Gemstone: ಈ 5 ಅದ್ಭುತ ರತ್ನಗಳಿಂದ ಧನಲಾಭ, ವ್ಯವಹಾರದಲ್ಲಿ ಪ್ರಗತಿ

ಹಣಕ್ಕೆ ಸಂಬಂಧಿಸಿದ ಕೆಲವು ರತ್ನಗಳ ಬಗ್ಗೆ ರತ್ನಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇವುಗಳನ್ನು ಧರಿಸುವುದರಿಂದ ಸಂಪತ್ತು ಮತ್ತು ಸಂತೋಷ-ಸಮೃದ್ಧಿ ಹೆಚ್ಚಾಗುತ್ತದೆ.

Written by - Puttaraj K Alur | Last Updated : Mar 31, 2022, 11:10 PM IST
  • ಜ್ಯೋತಿಷ್ಯದಲ್ಲಿ ಹುಲಿ ರತ್ನವನ್ನು ಬಹಳ ಪ್ರಭಾವಶಾಲಿ ಎಂದು ಪರಿಗಣಿಸಲಾಗಿದೆ
  • ಜ್ಯೋತಿಷ್ಯದ ಪ್ರಕಾರ ಈ ಹಸಿರು ಜೇಡ್ ರತ್ನವು ವ್ಯಾಪಾರಕ್ಕೆ ಒಳ್ಳೆಯದು ಎಂದು ಹೇಳಲಾಗಿದೆ
  • ಜ್ಯೋತಿಷ್ಯಶಾಸ್ತ್ರದ ಪ್ರಕಾರ ಚಿನ್ನದ ರತ್ನಗಳು ಅನಗತ್ಯ ಹಣದ ನಷ್ಟವನ್ನು ತಡೆಯುತ್ತದೆ
Gemstone: ಈ 5 ಅದ್ಭುತ ರತ್ನಗಳಿಂದ ಧನಲಾಭ, ವ್ಯವಹಾರದಲ್ಲಿ ಪ್ರಗತಿ title=
ವಿವಿಧ ರತ್ನಗಳ ಮಹತ್ವ ತಿಳಿದುಕೊಳ್ಳಿರಿ

ನವದೆಹಲಿ: ಭೌತಿಕ ಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸಾಕಷ್ಟು ಹಣವನ್ನು ಗಳಿಸಲು ಬಯಸುತ್ತಾನೆ. ಹಾಗೆಯೇ ಕೆಲವರು ತಮ್ಮ ಜೀವನ ಸಂಪತ್ತಿನಿಂದ ಕೂಡಿರಬೇಕೆಂದು ಬಯಸುತ್ತಾರೆ. ಆದರೆ, ಹಲವು ಬಾರಿ ಕಷ್ಟಪಟ್ಟು ದುಡಿದರೂ ಹಣ ಉಳಿಯುವುದಿಲ್ಲ, ಅನಗತ್ಯವಾಗಿ ಹಣ ವ್ಯಯವಾಗುತ್ತದೆ. ಹಣಕ್ಕೆ ಸಂಬಂಧಿಸಿದ ಅನೇಕ ಪರಿಹಾರಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಣಕ್ಕೆ ಸಂಬಂಧಿಸಿದ ಕೆಲವು ರತ್ನಗಳ ಬಗ್ಗೆ ರತ್ನಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇವುಗಳನ್ನು ಧರಿಸುವುದರಿಂದ ಸಂಪತ್ತು ಮತ್ತು ಸಂತೋಷ-ಸಮೃದ್ಧಿ ಹೆಚ್ಚಾಗುತ್ತದೆ. ಇಂತಹ ರತ್ನಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಮಾಕ್ಷಿಕ್ ರತ್ನ(Makshik Gems)

ಮಾಕ್ಷಿಕ್ ರತ್ನವು ಖನಿಜದ ತುಂಡು. ಇದು ಗಂಧಕದಿಂದ ಮಾಡಲ್ಪಟ್ಟಿದೆ. ಇದನ್ನು ಧರಿಸುವುದರಿಂದ ಜೀವನದಲ್ಲಿ ಆರ್ಥಿಕ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಅಲ್ಲದೆ ಆತ್ಮವಿಶ್ವಾಸವನ್ನು ಬಲಪಡಿಸುತ್ತದೆ.

