ದಿನಭವಿಷ್ಯ 21-04-2022: ಇಂದು ಈ ರಾಶಿಯವರು ಆರೋಗ್ಯದ ಬಗ್ಗೆ ಗಮನಹರಿಸಿ

Horoscope April 21, 2022:  ಗುರುವಾರವು ಕೆಲವರಿಗೆ ತುಂಬಾ ಶುಭ ಫಲಗಳನ್ನು ತರಲಿದೆ. ಕೆಲವು ರಾಶಿಚಕ್ರದವರು ತಮ್ಮ ಆರೋಗ್ಯದ ಬಗ್ಗೆ ಕೊಂಚ ಗಮನ ಹರಿಸುವುದು ಅಗತ್ಯವಾಗಿದೆ.

Written by - Zee Kannada News Desk | Last Updated : Apr 21, 2022, 06:26 AM IST
  • ಸಿಂಹ ರಾಶಿಯವರು ನಿಮ್ಮ ಸ್ನೇಹಿತರೊಂದಿಗೆ ಸಂಯಮದಿಂದ ವರ್ತಿಸಿ.
  • ಧನು ರಾಶಿಯವರು ಅನಗತ್ಯವಾಗಿ ನಿಮ್ಮ ಮನಸ್ಸಿನಲ್ಲಿ ಯಾವುದೇ ಸಂದೇಹವನ್ನು ಇಟ್ಟುಕೊಳ್ಳಬೇಡಿ.
  • ಕುಂಭ ರಾಶಿಯವರು ಅನಾವಶ್ಯಕ ಖರ್ಚುಗಳ ಬಗ್ಗೆ ಜಾಗರೂಕರಾಗಿರಿ.
ದಿನಭವಿಷ್ಯ 21-04-2022: ಇಂದು ಈ ರಾಶಿಯವರು ಆರೋಗ್ಯದ ಬಗ್ಗೆ ಗಮನಹರಿಸಿ  title=
Horoscope April 21, 2022

Daily Horoscope (ದಿನಭವಿಷ್ಯ 21-04-2022) :   ಗುರುವಾರದಂದು ಮಿಥುನ ರಾಶಿಯವರು ಅನಗತ್ಯ ಪ್ರಯಾಣ ತಪ್ಪಿಸಲು ಪ್ರಯತ್ನಿಸಿ. ಕನ್ಯಾ ರಾಶಿಯವರು ಬಿಸಿಲಿಗೆ ಹೋಗುವ ಮುನ್ನ ಕನ್ನಡಕ ಧರಿಸಿದರೆ ಉತ್ತಮ. ಇಂದು ಯಾವ ರಾಶಿಯವರ ಮೇಲೆ ಗುರುರಾಯರ ಕೃಪೆ ಇರಲಿದೆ ತಿಳಿಯೋಣ....

ಮೇಷ ರಾಶಿ: ಗುರುವಾರದಂದು ಮೇಷ ರಾಶಿಯವರು ಉದ್ಯೋಗ ಬದಲಾವಣೆ ಮಾಡಲು ಯೋಚಿಸಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳಲ್ಲಿ ಲಾಭ ಗಳಿಸುವ ಸಾಧ್ಯತೆಯಿದೆ. ಆದರೆ, ಬೆನ್ನು ಅಥವಾ ಸೊಂಟದ ನೋವು ನಿಮ್ಮನ್ನು ಕಾಡಬಹುದು ಎಚ್ಚರ. 

ವೃಷಭ ರಾಶಿ: ನೀವು ವ್ಯಾಪಾರಸ್ಥರಾಗಿದ್ದರೆ ಗ್ರಾಹಕರನ್ನು ದೇವರಂತೆ ನೋಡಿಕೊಳ್ಳಿ. ಅವರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಿ. ಏನೇ ಮಾತನಾಡುವಾಗ ಎಚ್ಚರಿಕೆಯಿಂದ ಪದ ಬಳಿಸಿ, ನಿಮ್ಮ ಮಾತು ಇತರರ ಮನಸ್ಸನ್ನು ಗಾಸಿಗೊಳಿಸಬಹುದು.

