ನವದೆಹಲಿ: Government Job Remedies - ತಮ್ಮ ಬಳಿ ಒಂದು ಒಳ್ಳೆಯ ಕೆಲಸ ಇರಬೇಕು ಎಂಬುದು ಯಾರ ಕನಸಾಗಿರಲ್ಲ ಹೇಳಿ? ಒಳ್ಳೆಯ ನೌಕರಿ ಪಡೆದು ಕುಟುಂಬ ಸದಸ್ಯರಿಗೆ ಒಳ್ಳೆಯ ಲೈಫ್ ನೀಡಲು ಎಲ್ಲರೂ ಬಯಸುತ್ತಾರೆ. ಆದರೆ, ಕರೋನ ಯುಗದಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಉದ್ಯೋಗ (People lost their jobs) ಕಳೆದುಕೊಂಡಿದ್ದಾರೆ ಮತ್ತು ಜನರು ನಿರುದ್ಯೋಗವನ್ನು (Unemployment) ಎದುರಿಸುತ್ತಿದ್ದಾರೆ. ನೌಕರಿ ಸರಕಾರಿಯೇ ಆಗಿರಲಿ ಅಥವಾ ಖಾಸಗಿ ಆಗಿರಲಿ, ನೌಕರಿಯಲ್ಲಿ ಬಡ್ತಿ ಪಡೆಯಲು ಕಷ್ಟಪಟ್ಟು ದುಡಿಯಲೇಬೇಕು. ಆದರೆ, ಹಲವು ಬಾರಿ ಸಾಕಷ್ಟು ಪ್ರಯತ್ನಿಸಿದರೂ ಕೂಡ ಭಾಗ್ಯ ನಮ್ಮ ಸಾಥ್ ನೀಡುವುದಿಲ್ಲ.
ಹಲವರು ಕೇವಲ ಸರ್ಕಾರಿ ನೌಕರಿಯನ್ನೇ (Government Job) ಮಾಡುವ ಕನಸು ಹೊಂದಿರುತ್ತಾರೆ. ಇದಕ್ಕಾಗಿ ಅವರು ಹಲವು ವರ್ಷಗಳಿಂದ ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರಿ ಗಿಟ್ಟಿಸುವುದು ಸುಲಭದ ಮಾತಲ್ಲ. ಹೀಗಿರುವಾಗ ಜೋತಿಷ್ಯಶಾಸ್ತ್ರದಲ್ಲಿ (Jyotish Shastra) ಸರ್ಕಾರಿ ನೌಕರಿ ಪಡೆಯಲು ಹಲವು ಉಪಾಯಗಳನ್ನು ಸೂಚಿಸಲಾಗಿದೆ. ನೀವೂ ಕೂಡ ಈ ಉಪಾಯಗಳನ್ನು ಅನುಸರಿಸಿ ನೋಡಬಹುದು.
1. ಶಿವ ಹಾಗೂ ಗಣೇಶನಿಗೆ ಪೂಜೆ ಸಲ್ಲಿಸಿ (Sarkari Naukri Upay) - ಒಂದು ವೇಳೆ ನೀವೂ ಕೂಡ ನೀವು ಬಯಸುವ ಸರ್ಕಾರಿ ನೌಕರಿ ಪಡೆಯಲು ಬಯಸುತ್ತಿದ್ದರೆ ಪ್ರತಿನಿತ್ಯ ದೇವಾದಿದೇವ ಮಹಾದೇವನಿಗೆ (Lord Shiva) ಪೂಜೆ ಸಲ್ಲಿಸಿ. ಈ ರೀತಿ ಮಾಡುವುದರಿಂದ ನೌಕರಿ ಪಡೆಯುವ ಮಾರ್ಗದಲ್ಲಿರುವ ಎಲ್ಲ ಅಡೆತಡೆಗಳು ದೂರಾಗುತ್ತವೆ. ಇದಲ್ಲದೆ ಸೋಮವಾರ ಶಿವಲಿಂಗಕ್ಕೆ (Shivlinga) ಜಲ, ಕಚ್ಚಾ ಹಾಲು ಹಾಗೂ ಅಕ್ಷತೆಗಳನ್ನು ಅರ್ಪಿಸಿ ಶಿವನ (Worship Lord Shiva) ಹತ್ತಿರ ನೌಕರಿಗಾಗಿ ಪ್ರಾರ್ಥಿಸಿ.
ಇದಲ್ಲದೆ ನೀವು ವಿಘ್ನವಿನಾಶಕ ಎಂದೇ ಹೇಳಲಾಗುವ ಶ್ರೀ ಗಣೇಶನಿಗೆ (Lord Ganesha) ಪೂಜೆ ಸಲ್ಲಿಸಿಯೂ ಕೂಡ ಸರ್ಕಾರಿ ನೌಕರಿ ಪಡೆಯಬಹುದು. ಚತುರ್ಥಿಯ ತಿಥಿಯಂದು ಗಣೇಶನ ಸೊಂಡಿಲು ಬಲ ಭಾಗಕ್ಕಿರುವ ಚಿತ್ರ ಅಥವಾ ಫೋಟೋ ಅನ್ನು ಮನೆಗೆ ತನ್ನಿ . ಗಣೇಶನಿಗೆ ಲವಂಗ ಹಾಗೂ ಅಡಿಕೆಯನ್ನು ಅರ್ಪಿಸಿ. ನೌಕರಿಯ ಸಂದರ್ಶನಕ್ಕೆ ಹೋಗುವಾಗ ಈ ಲವಂಗ ಹಾಗೂ ಅಡಿಕೆಯನ್ನು ನಿಮ್ಮ ಜೇಬಿನಲ್ಲಿಟ್ಟುಕೊಳ್ಳಿ. ಯಶಸ್ಸು ನಿಮ್ಮದಾಗಲಿದೆ.
