Hair Colouring Tips At Home : ಕೂದಲು ಬೆಳ್ಳಗಾಯಿತು ಎಂದು ಕಲರ್ ಬಳಕೆ ಮಾಡುವವರೇ ಹೆಚ್ಚು. ಆದರೆ, ಪ್ರತಿ ಬಾರಿ ಪಾರ್ಲರ್ ಅಥವಾ ಸಲೂನ್ ಗೆ ಹೋಗಿ ಹೇರ್ ಕಲರ್ ಮಾಡುವುದು ದುಬಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಬಹುತೇಕ ಮಂದಿ ಮಾರುಕಟ್ಟೆಯಿಂದ ಹೇರ್ ಕಲರ್ ಪ್ರಾಡಕ್ಟ್ ಗಳನ್ನು ಖರೀದಿಸಿ, ಮನೆಯಲ್ಲಿಯೇ ಕೂದಲಿಗೆ ಕಲರ್ ಮಾಡಿಕೊಳ್ಳುತ್ತಾರೆ. ಆದರೆ ಇದು ಕೂದಲ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಕೇಶ ವಿನ್ಯಾಸಕರು ಈ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನು ನೀಡುತ್ತಾರೆ. ಏಕೆಂದರೆ ಮನೆಯಲ್ಲಿ ಕೂದಲಿಗೆ ಕಲರ್ ಮಾಡುವಾಗ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಇಲ್ಲಿ ನಾವು ಮಾಡುವ ತಪ್ಪಿಗೆ ಕೂದಲು ಬೆಲೆ ತೆರಬೇಕಾಗುತ್ತದೆ.
ಮನೆಯಲ್ಲಿ ಕೂದಲಿಗೆ ಕಲರ್ ಮಾಡಿದ ನಂತರ, ಅದರ ಬಣ್ಣವು ದೀರ್ಘಕಾಲ ಉಳಿಯಬೇಕು ಎಂದಾದರೆ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಇನ್ನು, ಕೆಲವರು ಬಿಳಿ ಕೂದಲನ್ನು ಕಪ್ಪಾಗಿಸಲು ಪೌಡರ್ ಬಳಸುತ್ತಾರೆ. ಈ ಪೌಡರ್ ಬಳಸುವುದಕ್ಕೂ ಸರಿಯಾದ ಮಾರ್ಗವಿದೆ. ಈ ಸರಿಯಾದ ವಿಧಾನ ಬಳಸದೆ ಸುಮ್ಮನೆ ಹಾಗೆಯೇ ಹೇರ್ ಕಲರ್ ಮಾಡಿದರೆ ಬಣ್ಣವು ಕೆಲವೇ ದಿನಗಳಲ್ಲಿ ಕಣ್ಮರೆಯಾಗುತ್ತದೆ. ಈ ಲೇಖನದಲ್ಲಿ ಕೂದಲಿಗೆ ಕಲರ್ ಮಾಡುವ ಸರಿಯಾದ ವಿಧಾನದ ಬಗ್ಗೆ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ : ತೂಕ ಇಳಿಕೆಗೆ ಬಲು ಪ್ರಯೋಜನಕಾರಿ ಈ ಬೆಳೆ, ಸೇವಿಸುವ ವಿಧಾನ ಇಂತಿರಲಿ!
ಮನೆಯಲ್ಲಿ ಕೂದಲಿಗೆ ಬಣ್ಣ ಹಚ್ಚುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:
1. ಮೊದಲು ನಿಮ್ಮ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ :
ಕೂದಲಿಗೆ ಕಲರ್ ಹಚ್ಚುವುದಕ್ಕೆ ಮುನ್ನ ಕೂದಲಿಗೆ ಶಾಂಪೂ ಮಾಡಬೇಕು. ಮನೆಯಲ್ಲಿಯೇ ಕೂದಲಿಗೆ ಬಣ್ಣ ಹಚ್ಚುವಾಗ ಇದರ ಬಗ್ಗೆ ವಿಶೇಷ ಕಾಳಜಿ ವಹಿಸಲೇಬೇಕು. ಕಲರ್ ಹಚ್ಚುವ ಮುನ್ನ ಕೂದಲಿಗೆ ಶಾಂಪೂ ಮಾಡಿದರೆ, ಕೂದಲಿನ ಕೊಳಕು ಮತ್ತು ಎಣ್ಣೆಯ ಜಿಡ್ಡು ಹೋಗುತ್ತದೆ. ನಂತರ ಕೂದಲಿನ ಬಣ್ಣ ಬಹಳ ಸಮಯದವರೆಗೆ ಉಳಿಯುತ್ತದೆ.
2. ತುಂಬಾ ಹೊತ್ತಿನವರೆಗೆ ಕೂದಲಿನ ಮೇಲೆ ಕಲರ್ ಇರಬಾರದು :
ಮನೆಯಲ್ಲಿಯೇ ಕೂದಲಿಗೆ ಬಣ್ಣ ಹಚ್ಚುತ್ತಿದ್ದರೆ, ಆ ಬಣ್ಣವನ್ನು ಕೂದಲಿನ ಮೇಲೆ ತುಂಬಾ ಹೊತ್ತಿನವರೆಗೆ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ. ದೀರ್ಘಕಾಲದವರೆಗೆ ಕೂದಲಿನ ಮೇಲೆ ಬಣ್ಣ ಇರಿಸಿದರೆ ನೆತ್ತಿಯೆಲ್ಲಾ ಕಪ್ಪಾಗುವ ಸಾಧ್ಯತೆ ಹೆಚ್ಚು. ಒಂದು ಸಲ ಸ್ಕ್ಯಾಲ್ಪ್ ಮೇಲೆ ಬಣ್ಣ ತಾಗಿಕೊಂಡರೆ ನಂತರ ಬಹಳ ದಿನಗಳವರೆಗೆ ಅದು ಹೋಗುವುದಿಲ್ಲ.
ಇದನ್ನೂ ಓದಿ : ಗಾಂಜಾ ಸೇದುವವರು ನಗುತ್ತಾ ಇಲ್ಲವೇ ಅಳುತ್ತಲೇ ಇರುತ್ತಾರೆ..! ಏಕೆ ಗೊತ್ತಾ..?
3. ಕಂಡೀಷನರ್ ಹಚ್ಚಲೇಬೇಕು :
ಕೂದಲಿಗೆ ಬಣ್ಣ ಹಾಕಿದ ನಂತರ, ಉತ್ತಮ ಕಂಡೀಷನರ್ ಅನ್ನು ಕೂಡಾ ಉಪಯೋಗಿಸಬೇಕು. ಏಕೆಂದರೆ ಕೂದಲಿಗೆ ಕಲರ್ ಹಾಕಿದ ನಂತರ ಹೇರ್ ಕಂಡೀಷನಿಂಗ್ ಬಹಳ ಮುಖ್ಯ. ಇದು ನಿಮ್ಮ ಕೂದಲಿಗೆ ಪೋಷಣೆ ಮತ್ತು ಹೊಳಪನ್ನು ನೀಡುತ್ತದೆ. ಕಂಡೀಷನಿಂಗ್ ಬಣ್ಣದ ರಾಸಾಯನಿಕಗಳಿಂದ ಉಂಟಾಗುವ ಹಾನಿಯಿಂದ ಕೂದಲನ್ನು ರಕ್ಷಿಸುತ್ತದೆ. ಹಾಗಾಗಿ ಮನೆಯಲ್ಲಿ ಕೂದಲಿಗೆ ಬಣ್ಣ ಹಚ್ಚುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.