Fenugreek For Premature White Hair : ಪ್ರಾಚೀನ ಕಾಲದಲ್ಲಿ ಬಿಳಿ ಕೂದಲನ್ನು ವಯಸ್ಸು ಹೆಚ್ಚುತ್ತಿರುವ ಸಂಕೇತವೆಂದು ಹೇಳಲಾಗುತ್ತಿತ್ತು. ಆದರೆ ಪ್ರಸ್ತುತ 25 ವರ್ಷ ವಯಸ್ಸಿನ ಯುವಕರ ಕೂದಲು ಕೂಡಾ ಹಣ್ಣಾಗುವುದನ್ನು ನಾವು ನೋಡುತ್ತೇವೆ. ಇಂದಿನ ಜೀವನಶೈಲಿ, ಮಾಲಿನ್ಯ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಇದಕ್ಕೆ ಬಹು ಮುಖ್ಯ ಕಾರಣವೆಂದು ಹೇಳಲಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ನೀವು ಸಹ ಈ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಇದಕ್ಕೆ ಸುಲಭ ಪರಿಹರಾವಿದೆ.
ಬಿಳಿ ಕೂದಲಿಗೆ ಮದ್ದು :
ಚಿಕ್ಕವಯಸ್ಸಿನಲ್ಲಿ ಕೂದಲು ಬಿಳಿಯಾಗುವುದರಿಂದ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಕೂದಲು ಬಿಳಿಯಾಯಿತು ಎಂದು ಕೆಮಿಕಲ್ ಇರುವ ಹೇರ್ ಡೈ ಬಳಸಿದರೆ ಕೂದಲು ಹಾಳಾಗಬಹುದು. ಬಿಳಿ ಕೂದಲಿನ ಸಮಸ್ಯೆ ಪರಿಹಾರಕ್ಕೆ ಮೆಂತ್ಯೆ ಸೊಪ್ಪನ್ನು ಬಳಸಬಹುದು.
ಇದನ್ನೂ ಓದಿ : ಮಧುಮೇಹ ರೋಗಿಗಳು ತಪ್ಪದೆ ಈ ಆಹಾರ ಪದಾರ್ಥಗಳನ್ನು ಸೇವಿಸಿ..!
ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುವ ವಿಧಾನಗಳು :
ಮೆಂತ್ಯೆಯೊಂದಿಗೆ ಬೆಲ್ಲವನ್ನು ಸೇವಿಸಿ :
ನಿಮ್ಮ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗಿಸಬೇಕಾದರೆ ಮೆಂತ್ಯೆಯೊಂದಿಗೆ ಬೆಲ್ಲವನ್ನು ಸೇವಿಸಲು ಪ್ರಾರಂಭಿಸಿ. ಈ ಎರಡರ ಸಂಯೋಜನೆಯ ಪ್ರಯೋಜನಗಳನ್ನು ಆಯುರ್ವೇದದಲ್ಲಿ ವಿವರಿಸಲಾಗಿದೆ. ಮೆಂತ್ಯೆ ಮತ್ತು ಬೆಲ್ಲವು ಕೂದಲಿನ ಕಪ್ಪು ಬಣ್ಣವನ್ನು ಮರಳಿ ತರುವುದಲ್ಲದೆ, ಕೂದಲು ಉದುರುವಿಕೆ ಮತ್ತು ಬೋಳು ತಲೆ ಮುಂತಾದ ಸಮಸ್ಯೆಗಳನ್ನು ಕೂಡಾ ಹೋಗಲಾಡಿಸುತ್ತದೆ. ಅಲ್ಲದೆ ಕೂದಲಿಗೆ ಅದ್ಭುತವಾದ ಹೊಳಪನ್ನು ನೀಡುತ್ತದೆ.
ಮೆಂತ್ಯೆ ನೀರಿನಿಂದ ತಲೆ ಸ್ನಾನ :
ಮೆಂತ್ಯೆಯನ್ನು ಬೇರೆ ಬೇರೆ ವಿಧಾನಗಳಲ್ಲಿಯೂ ಬಳಸಬಹುದು. ಇದಕ್ಕಾಗಿ, ಈಗ ಈ ನೀರನ್ನು ಚೆನ್ನಾಗಿ ಕುದಿಸಿ ನಂತರ ತಣ್ಣಗಾಗಲು ಬಿಡಿ. ಹೀಗೆ ಕುದಿಸಿ ತಣ್ಣಗಾಗಿಸಿದ ನೀರಿನ್ನು ಕೂದಲಿಗೆ ಹಚ್ಚಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಮಾತ್ರವಲ್ಲ ಇದೇ ನೀರಿನಿಂದ ಕೂದಲನ್ನು ತೊಳೆಯಿರಿ. ಇದನ್ನು ಕೆಲವು ದಿನಗಳವರೆಗೆ ಮಾಡುವುದರಿಂದ, ಬಿಳಿ ಕೂದಲಿನ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗುವುದು.
ಇದನ್ನೂ ಓದಿ : ತೂಕ ಇಳಿಕೆಗೆ ಈ ತರಕಾರಿ ಒಂದು ರಾಮಬಾಣ ಉಪಾಯ, ಈ ವಿಧಗಳಲ್ಲಿ ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಿ!
ಬೆಳಿಗ್ಗೆ ಈ ಕೆಲಸವನ್ನು ಮಾಡಿ :
ಮೆಂತ್ಯೆಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಅದನ್ನು ರುಬ್ಬಿಕೊಂಡು ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿ.ಈ ವಿಧಾನವನ್ನು ಕೆಲವು ದಿನಗಳವರೆಗೆ ಅಳವಡಿಸಿಕೊಂಡರೆ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.