ಭೋಜನದ ನಂತರ ಮಾಡುವ ಈ ಕೆಲಸದಿಂದ ಇರುಸು ಮುರುಸಾಗುತ್ತಾಳೆ ಧನಲಕ್ಷ್ಮೀ .!

ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಯ ಅಸಮಾಧಾನವು ವ್ಯಕ್ತಿಯನ್ನು ಬಡತನದ ಕೂಪಕ್ಕೆ ತಳ್ಳಿ ಬಿಡಬಹುದು. ವಾಗಿಸುತ್ತದೆ. ನಿಮಗೂ ಇಂತಹ ಕೆಟ್ಟ ಅಭ್ಯಾಸವಿದ್ದರೆ ತಕ್ಷಣ ಬಿಟ್ಟುಬಿಡಿ. 

Written by - Ranjitha R K | Last Updated : Sep 30, 2022, 01:24 PM IST
  • ವಾಸ್ತುವಿನಲ್ಲಿ ಅನೇಕ ನಿಯಮಗಳನ್ನು ಹೇಳಲಾಗಿದೆ
  • ಆಹಾರದ ಬಗ್ಗೆಯೂ ಅನೇಕ ನಿಯಮಗಳನ್ನು ಹೇಳಲಾಗಿದೆ
  • ಎಂದಿಗೂ ತಟ್ಟೆಯಲ್ಲಿ ಕೈ ತೊಳೆಯಬೇಡಿ
ಭೋಜನದ ನಂತರ ಮಾಡುವ ಈ ಕೆಲಸದಿಂದ ಇರುಸು ಮುರುಸಾಗುತ್ತಾಳೆ ಧನಲಕ್ಷ್ಮೀ .!  title=
Vastu tips for food

ಬೆಂಗಳೂರು : ಭೋಜನದ ವಿಚಾರಕ್ಕೆ ಬಂದರೆ ಒಬ್ಬೊಬ್ಬರದ್ದು ಒಂದೊಂದು ಅಭ್ಯಾಸ. ಇದು ಭೋಜನದ ಸಮಯ, ರೀತಿ, ಊಟ ಮಾಡುವ ಸ್ಥಳ ಮುಂತಾದುವುಗಳನ್ನು ಒಳಗೊಂಡಿದೆ. ಇವುಗಳಲ್ಲಿ ಅನೇಕ ಬಾರಿ ಕೆಲವು ತಪ್ಪುಗಳಾಗುತ್ತವೆ. ಆಹಾರ ತಯಾರಿಕೆಯಿಂದ ಹಿಡಿದು ಆಹಾರ ಬಡಿಸಿ ತಿನ್ನುವವರೆಗೆ ಅನುಸರಿಸಬೇಕಾದ ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರ ಪ್ರಕಾರ ಆಹಾರ ತಿಂದ ನಂತರ ಮಾಡುವ ತಪ್ಪು ಲಕ್ಷ್ಮೀ ದೇವಿಯ ಕೋಪಕ್ಕೆ ಕಾರಣವಾಗಬಹುದು. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಯ ಅಸಮಾಧಾನವು ವ್ಯಕ್ತಿಯನ್ನು ಬಡತನದ ಕೂಪಕ್ಕೆ ತಳ್ಳಿ ಬಿಡಬಹುದು. ವಾಗಿಸುತ್ತದೆ. ನಿಮಗೂ ಇಂತಹ ಕೆಟ್ಟ ಅಭ್ಯಾಸವಿದ್ದರೆ ತಕ್ಷಣ ಬಿಟ್ಟುಬಿಡಿ. 

