IRCTC Bumper Offer: ನೀವು ಬೇಸಿಗೆಯಲ್ಲಿ ಅಯೋಧ್ಯೆ ಪ್ರವಾಸವನ್ನ ಕೈಗೊಳ್ಳಲು ಯೋಜಿಸುತ್ತಿದ್ದೀರಾ? ಹಾಗಾದರೆ ನಿಮಗೊಂದು ಗುಡ್ ನ್ಯೂಸ್.. IRCTC 9 ದಿನಗಳ ಅಯೋಧ್ಯೆ ಪ್ರವಾಸದ ಪ್ಯಾಕೇಜ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿದೆ. ಈ ಪ್ಯಾಕೇಜ್ 9 ದಿನಗಳು ಮತ್ತು 8 ರಾತ್ರಿಗಳದ್ದಾಗಿರುತ್ತದೆ. ಈ ಪ್ಯಾಕೇಜ್‌ನಲ್ಲಿ ನೀವು ಪುರಿ, ಗಯಾ, ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್‌ರಾಜ್‌ಗೆ ಭೇಟಿ ನೀಡುವ ಅವಕಾಶವನ್ನು ಕೂಡ ಪಡೆಯಬಹುದು. ಪ್ಯಾಕೇಜ್‌ನ ಆರಂಭಿಕ ಬೆಲೆ ಕೇಲವ 15,100 ರೂಪಾಯಿಗಳು ಮಾತ್ರ.
ಈ ಪ್ಯಾಕೇಜ್ ಸಿಕಂದರಾಬಾದ್‌ನಿಂದ ಆರಂಭವಾಗಲಿದೆ. ಇದರಲ್ಲಿ ನೀವು ಭಾರತ್ ಗೌರವ್ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸುವ ಅವಕಾಶವನ್ನು ಪಡೆಯುತ್ತೀರಿ. ಈ ಪ್ಯಾಕೇಜ್‌ನೋಳಗೆ ಆಹಾರದ ಸೌಲಭ್ಯ ಕೂಡ ನೀಡಲಾಗುತ್ತದೆ. ಅದು ಅಲ್ಲದೇ ಇದೇ ಮಾರ್ಚ್ 23 ರಿಂದ ಪ್ರವಾಸ ಆರಂಭವಾಗಲಿದ್ದು, ಈಗಾಗಲೇ ಬುಕ್ಕಿಂಗ್ ಆರಂಭವಾಗಿದೆ. IRCTC ವೆಬ್‌ಸೈಟ್ irctctourism.com ಮೂಲಕ ಈ ಪ್ರವಾಸದ ಪ್ಯಾಕೇಜ್‌ಗಾಗಿ ಬುಕಿಂಗ್ ಮಾಡಬಹುದು.
ಇದನ್ನೂ ಓದಿ: Travel Tips: ಡೆಹ್ರಾಡೂನ್‌ನ ಈ 5 ಸ್ಥಳಗಳು ವಸಂತ ಋತುವಿನಲ್ಲಿ ಭೇಟಿ ನೀಡಲು ಅತ್ಯುಂತ್ತಮವಾಗಿವೆ..!
ಪ್ರವಾಸದ ಪ್ಯಾಕೇಜ್
ಪ್ಯಾಕೇಜ್ ಹೆಸರು- ಪುಣ್ಯ ಕ್ಷೇತ್ರ ಯಾತ್ರೆ: ಪುರಿ-ಕಾಶಿ-ಅಯೋಧ್ಯೆ (SCZBG20)
ಯಾವ ಸ್ಥಳಗಳು- ಪುರಿ, ಕೋನಾರ್ಕ್, ಗಯಾ, ವಾರಣಾಸಿ, ಅಯೋಧ್ಯೆ, ಪ್ರಯಾಗ್ರಾಜ್
ಪ್ರವಾಸವು ಎಷ್ಟು ದಿನಗಳು - 8 ರಾತ್ರಿಗಳು, 9 ದಿನಗಳು
ನಿರ್ಗಮನ ದಿನಾಂಕ - ಮಾರ್ಚ್ 23, 2024
ಆಹಾರ - ಬೆಳಿಗ್ಗೆ ಚಹಾ, ಉಪಹಾರ, ಮಧ್ಯಾಹ್ನ, ರಾತ್ರಿಯ ಊಟ
ಪ್ರಯಾಣದ ವಿಧಾನ - ರೈಲು
ಡಿಬೋರ್ಡಿಂಗ್ ಸ್ಟೇಷನ್‌ಗಳು- ಸಿಕಂದರಾಬಾದ್, ಕಾಜಿಪೇಟ್, ಖಮ್ಮಂ, ವಿಜಯವಾಡ, ಎಲೂರು, ರಾಜಮಂಡ್ರಿ, ಸಾಮರ್ಲಕೋಟ, ಪೆಂಡುರ್ತಿ, ವಿಜಯನಗರಂ.
