದರಿಂದ ಅನಾವಶ್ಯಕ ಚಿಂತೆಯಿಂದ ದೂರ ಉಳಿಯಬಹುದು. ನಿಮ್ಮ ಪೋಷಕರ ಸೇವೆ ಮಾಡುವುದು ಶ್ರೇಯಸ್ಕರ. 

ವೃಶ್ಚಿಕ ರಾಶಿ - ಉದ್ಯೋಗಸ್ತರಿಗೆ ಬಡ್ತಿ ಸಾಧ್ಯತೆ ಇದೆ. ಆದರೂ ನೀವು ಸಣ್ಣ-ಪುಟ್ಟ ವಿಷಯಗಳಿಗೆ ಪ್ರಾಮುಖ್ಯತೆ ನೀಡಿ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಿ. ಕುಟುಂಬ ಸದಸ್ಯರಿಂದ ಶುಭ ಸುದ್ದಿ ಸಿಗಲಿದೆ. 

ಇದನ್ನೂ ಓದಿ- Solar Eclipse : ಏ.30 ರಂದು ಈ ವರ್ಷದ ಮೊದಲ ಸೂರ್ಯಗ್ರಹಣ : ಏನು ಮಾಡಬೇಕು? ಮಾಡಬಾರದು?

ಧನು ರಾಶಿ- ನಿಮ್ಮ ನಿಗದಿತ ಗುರಿಯನ್ನು ಮುಟ್ಟಲು ಏಕಾಗ್ರತೆಯಿಂದ ಕೆಲಸ ಮಾಡಿ. ಆಗಷ್ಟೇ ಯಶಸ್ಸು ಕೈ ಹಿಡಿಯಲಿದೆ. ಯುವಕರು ಯಾವುದೇ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ ನಿರಾಶೆಗೊಳ್ಳಬೇಡಿ. ಮರಳಿ ಯತ್ನವ ಮಾಡು... ಮರಳಿ ಯತ್ನವ ಮಾಡು... ಎಂಬಂತೆ ನಿಷ್ಠೆಯಿಂದ ನಿಮ್ಮ ಪ್ರಯತ್ನ ಮುಂದುವರೆಸಿ, ಒಳ್ಳೆಯದಾಗಲಿದೆ. 

ಮಕರ ರಾಶಿ- ಈ ರಾಶಿಯ ಜನರು ಮಾತಿನ ಬಗ್ಗೆ ನಿಗಾವಹಿಸಿ. ಮಾತು ಆಡಿದರೆ ಹೋಯಿತು, ಮುತ್ತು ಹೊಡೆದರೆ ಹೋಯಿತು ಎಂಬ ನಾಣ್ನುಡಿಯಂತೆ ಯೋಚಿಸದೆ ಮಾತನಾಡಿ ವಿವಾದಕ್ಕೆ ಕಾರಣರಾಗಬೇಡಿ. ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳಿ. 

ಕುಂಭ ರಾಶಿ- ಈ ರಾಶಿಯವರಿಗೆ ಕಚೇರಿಯಲ್ಲಿ ಕೆಲಸ ಹೆಚ್ಚಾಗಲಿದೆ. ಆದರೆ, ಇದನ್ನು ಹೊರೆ ಎಂದು ಭಾವಿಸದೆ ಜವಾಬ್ದಾರಿಯನ್ನು ನಿರ್ವಹಿಸಿ, ಇದರಿಂದ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಇದು ನಿಮ್ಮ ಬಡ್ತಿಗೂ ಸಹಾಯಕವಾಗಬಹುದು. 

ಮೀನ ರಾಶಿ- ಈ ರಾಶಿಯವರು ಚಿಂತಿಸದೆ ತಾಳ್ಮೆಯಿಂದ ಕೆಲಸ ಮಾಡಿದರೆ ನಿಮ್ಮ ಕೆಲಸ ಸುಲಭವಾಗಿ ಮುಗಿಯಲಿದೆ. ಉದರ ಸಮಸ್ಯೆಗಳು ನಿಮ್ಮನ್ನು ಕಾಡಬಹುದು ಎಚ್ಚರ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News