ದಿನಭವಿಷ್ಯ 22-04-2022: ಶುಕ್ರವಾರದಂದು ಈ ರಾಶಿಯವರು ವಂಚನೆಯ ಬಗ್ಗೆ ಎಚ್ಚರದಿಂದಿರಿ

Horoscope April 22, 2022:  ಈ ಶುಕ್ರವಾರದಂದು ವೃಶ್ಚಿಕ ರಾಶಿಯ ಜನರು ವಂಚಕರ ಬಗ್ಗೆ ಜಾಗರೂಕರಾಗಿದೆ. ಮಕರ ರಾಶಿಯವರಿಗೆ ವಿದೇಶದಲ್ಲಿ ಉದ್ಯೋಗ ದೊರೆಯುವ ಸಾಧ್ಯತೆಯಿದೆ. ಮೀನ ರಾಶಿಯ ಜನರು ವ್ಯಾಪಾರ-ವ್ಯವಹಾರಗಳಲ್ಲಿ ಉತ್ತಮ ಲಾಭ ಗಳಿಸುವ ಸಂಭವವಿದೆ.

Written by - Zee Kannada News Desk | Last Updated : Apr 22, 2022, 06:30 AM IST
  • ಕರ್ಕ ರಾಶಿಯವರಿಗೆ ಇಂದು ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುವುದರಿಂದ ಹೆಚ್ಚಿನ ಲಾಭ
  • ಧನು ರಾಶಿಯವರು ನಿಮ್ಮ ಕಠಿಣ ಪರಿಶ್ರಮವೇ ನಿಮ್ಮ ವಿಶಿಷ್ಟ ಗುರುತು ಎಂಬುದನ್ನು ನೆನಪಿನಲ್ಲಿಡಿ.
  • ಮಕರ ರಾಶಿಯವರಿಗೆ ಇಂದು ನೀವು ಆತುರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದು ಅಷ್ಟಾಗಿ ಒಳ್ಳೆಯದಲ್ಲ.
ದಿನಭವಿಷ್ಯ 22-04-2022: ಶುಕ್ರವಾರದಂದು ಈ ರಾಶಿಯವರು ವಂಚನೆಯ ಬಗ್ಗೆ ಎಚ್ಚರದಿಂದಿರಿ title=
Horoscope April 22, 2022

Daily Horoscope (ದಿನಭವಿಷ್ಯ 22-04-2022) :  ಶುಕ್ರವಾರದ ಈ ದಿನ ಸಾಫ್ಟ್‌ವೇರ್ ಕ್ಷೇತ್ರದಲ್ಲಿರುವ ತುಲಾ ರಾಶಿಯ ಜನರಿಗೆ ಹೊಸ ಪ್ರಾಜೆಕ್ಟ್ ದೊರೆಯುವ ಸಾಧ್ಯತೆಯಿದೆ. ಮಕರ ರಾಶಿಯವರು ಆತುರದ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ. ಉಳಿದ ರಾಶಿಚಕ್ರಗಳ ಇಂದಿನ ಫಲಾಫಲ ತಿಳಿಯಿರಿ.

ಮೇಷ ರಾಶಿ- ಈ ರಾಶಿಯ ಜನರಿಗೆ ಇಂದು ಸಾಮಾನ್ಯಕ್ಕಿಂತ ಹೆಚ್ಚು ಖರ್ಚಾಗುವ ಸಾಧ್ಯತೆಯಿದೆ. ಹಾಗಾಗಿ ನಿಮ್ಮ ಖರ್ಚು-ವೆಚ್ಚಗಳ ಬಗ್ಗೆ ಗಮನಹರಿಸಿ. ಉದ್ಯೋಗಸ್ಥರು ಯಾವುದೇ ಕೆಲಸಕ್ಕಾಗಿ ಮುಂದಾಳತ್ವ ವಹಿಸಬೇಕಾಗಬಹುದು. ಇದಕ್ಕೆ ಸಿದ್ಧರಾಗಿರಿ. ಹೋಟೆಲ್ ಸಂಬಂಧಿತ ವ್ಯಾಪಾರಿಗಳಿಗೆ ದಿನ ಶುಭವಾಗಿದೆ.  

