ನವದೆಹಲಿ: ಶೀತಗಾಳಿಯ ಹವಾಮಾನದ ದಿನಗಳಲ್ಲಿ ಅನೇಕ ಜನರು ಸ್ನಾನ ಮಾಡುವುದನ್ನು ತಪ್ಪಿಸುತ್ತಿರುತ್ತಾರೆ. ಆದರೆ ಬಹುತೇಕ ಎಲ್ಲರೂ ಪ್ರತಿದಿನ ಬ್ರಷ್ ಮಾಡುತ್ತಾರೆ. ಕೆಲವರು ಮಾತ್ರ ಪ್ರತಿನಿತ್ಯ ಬ್ರಷ್(Brushing Teeth) ಮಾಡಲು ಸೋಮಾರಿತನ ಹೊಂದಿರುತ್ತಾರೆ. ಅಂತಹವರಿಗೆ ಒಂದು ಕುತೂಹಲಕಾರಿ ಮಾಹಿತಿ ಹೊರಬಂದಿದೆ. ಯಾವುದೇ ಒಬ್ಬ ವ್ಯಕ್ತಿ 1 ತಿಂಗಳು ನಿರಂತರವಾಗಿ ಬ್ರಷ್ ಮಾಡದಿದ್ದರೆ ಆತನ ಹಲ್ಲುಗಳಿಗೆ ಏನಾಗುತ್ತದೆ ಎಂಬುದರ ಬಗ್ಗೆ ಇದರಲ್ಲಿ ತಿಳಿಸಲಾಗಿದೆ.
ವಾಸನೆಯ ಹೊರತಾಗಿ ಈ ಸಮಸ್ಯೆಗಳು ಉದ್ಭವಿಸುತ್ತವೆ
ನಿರಂತರವಾಗಿ 1 ತಿಂಗಳ ಕಾಲ ಬ್ರಷ್ ಮಾಡದಿದಿದ್ದರೆ ಮೊದಲು ಅಂತಹ ವ್ಯಕ್ತಿಗಳ ಬಾಯಿಯಿಂದ ದುರ್ವಾಸನೆ(Smell in Mouth) ಬರಲು ಪ್ರಾರಂಭಿಸುತ್ತದೆ. ಇದು ಸಾಮಾನ್ಯ ಸಂಗತಿಯಾಗಿದೆ. ಆದರೆ ಇದರ ಹೊರತಾಗಿಯೂ ಹಲ್ಲುಗಳಿಗೆ ಸಾಕಷ್ಟು ಹಾನಿಯಾಗುತ್ತದೆ. ಹಲ್ಲುಗಳ ಮೇಲೆ ಗಟ್ಟಿಯಾದ ಕೊಳಕು ನೆಲೆಗೊಳ್ಳಲು ಆರಂಭವಾಗುತ್ತದೆ. ನೀವು ಎಷ್ಟು ಬಾರಿ ಹಲ್ಲುಜ್ಜಿದರೂ ಅದು ಹೊರಬರುವುದಿಲ್ಲ. ಇಂತದ ಸಂದರ್ಭದಲ್ಲಿ ನೀವು ದಂತವೈದ್ಯರ ಸಹಾಯವನ್ನು ಪಡೆಯಬೇಕಾಗುತ್ತದೆ. ನಿಸ್ಸಂಶಯವಾಗಿ ಹಲ್ಲಿನಲ್ಲಿ ಕೊಳಕು ಪದರವು ಸಂಗ್ರಹವಾದ ತಕ್ಷಣ, ಬಿಳಿ ಬಣ್ಣವೂ ಮಾಯವಾಗುತ್ತದೆ. ನಿಮ್ಮ ಹಲ್ಲುಗಳು ಹೊಳಪು ಕಳೆದುಕೊಂಡು ನಿಮಗೆ ಮುಜುಗರವನ್ನುಂಟು ಮಾಡುತ್ತವೆ.
