Health Care Tips: ಚರ್ಮ & ಕೂದಲಿಗೆ ಪ್ರಯೋಜನಕಾರಿ ಅಲೋವೆರಾ ಎಣ್ಣೆ, ಈ ರೀತಿ ಬಳಸಿ

ಅಲೋವೆರಾ ಎಣ್ಣೆ: ಅಲೋವೆರಾ ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅಲೋವೆರಾ ಎಣ್ಣೆಯು ಕೂದಲು ಮತ್ತು ಚರ್ಮಕ್ಕೆ ಹೇಗೆ ಪ್ರಯೋಜನಕಾರಿ ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.

Written by - Puttaraj K Alur | Last Updated : Aug 17, 2022, 07:54 PM IST
  • ಅಲೋವೆರಾ ಎಣ್ಣೆ ತಲೆಹೊಟ್ಟು ಸಮಸ್ಯೆ ಹೋಗಲಾಡಿಸಲು ತುಂಬಾ ಪ್ರಯೋಜನಕಾರಿ
  • ಅಲೋವೆರಾ ಎಣ್ಣೆ ಕೂದಲನ್ನು ಬಲಪಡಿಸುವುದರ ಜೊತೆಗೆ ಉದ್ದ ಬೆಳೆಯಲು ಸಹಕಾರಿ
  • ತ್ವಚೆಯ ಹೊಳಪು ಅಥವಾ ಕಾಂತಿ ಹೆಚ್ಚಿಸಲು ಅಲೋವೆರಾ ಎಣ್ಣೆಯ ಬಳಕೆ ಪ್ರಯೋಜನಕಾರಿ
Health Care Tips: ಚರ್ಮ & ಕೂದಲಿಗೆ ಪ್ರಯೋಜನಕಾರಿ ಅಲೋವೆರಾ ಎಣ್ಣೆ, ಈ ರೀತಿ ಬಳಸಿ title=
Aloe Vera oil Benefits

ನವದೆಹಲಿ: ಅಲೋವೆರಾ ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅಲೋವೆರಾ ಸೇವಿಸುವುದರಿಂದ ದೇಹದ ಜೀರ್ಣಕ್ರಿಯೆಯು ಉತ್ತಮವಾಗಿರುತ್ತದೆ ಮತ್ತು ಇದು ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಅದೇ ರೀತಿ ಕೂದಲು ಮತ್ತು ಚರ್ಮದ ಆರೋಗ್ಯ ಸುಧಾರಿಸಲು ಇದನ್ನು ಬಳಸಲಾಗುತ್ತದೆ. ಅಲೋವೆರಾ ಜೆಲ್ ಮಾತ್ರವಲ್ಲದೆ ಅದರ ಎಣ್ಣೆ ಕೂಡ ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಅಲೋವೆರಾ ಎಣ್ಣೆ ಕೂದಲು ಉದುರುವಿಕೆ ತಡೆಗಟ್ಟಿ ಬಲಪಡಿಸುತ್ತದೆ. ಅಲೋವೆರಾ ಎಣ್ಣೆಯ ಮತ್ತಷ್ಟು ಪ್ರಯೋಜನಗಳು ಇಲ್ಲಿವೆ ನೋಡಿ.

ತಲೆಹೊಟ್ಟು ಸಮಸ್ಯೆ ನಿವಾರಿಸುತ್ತದೆ: ಅಲೋವೆರಾ ಎಣ್ಣೆ ತಲೆಹೊಟ್ಟು ಸಮಸ್ಯೆ ಹೋಗಲಾಡಿಸಲು ತುಂಬಾ ಪ್ರಯೋಜನಕಾರಿ. ಇದರ ಬಳಕೆಯು ನೆತ್ತಿಯಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಇದನ್ನು ನೈಸರ್ಗಿಕ ಕೂದಲು ಕ್ಲೆನ್ಸರ್ ಆಗಿ ಬಳಸಬಹುದು.

ಇದನ್ನೂ ಓದಿ: ಕೂದಲಿನ ಈ ಮೂರು ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸುತ್ತದೆ ಈ ಎಣ್ಣೆ..! ಉಪಯೋಗಿಸುವ ವಿಧಾನ ತಿಳಿದಿರಲಿ

ಕೂದಲನ್ನು ಬಲಪಡಿಸುತ್ತದೆ: ಅಲೋವೆರಾ ಎಣ್ಣೆಯು ಕೂದಲನ್ನು ಬಲಪಡಿಸುತ್ತದೆ. ಕೂದಲು ಉದ್ದವಾಗಿ ಬೆಳೆಯಲು ಸಹಕಾರಿಯಾಗಿದೆ. ಇದರಲ್ಲಿರುವ ಗುಣಲಕ್ಷಣಗಳು ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸಲು ಕೆಲಸ ಮಾಡುತ್ತದೆ. ಅಲೋವೆರಾದಲ್ಲಿ ಖನಿಜಗಳು ಮತ್ತು ಕಿಣ್ವಗಳು ಕಂಡುಬರುತ್ತವೆ. ಇವು ಕೂದಲನ್ನು ಬಲವಾಗಿಸಿ ಉದ್ದವಾಗಿಸುತ್ತದೆ.

ತ್ವಚೆಯ ಹೊಳಪಿಗೆ: ತ್ವಚೆಯ ಹೊಳಪು ಅಥವಾ ಕಾಂತಿ ಹೆಚ್ಚಿಸಲು ಅಲೋವೆರಾ ಎಣ್ಣೆಯ ಬಳಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಜೀವಸತ್ವಗಳು ಮತ್ತು ಇತರ ಗುಣಲಕ್ಷಣಗಳು ಚರ್ಮವನ್ನು ಪೋಷಿಸಲು ಕೆಲಸ ಮಾಡುತ್ತದೆ.

ಇದನ್ನೂ ಓದಿ: Overhydration : ಹೆಚ್ಚು ನೀರು ಕುಡಿಯುವುದು ಕಿಡ್ನಿಗೆ ಹಾನಿಕಾರಕ! ಯಾಕೆ ಗೊತ್ತಾ?

ಒಣ ಚರ್ಮಕ್ಕೆ ಪ್ರಯೋಜನಕಾರಿ: ಅಲೋವೆರಾ ಎಣ್ಣೆಯು ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ಆರ್ಧ್ರಕಗೊಳಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಗುಣಗಳು ತ್ವಚೆಯನ್ನು ಆರೋಗ್ಯಕರವಾಗಿಸುತ್ತದೆ. ಒಣ ತ್ವಚೆ ಇರುವವರಿಗೆ ಅಲೋವೆರಾ ಎಣ್ಣೆಯ ಬಳಕೆ ತುಂಬಾ ಪ್ರಯೋಜನಕಾರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News