ವೃಷಭ ರಾಶಿ- ಇಂದು ಈ ರಾಶಿಯವರು ಯಾವುದೋ ಕಾಣದ ಭಯದಿಂದ ವಿಚಲಿತಗೊಳ್ಳುವ ಸಾಧ್ಯತೆ ಇದೆ. ನಕಾರಾತ್ಮಕ ಆಲೋಚನೆಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಅವಕಾಶ ಕೊಡಬೇಡಿ. ಉದರ ಸಂಬಂಧಿತ ಕಾಯಿಲೆಗಳು ನಿಮ್ಮನ್ನು ಕಾಡಬಹುದು.  

ಮಿಥುನ ರಾಶಿ- ಶುಕ್ರವಾರದಂದು ನಿಮ್ಮ ನಡೆ-ನುಡಿ ಸೌಮ್ಯವಾಗಿದ್ದರೆ ಒಳಿತು. ಇದು ನೀವು ನಿಮ್ಮ ವ್ಯಾಪಾರ-ವ್ಯವಹಾರದಲ್ಲಿ ಲಾಭ ಗಳಿಸಲು ಸಹಕಾರಿಯಾಗಲಿವೆ. ಆದರೆ, ನಿಮ್ಮ ಸಂಗಾತಿಯ ಆರೋಗ್ಯ ಹದಗೆಡಬಹುದು ಈ ಬಗ್ಗೆ ನಿಗಾವಹಿಸಿ.

ಕರ್ಕ ರಾಶಿ- ಈ ರಾಶಿಯವರು ಇಂದು ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ನಿಮಗೆ ತಿಳಿದಿರುವ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ನಿಮ್ಮ ಜ್ಞಾನ ವೃದ್ಧಿಯಾಗಲಿದೆ. 

ಇದನ್ನೂ ಓದಿ- ವಾಸ್ತು ಟಿಪ್ಸ್: ಮನೆಯಲ್ಲಿ ಪ್ರತಿದಿನ ಈ ಐದು ಕೆಲಸ ಮಾಡುವುದರಿಂದ ಆರ್ಥಿಕ ಪ್ರಗತಿ

ಸಿಂಹ ರಾಶಿ- ಇಂದು ನೀವು ಮಾನಸಿಕವಾಗಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಆದರೆ, ಸಂಯಮದಿಂದ ಚಿಂತಿಸಿ ಯಾವುದೇ ಸಮಸ್ಯೆಗೂ ಒಂದಲ್ಲಾ ಒಂದು ಪರಿಹಾರ ಇದ್ದೇ ಇರುತ್ತದೆ. ಯಾವುದೇ ಸ್ಪರ್ಧೆಗಾಗಿ ತಯಾರಿ ನಡೆಸುತ್ತಿರುವವರು ಧೈರ್ಯವಾಗಿ ಮುನ್ನುಗ್ಗಿ ಖಂಡಿತ ಯಶಸ್ಸು ನಿಮ್ಮ ಕೈ ಹಿಡಿಯಲಿದೆ. 

ಕನ್ಯಾ ರಾಶಿ- ಶುಕ್ರವಾರದಂದು ನಿಮ್ಮ ಮನಸ್ಸು ತುಂಬಾ ಚುರುಕಾಗಿರುತ್ತದೆ. ಆದರೆ, ಯಾರೊಂದಿಗೂ ಅನಾವಶ್ಯಕ ವಾದ-ವಿವಾದಗಳಿಗೆ ಎಡೆಮಾಡಿಕೊಡಬೇಡಿ. ನಿಮ್ಮ ಮಾತನ್ನು ನಯವಾಗಿ ಹೇಳುವ ಮೂಲಕವೂ ವಿಷಯವನ್ನು ಅರ್ಥ ಮಾಡಿಸಬಹುದು. 

ತುಲಾ ರಾಶಿ- ಶುಕ್ರವಾರದ ಈ ದಿನ ಸಾಫ್ಟ್‌ವೇರ್ ಕ್ಷೇತ್ರದಲ್ಲಿರುವ ತುಲಾ ರಾಶಿಯ ಜನರಿಗೆ ಹೊಸ ಪ್ರಾಜೆಕ್ಟ್  ಪಡೆಯುವ ಅವಕಾಶವಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಫಲ ದೊರೆಯಲಿದೆ. ಯಾವುದೇ ಕೆಲಸವನ್ನು ಮಾಡುವ ಮುನ್ನ ದೇವರಿಗೆ ನಮಸ್ಕರಿಸಿ. ಇದರಿಂದ ಶುಭ ಫಲಿತಾಂಶಗಳು ದೊರೆಯಲಿವೆ.