ಇದನ್ನೂ ಓದಿ: ಬೆನ್ನು ನೋವಿನಿಂದ ಬಳಲುತ್ತಿರುವವರು ನಿತ್ಯ ಈ ಆಹಾರಗಳನ್ನು ಸೇವಿಸಿ, ತಕ್ಷಣ ಪರಿಹಾರ ಸಿಗುತ್ತದೆ
ಆಹಾರ ಸೇವಿಸುವುದು ಕಷ್ಟವಾಗುತ್ತದೆ
ನಿಂತರವಾಗಿ 1 ತಿಂಗಳು ಬ್ರಷ್ ಮಾಡದೆ ಇರುವುದರಿಂದ ಹಲ್ಲು(Teeth)ಗಳಲ್ಲಿ ಬ್ಯಾಕ್ಟೀರಿಯಾ ಸಂಗ್ರಹವಾಗುತ್ತದೆ. ಈಗಾಗಲೇ ಹಲ್ಲುಗಳಲ್ಲಿ ಸುಮಾರು 700 ವಿಧದ 60 ಲಕ್ಷ ಬ್ಯಾಕ್ಟೀರಿಯಾಗಳಿವೆ. ನೀವು ಬ್ರಷ್ ಮಾಡದಿದ್ದರೆ ಅವುಗಳ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ. ಈ ಬ್ಯಾಕ್ಟೀರಿಯಾಗಳು ಹಲ್ಲು ನೋವು ತರುವುದಲ್ಲದೆ, ನಿಮ್ಮ ಒಸಡುಗಳನ್ನು ತುಂಬಾ ದುರ್ಬಲಗೊಳಿಸುತ್ತವೆ. ನೀವು ಯಾವುದೇ ಆಹಾರವನ್ನು ಸೇವಿಸಲು ಪ್ರಯತ್ನಿಸಿದಾಗ ತುಂಬಾ ಸಮಸ್ಯೆಯಾಗುತ್ತದೆ. ಮುಂದೆ ಆಹಾರ ತಿನ್ನಲು ಕಷ್ಟಪಡಬೇಕಾದ ಪರಿಸ್ಥಿತಿ ಬರುತ್ತದೆ. ಇದೇ ವೇಳೆ ಬಾಯಿಯ ವಾಸನೆಯು ನಿಮ್ಮ ಉಸಿರಾಟದಲ್ಲಿ ಸಮಸ್ಯೆಯನ್ನುಂಟು ಮಾಡುತ್ತದೆ.
ಇದನ್ನೂ ಓದಿ: ನಿಮ್ಮ ಅಡುಗೆ ಮನೆಯಲ್ಲಿರುವ ಮೆಣಸಿನ ಪುಡಿ ಕಲಬೆರಕೆಯೇ ? ಸುಲಭವಾಗಿ ಹೀಗೆ ಪತ್ತೆ ಹಚ್ಚಿ
ಇಷ್ಟೆಲ್ಲಾ ಆದ ಬಳಿಕ ಬ್ಯಾಕ್ಟೀರಿಯಾ ಮತ್ತು ರೋಗಗಳ ವಿರುದ್ಧ ಹೋರಾಡುವ ನಿಮ್ಮ ಹಲ್ಲಿನ ಬಲವು ಕೊನೆಗೊಳ್ಳುತ್ತದೆ. ಬಳಿಕ ನಿಮ್ಮ ಹಲ್ಲುಗಳು ಸಡಿಲಗೊಂಡು ಬೀಳಲು ಆರಂಭವಾಗುತ್ತದೆ. ಏಕೆಂದರೆ ಹಲ್ಲುಗಳಲ್ಲಿನ ಕೊಳೆತವು ಎಷ್ಟರ ಮಟ್ಟಿಗೆ ಹೆಚ್ಚುತ್ತದೆಯೆಂದರೆ ಹಲ್ಲುಗಳು ತಾವಾಗಿಯೇ ಒಡೆಯಲು ಪ್ರಾರಂಭಿಸುತ್ತವೆ. ಹಲ್ಲುಜ್ಜುವಿಕೆಯ ನಿಲ್ಲಿಸುವುದರಿಂದ ಕಲವೇ ತಿಂಗಳ ಸಮಯದಲ್ಲಿ ನಿಮ್ಮ ಎಲ್ಲಾ ಹಲ್ಲುಗಳು ಉದುರಿ ಹೋಗುವ ಅಪಾಯವಿರುತ್ತದೆ. ಹೀಗಾಗಿ ಪ್ರತಿದಿನ ಹಲ್ಲುಜ್ಜುವುದನ್ನು(Not Brushing Teeth) ತಪ್ಪಿಸಬಾರದು ಎಂದು ದಂತ ವೈದ್ಯರು ಸಲಹೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.