ಈ ಐದು ವಸ್ತುಗಳನ್ನು ಚೆಲ್ಲಿದರೆ ಶನಿದೇವರು ಜೀವನವೆಲ್ಲಾ ನೀಡುತ್ತಾರೆ ಸಂಕಷ್ಟ

ವಾಸ್ತು ಶಾಸ್ತ್ರದ ಪ್ರಕಾರ ಕೈಯಿಂದ ಕೆಲವು ವಸ್ತುಗಳು ಬೀಳುವುದು ಅಶುಭ ಸಂಕೇತವಾಗಿರುತ್ತದೆ. ಅದಲ್ಲದೆ ಜೀವನದಲ್ಲಿ ಎದುರಾಗಲಿರುವ ತೊಂದರೆಗಳನ್ನೂ ಸೂಚಿಸುತ್ತದೆ. 

Written by - Ranjitha R K | Last Updated : Dec 17, 2021, 01:39 PM IST
  • ಹಾಲು ಚಂದ್ರ ಗ್ರಹಕ್ಕೆ ಸಂಬಂಧಿಸಿದ್ದಾಗಿದೆ
  • ಉಪ್ಪು ಚೆಲ್ಲಿದರೆ ಅಶುಭ ಸಂಕೇತವನ್ನು ನೀಡುತ್ತದೆ
  • ಎಣ್ಣೆ ಶನಿ ದೇವರಿಗೆ ಸಂಬಂಧಿಸಿದ್ದಾಗಿದೆ
ಈ ಐದು ವಸ್ತುಗಳನ್ನು ಚೆಲ್ಲಿದರೆ ಶನಿದೇವರು ಜೀವನವೆಲ್ಲಾ ನೀಡುತ್ತಾರೆ ಸಂಕಷ್ಟ  title=
ಉಪ್ಪು ಚೆಲ್ಲಿದರೆ ಅಶುಭ ಸಂಕೇತ (file photo)

ನವದೆಹಲಿ : ಆತುರಾತುರವಾಗಿ ನಿತ್ಯದ ಕೆಲಸ ಮಾಡುವ ಸಂದರ್ಭದಲ್ಲಿ ಕೈಯಿಂದ ಏನಾದರೊಂದು ಬೀಳುತ್ತಲೇ ಇರುತ್ತದೆ. ಜನರು ಸಾಮಾನ್ಯವಾಗಿ ಇದನ್ನು ನಿರ್ಲಕ್ಷಿಸಿಬಿಡುತ್ತಾರೆ. ಆದರೆ ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಕೈಯಿಂದ ಕೆಲವು ವಸ್ತುಗಳು ಬೀಳುವುದು ಅಶುಭ ಸಂಕೇತವಾಗಿರುತ್ತದೆ. ಅದಲ್ಲದೆ ಜೀವನದಲ್ಲಿ ಎದುರಾಗಲಿರುವ ತೊಂದರೆಗಳನ್ನೂ ಸೂಚಿಸುತ್ತದೆ. 

ಉಪ್ಪು :
ವಾಸ್ತುವಿನಲ್ಲಿ (Vastu) ಉಪ್ಪಿನ ಸಂಬಂಧವನ್ನು ಚಂದ್ರ ಮತ್ತು ಶುಕ್ರನೊಂದಿಗೆ ಹೇಳಲಾಗಿದೆ. ಅಡುಗೆಮನೆಯಲ್ಲಿ (Kitchen tips) ಅಥವಾ ಮನೆಯ ಇತರ ಸ್ಥಳಗಳಲ್ಲಿ ಕೈಯಿಂದ ಉಪ್ಪು ಬೀಳುವುದು ಚಂದ್ರ ಮತ್ತು ಶುಕ್ರನ ಅಶುಭ ಪರಿಣಾಮವನ್ನು ಸೂಚಿಸುತ್ತದೆ. ಉಪ್ಪು ಪದೇ ಪದೇ ಬೀಳುವುದು ಒತ್ತಡ ಮತ್ತು ಹಣದ ನಷ್ಟವನ್ನು ಸೂಚಿಸುತ್ತದೆ. ಮುಂದಿನ ದಿನಗಳಲ್ಲಿ ಆರ್ಥಿಕ ನಷ್ಟ ಅಥವಾ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ ಎನ್ನುವುದರ ಸಂಕೇತ ಇದಾಗಿರುತ್ತದೆ. ಇದಲ್ಲದೆ, ಇದು ವಾಸ್ತು ದೋಷದ (Vastu Dosha) ಸಂಕೇತವೂ ಆಗಿರಬಹುದು. 

