ಬೆಂಗಳೂರು : ಮನೆ ಕಟ್ಟುವುದಷ್ಟೇ ಅಲ್ಲ. ಮನೆಯನ್ನು ಸ್ಚಚ್ಛವಾಗಿರಿಸುವುದು ಕೂಡಾ ಅಷ್ಟೇ ಸವಾಲಿನ ಕೆಲಸ. ಮನೆ ಸ್ವಚ್ಛವಾಗಿದ್ದರೆ ಮನೆಯಲ್ಲೊಂದು ಪಾಸಿಟಿವ್ ವೈಬ್ಸ್ (Positive Vibes) ಸೃಷ್ಟಿಯಾಗುತ್ತದೆ. ಸಮೃದ್ಧಿಯ ಲಕ್ಷಣ ಕಾಣಿಸುತ್ತದೆ. ಸ್ವಚ್ಛವಾಗಿರುವ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುತ್ತಾಳೆ ಎನ್ನುತ್ತಾರೆ ವಾಸ್ತು ಪಂಡಿತರು. ಅದೆಲ್ಲಾ ಸರಿ. ಆದರೆ, ಮನೆ ಮಕ್ಕಳು, ಅಡುಗೆ, ಆಫೀಸ್ ಈ ಎಲ್ಲದರ ನಡುವೆ ಮನೆ ಕ್ಲೀನ್ ಮಾಡುವುದು ಹೇಗಪ್ಪಾ ಅನ್ನೋದು ಎಲ್ಲರ ನಿತ್ಯದ ಸಮಸ್ಯೆ.
ಮನೆಯನ್ನು ಫಟಾಫಟ್ ಚಮ್ಕಾಯಿಸುವುದು ಹೇಗೆ..?
ಆರೋಗ್ಯದ (Health) ವಿಚಾರದಲ್ಲೂ ನೋಡಿದರೆ ಮನೆಯು ಸ್ವಚ್ಛವಾಗಿರುವುದು ಅತೀ ಅಗತ್ಯ. ನಾವು ಈಗ ಕೊಂಚವೂ ಪರಿಶ್ರಮವಿಲ್ಲದೆ ಮನೆ ಸ್ವಚ್ಛ ಮಾಡುವುದು ಹೇಗೆ ಎಂಬುದರ ಬಗ್ಗೆ ಒಂದಷ್ಟು ಟಿಪ್ಸ್ ಕೊಡ್ತೇವೆ (Easy Tips). ಈ ರೀತಿ ಮಾಡಿ ನೋಡಿ. ಸ್ವಲ್ಪವೂ ಶ್ರಮವಿಲ್ಲದೆ ಮನೆ ಲಕ ಲಕ ಹೊಳೆಯುತ್ತದೆ. ಅಂಥಹ ಎಂಟು ಟಿಪ್ಸ್ ಇಲ್ಲಿದೆ Home Cleaning Tips.
ಇದನ್ನೂ ಓದಿ : ಮನೆಯಲ್ಲಿ ಬೆಳಿಗ್ಗೆ, ಸಂಜೆ Deepa ಬೆಳಗಿಸುವ ವೇಳೆ ಈ 5 ನಿಯಮಗಳನ್ನು ನೆನಪಿನಲ್ಲಿಡಿ
ಹೀಗೆ ಮಾಡಿ, ಮನೆ ಚಮ್ಕಾಯಿಸುವುದು ನೋಡಿ.!
1. ಬಾತ್ ರೂಂ (Bathroom) ಮತ್ತು ಕಿಚನ್ ಡ್ರೈನ್ ವಾಸನೆ ಬರುತ್ತಿದೆಯಾ..? ಅದನ್ನು ಕ್ಲೀನ್ ಮಾಡಲು ಲಿಂಬೆ ಹಣ್ಣನ್ನು (Lemon) ಕಟ್ ಮಾಡಿ ಅದರ ರಸವನ್ನು ಬಾತ್ ರೂಂ ಅಥವಾ ಕಿಚನ್ ಡ್ರೈನ್ ಗೆ ಹಾಕಿ ನೋಡಿ. ಡ್ರೈನ್ ಬೇಗ ಕ್ಲೀನ್ ಆಗುತ್ತೆ. ಒಳ್ಳೆಯ ಸ್ಮೆಲ್ ಬರುತ್ತೆ.
