ಹಿತ್ತಲಲ್ಲೇ ಸಿಗುವ ಈ ಸಣ್ಣ ಸಣ್ಣ ಎಲೆಗಳು ಬಿಳಿ ಕೂದಲನ್ನು ಬುಡದಿಂದ ಕಪ್ಪಾಗಿಸುತ್ತದೆ

  ಕೆಲವರು ಸುಲಭ  ಮಾರ್ಗ ಕಂಡುಕೊಳ್ಳುವ ಸಲುವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕಯುಕ್ತ ಹೇರ್ ಡೈ, ವಿವಿಧ ಕಲರ್ ಅನ್ನು ಬಳಸುತ್ತಾರೆ. ಇದರಿಂದ ಕೂದಲು ಶುಷ್ಕವಾಗಿ ಕೂದಲು ನಿರ್ಜೀವವಾಗುತ್ತದೆ. ಮಾತ್ರವಲ್ಲ ಕೂದಲು ಉದುರಲು ಆರಂಭವಾಗುತ್ತದೆ. 

Written by - Ranjitha R K | Last Updated : Feb 15, 2023, 03:03 PM IST
  • ಬಿಳಿ ಕೂದಲು ಯುವಕರು ಎದುರಿಸುವ ಸಾಮಾನ್ಯ ಸಮಸ್ಯೆಯಾಗಿದೆ.
  • ಹಿತ್ತಲಲ್ಲೇ ಸಿಗುವ ಈ ಎಲೆ ಬಿಳಿ ಕೂದಲಿನ ಸಮಸ್ಯೆಗೆ ಸುಲಭ ಪರಿಹಾರ
  • ಇದನ್ನು ಬಳಸುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ
 ಹಿತ್ತಲಲ್ಲೇ ಸಿಗುವ ಈ ಸಣ್ಣ ಸಣ್ಣ ಎಲೆಗಳು ಬಿಳಿ ಕೂದಲನ್ನು  ಬುಡದಿಂದ ಕಪ್ಪಾಗಿಸುತ್ತದೆ  title=

ಬೆಂಗಳೂರು : ಚಿಕ್ಕ ವಯಸ್ಸಿನಲ್ಲಿ ತಲೆಯಲ್ಲಿ ಬಿಳಿ ಕೂದಲು ಬರುವುದು ಇತ್ತೀಚಿನ ದಿನಗಳಲ್ಲಿ ಯುವಕರು ಎದುರಿಸುವ ಸಾಮಾನ್ಯ ಸಮಸ್ಯೆಯಾಗಿದೆ.   ಬಿಳಿ ಕೂದಲಿಗೆ ಪರಿಹಾರ ಕಂಡುಕೊಳ್ಳಲು ಜನ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಾರೆ. ಆದರೆ ನೀರೀಕ್ಷಿತ ಪರಿಣಾಮ ಮಾತ್ರ ಕಂಡು ಬರುವುದಿಲ್ಲ. ಇನ್ನು ಕೆಲವರು ಸುಲಭ  ಮಾರ್ಗ ಕಂಡುಕೊಳ್ಳುವ ಸಲುವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕಯುಕ್ತ ಹೇರ್ ಡೈ, ವಿವಿಧ ಕಲರ್ ಅನ್ನು ಬಳಸುತ್ತಾರೆ. ಇದರಿಂದ ಕೂದಲು ಶುಷ್ಕವಾಗಿ ಕೂದಲು ನಿರ್ಜೀವವಾಗುತ್ತದೆ. ಮಾತ್ರವಲ್ಲ ಕೂದಲು ಉದುರಲು ಆರಂಭವಾಗುತ್ತದೆ. 

ಹಿತ್ತಲಲ್ಲೇ ಸಿಗುವ ಈ ಎಲೆ ಬಿಳಿ ಕೂದಲಿನ ಸಮಸ್ಯೆಗೆ ಸುಲಭ ಪರಿಹಾರ : 
ಹುಣಸೆ ಎಲೆಯಿಂದ ಬಿಳಿ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ.  ಈ ಎಲೆಗಳಲ್ಲಿ  ಸಾಕಷ್ಟು ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ. ಇವುಗಳು ಕೂದಲನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುವುದಲ್ಲದೆ, ದೇಹಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಅದರ ಆಂಟಿ-ಡ್ಯಾಂಡ್ರಫ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೂದಲಿಗೆ ತುಂಬಾ ಉಪಯುಕ್ತವಾಗಿವೆ.

