Long Hair Remedies: ಬೋಳು ತಲೆ ಸಮಸ್ಯೆಗೆ ರಾಮಬಾಣ ಈ ಐದು ವಸ್ತುಗಳು

Home Remedies For Lone Hair: ಈ ಒತ್ತಡಭರಿತ ಜೀವನ ಶೈಲಿಯಲ್ಲಿ ಕೂದಲು ಉದುರುವಿಕೆ ಸಾಮಾನ್ಯ ಸಮಸ್ಯೆ ಆಗಿದೆ. ಆದಾಗ್ಯೂ, ಸಮಸ್ಯೆ ಉಲ್ಬಣಗೊಂಡಷ್ಟು ಅದು ಬೋಳು ತಲೆ ಸಮಸ್ಯೆಗೂ ಕಾರಣವಾಗಬಹುದು. ಇದನ್ನು ತಪ್ಪಿಸಲು ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ತುಂಬಾ ಸಹಕಾರಿ ಆಗಿವೆ. 

Written by - Yashaswini V | Last Updated : Mar 21, 2023, 09:05 AM IST
  • ನೀವೂ ಕೂಡ ಕೂದಲು ಉದುರುವಿಕೆ, ಬೋಳು ತಲೆ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ವಸ್ತುಗಳ ಸಹಾಯದಿಂದ ಈ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.
  • ಇದನ್ನು ತಪ್ಪಿಸಲು ಆಯುರ್ವೇದದಲ್ಲಿ ಕೆಲವು ನೈಸರ್ಗಿಕ ಪರಿಹಾರಗಳನ್ನು ಸೂಚಿಸಲಾಗಿದೆ.
  • ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲ, ನೀವು ಉದ್ದವಾದ, ಆರೋಗ್ಯಕರ ಕೂದಲನ್ನು ಪಡೆಯಲು ಸಹ ಸಹಕಾರಿ ಆಗಿದೆ.
Long Hair Remedies: ಬೋಳು ತಲೆ ಸಮಸ್ಯೆಗೆ ರಾಮಬಾಣ ಈ ಐದು ವಸ್ತುಗಳು  title=
Home remedies For Long Hair

Home Remedies For Hair Fall: ಮಹಿಳೆಯರಿರಲಿ ಅಥವಾ ಪುರುಷರಿರಲಿ ಕೂದಲು ಉದುರುವಿಕೆಗೆ ಕೆಲವು ಆಂತರಿಕ ಕಾರಣಗಳಿರಬಹುದು, ಇನ್ನೂ ಕೆಲವು ಬಾಹ್ಯ ಕಾರಣಗಳಿರಬಹುದು. ಅವುಗಳಲ್ಲಿ ಒತ್ತಡ, ಹಾರ್ಮೋನುಗಳ ಅಸಮತೋಲನ ಅಥವಾ ಕಳಪೆ ಪೋಷಣೆಯಂತಹ ಹಲವು ಮುಖ್ಯ ಕಾರಣಗಳು ಕೂಡ ಸೇರಿವೆ. ಈ ಕೂದಲು ಉದುರುವಿಕೆ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ದೀರ್ಘಾವಧಿಯಲ್ಲಿ ಅದು ಬೋಳು ತಲೆ ಸಮಸ್ಯೆಗೂ ಕಾರಣವಾಗಬಹುದು. ಇದನ್ನು ತಪ್ಪಿಸಲು ಆಯುರ್ವೇದದಲ್ಲಿ ಕೆಲವು ನೈಸರ್ಗಿಕ ಪರಿಹಾರಗಳನ್ನು ಸೂಚಿಸಲಾಗಿದೆ. 

ನೀವೂ ಕೂಡ ಕೂದಲು ಉದುರುವಿಕೆ, ಬೋಳು ತಲೆ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ವಸ್ತುಗಳ ಸಹಾಯದಿಂದ ಈ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲ, ನೀವು ಉದ್ದವಾದ, ಆರೋಗ್ಯಕರ ಕೂದಲನ್ನು ಪಡೆಯಲು ಸಹ ಸಹಕಾರಿ ಆಗಿದೆ.

ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಈ ವಸ್ತುಗಳಿಂದ ಬೋಳು ತಲೆಗೆ ಹೇಳಿ ಬೈ, ಬೈ!
ಕೊಬ್ಬರಿ ಎಣ್ಣೆ:

ನಾವೆಲ್ಲರೂ ಕೊಬ್ಬರಿ ಎಣ್ಣೆಯನ್ನು ಬಳಸುತ್ತೇವೆ. ಆದರೆ ಅದನ್ನು ಸ್ವಲ್ಪ ಬಿಸಿ ಮಾಡಿ ಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ನೆತ್ತಿಗೆ, ಕೂದಲ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಕನಿಷ್ಠ 30 ನಿಮಿಷಗಳ ಬಳಿಕ ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿ. ವಾರದಲ್ಲಿ ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ಕೂದಲು ಬುಡದಿಂದ ಪೋಷಣೆ ಪಡೆಯಲು ಸಹಕಾರಿ ಆಗಲಿದ್ದು, ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 

ಇದನ್ನೂ ಓದಿ- ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ಕಾರಣ, ಚಿಕಿತ್ಸೆ

ನೆಲ್ಲಿಕಾಯಿ:
ಆರೋಗ್ಯಕರ ಕೂದಲನ್ನು ಪಡೆಯಲು ನೆಲ್ಲಿಕಾಯಿ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ಕೂದಲ ಬೆಳವಣಿಗೆಗೆ ತುಂಬಾ ಸಹಕಾರಿ ಆಗಿದೆ. ನೀವು ತಲೆಗೆ ಸ್ನಾನ ಮಾಡುವ ಮೊದಲು ಕೊಬ್ಬರಿ ಎಣ್ಣೆಯೊಂದಿಗೆ ನೆಲ್ಲಿಕಾಯಿ ಪುಡಿಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ಅರ್ಧ ಗಂಟೆ ಬಳಿಕ ವಾಶ್ ಮಾಡಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಬೋಳು ತಲೆ ಸಮಸ್ಯೆಯಿಂದ ಮುಕ್ತಿ ದೊರೆಯಲಿದೆ. 

ಈರುಳ್ಳಿ ರಸ/ಎಣ್ಣೆ:
ಬೇರುಗಳಿಂದ ಕೂದಲನ್ನು ಬಲಪಡಿಸಲು ಕೂದಲು ಉದುರುವಿಕೆ, ತಲೆಹೊಟ್ಟು ಸೇರಿದಂತೆ ಹಲವು ಸಮಸ್ಯೆಗಳಿಗೆ  ಈರುಳ್ಳಿ ತುಂಬಾ ಪ್ರಯೋಜನಕಾರಿ. ಆದರೆ, ಇದನ್ನು ನೇರವಾಗಿ ಬಳಸುವುದರಿಂದ ಕೂದಲ ದುರ್ವಾಸನೆ ಉಂಟಾಗುತ್ತದೆ. ಹಾಗಾಗಿ ಈರುಳ್ಳಿ ಎಣ್ಣೆಯನ್ನು ಬಳಸುವ ಮೂಲಕ ನೀವು ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. 

ಇದನ್ನೂ ಓದಿ- ತಲೆ ಹೊಟ್ಟಿನಿಂದ ಬೇಸೊತ್ತಿರುವಿರಾ ? ಹಾಗಾದ್ರೆ ಇಲ್ಲಿದೆ ನೋಡಿ ಮನೆಮದ್ದು

ಅಲೋವೆರಾ: 
ತಾಜಾ ಅಲೋವೆರಾವನ್ನು ತೆಗೆದುಕೊಂಡು ಅದರ ಮಧ್ಯ ಭಾಗದ ಲೋಳೆಯನ್ನು ತೆಗೆದುಕೊಂಡು ಕೂದಲಿನ ಬುಡಕ್ಕೆ ಹಚ್ಚಿ 30 ನಿಮಿಷಗಳ ನಂತರ ಹೇರ್ ವಾಶ್ ಮಾಡಿ. ಇದರಿಂದ ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ ದೊರೆಯುವುದರ ತಲೆಹೊಟ್ಟು ಸಹ ಕಡಿಮೆ ಆಗುತ್ತದೆ. 

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News