ಗೃಹ ಪ್ರವೇಶದ ವೇಳೆ ಈ ನಿಯಮಗಳನ್ನು ನೆನಪಿನಲ್ಲಿಡಿ, ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸಲಿದೆ

ಹಿಂದೂ ಧರ್ಮ ಶಾಸ್ರಗಳಲ್ಲಿ ಗೃಹಪ್ರವೇಶದ ಕುರಿತು ಕೆಲವು ನಿಯಮಗಳನ್ನು ಹೇಳಲಾಗಿದೆ.ಮನೆಗೆ ಪ್ರವೇಶಿಸುವ ಮೊದಲು ವಿಶೇಷ ಮುಹೂರ್ತವನ್ನು ನೋಡಲಾಗುತ್ತದೆ ಮತ್ತು ಮೂಹೂರ್ತದಂತೆಯೇ ಗೃಹಪ್ರವೇಶ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ. ಗೃಹ ಪ್ರವೇಶದ ಆ ನಿಯಮಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Apr 26, 2022, 05:23 PM IST
  • ಗೃಹ ಪ್ರವೇಶದ ಈ ನಿಯಮಗಳು ನಿಮಗೆ ತಿಳಿದಿವೆಯಾ|
  • ಗೃಹ ಪ್ರವೇಶಕ್ಕೂ ಮುನ್ನ ಈ ನಿಯಮಗಳನ್ನು ಅನುಸರಿಸಿ
  • ಮನೆಯಲ್ಲೂ ದೇವಿ ಲಕ್ಷ್ಮಿಯ ವಾಸದ ಜೊತೆಗೆ ಸುಖ ಸಮೃದ್ಧಿ ನೆಲೆಸುತ್ತದೆ
ಗೃಹ ಪ್ರವೇಶದ ವೇಳೆ ಈ ನಿಯಮಗಳನ್ನು ನೆನಪಿನಲ್ಲಿಡಿ, ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸಲಿದೆ title=
Grih Pravesh Rules

ನವದೆಹಲಿ: ಕನಸಿನ ಮನೆ ನಿರ್ಮಾಣಗೊಂಡ ನಂತರ ಅದನ್ನು ಅಲಂಕರಿಸುವುದು ಪ್ರತಿಯೊಬ್ಬ ವ್ಯಕ್ತಿಗೆ ಇಷ್ಟವಾಗುತ್ತದೆ. ಆದರೆ ಕನಸು ನನಸಾಗಲು ಮನೆ ಕೇವಲ ಕಟ್ಟಿದರೆ ಸಾಲದು. ಅದರಲ್ಲಿ ಸುಖ-ಸಮೃದ್ಧಿ ಇರುವುದು ಕೂಡ ಅಷ್ಟೇ ಅಗತ್ಯ. ನೀವು ಕಟ್ಟಿದ ಮನೆಯಲ್ಲಿ ಶಾಂತಿ ಹಾಗೂ ದೇವಿ ಲಕ್ಷ್ಮಿ ನೆಲೆಸಿದಾಗ ಮಾತ್ರ ಅದರಲ್ಲಿ ವಾಸಿಸುವ ಜನರು ನೆಮ್ಮದಿಯಿಂದ ಇರಲು ಸಾಧ್ಯ.

ಹಿಂದೂ ಧರ್ಮ ಶಾಸ್ರಗಳಲ್ಲಿ ಗೃಹಪ್ರವೇಶದ ಕುರಿತು ಕೆಲವು ನಿಯಮಗಳನ್ನು ಹೇಳಲಾಗಿದೆ.ಮನೆಗೆ ಪ್ರವೇಶಿಸುವ ಮೊದಲು ವಿಶೇಷ ಮುಹೂರ್ತವನ್ನು ನೋಡಲಾಗುತ್ತದೆ ಮತ್ತು ಮೂಹೂರ್ತದಂತೆಯೇ ಗೃಹಪ್ರವೇಶ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ. ಗೃಹ ಪ್ರವೇಶದ ಆ ನಿಯಮಗಳು ಯಾವುವು ತಿಳಿದುಕೊಳ್ಳೋಣ ಮತ್ತು ಅವುಗಳನ್ನು ಅನುಸರಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ.

