Egg White: ನಿಮಗೂ ಈ ರೀತಿ ಮೊಟ್ಟೆ ತಿನ್ನುವ ಅಭ್ಯಾಸವಿದೆಯೇ? ಇದರಿಂದ ನಿಮಗಾಗುವ ನಷ್ಟವೇನು ಗೊತ್ತೇ?

Egg White: ಅನೇಕ ಅಧ್ಯಯನಗಳ ಪ್ರಕಾರ, ಮೊಟ್ಟೆಗಳನ್ನು ತಿನ್ನುವುದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಕಣ್ಣುಗಳನ್ನು ಸುರಕ್ಷಿತವಾಗಿರಿಸುವುದಲ್ಲದೆ, ಇದು ಚರ್ಮ ಮತ್ತು ಕೂದಲಿಗೆ ಸಹ ಪ್ರಯೋಜನಕಾರಿ. 

Written by - Yashaswini V | Last Updated : Sep 2, 2021, 08:20 AM IST
  • ಮೊಟ್ಟೆಗಳು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ
  • ಅವುಗಳಲ್ಲಿ ವಿಟಮಿನ್ ಡಿ ಮತ್ತು ಬಿ 12 ಸಮೃದ್ಧವಾಗಿವೆ
  • ಮೊಟ್ಟೆ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ
Egg White: ನಿಮಗೂ ಈ ರೀತಿ ಮೊಟ್ಟೆ ತಿನ್ನುವ ಅಭ್ಯಾಸವಿದೆಯೇ? ಇದರಿಂದ ನಿಮಗಾಗುವ ನಷ್ಟವೇನು ಗೊತ್ತೇ? title=
Benefits Of Egg

ಬೆಂಗಳೂರು: ಹೆಚ್ಚಿನ ಜನರು ಬೆಳಗಿನ ಉಪಾಹಾರದಲ್ಲಿ ಮೊಟ್ಟೆ ಅಥವಾ ಅದರಿಂದ ತಯಾರಿಸಿದ ಆಹಾರವನ್ನು ಮಾತ್ರ ತಿನ್ನಲು ಇಷ್ಟಪಡುತ್ತಾರೆ, ಆದರೆ ಕೆಲವೊಮ್ಮೆ ನೀವು ಮೊಟ್ಟೆಯ ಹಳದಿ ಲೋಳೆಯನ್ನು (Egg Yolk) ಬಿಟ್ಟು ಕೇವಲ ಬಿಳಿ ಭಾಗವನ್ನು ಮಾತ್ರ ತಿನ್ನುತ್ತೀರಿ. ಹೆಚ್ಚುವರಿ ಕೊಬ್ಬನ್ನು ತಪ್ಪಿಸಲು ನೀವು ಇದನ್ನು ಮಾಡುತ್ತೀರಿ, ಆದರೆ ಅದು ನಿಮಗೆ ಹಾನಿ ಮಾಡುವುದಿಲ್ಲ. ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ತಿನ್ನುವುದರಿಂದ, ನೀವು ಆರೋಗ್ಯಕರ ಕೊಬ್ಬುಗಳು ಮತ್ತು ಎ, ಡಿ, ಇ, ಕೆ,  ಬಿ  ಸೇರಿದಂತೆ 6 ವಿವಿಧ ರೀತಿಯ ವಿಟಮಿನ್ ಗಳ ಲಾಭವನ್ನು ಪಡೆಯುವುದಿಲ್ಲ ಎಂದು ನಿಮಗೆ ತಿಳಿದಿದೆಯೇ?

ಪೌಷ್ಠಿಕಾಂಶದ ಕೊರತೆ:
ಇದರ ಹೊರತಾಗಿ, ಮೊಟ್ಟೆಯ ಹಳದಿ  (Egg Yolk) ಭಾಗವಾದ ಮೊಟ್ಟೆಯ ಹಳದಿ ಲೋಳೆಗಳಲ್ಲಿ ಕೋಲೀನ್ (Choline) ಎಂಬ ಪೋಷಕಾಂಶವಿದೆ. ಇದು ಕೋಳಿ, ಮೀನು, ಆಲೂಗಡ್ಡೆ ಮತ್ತು ಅಕ್ಕಿಯಂತಹ ವಸ್ತುಗಳಲ್ಲಿಯೂ ಕಂಡುಬರುತ್ತದೆ. ಸಂಪೂರ್ಣವಾಗಿ ಬೇಯಿಸಿದ ಮೊಟ್ಟೆ ಪೋಷಕಾಂಶಗಳ ಪ್ರಮುಖ ಮೂಲವಾಗಿದೆ. ಮೊಟ್ಟೆಯ ಹಳದಿ ಲೋಳೆಯಲ್ಲಿ ಕಬ್ಬಿಣ ಮತ್ತು ಸತುವು ಕೂಡ ಸಮೃದ್ಧವಾಗಿದೆ.