ಇದನ್ನೂ ಓದಿ: ಮಧ್ಯಪ್ರದೇಶದ ಈ 4 ಪ್ರಸಿದ್ಧ ಪ್ರವಾಸಿ ನಗರಗಳು ಭಾರತದ ವೈಭವವನ್ನು ಹೆಚ್ಚಿಸುತ್ತವೆ..ಒಮ್ಮೆ ಬೇಟಿ ನೀಡಿ
Seek blessings of the divine on the Punya Kshetra Yatra #Puri-#Kashi-#Ayodhya (SCZBG20) tour starting on 23.03.2024 from #Secunderabad.
Book now on https://t.co/iHwMxlwgdU#dekhoapnadesh #Travel #Booking #Tour #IRCTC #UttarPradesh #Odisha #Bihar pic.twitter.com/m3THtd8ADT
— IRCTC Bharat Gaurav Tourist Train (@IR_BharatGaurav) March 4, 2024
ಪ್ಯಾಕೇಜ್‌ನ ಭಾಗವಾದ ಸ್ಥಳಗಳು
ಪುರಿ: ಜಗನ್ನಾಥ ದೇವಾಲಯ, ಕೋನಾರ್ಕ್ ಸೂರ್ಯ ದೇವಾಲಯ.
ಗಯಾ: ವಿಷ್ಣುಪಾದ ದೇವಾಲಯ.
ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಕಾರಿಡಾರ್, ಕಾಶಿ ವಿಶಾಲಾಕ್ಷಿ ಮತ್ತು ಅನ್ನಪೂರ್ಣ ದೇವಿ ದೇವಸ್ಥಾನ. ಸಂಜೆ ಗಂಗಾ ಆರತಿ
ಇದನ್ನೂ ಓದಿ: ಭಾರತದಲ್ಲಿ ನೀವು ಭೇಟಿ ನೀಡಲೇಬೇಕಾದ ನಿಗೂಢ ದೇವಾಲಯಗಳಿವು..!
ಅಯೋಧ್ಯೆ: ರಾಮಜನ್ಮಭೂಮಿ, ಹನುಮಾನ್‌ಗರ್ಹಿ ಮತ್ತು ಸರಯೂ ನದಿಯಲ್ಲಿ ಆರತಿ.
ಪ್ರಯಾಗ್ರಾಜ್: ತ್ರಿವೇಣಿ ಸಂಗಮ.
ಶುಲ್ಕ ಎಷ್ಟು ಇರುತ್ತದೆ?
ನಿಮ್ಮ ಬಜೆಟ್‌ಗೆ ಅನುಗುಣವಾಗಿ ರೈಲಿನಲ್ಲಿ ಸ್ಲೀಪರ್ ಕ್ಲಾಸ್, ಸೆಕೆಂಡ್ ಎಸಿ, ಥರ್ಡ್ ಎಸಿ ಆಯ್ಕೆ ಮಾಡಬಹುದು. ಅದರಂತೆ, ನಿಮ್ಮ ಪ್ಯಾಕೇಜ್ ದರವೂ ಬದಲಾಗುತ್ತದೆ. ನೀವು ಎಕಾನಮಿ ಕ್ಲಾಸ್‌ನಲ್ಲಿ (ಸ್ಲೀಪರ್) ಪ್ರಯಾಣಿಸಿದರೆ ನೀವು ರೂ.15,100 ಪಾವತಿಸಬೇಕು. ಕಂಫರ್ಟ್ ಕ್ಲಾಸ್ (ಥರ್ಡ್ ಎಸಿ) ಪ್ಯಾಕೇಜ್‌ಗೆ ಪ್ರತಿ ವ್ಯಕ್ತಿಗೆ 24,000 ರೂ. ಆದರೆ ಕಂಫರ್ಟ್ ಕ್ಲಾಸ್ (ಸೆಕೆಂಡ್ ಎಸಿ)ಗೆ ನೀವು ರೂ. 31,400 ಖರ್ಚು ಮಾಡಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