ನೀವೂ ಕಾಫಿ ಪ್ರಿಯರೇ! ಹಾಗಿದ್ದರೆ Coffee ಕುಡಿಯಲು ಸರಿಯಾದ ಸಮಯದ ಬಗ್ಗೆ ಇರಲಿ ಎಚ್ಚರ

ಪ್ರತಿಯೊಬ್ಬ ಕಾಫಿ ಪ್ರಿಯರು ಕಾಫಿ ಕುಡಿಯಲು ಸರಿಯಾದ ಸಮಯವನ್ನು ತಿಳಿದಿರಬೇಕು. ಅದರಲ್ಲೂ ಕಬ್ಬಿಣದ ಕೊರತೆ ಸಮಸ್ಯೆ ಇದ್ದರೆ, ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಉತ್ತಮ.

Written by - Yashaswini V | Last Updated : Oct 14, 2021, 08:30 AM IST
  • ನಿತ್ಯವೂ ಕಾಫಿ ಕುಡಿಯಲು ಒಂದು ಕಾರಣವನ್ನು ಹುಡುಕುತ್ತಿದ್ದರೆ, ಸ್ವಲ್ಪ ಜಾಗರೂಕರಾಗಿರಿ
  • ಅತಿಯಾಗಿ ಮತ್ತು ತಪ್ಪಾದ ಸಮಯದಲ್ಲಿ ಕಾಫಿ ಸೇವಿಸುವುದರಿಂದ ನಿಮ್ಮ ಶಕ್ತಿಯನ್ನು ಕಡಿಮೆ ಆಗಬಹುದು
  • ಕಾಫಿಯಲ್ಲಿರುವ ಕೆಫೀನ್ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ
ನೀವೂ ಕಾಫಿ ಪ್ರಿಯರೇ! ಹಾಗಿದ್ದರೆ Coffee ಕುಡಿಯಲು ಸರಿಯಾದ ಸಮಯದ ಬಗ್ಗೆ ಇರಲಿ ಎಚ್ಚರ  title=
Every Coffee Lover should know the right time to drink coffee

ಬೆಂಗಳೂರು: ನೀವು ಸಹ ಕಾಫಿ ಪ್ರಿಯರಾಗಿದ್ದರೆ (Coffee Lover) ಮತ್ತು ನಿತ್ಯವೂ ಕಾಫಿ ಕುಡಿಯಲು ಒಂದು ಕಾರಣವನ್ನು ಹುಡುಕುತ್ತಿದ್ದರೆ, ಸ್ವಲ್ಪ ಜಾಗರೂಕರಾಗಿರಿ. ಅತಿಯಾಗಿ ಮತ್ತು ತಪ್ಪಾದ ಸಮಯದಲ್ಲಿ ಕಾಫಿ ಸೇವಿಸುವುದರಿಂದ ನಿಮ್ಮ ಶಕ್ತಿಯನ್ನು ಕಡಿಮೆ ಆಗಬಹುದು ಮತ್ತು ನಿಮ್ಮನ್ನು ಅಧಿಕ ರಕ್ತದೊತ್ತಡದ ರೋಗಿಯನ್ನಾಗಿ ಮಾಡಬಹುದು. ಕಾಫಿ ಕುಡಿಯಲು ಸರಿಯಾದ ಮತ್ತು ತಪ್ಪು ಸಮಯ ಯಾವುದು ಎಂದು ತಿಳಿಯೋಣ...

ನೀವು ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯಲು ಬಯಸಿದರೆ, ಒತ್ತಡದ ಹಾರ್ಮೋನ್ ಕಾರ್ಟಿಸೋಲ್ (Stress Hormone Cortisol) ಬೆಳಿಗ್ಗೆ 8 ರಿಂದ 9 ರ ಸುಮಾರಿಗೆ ಉತ್ತುಂಗದಲ್ಲಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಈ ಸಮಯದಲ್ಲಿ ಕಾಫಿ ಕುಡಿಯುವುದರಿಂದ ವ್ಯಕ್ತಿಯ ಒತ್ತಡದ ಮಟ್ಟವನ್ನು ಕಡಿಮೆ ಮಾಡುವ ಬದಲು ಹೆಚ್ಚಿಸಬಹುದು.

ಪೌಷ್ಟಿಕ ತಜ್ಞರ ಪ್ರಕಾರ, ಹಾಸಿಗೆ ಬಿಟ್ಟ ತಕ್ಷಣ ಅರ್ಥಾತ್ ಮಲಗಿ ಎದ್ದ ಕೂಡಲೇ ಕಾಫಿ ಕುಡಿಯುವುದರಿಂದ ನಿಮ್ಮ ದೇಹದಲ್ಲಿನ ಶಕ್ತಿಯ ಮಟ್ಟವನ್ನು ಕಡಿಮೆ ಮಾಡಬಹುದು. ಏಕೆಂದರೆ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಈ ಸಮಯದಲ್ಲಿ ದೇಹದಲ್ಲಿ ಉತ್ತುಂಗದಲ್ಲಿರುತ್ತದೆ. ಕಾಫಿಯಲ್ಲಿರುವ ಕೆಫೀನ್ (Caffeine) ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ದೀರ್ಘಕಾಲದ ಕಾರ್ಟಿಸೋಲ್ ಮಟ್ಟಗಳು ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಹಾಳುಮಾಡುತ್ತದೆ ಮತ್ತು ಅವರನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವಂತೆ ಮಾಡುತ್ತದೆ. 

