Ganesh Rudraksh Benefit: ವ್ಯಾಪಾರ ಸೇರಿದಂತೆ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ತುಂಬಾ ಲಾಭಕಾರಿ ಈ ರುದ್ರಾಕ್ಷ ಧಾರಣೆ

Ganesh Rudraksh Benefit:ಶ್ರಾವಣ ಮಾಸದ ಯಾವುದೇ ಬುಧವಾರ ಗಣೇಶ ರುದ್ರಾಕ್ಷ ಧರಿಸುವುದರಿಂದ ದೇವಾದಿದೇವ ಮಹಾದೇವನ ಜೊತೆಗೆ ಶ್ರೀಗಣೇಶನ ವಿಶೇಷ ಕೃಪೆ ಕೂಡ ಪ್ರಾಪ್ತಿಯಾಗುತ್ತದೆ.ಬನ್ನಿ ಇದರ ಲಾಭಗಳ ಕುರಿತು ತಿಳಿದುಕೊಳ್ಳೋಣ.  

Written by - Nitin Tabib | Last Updated : Jul 20, 2022, 02:36 PM IST
  • ಶಿವನಿಗೆ ಅತ್ಯಂತ ಪ್ರಿಯವಾದ ವಸ್ತುಗಳಲ್ಲಿ ರುದ್ರಾಕ್ಷ ಕೂಡ ಒಂದು.
  • ಶ್ರಾವಣ ಮಾಸದಲ್ಲಿ ಸಂಪೂರ್ಣ ವಿಧಿ-ವಿಧಾನದಿಂದ ರುದ್ರಾಕ್ಷವನ್ನು ಧರಿಸಿದರೆ,
  • ಜಾತಕದವರಿಗೆ ಅದರ ಸಕಾರಾತ್ಮಕ ಲಾಭಗಳು ಸಿಗುತ್ತವೆ.
Ganesh Rudraksh Benefit: ವ್ಯಾಪಾರ ಸೇರಿದಂತೆ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ತುಂಬಾ ಲಾಭಕಾರಿ ಈ ರುದ್ರಾಕ್ಷ ಧಾರಣೆ title=
Ganesh Rudraksh

Ganesh Rudraksh Benefit: ಶಿವನಿಗೆ ಅತ್ಯಂತ ಪ್ರಿಯವಾದ ವಸ್ತುಗಳಲ್ಲಿ ರುದ್ರಾಕ್ಷ ಕೂಡ ಒಂದು. ಶ್ರಾವಣ ಮಾಸದಲ್ಲಿ ಸಂಪೂರ್ಣ ವಿಧಿ-ವಿಧಾನದಿಂದ ರುದ್ರಾಕ್ಷವನ್ನು ಧರಿಸಿದರೆ, ಜಾತಕದವರಿಗೆ ಅದರ ಸಕಾರಾತ್ಮಕ ಲಾಭಗಳು ಸಿಗುತ್ತವೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ದೇವಾಧಿದೇವ ಮಹಾದೇವನ ಕಣ್ಣೀರಿನಿಂದ ರುದ್ರಾಕ್ಷದ ಉತ್ಪತ್ತಿಯಾಗಿದೆ ಎಂದು ನಂಬಲಾಗಿದೆ. ರುದ್ರಾಕ್ಷದಲ್ಲಿ ಹಲವು ಪ್ರಕಾರಗಳಿವೆ. ಇವುಗಳಲ್ಲಿ ಗಣೇಶ ರುದ್ರಾಕ್ಷ ಕೂಡ ಒಂದು. ನಂಬಿಕೆಗಳ ಪ್ರಕಾರ ಶ್ರಾವಣ ಮಾಸದ ಯಾವುದೇ ಬುಧವಾರದಂದು ಗಣೇಶ ರುದ್ರಾಕ್ಷ ಧರಿಸಿದರೆ ಕೇವಲ ಬಮ್ ಬಮ್ ಭೋಲೆನಾಥನ ಕೃಪಾಕಟಾಕ್ಷ ಮಾತ್ರವೇ ಅಲ್ಲ, ಶ್ರೀಗಣೇಶನ ವಿಶೇಷ ಕೃಪೆ ಕೂಡ ಪ್ರಾಪ್ತಿಯಾಗುತ್ತದೆ. ಜೀವನದ ಎಲ್ಲಾ ರೀತಿಯ ಅಡೆತಡೆಗಳನ್ನು ದೂರಮಾಡಲು ಗಣೇಶ ರುದ್ರಾಕ್ಷ ಅತ್ಯಂತ ಲಾಭಕಾರಿ ಪರಿಗಣಿಸಲಾಗಿದೆ. ಹಾಗಾದರೆ ಬನ್ನಿ ಗಣೇಶ ರುದ್ರಾಕ್ಷ ಧಾರಣೆಯ ಲಾಭಗಳ ಕುರಿತು ತಿಳಿದುಕೊಳ್ಳೋಣ,

ಏಕಾಗ್ರತೆ ಹೆಚ್ಚಿಸುತ್ತದೆ
ಜ್ಞಾನ, ಬುದ್ಧ ಹಾಗೂ ಏಕಾಗ್ರತೆಯ ವೃದ್ಧಿಗಾಗಿ ಬುಧವಾರದ ದಿನ ಗಣೇಶ ರುದ್ರಾಕ್ಷ ಧರಿಸಿ. ಇದರಿಂದ ಯಾವುದೇ ಅಡೆತಡೆಗಳು ಇಲ್ಲದೆ ಕಾರ್ಯಸಿದ್ಧಿ ಪ್ರಾಪ್ತಿಯಾಗುತ್ತದೆ.

