ದೇವರ ಕೋಣೆಯ ವಿಚಾರದಲ್ಲಿ ಈ ತಪ್ಪುಗಳು ಆಗದಿರಲಿ ಎಚ್ಚರ..!

ದೇವರ ಮನೆಯಲ್ಲಿ ನಾವು ನಿಂತು ಪೂಜೆ ಮಾಡುವಾಗ ನಮ್ಮ ಮುಖ ಪೂರ್ವ ದಿಕ್ಕಿಗೆ ಇರುವಂತಿರಬೇಕು.   ಮನೆಯ ಉತ್ತರ ಭಾಗದಲ್ಲಿ ಪೂಜಾ ಕೋಣೆಯನ್ನು ನಿರ್ಮಿಸಬೇಕು. 

Written by - Ranjitha R K | Last Updated : May 31, 2021, 12:37 PM IST
  • ದೇವರ ಮನೆ ನಿರ್ಮಿಸುವಾಗ ಕೆಲ ನಿಯಮಗಳನ್ನು ಪಾಲಿಸಬೇಕು
  • ದೇವರ ಕೋಣೆ ಸರಿಯಾದ ದಿಕ್ಕಿನಲ್ಲಿರಬೇಕು
  • ಪೂರ್ವಜರ ಫೋಟೋಗಳನ್ನು ದೇವರ ಮನೆಯಲ್ಲಿ ಇರಿಸಬೇಡಿ
ದೇವರ ಕೋಣೆಯ ವಿಚಾರದಲ್ಲಿ ಈ ತಪ್ಪುಗಳು ಆಗದಿರಲಿ ಎಚ್ಚರ..! title=
ದೇವರ ಕೋಣೆ ಸರಿಯಾದ ದಿಕ್ಕಿನಲ್ಲಿರಬೇಕು (photo zee news)

ನವದೆಹಲಿ : ವಾಸ್ತುವಿಗೆ ನಮ್ಮ ಜೀವನದಲ್ಲಿ ಬಹಳ ಪ್ರಾಧಾನ್ಯತೆ ಇದೆ. ವಾಸ್ತು ಪ್ರಕಾರ (Vastu) ಮನೆಯಲ್ಲಿ ಪ್ರತಿಯೊಂದು ಕೋಣೆ ಸರಿಯಾದ ದಿಕ್ಕಿನಲ್ಲಿದ್ದರೆ, ಪ್ರತಿಯೊಂದು ವಸ್ತುಗಳು ಸರಿಯಾದ ಸ್ಥಳದಲ್ಲಿದ್ದರೆ, ಮನೆಯಲ್ಲಿ ಸಂತೋಷ, ಅದೃಷ್ಟ, ಸಂಪತ್ತು ನೆಲೆಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇವುಗಳಲ್ಲಿ ಸ್ವಲ್ಪ ಏರಿಳಿತವಾದರೂ ಸಮಸ್ಯೆಗಳು ಎದುರಾಗುತ್ತವೆ. ಮನೆಯಲ್ಲಿರುವ ಎಲ್ಲಾ ಕೋಣೆಗಳಂತೆ ದೇವರ ಕೋಣೆಯನ್ನು (Pooja room) ಕೂಡ ಸರಿಯಾದ ದಿಕ್ಕಿನಲ್ಲೇ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಹಾಗಿದ್ದರೆ, ದೇವರ ಕೋಣೆಯನ್ನು ನಿರ್ಮಿಸುವಾಗ ಪಾಲಿಸಬೇಕಾದ   ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಯಿರಿ.

- ದೇವರ ಮನೆಯಲ್ಲಿ (Pooja room) ನಾವು ನಿಂತು ಪೂಜೆ ಮಾಡುವಾಗ ನಮ್ಮ ಮುಖ ಪೂರ್ವ ದಿಕ್ಕಿಗೆ ಇರುವಂತಿರಬೇಕು.   ಮನೆಯ ಉತ್ತರ ಭಾಗದಲ್ಲಿ ಪೂಜಾ ಕೋಣೆಯನ್ನು ನಿರ್ಮಿಸಬೇಕು. 