ಇದನ್ನೂ ಓದಿ- Food Avoid With Egg: ಮೊಟ್ಟೆ ಜೊತೆಗೆ ಈ ಆಹಾರಗಳನ್ನು ಎಂದಿಗೂ ಸೇವಿಸಬೇಡಿ

ಪ್ರತಿರಕ್ಷಣಾ ವ್ಯವಸ್ಥೆಗಾಗಿ:
ಮೊಟ್ಟೆಗಳು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಅವುಗಳು ಉತ್ಕರ್ಷಣ ನಿರೋಧಕಗಳು, ಅಗತ್ಯ ಖನಿಜಗಳು, ಅಮೈನೋ ಆಮ್ಲಗಳು, ವಿಟಮಿನ್ ಡಿ (Vitamin D) ಮತ್ತು ಬಿ 12 ನಲ್ಲಿ ಸಮೃದ್ಧವಾಗಿವೆ. 

ಅನೇಕ ಅಧ್ಯಯನಗಳ ಪ್ರಕಾರ, ಮೊಟ್ಟೆಗಳನ್ನು ತಿನ್ನುವುದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಕಣ್ಣುಗಳನ್ನು ಸುರಕ್ಷಿತವಾಗಿರಿಸುವುದಲ್ಲದೆ, ಇದು ಚರ್ಮ ಮತ್ತು ಕೂದಲಿಗೆ ಸಹ ಪ್ರಯೋಜನಕಾರಿ ಆಗಿದೆ. 

ಇದನ್ನೂ ಓದಿ- ಮೊಟ್ಟೆಯ ಜೊತೆ ಎಂದಿಗೂ ಈ ವಸ್ತುಗಳನ್ನು ಸೇವಿಸಬಾರದು

ಆಹಾರದ ಕೊಲೆಸ್ಟ್ರಾಲ್ ಅಂಶ :
ಹೆಚ್ಚಿನ ಜನರ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರುತ್ತದೆ. ಹಾಗಾಗಿ ಅವರು ಮೊಟ್ಟೆಯ ಹಳದಿ ಭಾಗವನ್ನು ತಿನ್ನುವುದನ್ನು ತಪ್ಪಿಸುತ್ತಾರೆ. ಏಕೆಂದರೆ ಅವುಗಳು ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತವೆ. ಒಂದು ಮೊಟ್ಟೆಯಲ್ಲಿ 187 ಮಿಲಿಗ್ರಾಂ ಕೊಲೆಸ್ಟ್ರಾಲ್ ಇರುತ್ತದೆ. ಆದರೆ ಇತ್ತೀಚಿನ ಅಧ್ಯಯನಗಳು ಆಹಾರದ ಕೊಲೆಸ್ಟ್ರಾಲ್ ಮತ್ತು ರಕ್ತ ಕೊಲೆಸ್ಟ್ರಾಲ್ ನಡುವಿನ ಯಾವುದೇ ಸಂಬಂಧವನ್ನು ಬಹಿರಂಗಪಡಿಸಿಲ್ಲ. 

ಮತ್ತೊಂದೆಡೆ, ಪೌಷ್ಟಿಕತಜ್ಞರ ಪ್ರಕಾರ, ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗಿರುವ ಆಹಾರ ಪದಾರ್ಥಗಳಾದ ಐಸ್ ಕ್ರೀಮ್, ಕೆಂಪು ಮಾಂಸ ಮತ್ತು ಪೇಸ್ಟ್ರಿಗಳು ನಿಮ್ಮ ರಕ್ತದ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತವೆ. ನೀವು ಇವುಗಳ ಬಗ್ಗೆ ಚಿಂತಿಸಬೇಕೇ ಹೊರತು ಮೊಟ್ಟೆಯ ಹಳದಿ ಭಾಗದ ಬಗ್ಗೆ ಅಲ್ಲ ಎಂದು ಸಲಹೆ ನೀಡುತ್ತಾರೆ.

(ಹಕ್ಕುತ್ಯಾಗ: ಇಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ಜೀ ಹಿಂದೂಸ್ಥಾನ್ ಕನ್ನಡ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News