ಇದನ್ನೂ ಓದಿ :  Money Tips: 5 ರೂಪಾಯಿ ನಾಣ್ಯದಿಂದ ಕೋಟ್ಯಾಧಿಪತಿ ಆಗಲು ಸಿಂಪಲ್ ಟ್ರಿಕ್ಸ್

ಒಲೆಯ ಮೇಲೆ ಹಾಲು ಬೀಳುವುದು : 
ಯಾವುದೇ ಒಲೆಯ ಮೇಲೆ ಹಾಲು ಚೆಲ್ಲುವುದು ಕೆಟ್ಟ ಶಕುನವನ್ನು ಸೂಚಿಸುತ್ತದೆ. ಜ್ಯೋತಿಷ್ಯ (Astrology)  ಮತ್ತು ವಾಸ್ತು ಶಾಸ್ತ್ರದಲ್ಲಿ (Vastu Shastra) ಹಾಲಿಗೂ ಚಂದ್ರನಿಗೂ ಸಂಬಂಧವಿದೆ. ಒಲೆಯಿಂದ ಪದೇ ಪದೇ ಹಾಲು ಚೆಲ್ಲುತ್ತಿದ್ದರೆ, ಚಂದ್ರ ದೋಷ ಉಂಟಾಗುತ್ತದೆ ಎನ್ನುವುದನ್ನು ತೋರಿಸುತ್ತದೆ. ಇದಲ್ಲದೆ, ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯ (Negetive energy) ಉಪಸ್ಥಿತಿಯನ್ನು ಸೂಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅಡುಗೆಮನೆಯಲ್ಲಿ ಹಾಲು ಚೆಲ್ಲದಂತೆ ವಿಶೇಷ ಕಾಳಜಿ ವಹಿಸಬೇಕು. 

ಕರಿ ಮೆಣಸು :
ಕರಿಮೆಣಸು ಆಗಾಗ್ಗೆ ಚೆಲ್ಲುವುದು ಕೆಟ್ಟ ಶಕುನವನ್ನು ಸೂಚಿಸುತ್ತದೆ. ವಾಸ್ತು ಪ್ರಕಾರ ಕರಿಮೆಣಸು (Black pepper) ಕೈಯಿಂದ ಪದೇ ಪದೇ ಬಿದ್ದರೆ, ಅದು ದಾಂಪತ್ಯ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ, ಪತಿ-ಪತ್ನಿಯರ ನಡುವೆ ಸದಾ ಕ್ಲೇಷ ಉಂಟಾಗುತ್ತದೆ.  

ಇದನ್ನೂ ಓದಿ :  ಜೀವನಪೂರ್ತಿ ಧನಿಕರೇ ಆಗಿರುತ್ತಾರೆ ಈ ಮೂರು ರಾಶಿಯವರು, ಸದಾ ಇರಲಿದೆ ಶನಿ ಮಹಾತ್ಮನ ಕೃಪೆ

ಧಾನ್ಯ :
ಅನ್ನಪೂರ್ಣ ದೇವಿಯೊಂದಿಗೆ ಆಹಾರ ಅಥವಾ ಧಾನ್ಯಗಳ ಸಂಬಂಧವಿದೆ. ಧಾನ್ಯವನ್ನು ಚೆಲ್ಲುವುದು ಎಂದರೆ ಅನ್ನಪೂರ್ಣ ದೇವಿಯ ಕೋಪಕ್ಕೆ ಪಾತ್ರರಾಗುವುದು.  ಹೀಗಿರುವಾಗ ಅನ್ನ ನಿಮ್ಮ ಕೈಯಿಂದ ಪದೇ ಪದೇ ಬೀಳುತ್ತಿದ್ದರೆ  ತಕ್ಷಣ ಕ್ಷಮೆಯಾಚಿಸಬೇಕು. 

ಎಣ್ಣೆ :
ಜ್ಯೋತಿಷ್ಯದಲ್ಲಿ ಎಣ್ಣೆ ಶನಿ ದೇವನಿಗೆ (Shani deva) ಸಂಬಂಧಿಸಿದೆ. ಸಾಂದರ್ಭಿಕವಾಗಿ ಎಣ್ಣೆ ಚೆಲ್ಲುವುದು ಸಹಜ. ಆದರೆ ಪದೇ ಪದೇ ಎಣ್ಣೆ ಚೆಲ್ಲುತ್ತಿದ್ದರೆ ಅದು ಅಶುಭವೆಂದು ಪರಿಗಣಿಸಲಾಗಿದೆ. ಇದು ಶನಿದೇವ ಕೋಪಗೊಂಡಿರುವುದನ್ನು ಸೂಚಿಸುತ್ತದೆ.  ಶನಿ ದೇವರ ಕೋಪ ಎಂದರೆ ಜೀವನದಲ್ಲಿ ಸಂಕಷ್ಟಗಳ ಸರಮಾಲೆ ಎದುರಾದಂತೆ. ಒಂದರ ಮೇಲೆ ಒಂದು ಕಷ್ಟಗಳು ತಪ್ಪುವುದೇ ಇಲ್ಲ. ಹಾಗಾಗಿ ಎಣ್ಣೆ ಬಳಕೆ ವೇಳೆ ಜಾಗರೂಕತೆ ಇರುವುದು ಒಳ್ಳೆಯದು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News