ಮಿಥುನ ರಾಶಿ: ಅನಗತ್ಯ ಪ್ರಯಾಣವನ್ನು ತಪ್ಪಿಸಲು ಪ್ರಯತ್ನಿಸಿ. ತೀರಾ ಅಗತ್ಯವಿದ್ದಾಗ ಮಾತ್ರ ಪ್ರಯಾಣ ಮಾಡಿ. ಉದ್ಯೋಗ ಕ್ಷೇತ್ರದಲ್ಲಿ ಕೆಲಸದ ಹೊರೆ ಹೆಚ್ಚಾಗಬಹುದು. ಸ್ಥಳ ಬದಲಾವಣೆಯಾಗುವ ಸಾಧ್ಯತೆಯೂ ಇದೆ.  

ಕರ್ಕಾಟಕ ರಾಶಿ: ಯಾವುದಾದರೂ ವಿಷಯ ನಿಮಗೆ ಕೋಪ ಉಂಟುಮಾಡಬಹುದು. ಅಧಿಕ ಒತ್ತಡದಿಂದಾಗಿ ನೀವು ಆಯಾಸವನ್ನು ಅನುಭವಿಸುವಿರಿ. ಆದರೆ, ವಿದ್ಯುನ್ಮಾನ ಮಾಧ್ಯಮಕ್ಕೆ ಸಂಬಂಧಿಸಿದವರಿಗೆ ಉತ್ತಮ ಅವಕಾಶ ಸಿಗಲಿದೆ.  ಯಾವುದೇ ಕೆಲಸ ಕಾರ್ಯಗಳಲ್ಲಿ ನೀವು ಕುಟುಂಬ ಮತ್ತು ಸ್ನೇಹಿತರ ಬೆಂಬಲವನ್ನು ಪಡೆಯುತ್ತೀರಿ. 

ಇದನ್ನೂ ಓದಿ- ಶನಿಚಾರಿ ಅಮಾವಾಸ್ಯೆಯ ದಿನವೇ ಸೂರ್ಯ ಗ್ರಹಣ, ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ

ಸಿಂಹ ರಾಶಿ: ನಿಮ್ಮ ಸ್ನೇಹಿತರೊಂದಿಗೆ ಸಂಯಮದಿಂದ ವರ್ತಿಸಿ. ವ್ಯಾಪಾರವು ತೊಂದರೆಗೊಳಗಾಗಿದ್ದರೆ ಮತ್ತು ನೀವು ಅದರ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಈಗ ಪರಿಸ್ಥಿತಿ ಸುಧಾರಿಸಲಿದೆ. ಉದ್ಯೋಗಸ್ಥರಿಗೆ ಕಚೇರಿಯ ವಾತಾವರಣವು ನಿಮಗೆ ಸಂತೋಷವನ್ನು ನೀಡುತ್ತದೆ.   

ಕನ್ಯಾ ರಾಶಿ:  ಗುರುವಾರದಂದು ವಾಹನಗಳ ಖರೀದಿ ಮತ್ತು ಮಾರಾಟದ ಕೆಲಸವನ್ನು ಮಾಡುವ ವ್ಯಾಪಾರಿಗಳು ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ನಿಮ್ಮ ನಿಗದಿತ ಗುರಿಗಳನ್ನು ಪೂರೈಸಲು ನಿಮಗೆ ಸಾಧ್ಯವಾಗುತ್ತದೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ. ವ್ಯಾಪಾರಿಗಳು ವ್ಯಾಪಾರದಲ್ಲಿ ಬದಲಾವಣೆ ಮಾಡುವ ಬದಲು ಪ್ರಚಾರದತ್ತ ಗಮನ ಹರಿಸಬೇಕು, ಆಗ ಮಾತ್ರ ಮಾರಾಟ ಹೆಚ್ಚಾಗುತ್ತದೆ. 

ತುಲಾ ರಾಶಿ: ನಿಮ್ಮ ಕೆಲಸವನ್ನು ವೇಗಗೊಳಿಸಿ, ಇದರಿಂದ ಎಲ್ಲಾ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳು ಹೇಳಿದ ವಿಷಯಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿ. ವಾದ ಮಾಡುವ ಬದಲು ಅವರೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಒಳ್ಳೆಯದು.  ನೀವು ದೀರ್ಘಕಾಲದ ಅನಾರೋಗ್ಯದಿಂದ ತೊಂದರೆಗೊಳಗಾಗಿದ್ದರೆ, ಈಗ ನೀವು ಪರಿಹಾರವನ್ನು ಪಡೆಯುವ ಸಮಯ. 