ಇದನ್ನೂ ಓದಿ : ದೇವಾನುದೇವತೆಗಳ ಅನುಗ್ರಹಕ್ಕಾಗಿ ಕೇವಲ ಈ ಕೆಲಸ ಮಾಡಿ

ಮನೆ ದೊಡ್ಡದಾಗಿದ್ದರೆ ದೇವರಿಗೆ ಪ್ರತ್ಯೇಕ ಕೊಠಡಿ ಮಾಡಬೇಕು. ಮನೆ ಚಿಕ್ಕದಾಗಿದ್ದರೆ, ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಸರಿಯಾದ ದಿಕ್ಕಿನಲ್ಲಿ ಮಂದಿರ ನಿರ್ಮಾಣ ಮಾಡಬೇಕು.

ದೇವರ ಕೋಣೆಯನ್ನು ಸ್ವಲ್ಪ ನೆಲದಿಂದ ಸ್ವಲ್ಪ ಎತ್ತರಕ್ಕೆ ನಿರ್ಮಿಸಬೇಕು.  ಯಾವಾಗಲೂ ನಾವು ಪೂಜೆ (Pooja) ಮಾಡುವಾಗ ದೇವರ ಪಾದ ನಮ್ಮ ಎದೆಯ ಎತ್ತರದಲ್ಲಿರುವಂತೆ ಇರಬೇಕು.

ಇದನ್ನೂ ಓದಿ : Vastu Tips for Sleep : ಸರಿಯಾಗಿ ರಾತ್ರಿ ನಿದ್ದೆ ಬರ್ತಿಲ್ವಾ? ಹಾಗಿದ್ರೆ ಇಲ್ಲಿದೆ ಅದಕ್ಕೆ ಪರಿಹಾರ!

ದೇವರ ಕೋಣೆಯ ಗೋಡೆಗಳ ಮೇಲೆ ಗಾಢ ಬಣ್ಣವನ್ನು ಹಚ್ಚಬಾರದು. ಪೂಜಾ ಮನೆಯಲ್ಲಿ ಹಳದಿ, ಹಸಿರು ಅಥವಾ ತಿಳಿ ಗುಲಾಬಿ ಬಣ್ಣವನ್ನು ಬಳಿಯಬೇಕು. ಇಡೀ ದೇವರ ಕೋಣೆಗೆ ಒಂದೇ ಬಣ್ಣ ಹಚ್ಚಬೇಕು. 

ಕೆಲವರು ಪೂಜಾ ಮನೆಯಲ್ಲಿ ಪೂರ್ವಜರ ಫೋಟೋಗಳನ್ನು (Photos) ಇಡುತ್ತಾರೆ. ಆದರೆ ಹಾಗೆ ಮಾಡುವುದು ತಪ್ಪು. ದೇವರ ಮನೆಯಲ್ಲಿ ದೇವರ ವಿಗ್ರಹ , ಫೋಟೋಗಳನ್ನು ಬಿಟ್ಟು ಬೇರೆ ಯಾರ ಫೋಟೋವನ್ನು ಇಡಕೂಡದು. 

ದೇವರ ಕೋಣೆಯಲ್ಲಿ ಮಂಟಪವನ್ನು ಅಮೃತಶಿಲೆಯಿಂದ ನಿರ್ಮಾಣ ಮಾಡಿದರೆ ಶುಭ. ಇದು ಸಾಧ್ಯವಾಗದಿದ್ದರೆ, ಮರದಿಂದ ಮಂಟಪವನ್ನು ನಿರ್ಮಿಸಬಹುದು. 

ಇದನ್ನೂ ಓದಿ : ಈ ದಿನ ನಡೆಯಲಿದೆ ವರ್ಷದ ಮೊದಲ ಸೂರ್ಯಗ್ರಹಣ : ಇಲ್ಲಿದೆ ಸಂಪೂರ್ಣ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News