ಇದನ್ನೂ ಓದಿ- Crorepati Formula: ನಿತ್ಯ ಒಂದು ಕಪ್ ಕಾಫಿ ಸೇವಿಸುವುದನ್ನು ಬಿಟ್ಟರೆ ನೀವೂ ಕೋಟ್ಯಾಧಿಪತಿಯಾಗಬಹುದು

ಆರೋಗ್ಯ ತಜ್ಞರ ಪ್ರಕಾರ, ನಿಮ್ಮ ಕಾರ್ಟಿಸೋಲ್ ಮಟ್ಟಗಳು ಕಡಿಮೆಯಾದಾಗ ಕಾಫಿ ಕುಡಿಯಲು ಉತ್ತಮ ಸಮಯ ಮಧ್ಯದಿಂದ ತಡರಾತ್ರಿಯವರೆಗೆ. ನೀವು 12 ಗಂಟೆಯಿಂದ 1 ಗಂಟೆಯವರೆಗೆ ಕಾಫಿ ಕುಡಿದರೆ, ಈ ಸಮಯದಲ್ಲಿ ದೇಹದಲ್ಲಿ ಕಾರ್ಟಿಸೋಲ್ ಮಟ್ಟ ಅಧಿಕವಾಗಿರುತ್ತದೆ. ಈ ಸಮಯದಲ್ಲಿ ಕಾಫಿ ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ (Drinking coffee at this time can have a bad effect on health) ಬೀರುತ್ತದೆ ಎಂದು ಹೇಳುತ್ತಾರೆ.

ನೀವು ಕೂಡ ಆಹಾರದೊಂದಿಗೆ ಅಥವಾ ಊಟ, ತಿಂಡಿ ಸೇವಿಸಿದ ತಕ್ಷಣ ಕಾಫಿ ಕುಡಿಯುವ (Drink coffee with food) ಅಭ್ಯಾಸ ಹೊಂದಿದ್ದರೆ, ಕೂಡಲೇ ನಿಮ್ಮ ಈ ಅಭ್ಯಾಸವನ್ನು ಬಿಟ್ಟು ಬಿಡಿ.  ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು. ನಿಮ್ಮ ಈ ಅಭ್ಯಾಸವು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ.

ಆಹಾರ ಸೇವನೆ ಮತ್ತು ಕಾಫಿ ಕುಡಿಯುವುದರ ನಡುವೆ ಕನಿಷ್ಠ ಒಂದು ಗಂಟೆ ಆದರೂ ಅಂತರ ಇರಬೇಕು. ನೀವು ರಕ್ತಹೀನತೆ (Anemic) ಸಮಸ್ಯೆ ಹೊಂದಿದ್ದರೆ ಈ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಮತ್ತೊಂದೆಡೆ, ನೀವು ರಾತ್ರಿ ವೇಳೆ ಕಾಫಿ ಕುಡಿಯುವ ಅಭ್ಯಾಸ ಹೊಂದಿದ್ದರೆ ಇದರಿಂದ ನಿಮ್ಮ ನಿದ್ರೆಗೆ ಭಂಗವಾಗಬಹುದು ಎಂದೂ ಕೂಡ ಹೇಳಲಾಗುತ್ತದೆ.

ಇದನ್ನೂ ಓದಿ- ಪ್ರತಿದಿನ 1 ಕಪ್ Coffee ಕುಡಿದು, ಈ ಮಾರಕ ಕಾಯಿಲೆಗಳಿಂದ ದೂರವಿರಿ

ಕಾಫಿ ಕುಡಿಯಲು ಯಾವ ಸಮಯ ಉತ್ತಮ (What time to drink coffee):
ನೀವು ಬೆಳಿಗ್ಗೆ 10 ರಿಂದ 11:30 ರವರೆಗೆ ಕಾಫಿ ಕುಡಿಯುತ್ತಿದ್ದರೆ, ಕಾಫಿ ಕುಡಿಯಲು ಇದು ಸೂಕ್ತ ಮತ್ತು ಸುರಕ್ಷಿತ ಸಮಯ ಎಂದು ವೈದ್ಯರು ಸೂಚಿಸಿದ್ದಾರೆ. ಈ ಸಮಯದಲ್ಲಿ ಕಾರ್ಟಿಸೋಲ್ ಮಟ್ಟ ಕಡಿಮೆಯಿರುವುದರಿಂದ ಈ ಸಮಯವು ಕಾಫಿ ಸೇವನೆಗೆ ಅತ್ಯುತ್ತಮ ಸಮಯವಾಗಿದೆ. ಮಧ್ಯಾಹ್ನ 1 ಗಂಟೆಯ ನಂತರ, ದೇಹದಲ್ಲಿ ಕಾರ್ಟಿಸೋಲ್ ಮಟ್ಟವು ಕಡಿಮೆಯಾಗಲು ಆರಂಭವಾಗುತ್ತದೆ ಎಂದು ಹೇಳಲಾಗುತ್ತದೆ.

ಆದಾಗ್ಯೂ, ದೇಹಕ್ಕೆ ಹಾನಿಯಾಗದಂತೆ ಮತ್ತು ನಿಮ್ಮನ್ನು ಶಕ್ತಿಯುತವಾಗಿರಿಸಿಕೊಳ್ಳುವ ಮೂಲಕ ನೀವು ಯಾವುದೇ ಸಮಯದಲ್ಲಿ ಕಾಫಿ ಕುಡಿಯಬಹುದು. 

ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಕೆಲವು ಅಧ್ಯಯನ ಮತ್ತು ವೈದ್ಯರ ಅಭಿಪ್ರಾಯಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಪುಷ್ಟೀಕರಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News