ಇದನ್ನೂ ಓದಿ : ಬಾಳೆಹಣ್ಣಿನ ಜೊತೆ ಮೊಸರು ಸೇವಿಸಿದ್ರೆ ಈ ರೋಗಗಳು ಹತ್ತಿರವೂ ಸುಳಿಯುವುದಿಲ್ಲ

ಹುಣಸೆ ಎಲೆಗಳನ್ನು ಈ ರೀತಿ ಬಳಸಿ :
ಉತ್ತಮ ಕೂದಲಿನ ಆರೋಗ್ಯಕ್ಕಾಗಿ, ಹುಣಸೆ ಎಲೆಗಳ ಹೇರ್ ಪ್ಯಾಕ್ ಅನ್ನು ತಯಾರಿಸಬಹುದು ( ಅದರ ಈ ಎಲೆಗಳನ್ನು ಬಳಸಿ ಹೇರ್ ಸ್ಪ್ರೇ ಕೂಡಾ ತಯಾರಿಸಿಕೊಳ್ಳಬಹುದು.  

1. ಸ್ಪ್ರೇ ತಯಾರಿಸಲು, ಮೊದಲು ಒಂದು ಪಾತ್ರೆಯಲ್ಲಿ 5 ಕಪ್ ನೀರನ್ನು ತೆಗೆದುಕೊಂಡು ಅದರಲ್ಲಿ ಅರ್ಧ ಕಪ್ ಹುಣಸೆ ಎಲೆಗಳನ್ನು ಮಿಶ್ರಣ ಮಾಡಿ. ಈಗ ಈ ನೀರನ್ನು ಕುದಿಸಿ ನಂತರ ತಣ್ಣಗಾಗುವವರೆಗೆ ಕಾಯಿರಿ. ಈ ನೀರು ತಣ್ಣಗಾದ ಮೇಲೆ ಕೂದಲಿನ ಮೇಲೆ ಚಿಮುಕಿಸಿ. ನಂತರ ಶುದ್ಧ ನೀರಿನಿಂದ ಕೂದಲನ್ನು ತೊಳೆಯಿರಿ.

2. ಹುಣಸೆ ಎಲೆಗಳ ಹೇರ್ ಪ್ಯಾಕ್ ತಯಾರಿಸಲು, ಮಿಕ್ಸರ್ ಗ್ರೈಂಡರ್‌ನಲ್ಲಿ ಮೊಸರಿನೊಂದಿಗೆ ಕೆಲವು ಎಲೆಗಳನ್ನು ರುಬ್ಬಿಕೊಳ್ಳಿ, ಹೀಗೆ ತಯಾರಿಸಿಕೊಂಡ  ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ.ಕೂದಲಿಗೆ ಹಚ್ಚಿದ ಪೇಸ್ಟ್ ಒಣಗಿದ ನಂತರ, ಶುದ್ಧ ನೀರಿನಿಂದ ಕೂದಲು ತೊಳೆಯಿರಿ.

ಇದನ್ನೂ ಓದಿ : Kidney Health: ನೀವು ಸೇವಿಸುವ ಈ ಆಹಾರಗಳೇ ಕಿಡ್ನಿ ಆರೋಗ್ಯವನ್ನು ಕೆಡಿಸುತ್ತದೆ

ಹುಣಸೆ ಎಲೆಗಳು ಏಕೆ ಪ್ರಯೋಜನಕಾರಿ? :
ನೈಸರ್ಗಿಕ ಹೇರ್ ಕಲರಿಂಗ್ ಏಜೆಂಟ್‌ಗಳು ಹುಣಸೆ ಎಲೆಗಳಲ್ಲಿ ಕಂಡುಬರುತ್ತವೆ. ಇದನ್ನು ಕೆಲವು ವಾರಗಳ ಕಾಲ ಬಳಸುವುದರಿಂದ ಬಿಳಿ ಕೂದಲು ಮತ್ತೆ ಕಪ್ಪಾಗುವುದು ಮಾತ್ರವಲ್ಲದೆ ಕೂದಲು ಉದುರುವಿಕೆ, ಒಣ ಕೂದಲು, ದುರ್ಬಲ ಕೂದಲು ಮುಂತಾದ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News