Raksha Bandhan 2021: ರಕ್ಷಾಬಂಧನದ ದಿನ ರಾಶಿಗನುಗುಣವಾಗಿ ನೀಡಿ ಉಡುಗೊರೆ , ಗಟ್ಟಿಯಾಗಿರಲಿ ಸಹೋದರ ಸಹೋದರಿ ಸಂಬಂಧ

Raksha Bandhan 2021: ಆಗಸ್ಟ್ 22 ಅಂದರೆ ಭಾನುವಾರ ರಕ್ಷಾ ಬಂಧನ ಹಬ್ಬದ ಸಂಭ್ರಮ. ಈ ಹಬ್ಬವನ್ನು ಸಹೋದರ-ಸಹೋದರಿಯರ ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗಿದೆ. 

Written by - Ranjitha R K | Last Updated : Aug 20, 2021, 06:09 PM IST
  • ಆಗಸ್ಟ್ 22 ಭಾನುವಾರ ರಕ್ಷಾ ಬಂಧನ ಹಬ್ಬದ ಸಂಭ್ರಮ.
  • ಈ ಪವಿತ್ರ ಹಬ್ಬ ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನ ಬರುತ್ತದೆ.
  • ಈ ದಿನ ಸಹೋದರಿಗೆ ರಾಶಿಗನುಗುಣವಾಗಿ, ಉಡುಗೊರೆ ನೀಡಿದರೆ ಒಳ್ಳೆಯದು.
Raksha Bandhan 2021: ರಕ್ಷಾಬಂಧನದ ದಿನ ರಾಶಿಗನುಗುಣವಾಗಿ ನೀಡಿ ಉಡುಗೊರೆ , ಗಟ್ಟಿಯಾಗಿರಲಿ ಸಹೋದರ ಸಹೋದರಿ ಸಂಬಂಧ title=
ಆಗಸ್ಟ್ 22 ಭಾನುವಾರ ರಕ್ಷಾ ಬಂಧನ ಹಬ್ಬದ ಸಂಭ್ರಮ. (file photo)

ನವದೆಹಲಿ : Raksha Bandhan 2021: ಆಗಸ್ಟ್ 22 ಅಂದರೆ ಭಾನುವಾರ ರಕ್ಷಾ ಬಂಧನ (Raksha Bandhan) ಹಬ್ಬದ ಸಂಭ್ರಮ. ಈ ಹಬ್ಬವನ್ನು ಸಹೋದರ-ಸಹೋದರಿಯರ ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಈ ಪವಿತ್ರ ಹಬ್ಬವು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನ ಬರುತ್ತದೆ. ಈ ವಿಶೇಷ ದಿನದಂದು, ಸಹೋದರಿಯರು ತಮ್ಮ ಸಹೋದರನ ಕೈಗೆ ರಕ್ಷೆಯ ದಾರವನ್ನು ಕಟ್ಟಿ ಸಂತೋಷ, ಸಮೃದ್ಧಿ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಪ್ರತಿಯಾಗಿ ಸಹೋದರ ಉಡುಗೊರೆಗಳನ್ನು (Rakshan Bandhan gift) ನೀಡುತ್ತಾನೆ.  ಇನ್ನು ಸಹೋದರಿಯರ  ರಾಶಿಗನುಗುಣವಾಗಿ, ಉಡುಗೊರೆ ನೀಡಿದರೆ ಒಳ್ಳೆಯದು. 

ಹಾಗಿದ್ದರೆ ಯಾವ ರಾಶಿಯವರಿಗೆ ಯಾವ ಉಡುಗೊರೆ ನೀಡಬೇಕು ?
ಮೇಷ : ಈ ರಾಶಿಯ ಜನರಿಗೆ ಕೆಂಪು ಬಣ್ಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ, ನಿಮ್ಮ ಸಹೋದರಿಗೆ ಕೆಂಪು ಬಣ್ಣದ ವಸ್ತುವನ್ನು ಉಡುಗೊರೆಯಾಗಿ (Gift)ನೀಡಿ. 

ಇದನ್ನೂ ಓದಿ : Raksha Bandhan: ರಕ್ಷಾ ಬಂಧನದಂದು ರೂಪುಗೊಳ್ಳಲಿದೆ 'ಗಜ ಕೇಸರಿ ಯೋಗ', ಯಾರ ಮೇಲೆ ನೇರ ಪರಿಣಾಮ!

ವೃಷಭ ರಾಶಿ :  ಈ ರಾಶಿಯ ಜನರಿಗೆ ಶುಭ ಬಣ್ಣ ಬಿಳಿ.  ಈ ದಿನ, ನಿಮ್ಮ ಸಹೋದರಿಗೆ ಬಿಳಿಯ ಬಣ್ಣದ ಯಾವುದಾದರೂ ವಸ್ತು ಅಥವಾ ಬೆಳ್ಳಿಯ (Silver) ಏನನ್ನಾದರೂ ಉಡುಗೊರೆಯಾಗಿ ನೀಡಿ. 

ಮಿಥುನ : ಈ ರಾಶಿಯ ಜನರಿಗೆ ಹಸಿರು ಬಣ್ಣ ಶುಭ.  ಹಾಗಾಗಿ ಈ ದಿನ, ನಿಮ್ಮ ಸಹೋದರಿಗೆ ಹಸಿರು ಬಣ್ಣದ ಏನನ್ನಾದರೂ ಉಡುಗೊರೆಯಾಗಿ ನೀಡಿ.