ವ್ಯಾಪಾರ ವೃದ್ಧಿ
ಎಲ್ಲಾ ರೀತಿಯ ಪ್ರಯತ್ನಗಳ ಬಳಿಕವೂ ಕೂಡ ಒಂದು ವೇಳೆ ವ್ಯಾಪಾರದಲ್ಲಿ ವೃದ್ಧಿಯಾಗುತ್ತಿಲ್ಲ ಎಂದಾದರೆ, ಅಂತಹ ಜಾತಕದವರು ಬುಧವಾರದ ದಿನ ಗಣೇಶ ರುದ್ರಾಕ್ಷ ಧರಿಸಬೇಕು. ಈ ರೀತಿ ಮಾಡುವುದರಿಂದ ನಿಧಾನಗತಿಯಲ್ಲಿ ಸಾಗುತ್ತಿರುವ ವ್ಯಾಪಾರ ಮತ್ತೆ ದೌಡಾಯಿಸಲು ಆರಂಭಿಸುತ್ತದೆ ಹಾಗೂ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. 

ಒತ್ತಡ ನಿವಾರಣೆ
ಗಣೇಶ ರುದ್ರಾಕ್ಷವನ್ನು ಶಿವನ ಸ್ವರೂಪ ಎಂದು ಭಾವಿಸಲಾಗಿದೆ. ನಿಜವಾದ ಶ್ರದ್ಧಾ ಭಕ್ತಿಯಿಂದ ಗಣೇಶನನ್ನು ಆರಾಧಿಸುವವರ ಸಂಕಷ್ಟಗಳನ್ನು ವಿಘ್ನ ಹರತಾ ಗಜಾನನ ನಿವಾರಿಸುತ್ತಾನೆ ಎನ್ನಲಾಗುತ್ತದೆ. ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯಲು ಗಣೇಶ ರುದ್ರಾಕ್ಷವನ್ನು ಧರಿಸಬೇಕು. 

ಸ್ಮರಣ ಶಕ್ತಿ ಹೆಚ್ಚಳ
ಒಂದು ವೇಳೆ ಮಕ್ಕಳ ಗಮನ ವಿದ್ಯಾಭಾಸದತ್ತ ಇಲ್ಲ ಎಂದಾದರೆ ಬುಧವಾರದ ದಿನ ವಿಧಿ-ವಿಧಾನಗಳನ್ನು ಅನುಸರಿಸುವ ಮೂಲಕ ಗಣೇಶ ರುದ್ರಕ್ಷವನ್ನು ಧರಿಸಬೇಕು. ಇದರಿಂದ ಮಕ್ಕಳ ಸ್ಮರಣ ಶಕ್ತಿಯಲ್ಲಿ ನೀವು ಉನ್ನತಿಯಾಗುತ್ತದೆ ಹಾಗೂ ವಿದ್ಯಾಭ್ಯಾಸದಲ್ಲಿಯೂ ಕೂಡ ಅವರ ಏಕಾಗ್ರತೆ ಹೆಚ್ಚಾಗುತ್ತದೆ.

ಇದನ್ನೂ ಓದಿ-Naag Panchami 2022: ಕಾಲ ಸರ್ಪ ದೋಷ ನಿವಾರಣೆಗೆ ನಾಗ ಪಂಚಮಿಯ ದಿನ ಈ ರೀತಿ ಮಾಡಿ

ಬುಧನ ಶುಭಫಲ ಪ್ರಾಪ್ತಿಗೆ ಉತ್ತಮ
ಬುಧಗ್ರಹನನ್ನು ವಾಣಿ ಹಾಗೂ ಬುದ್ಧಿಯ ಕಾರಕ ಗ್ರಹ ಎಂದು ಭಾವಿಸಲಾಗಿದೆ. ಬುಧದೇವನ ಶುಭಫಲಗಳ ಪ್ರಾಪ್ತಿಗಾಗಿ, ಗಣೇಶ ರುದ್ರಾಕ್ಷ ಧರಿಸುವ ಸಲನೆ ನೀಡಲಾಗುತ್ತದೆ. ಇದು ಮನುಷ್ಯನ ವಾಣಿಯನ್ನು ಪ್ರಭಾವಶಾಲಿಗೊಳಿಸುತ್ತದೆ.

ಇದನ್ನೂ ಓದಿ-Naag Panchami 2022: ಕಾಲ ಸರ್ಪ ದೋಷ ನಿವಾರಣೆಗೆ ನಾಗ ಪಂಚಮಿಯ ದಿನ ಈ ರೀತಿ ಮಾಡಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹ್ತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News