2. ಶ್ರೀಆಂಜನೇಯನಿಗೆ ಪೂಜೆ ಸಲ್ಲಿಸಿ (Government Job Remedies) - ನಿಮ್ಮ ಇಸ್ಥದ ಸರ್ಕಾರಿ ನೌಕರಿ ಪಡೆಯಲು ನಿಮ್ಮ ಮನೆಯಲ್ಲಿ ಗಾಳಿಯಲ್ಲಿ ಹಾರುತ್ತಿರುವ ಹನುಮನ (Lord Hanuman) ಭಾವಚಿತ್ರ ಅಂಟಿಸಿ, ಪೂಜೆ ಸಲ್ಲಿಸಿ ಹಾಗೂ ಹನುಮಾನ್ ಚಾಲಿಸಾ (Hanuman Chalisa) ಪಠಿಸಿ. ಇದರಿಂದ ನಿಮ್ಮ ಮನೋಕಾಮನೆ ಬೇಗನೆ ಪೂರ್ಣಗೊಳ್ಳಲಿದೆ. ಜೊತೆಗೆ ಹನುಮನಿಗೆ ಕೆಂಪು ಪುಷ್ಪಗಳನ್ನೂ ಅರ್ಪಿಸಿ. ನಿಮ್ಮ ಇಷ್ಟಾರ್ಥ ಬೇಗನೆ ನೆರವೇರಲಿದೆ.
3. ಈ ಉಪಾಯಗಳನ್ನು ಮಾಡುವುದರಿಂದಲೂ ಯಶಸ್ಸು ನಿಮ್ಮದಾಗಲಿದೆ (Jyotish Remides) - ನೌಕರಿಗಾಗಿ ಸಂದರ್ಶನ ಮನೆಯಿಂದ ಹೊರಗೆ ಹೋಗುವಾಗ ಮೊಸರು-ಸಕ್ಕರೆ ಸೇವಿಸಿ. ಇದು ಶುಭ ಶಕುನ ನಿರ್ಮಿಸುತ್ತದೆ ಮತ್ತು ನಿಮಗೆ ಮಂಗಳವಾಗಲಿದೆ.
ಇದನ್ನೂ ಓದಿ- Palmistry: ನಿಮ್ಮ ವ್ಯಕ್ತಿತ್ವದ ಬಗ್ಗೆ ಹಲವು ವಿಷಯಗಳನ್ನು ಬಹಿರಂಗ ಪಡಿಸುತ್ತವೆ ನಿಮ್ಮ ಕೈಬೆರಳುಗಳು
4.ಸಂದರ್ಶನದ ದಿನ ಬೆಳಗ್ಗೆ ಸ್ನಾನ ಮಾಡುವಾಗ ನೀರಿನಲ್ಲಿ ಸ್ವಲ್ಪ ಅರಿಶಿಣ ಬೆರೆಸಿ ಆ ನೀರಿನಿಂದ ಸ್ನಾನ ಮಾಡಿ. ದೇವರ ಮುಂದೆ 11 ಅಗರಬತ್ತಿ ಬೆಳಗಿ ಹಾಗೂ ನೌಕರಿ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿ.
5. ಭಾನುವಾರವನ್ನು ಬಿಟ್ಟು ಉಳಿದೆಲ್ಲ ದಿನ ಅಶ್ವತ್ಥ ಮರಕ್ಕೆ ಜಲ ಅರ್ಪಿಸಿ. ಶನಿವಾರ ನೀರಿನಲ್ಲಿ ಸ್ವಲ್ಪ ಹಾಲನ್ನು ಕೂಡ ಬೆರೆಸಿಕೊಂಡು ಮರಕ್ಕೆ ಅರ್ಪಿಸಿ. ಶನಿವಾರ ಸಂಜೆ ಅಶ್ವತ್ಥ ಮರದ ಕೆಳಗೆ ಎಣ್ಣೆ ದೀಪ ಉರಿಸಿ.
ಇದನ್ನೂ ಓದಿ- Astrology : ಚಂದ್ರ ಬಲ ಮತ್ತು ಗ್ರಹದ ಬಲಗಳ ಬಗ್ಗೆ ತಿಳಿದುಕೊಳ್ಳಿ!
(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿ ಹಾಗೂ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದುಸ್ತಾನ್ ಕನ್ನಡ ಅದನ್ನು ಪುಷ್ಟೀಕರಿಸುವುದಿಲ್ಲ)
ಇದನ್ನೂ ಓದಿ- Planet Transition: ಈ ರಾಶಿಚಕ್ರದಲ್ಲಿ ನಾಲ್ಕು ಗ್ರಹಗಳ ಸಂಯೋಜನೆ, ಯಾರಿಗೆ ಅದೃಷ್ಟ, ಯಾರಿಗೆ ಸಂಕಷ್ಟ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.