ವೃಶ್ಚಿಕ ರಾಶಿ- ಯಾವುದೇ ಕನ್ನಡಿಯೊಳಗಿನ ಗಂಟನ್ನು ಕಂಡು ಮೋಸ ಹೋಗದಿರಿ. ಇಂದು ಯಾರಾದರು ನಿಮಗೆ ಹೆಚ್ಚಿನ ಲಾಭದ ಆಸೆ ತೋರಿಸುವ ಮೂಲಕ ವಂಚನೆ ಮಾಡಬಹುದು. ಇಂತಹವರ ಬಗ್ಗೆ ಜಾಗರೂಕರಾಗಿರಿ.  

ಇದನ್ನೂ ಓದಿ- Surya Gochar: ಮುಂದಿನ 24 ದಿನಗಳವರೆಗೆ ಈ ನಾಲ್ಕು ರಾಶಿಯವರ ಮೇಲೆ ಸೂರ್ಯದೇವನ ಕೃಪೆ

ಧನು ರಾಶಿ - ಈ ರಾಶಿಯವರಿಗೆ ನಿಮ್ಮ ಕಠಿಣ ಪರಿಶ್ರಮವೇ ನಿಮ್ಮ ವಿಶಿಷ್ಟ ಗುರುತು ಎಂಬುದನ್ನು ನೆನಪಿನಲ್ಲಿಡಿ. ಉದ್ಯೋಗದಲ್ಲಿ ಒತ್ತಡ ಇರಬಹುದು. ಆದರೆ, ತಾಳ್ಮೆಯಿಂದ ವರ್ತಿಸಿ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಚೆನ್ನಾಗಿ ಯೋಚಿಸಿ.

ಮಕರ ರಾಶಿ- ಇಂದು ನೀವು ಆತುರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದು ಅಷ್ಟಾಗಿ ಒಳ್ಳೆಯದಲ್ಲ. ಏನೇ ಕೆಲಸ ಮಾಡಬೇಕಾದರೂ ಚೆನ್ನಾಗಿ ಯೋಚಿಸಿ ನಿರ್ಧಾರ ಕೈಗೊಳ್ಳಿ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸಮಾಚಾರ ದೊರೆಯುವ ಸಾಧ್ಯತೆ ಹೆಚ್ಚಾಗಿದೆ. 

ಕುಂಭ ರಾಶಿ- ಚಿಂತೆಯೇ ಚಿತೆಗೆ ಕಾರಣ ಎಂಬ ಮಾತಿದೆ. ಹಾಗಾಗಿ ಅನಾವಶ್ಯಕ ಚಿಂತೆಗೆ ತಲೆ ಬಲಿಯಾಗಬೇಡಿ. ಉತ್ತಮ ಆರೋಗ್ಯಕ್ಕಾಗಿ ಚಿಂತೆಯಿಂದ ದೂರವಿರಿ. ಸಾಮಾಜಿಕ ಕ್ಷೇತ್ರಗಳಲ್ಲಿ ನಿಮ್ಮ ಗೌರವ ಹೆಚ್ಚಲಿದೆ. 

ಮೀನ  ರಾಶಿ- ಸೋಮಾರಿಗಳಿಗೆ ಲಕ್ಷ್ಮೀದೇವಿ ಎಂದೂ ಕೈ ಹಿಡಿಯುವುದಿಲ್ಲ. ಹಾಗಾಗಿ ನಿಮ್ಮ ಸೋಮಾರಿತನವನ್ನು ಬಿಟ್ಟು ಸಕ್ರಿಯರಾಗಿ ಕೆಲಸ ಮಾಡಿ. ಚಿಲ್ಲರೆ ವ್ಯಾಪಾರ ಮಾಡುವ ವ್ಯಾಪಾರಿಗಳು ಉತ್ತಮ ಆದಾಯ ಗಳಿಸುವ ಸಾಧ್ಯತೆಯಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News