2. ಮನೆಯ ಗಾಜು, ಕನ್ನಡಿಗಳಲ್ಲಿ (Mirror) ಧೂಳು ಹಿಡಿದಿದೆಯಾ. ಶೇವಿಂಗ್ ಕ್ರೀಮ್ ಬಳಸಿ ಕ್ಲೀನ್ ಮಾಡಿ. ಗಾಜಿನ ಮೇಲೆ ಶೇವಿಂಗ್ ಕ್ರೀಮ್ ಹಚ್ಚಿ 15 ನಿಮಿಷ ಹಾಗೇ ಬಿಡಿ. ನಂತರ ಒದ್ದೆ ಬಟ್ಟೆಯಿಂದ ಒರೆಸಿ. ಕನ್ನಡಿ ಫಳಫಳ ಹೊಳೆಯುತ್ತದೆ.
3. ಟಾಯ್ಲೆಟ್ ಕ್ಲೀನ್ ಮಾಡಲು ಕಷ್ಟ ಆಗ್ತಿದೆಯಾ..? ಟಾಯ್ಲೆಟ್ ಗೆ (Toilet) ಸ್ವಲ್ಪ ಬೇಕಿಂಗ್ ಸೋಡಾ (Baking soda), ಕೆಲವು ಹನಿ ಬಿಳಿ ವಿನೆಗರ್ ಹಾಕಿ. 30 ನಿಮಿಷ ಹಾಗೇ ಬಿಡಿ. ನಂತರ ನೀರು ಹಾಕಿ ತೊಳೆಯಿರಿ. ಟಾಯ್ಲೆಟ್ ಚಮ್ಕಾಯಿಸುತ್ತಿರುತ್ತದೆ ನೋಡಿ.
4.ವಿನೆಗರ್ ಹಾಕಿ ವಾಶ್ ಬೇಸಿನ್ ಮತ್ತು ಸಿಂಕ್ ನ್ನು ಸ್ವಚ್ಚ ಮಾಡಬಹುದು. ವಿನೆಗರ್ ಬಳಸಿದರೆ ಸೋಂಕಿನಿಂದ ಮುಕ್ತವಾಗುತ್ತದೆ.
5. ನೀರಿಗೆ ಕೆಲವು ಹನಿ ವಿನೆಗರ್ ಹಾಕಿ ಹತ್ತಿ ಬಟ್ಟೆಯಿಂದ ಮನೆಯ ಫರ್ನಿಚರ್ (Furniture) ಒರೆಸಿ. ಹೊಸದರಂತೆ ಹೊಳೆಯುತ್ತದೆ.
6. ಒಂದು ಲೀಟರ್ ನೀರಿಗೆ ಒಂದು ಚಮಚ ಬೇಕಿಂಗ್ ಸೋಡಾ ಹಾಕಿ ಫ್ರಿಡ್ಜ್ (Fridge) ಒರೆಸಿ. ಒಂದು ಫ್ರಿಡ್ಜ್ ಲಕ ಲಕ ಹೊಳೆಯುತ್ತದೆ. ಜೊತೆಗೆ ಅದು ದರ್ವಾಸನೆಯಿಂದ ಮುಕ್ತವಾಗುತ್ತದೆ.
7. ಆಲಿವ್ ಎಣ್ಣೆಗೆ (Olive oil) ಸ್ವಲ್ಪ ಉಪ್ಪು ಬೆರೆಸಿ ದಪ್ಪ ಪೇಸ್ಟ್ ಮಾಡಿ. ಅದರಿಂದ ಮನೆಯಲ್ಲಿರುವ ಎಲ್ಲಾ ಸ್ಟೆನ್ ಲೆಸ್ ಸ್ಟೀಲ್ (Stainless Steel) ಪಾತ್ರೆಗಳನ್ನು ಒರೆಸಿ. ಪಾತ್ರೆಯ ಹೊಳಪು ನಿಮ್ಮನ್ನು ದಂಗಾಗಿಸುತ್ತದೆ.
ಇದನ್ನೂ ಓದಿ : ದೇವಿ ಲಕ್ಷ್ಮಿ ಮನೆ ತೊರೆಯುತ್ತಿದ್ದಾಳೆ ಎನ್ನುತ್ತವೆ ಈ ಸಂಕೇತಗಳು, ಎಚ್ಚರ ವಹಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.