ಗೃಹ ಪ್ರವೇಶಕ್ಕೆ ಅನುಸರಿಸಬೇಕಾದ ಈ ಪ್ರಮುಖ ನಿಯಮಗಳು
>> ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಗೆ ಪ್ರವೇಶಿಸುವ ಮೊದಲು, ಖಂಡಿತವಾಗಿಯೂ ಪಂಡಿತರನ್ನು ಸಂಪರ್ಕಿಸಿ ಶುಭ ಮುಹೂರ್ತವನ್ನು ನೋಡಬೇಕು
>> ಭಾನುವಾರ ಮತ್ತು ಶನಿವಾರದಂದು ಗೃಹಪ್ರವೇಶ ಮಾಡಬಾರದು ಎಂದು ಹೇಳಲಾಗಿದೆ.
>> ಹೋಳಿ ಹಬ್ಬಕ್ಕೂ ಮುನ್ನ ಗೃಹಪ್ರವೇಶ ನಡೆಸಬಾರದು. ಏಕೆಂದರೆ, ಹೊಸ ಮನೆಯಲ್ಲಿ ಮೊದಲ ಹೋಳಿಗೆ ಸುಡಬಾರದು ಎಂಬ ನಂಬಿಕೆ ಇದೆ.
>> ದೀಪಾವಳಿ ಮತ್ತು ನವರಾತ್ರಿ ಹಬ್ಬಗಳ ಹಿಂದಿನ ದಿನಗಳನ್ನು ಗೃಹ ಪ್ರವೇಶಕ್ಕೆ ಉತ್ತಮ ದಿನಗಳು ಎಂದು ಪರಿಗಣಿಸಲಾಗುತ್ತದೆ.
>> ಗೃಹ ಪ್ರವೇಶದ ದಿನದಂದು ಉಪವಾಸವಿರಬೇಕು. ಬೆಳಗ್ಗೆ ಸ್ನಾನದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ ಮತ್ತು ಕುಟುಂಬ ಸದಸ್ಯರ ಸಮೇತ ಮನೆಯನ್ನು ಪ್ರವೇಶಿಸಿ.
>> ಶುಭ ಮುಹೂರ್ತದಲ್ಲಿ ಮನೆಯನ್ನು ಹೂವು-ತೋರಣಗಳಿಂದ ಮನೆಯನ್ನು ಅಲಂಕರಿಸಿ.
>> ಮನೆಯೊಳಗೆ ಪ್ರವೇಶಿಸುವ ಮೊದಲು, ಮನೆಯ ಬಾಗಿಲನ್ನು ಶುಭ್ರವಾದ ಮತ್ತು ಖಾಲಿ ಇರುವ ವಸ್ತ್ರದಿಂದ ಮುಚ್ಚಬೇಕು ಎಂದು ನಂಬಲಾಗಿದೆ. ಇದಲ್ಲದೆ ಮನೆಯಲ್ಲಿ ಕಲಶವನ್ನು ಪ್ರತಿಷ್ಠಾಪಿಸಬೇಕು.
>> ಗೃಹಪ್ರವೇಶದ ಸಮಯದಲ್ಲಿ, ಮೊದಲು ಬಾಗಿಲಿನ ಚೌಕಟ್ಟಿಗೆ ಪೂಜೆ ಸಲ್ಲಿಸಬೇಕು.
>> ಬಾಗಿಲಿನ ಚೌಕಟ್ಟಿನ ಪೂಜೆಗೆ, ಸೌಭಾಗ್ಯವತಿ ಮಹಿಳೆಯರನ್ನು ಅಥವಾ ಬ್ರಾಹ್ಮಣರನ್ನು ಮುಂದಕ್ಕೆ ಕಳುಹಿಸಿ.
>> ಪತಿ-ಪತ್ನಿ ಕೂಡ ಒಟ್ಟಿಗೆ ಹೋಗಬಹುದು.

ಇದನ್ನೂ ಓದಿ-Panchak April 2022: ಇಂದಿನಿಂದ 'ರಾಜ ಪಂಚಕ' ಆರಂಭ, ಶನಿಯ ಜೊತೆಗೆ ವಿಶೇಷ ಕನೆಕ್ಷನ್, ಈ ಕೆಲಸ ದುಬಾರಿ ಬೀಳಲಿದೆ

>> ಬಾಗಿಲು ಅಥವಾ ಚೌಕಟ್ಟನ್ನು ಪೂಜಿಸಿದ ನಂತರ, ದಿಕ್ಪಾಲಕರು, ಕ್ಷೇತ್ರಪಾಲಕರು ಮತ್ತು ಗ್ರಾಮ ದೇವತೆಯನ್ನು ಪೂಜಿಸಿ.
>> ಇದರ ನಂತರ ಮುಖ್ಯ ದ್ವಾರದಿಂದ ಮನೆಯೊಳಗೆ ಪ್ರವೇಶಿಸಿ.
>> ಮನೆಯೊಳಗೆ ಪ್ರವೇಶಿಸುವಾಗ, ಮೊದಲನೆಯದಾಗಿ ಬಲ  ಅಡಿಯನ್ನು ಮುಂದಕ್ಕೆ ಇರಿಸಿ.
>> ಗೃಹ ಪ್ರವೇಶದ ದಿನ ಮನೆಯಲ್ಲಿ ಹವನ ಮಾಡಿ, ನವಗ್ರಹ ಶಾಂತಿಯನ್ನು ಮಾಡಬೇಕು.
>> ಈ ದಿನದಂದು ಮನೆಯ ಮುಖ್ಯ ಗೃಹಿಣಿಯು ಮೊದಲು ಅಡುಗೆ ಮನೆಯಲ್ಲಿ ಹಾಲನ್ನು ಕೂಡಿರುವುದು ಶುಭಕರ ಎಂದು ಹೇಳಲಾಗಿದೆ.

ಇದನ್ನೂ ಓದಿ-Planatory Transit: ಈ ಗ್ರಹದ ಕಾರಣ ಮೀನ ರಾಶಿಯ ಸಂಕಷ್ಟದಲ್ಲಿ ಹೆಚ್ಚಳ, ಧನು ರಾಶಿಗೆ ಸುಖ ಪ್ರಾಪ್ತಿ

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News