ತೆಂಗಿನ ಎಣ್ಣೆಯಲ್ಲಿ ಈ ಪುಡಿ ಮಿಕ್ಸ್‌ ಮಾಡಿ ಹಚ್ಚಿದ್ರೆ.. ತಲೆಯಲ್ಲಿ ಒಂದೇ ಒಂದು ಹೇನು ನಿಲ್ಲೋದಿಲ್ಲ! ಒಂದ್ಸಲ ಬಳಸಿದ್ರೆ ಮತ್ತೆಂದೂ ಆ ಸಮಸ್ಯೆ ಕಾಡಲ್ಲ!!

How to Get Rid of Lice: ಅನೇಕ ಜನರು ಹೇನಿನ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಾರೆ. ತಲೆಯಲ್ಲಿ ಹೇನಿದ್ದರೇ ಯಾವಾಗಲೂ ತುರಿಕೆ.. ಹೊರಗೆ ಹೋದರೆ ಬೇರೆಯವರ ಮುಂದೆ ತೊಂದರೆ ಎದುರಿಸಬೇಕಾಗುತ್ತದೆ. 

Written by - Savita M B | Last Updated : Sep 27, 2024, 09:58 PM IST
  • ತಲೆಯಲ್ಲಿ ಹೆಚ್ಚು ಹೇನು ಇದ್ದರೆ ಕೂದಲು ಕೂಡ ಉದುರುತ್ತದೆ.
  • ಈಗ ನೀಡಿರುವ ಕೆಲವು ಸಲಹೆಗಳನ್ನು ಪಾಲಿಸಿದರೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ತೆಂಗಿನ ಎಣ್ಣೆಯಲ್ಲಿ ಈ ಪುಡಿ ಮಿಕ್ಸ್‌ ಮಾಡಿ ಹಚ್ಚಿದ್ರೆ.. ತಲೆಯಲ್ಲಿ ಒಂದೇ ಒಂದು ಹೇನು ನಿಲ್ಲೋದಿಲ್ಲ! ಒಂದ್ಸಲ ಬಳಸಿದ್ರೆ ಮತ್ತೆಂದೂ ಆ ಸಮಸ್ಯೆ ಕಾಡಲ್ಲ!!  title=

Tips for Lice: ತಲೆಯಲ್ಲಿ ಹೆಚ್ಚು ಹೇನು ಇದ್ದರೆ ಕೂದಲು ಕೂಡ ಉದುರುತ್ತದೆ. ಅಲ್ಲದೇ ಅವು ದೇಹದಿಂದ ರಕ್ತವನ್ನು ಹೀರುತ್ತವೆ... ಇದು ರಕ್ತಹೀನತೆಯ ಸಮಸ್ಯೆಯನ್ನೂ ಉಂಟುಮಾಡುತ್ತದೆ. ಈ ಹೇಣಿನ ಸಮಸ್ಯೆಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಬೇಕು ಇಲ್ಲವಾದರೇ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.. ಹೇನು ಸಮಸ್ಯೆಯಿಂದ ಬಳಲುತ್ತಿರುವವರು ಈಗ ನೀಡಿರುವ ಕೆಲವು ಸಲಹೆಗಳನ್ನು ಪಾಲಿಸಿದರೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.  

ಇದನ್ನೂ ಓದಿ-ತೆಂಗಿನೆಣ್ಣೆ ಜೊತೆ ಈ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ಸೆಕೆಂಡುಗಳಲ್ಲಿ ಬೇರಿನಿಂದಲೇ ಕಡುಕಪ್ಪಾಗುತ್ತೆ ಬಿಳಿಕೂದಲು! ಒಂದು ತಿಂಗಳವರೆಗೆ ಚಿಂತೆಯೇ ಬೇಡ...

ಸೀತಾಫಲ ಪುಡಿ:
ಹೇನಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೀತಾಫಲ ಬೀಜದ ಪುಡಿ ತುಂಬಾ ಸಹಕಾರಿ. ಸೀತಾಫಲದ ಬೀಜಗಳನ್ನು ಬಿಸಿಲಿನಲ್ಲಿ ತೊಳೆದು ಒಣಗಿಸಿ. ಇದಕ್ಕೆ ಸ್ವಲ್ಪ ಬೇಳೆ ಹಿಟ್ಟನ್ನು ಬೆರೆಸಿ ಪೇಸ್ಟ್ ಮಾಡಿ ತಲೆಗೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಈ ರೀತಿ ಇರಿಸಿ ಬಳಿಕ ಶಾಂಪೂ ಬಳಸಿ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ನಿಂಬೆ - ಬೆಳ್ಳುಳ್ಳಿ:
ಹೇನಿನ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ನಿಂಬೆ ಮತ್ತು ಬೆಳ್ಳುಳ್ಳಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಏಕೆಂದರೆ ಅವು ಬಲವಾದ ವಾಸನೆಯನ್ನು ಹೊಂದಿರುತ್ತವೆ. ಈ ವಾಸನೆಯಿಂದ ಹೇನು ಸಾಯುತ್ತವೆ. ಬೆಳ್ಳುಳ್ಳಿಯ ಎರಡು ಅಥವಾ ಮೂರು ಎಸಳನ್ನು ಪೇಸ್ಟ್‌ ಮಾಡಿ ಅದಕ್ಕೆ ಸ್ವಲ್ಪ ನಿಂಬೆರಸ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ನಿಮ್ಮ ತಲೆಯ ಮೇಲೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ಬಿಡಿ. ಅದರ ನಂತರ ನಿಮ್ಮ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ..‌ ಹೇನಿನ ಸಮಸ್ಯೆ ಇರೋದಿಲ್ಲ.. 

ಇದನ್ನೂ ಓದಿ-ರಾತ್ರಿ ಮಲಗಿದ್ದಾಗ ಸೊಳ್ಳೆ ಕಚ್ಚುತ್ತಾ? ತಲೆದಿಂಬಿನ ಪಕ್ಕ ಈ ಹಣ್ಣಿನ ಸಿಪ್ಪೆಯನ್ನ ಇಡಿ... ಅದರ ವಾಸನೆಗೇ ಓಡಿಹೋಗುತ್ತೆ; ಒಂದೇ ಒಂದು ಸೊಳ್ಳೆ ಕೂಡ ಬರಲ್ಲ!

ಕರ್ಪೂರ:
ಕರ್ಪೂರದಿಂದ ಕೂಡ ನೀವು ಹೇನನ್ನು ತೊಡೆದುಹಾಕಬಹುದು. ತೆಂಗಿನ ಎಣ್ಣೆಯಲ್ಲಿ ಕರ್ಪೂರದ ಪುಡಿಯನ್ನು ಮಿಶ್ರಣ ಮಾಡಿ. ಇದನ್ನು ತಲೆಗೆ ಎಲ್ಲಾ ಕಡೆ ಹಚ್ಚಿಕೊಳ್ಳಬೇಕು. ರಾತ್ರಿಯಿಡೀ ಹೀಗೆ ಇಟ್ಟರೂ ಪರವಾಗಿಲ್ಲ. ಇಲ್ಲವಾದರೆ ಒಂದು ಅಥವಾ ಎರಡು ಗಂಟೆಗಳ ನಂತರ ಶಾಂಪೂವಿನಿಂದ ತಲೆ ತೊಳೆದರೆ ಹೇನುಗಳೆಲ್ಲ ಮಾಯವಾಗುತ್ತವೆ. ಕರ್ಪೂರದಿಂದ ಕೂದಲಿನ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ.

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News