ವೃಶ್ಚಿಕ ರಾಶಿ: ಒಬ್ಬ ವ್ಯಕ್ತಿಯ ನ್ಯೂನತೆಗಳನ್ನು ನೋಡಿ ಗೇಲಿ ಮಾಡಬೇಡಿ, ಏಕೆಂದರೆ ಎಲ್ಲರಲ್ಲೂ ಒಂದಲ್ಲಾ ಒಂದು ರೀತಿಯ ನ್ಯೂನ್ಯತೆ ಇದ್ದೇ ಇರುತ್ತದೆ. ನೀವು ನಿಮ್ಮ ಕೆಳಗೆ ಕೆಲಸ ಮಾಡುವವರಿಗೆ  ಸ್ಫೂರ್ತಿಯ ಮೂಲವಾಗಿದ್ದೀರಿ. ಆದರೆ, ಅವರ  ಮೇಲೆ ಅನಗತ್ಯ ಆದೇಶಗಳನ್ನು ನೀಡುವುದು ಸರಿಯಲ್ಲ. ಏನಾದರೂ ತಪ್ಪಿದ್ದರೆ ವಿವರಿಸಿ. 

ಇದನ್ನೂ ಓದಿ- April 25 ರಿಂದ ಈ 3 ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ

ಧನು ರಾಶಿ: ಅನಗತ್ಯವಾಗಿ ನಿಮ್ಮ ಮನಸ್ಸಿನಲ್ಲಿ ಯಾವುದೇ ಸಂದೇಹವನ್ನು ಇಟ್ಟುಕೊಳ್ಳಬೇಡಿ. ಹೌದು ಎಂದಾದರೆ, ಸಂಬಂಧಪಟ್ಟ ವ್ಯಕ್ತಿಯೊಂದಿಗೆ ಮಾತನಾಡುವ ಮೂಲಕ ಅದನ್ನು ಬಗೆಹರಿಸಿಕೊಳ್ಳಿ. ನೀವು ಕಚೇರಿ ಕೆಲಸದಲ್ಲಿ ಹೆಚ್ಚು ಸಮಯ ಕಳೆಯಬೇಕಾಗಬಹುದು.  

ಮಕರ ರಾಶಿ: ನಿಮ್ಮ ಮನಸ್ಸಿನಲ್ಲಿ ಬರುವ ಸಕಾರಾತ್ಮಕ ಆಲೋಚನೆಗಳು ನೆರವೇರುತ್ತವೆ, ಅದು ನಿಮ್ಮ ಸಂತೋಷಕ್ಕೆ ಕಾರಣವಾಗುತ್ತದೆ. ನೀವು ಕೆಲಸ ಮಾಡಲು ಶಕ್ತಿಯನ್ನು ಪಡೆಯುತ್ತೀರಿ. ನ್ಯಾಯಾಲಯದ ಪ್ರಕರಣಗಳಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಓದಿ ಸಹಿ ಮಾಡಿ.

ಕುಂಭ ರಾಶಿ:  ಅನಾವಶ್ಯಕ ಖರ್ಚುಗಳ ಬಗ್ಗೆ ಜಾಗರೂಕರಾಗಿರಿ, ಏಕೆಂದರೆ ದೊಡ್ಡ ವೆಚ್ಚಗಳು ನಿಮ್ಮ ದಾರಿಯಲ್ಲಿ ಕಾಯುತ್ತಿವೆ. ಕಚೇರಿಯ ಜವಾಬ್ದಾರಿಗಳು ನಿಮ್ಮ ಹೆಗಲ ಮೇಲಿದ್ದರೆ, ನಿಮ್ಮ ಕೆಲಸದಲ್ಲಿ ಯಾವುದೇ ತಪ್ಪಿಗೆ ಅವಕಾಶ ನೀಡಬೇಡಿ. ಇದರೊಂದಿಗೆ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ಮನೆಯ ಸದಸ್ಯರೆಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. 

ಮೀನ ರಾಶಿ: ನೀವು ಏನನ್ನಾದರೂ ಖರೀದಿಸಲು ಯೋಚಿಸುತ್ತಿದ್ದರೆ, ಗುರುವಾರ ನಿಮಗೆ ಉತ್ತಮ ದಿನವಾಗಿದೆ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಗುರುವಾರ ಉತ್ತಮ ದಿನವಾಗಿದೆ. ಅವರಿಗೆ ಉತ್ತಮ ಮನಸ್ಥಿತಿ ಇರುತ್ತದೆ, ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಹೊಸ ಪ್ರಾಜೆಕ್ಟ್ ಪಡೆಯಬಹುದು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News