ಕರ್ಕಾಟಕ : ಈ ರಾಶಿಯ ಜನರಿಗೆ ಬಿಳಿ ಬಣ್ಣ ಮಂಗಳಕರ. ಈ ದಿನ, ನಿಮ್ಮ ಸಹೋದರಿಗೆ ಬಿಳಿ ಬಣ್ಣದ ಮುತ್ತುಗಳನ್ನು ಅಥವಾ ಬಿಳಿ ಬಣ್ಣದ ಯಾವುದಾದರೂ ವಸ್ತುಗಳನ್ನು ನೀಡಿ. 

ಇದನ್ನೂ ಓದಿ : Tirupati Temple: ತಿಮ್ಮಪ್ಪನ ಸನ್ನಿಧಿಯಲ್ಲಿ ದೋಷ ನಿವಾರಣಾ ಉತ್ಸವ ಆರಂಭ, ದೂರವಾಗಲಿದೆ ಸರ್ವ ಪಾಪ

ಸಿಂಹ  : ಈ ರಾಶಿಯ  ಅಧಿಪತಿ  ಸೂರ್ಯ (Sun). ಹಾಗಾಗಿ ನಿಮ್ಮ ಸಹೋದರಿಗೆ ಹಳದಿ ಅಥವಾ ಚಿನ್ನದ (Gold) ಬಣ್ಣದ ಏನನ್ನಾದರೂ ಉಡುಗೊರೆಯಾಗಿ ನೀಡಬಹುದು.

ಕನ್ಯಾ : ಇದು ನಿಮ್ಮ ಸಹೋದರಿಯ ರಾಶಿಯಾಗಿದ್ದರೆ, ನೀವು ಆಕೆಗೆ ಪಚ್ಚೆ ಉಂಗುರ ಅಥವಾ ಗಣೇಶನ (Lord Ganesha) ವಿಗ್ರಹವನ್ನು ಉಡುಗೊರೆಯಾಗಿ ನೀಡಬೇಕು. ನೀವು ಅವರಿಗೆ ಹಸಿರು ಬಣ್ಣದ ಯಾವುದೇ ವಸ್ತುವನ್ನು ಉಡುಗೊರೆಯಾಗಿ ನೀಡಬಹುದು.

ತುಲಾ : ಈ ರಾಶಿಯ ಹುಡುಗಿಯರು ಶುಕ್ರ ಗ್ರಹದಿಂದ ಪ್ರಭಾವಿತರಾಗಿರುತ್ತಾರೆ ಎನ್ನುವುದು ನಂಬಿಕೆ. ನಿಮ್ಮ ಸಹೋದರಿಯದ್ದು ತುಲಾ ರಾಶಿಯಾಗಿದ್ದರೆ, ಬೆಳ್ಳಿ ಆಭರಣ ಅಥವಾ ರೇಷ್ಮೆ ಬಟ್ಟೆಗಳನ್ನು (Silk Cloth) ಉಡುಗೊರೆಯಾಗಿ ನೀಡಬೇಕು.

ಇದನ್ನೂ ಓದಿ : Chandra Grahan 2021 : ಚಂದ್ರ ಗ್ರಹಣದಂದು ಈ ಎರಡು ರಾಶಿಯವರು ಹುಷಾರಾಗಿರಿ..!

ವೃಶ್ಚಿಕ : ಈ ರಾಶಿಚಕ್ರದ ಜನರಿಗೆ ತಾಮ್ರದ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಮಂಗಳಕರ. 

ಧನು ರಾಶಿ : ಈ ರಾಶಿಯ ಜನರಿಗೆ ಹಳದಿ ಬಣ್ಣ ಶುಭ ಎನ್ನಲಾಗಿದೆ. ಈ ದಿನ, ನೀವು ನಿಮ್ಮ ಸಹೋದರಿಗೆ ಹಳದಿ ಬಣ್ಣದ ಏನನ್ನಾದರೂ ಉಡುಗೊರೆಯಾಗಿ ನೀಡಬೇಕು.

ಮಕರ : ಈ ರಾಶಿಚಕ್ರದ ಜನರಿಗೆ ಲೋಹದ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ರಾಖಿಯ ದಿನ, ನಿಮ್ಮ ಸಹೋದರಿಗೆ ಮೊಬೈಲ್ ಅಥವಾ ಯಾವುದೇ ಗ್ಯಾಜೆಟ್ ಅನ್ನು ಉಡುಗೊರೆಯಾಗಿ ನೀಡಿ.

ಕುಂಭ :  ಈ ರಾಶಿಯ ಅಧಿಪತಿ ಶನಿ. ನೀವು ನಿಮ್ಮ ತಂಗಿಗೆ ಯಾವುದೇ ಕಪ್ಪು ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು. ಇದರ ಹೊರತಾಗಿ, ಅಡುಗೆಮನೆಯಲ್ಲಿ ಬಳಸುವ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು. 

ಇದನ್ನೂ ಓದಿ : Raksha Bandhan 2021 Things To Avoid: ರಕ್ಷಾ ಬಂಧನದ ದಿನ ಸಹೋದರಿಯರು ಮರೆತೂ ಸಹ ಈ ತಪ್ಪು ಮಾಡಬಾರದು

ಮೀನ :  ಈ ರಾಶಿಯ ಅಧಿಪತಿ ಗುರು. ನಿಮ್ಮ ಸಹೋದರಿ ಮೀನ ರಾಶಿಯವರಾಗಿದ್ದರೆ ಆಕೆಗೆ ಹಿತ್ತಾಳೆಯ ವಸ್ತುಗಳನ್ನು ಖರೀದಿಸಿ ಉಡುಗೊರೆಯಾಗಿ ನೀಡಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News