ಎಂದಿಗೂ ತಟ್ಟೆಯಲ್ಲಿ ಕೈ ತೊಳೆಯಬೇಡಿ :
ಊಟ ಮಾಡಿದ ನಂತರ ತಟ್ಟೆಯಲ್ಲಿಯೇ ಕೈ ತೊಳೆಯುವ ಅಭ್ಯಾಸ ಅನೇಕರಿಗೆ ಇರುತ್ತದೆ. ಹಾಗೆ ಮಾಡುವುದು ತುಂಬಾ ತಪ್ಪು. ತಟ್ಟೆಯಲ್ಲಿ ಎಂಜಲು  ಕೈಗಳನ್ನು ತೊಳೆಯುವ ಅಭ್ಯಾಸವು ಅನ್ನಪೂರ್ಣ ದೇವಿ ಮತ್ತು  ಲಕ್ಷ್ಮೀ ದೇವಿಯನ್ನು ಕೆರಳಿಸುತ್ತದೆ. ಲಕ್ಷ್ಮೀ ಮತ್ತು ತಾಯಿ ಅನ್ನಪೂರ್ಣ ದೇವಿಯ  ಅಸಮಾಧಾನವು  ವ್ಯಕ್ತಿಯನ್ನು ಕಡು ಬಡವನನ್ನಾಗಿ ಮಾಡುತ್ತದೆ.  ಆದ್ದರಿಂದ ಈ ಅಭ್ಯಾಸವನ್ನು ತಕ್ಷಣ ಬಿಟ್ಟುಬಿಡಿ. 

ಇದನ್ನೂ ಓದಿ : ದೀಪಾವಳಿಯಂದು ಸೂರ್ಯ ಗ್ರಹಣ, ತುಳಸಿ ಪೂಜೆಯಂದು ಚಂದ್ರಗ್ರಹಣ ಗೋಚರ ! ಈ ರಾಶಿಯವರ ಮೇಲೆ ಬೀರಲಿದೆ ಪರಿಣಾಮ

ಈ ವಿಷಯಗಳನ್ನು ನೆನಪಿನಲ್ಲಿಡಿ :
ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಮತ್ತು ಯಾವಾಗಲೂ ಅವಳ ಆಶೀರ್ವಾದ ಪಡೆಯಬೇಕಾದರೆ, ಅಡುಗೆಮನೆ ಮತ್ತು ಆಹಾರಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.  

ರಾತ್ರಿ ಎಂಜಲು ಪಾತ್ರೆಗಳನ್ನು ಅಡುಗೆಮನೆಯಲ್ಲಿ ಇಡಬೇಡಿ.  ರಾತ್ರಿ ಅಡುಗೆ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. 

ಅಡುಗೆಮನೆಯಲ್ಲಿ ಕುಡಿಯುವ ನೀರಿನ ಪಾತ್ರೆಯ ಬಳಿ ದೀಪವನ್ನು ಬೆಳಗಿಸಿ, ಇದರಿಂದ ಲಕ್ಷ್ಮೀ ದೇವಿ ಪ್ರಸನ್ನಲಾಗುತ್ತಾಳೆ.  

ಯಾವಾಗಲೂ ಸ್ನಾನ ಮಾಡಿ ಆಹಾರವನ್ನು ತಯಾರಿಸಿ. 

ದಕ್ಷಿಣಾಭಿಮುಖವಾಗಿ ಕುಳಿತು ಆಹಾರವನ್ನು ಎಂದಿಗೂ ಸೇವಿಸಬೇಡಿ. ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಆಹಾರ ಸೇವಿಸುವುದು ಅತ್ಯಂತ ಶ್ರೇಯಸ್ಕರ.

ಇದನ್ನೂ ಓದಿ :  ಅಂಗೈಯಲ್ಲಿ ಈ ಗುರುತಿದ್ದವರು 35ನೇ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಶ್ರೀಮಂತರಾಗುತ್ತಾರೆ.!

ಆಹಾರವನ್ನು ಎಂದಿಗೂ ವ್ಯರ್ಥ ಮಾಡಬೇಡಿ. ನೀವು ತಿನ್ನಬಹುದಾದಷ್ಟು ತಟ್ಟೆಯಲ್ಲಿ ತೆಗೆದುಕೊಳ್ಳಿ. 

ಬಡವರಿಗೆ ಅನ್ನ ದಾನ ಮಾಡಿ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News