ಸುವರ್ಣ ರತ್ನ (Golden Gems)

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಚಿನ್ನದ ರತ್ನಗಳು ಅನಗತ್ಯ ಹಣದ ನಷ್ಟವನ್ನು ತಡೆಯುತ್ತದೆ. ಇದಲ್ಲದೆ ಈ ರತ್ನದ ಪ್ರಭಾವದಿಂದ ಆರ್ಥಿಕ ಸ್ಥಿತಿಯು ಸಹ ಬಲಗೊಳ್ಳುತ್ತದೆ. ಇದನ್ನು ಧರಿಸುವುದರಿಂದ ಜೀವನದಲ್ಲಿ ಕ್ರಮೇಣ ಧನಾತ್ಮಕತೆ ಬರುತ್ತದೆ ಎಂದು ಹೇಳಲಾಗುತ್ತದೆ. ಇದು ಗುರಿ ಸಾಧಿಸಲು ಸಹಾಯಕವಾಗಿದೆ ಎಂದು ಸಾಬೀತುಪಡಿಸಬಹುದು.

ಇದನ್ನೂ ಓದಿ: ಪ್ರತಿಯೊಬ್ಬರನ್ನೂ ತನ್ನತ್ತ ಆಕರ್ಷಿಸಿ ಬಿಡುತ್ತಾರೆ ಈ ಮೂರು ರಾಶಿಯವರು ..!

ಹಸಿರು ಜೇಡ್ ರತ್ನ (Green Jade Stone)

ಜ್ಯೋತಿಷ್ಯದ ಪ್ರಕಾರ ಈ ಹಸಿರು ರತ್ನವು ವ್ಯಾಪಾರಕ್ಕೆ ಒಳ್ಳೆಯದು. ಯಾರಾದರೂ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಮತ್ತು ಆರ್ಥಿಕ ಬಲವನ್ನು ಬಯಸಿದರೆ ಅವರು ಹಸಿರು ರತ್ನ ಧರಿಸಬೇಕು. ವಾಸ್ತವವಾಗಿ ಈ ರತ್ನವನ್ನು ಧರಿಸುವುದು ಕೆಲಸದಲ್ಲಿ ಸ್ಥಿರತೆಯನ್ನು ತರುತ್ತದೆ. ಇದು ಸಂಪತ್ತಿಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.

ಹುಲಿ ರತ್ನ (Tiger Stone)

ಜ್ಯೋತಿಷ್ಯದಲ್ಲಿ ಹುಲಿ ರತ್ನವನ್ನು ಬಹಳ ಪ್ರಭಾವಶಾಲಿ ಎಂದು ಪರಿಗಣಿಸಲಾಗಿದೆ. ಈ ರತ್ನವನ್ನು ಧರಿಸುವುದರಿಂದ ಎಲ್ಲಾ ಕೆಲಸಗಳು ಚೆನ್ನಾಗಿ ನಡೆಯುತ್ತವೆ ಎಂದು ನಂಬಲಾಗಿದೆ. ವಿಶೇಷವಾಗಿ ಆರ್ಥಿಕ ಜೀವನಕ್ಕೆ ಸಂಬಂಧಿಸಿದ ಕೆಲಸವು ವೇಗವನ್ನು ಪಡೆಯುತ್ತದೆ. ಇದಲ್ಲದೆ ಈ ರತ್ನದ ಪ್ರಭಾವದಿಂದಾಗಿ ಕೆಟ್ಟ ಕೆಲಸಗಳಿಗೆ ಮುಕ್ತಿ ಸಿಕ್ಕು, ಒಳ್ಳೆಯದು ಪ್ರಾರಂಭವಾಗುತ್ತದೆ.  

ಇದನ್ನೂ ಓದಿ: ಜೀವನದಲ್ಲಿ ಈ ಜನರಿಗೆ ತೊಂದರೆ ಕೊಟ್ಟರೆ ಕಷ್ಟಗಳ ಪರ್ವತವೇ ಮೇಲೆರಗಬಹುದು.! ಮುನಿಸಿಕೊಳ್ಳಲಿದ್ದಾಳೆ ಲಕ್ಷ್ಮೀ

ಹಸಿರು ಅವೆಂಚುರಿನ್(Green Aventurine)

ಜ್ಯೋತಿಷ್ಯದಲ್ಲಿ ಈ ರತ್ನವು ವ್ಯಾಪಾರ ಮಾಡುವವರಿಗೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಈ ರತ್ನವು ಸಂಪತ್ತನ್ನು ಆಕರ್ಷಿಸುತ್ತದೆ ಎಂದು ರತ್ನಶಾಸ್ತ್ರದ ತಜ್ಞರು ಹೇಳುತ್ತಾರೆ. ಅಲ್ಲದೆ ಈ ರತ್ನವನ್ನು ಧರಿಸುವುದು ಆದಾಯದ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದಂತೆ.

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News