ಜೀವನದಲ್ಲಿ ಈ ಜನರಿಗೆ ತೊಂದರೆ ಕೊಟ್ಟರೆ ಕಷ್ಟಗಳ ಪರ್ವತವೇ ಮೇಲೆರಗಬಹುದು.! ಮುನಿಸಿಕೊಳ್ಳಲಿದ್ದಾಳೆ ಲಕ್ಷ್ಮೀ

ಮಹಾನ್ ಅರ್ಥಶಾಸ್ತ್ರಜ್ಞ ಆಚಾರ್ಯ ಚಾಣಕ್ಯರು ಚಾಣಕ್ಯ ನೀತಿಯಲ್ಲಿ  ಅಂತಹ ಕೆಲವು ತಪ್ಪುಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ತಪ್ಪುಗಳನ್ನು ಮಾಡುವುದರಿಂದ ಲಕ್ಷ್ಮೀ ದೇವಿ  ಕೋಪಗೊಳ್ಳುತ್ತಾಳೆ. 

Written by - Ranjitha R K | Last Updated : Mar 29, 2022, 11:51 AM IST
  • ಈ ಜನರನ್ನು ಎಂದಿಗೂ ನೋಯಿಸುವುದು ಸರಿಯಲ್ಲ
  • ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ
  • ಎದುರಿಸಬೇಕಾಗುತ್ತದೆ ದಟ್ಟ ದಾರಿದ್ರ್ಯ
ಜೀವನದಲ್ಲಿ ಈ ಜನರಿಗೆ ತೊಂದರೆ ಕೊಟ್ಟರೆ  ಕಷ್ಟಗಳ ಪರ್ವತವೇ  ಮೇಲೆರಗಬಹುದು.! ಮುನಿಸಿಕೊಳ್ಳಲಿದ್ದಾಳೆ ಲಕ್ಷ್ಮೀ   title=
ಈ ಜನರನ್ನು ಎಂದಿಗೂ ನೋಯಿಸುವುದು ಸರಿಯಲ್ಲ (file photo)

ಬೆಂಗಳೂರು : ಶ್ರೀಮಂತನಾಗುವುದು ಎಷ್ಟು ಕಷ್ಟವೋ, ಶ್ರೀಮಂತಿಕೆಯನ್ನು ಉಳಿಸಿಕೊಳ್ಳುವುದು ಕೂಡಾ ಅಷ್ಟೇ ಕಷ್ಟ. ಕೆಲವೊಮ್ಮೆ ಒಂದು ಸಣ್ಣ ತಪ್ಪು ಕೂಡ ಶ್ರೀಮಂತ ವ್ಯಕ್ತಿಯನ್ನು ಕಡು ಬಡವನನ್ನಾಗಿ ಮಾಡಿ ಬಿಡಬಹುದು.  ಮಹಾನ್ ಅರ್ಥಶಾಸ್ತ್ರಜ್ಞ ಆಚಾರ್ಯ ಚಾಣಕ್ಯರು ಚಾಣಕ್ಯ ನೀತಿಯಲ್ಲಿ (Chanakya Niti) ಅಂತಹ ಕೆಲವು ತಪ್ಪುಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ತಪ್ಪುಗಳನ್ನು ಮಾಡುವುದರಿಂದ ಲಕ್ಷ್ಮೀ ದೇವಿ (Godess lakshmi) ಕೋಪಗೊಳ್ಳುತ್ತಾಳೆ. 

ಈ ತಪ್ಪುಗಳಿಂದ  ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ : 
ಕೆಲವರಿಗೆ ಕಿರುಕುಳ ನೀಡುವುದರಿಂದ  ಲಕ್ಷ್ಮೀ ದೇವಿ (Godess Lakshmi) ಕೋಪಗೊಳ್ಳುತ್ತಾಳೆ  ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಶ್ರೀಮಂತರು  ಎನ್ನುವ ಕಾರಣಕ್ಕೆ ನಿಮ್ಮನ್ನು ನೀವು ಶಕ್ತಿವಂತರು ಎಂದು ಪರಿಗಣಿಸಿ ಈ ಕೆಳಗಿನ ಜನರಿಗೆ ಕಿರುಕುಳ ನೀಡಿದರೆ ಅದು ಬಹಳ ತಪ್ಪಾಗುತ್ತದೆ (Chanakya Niti). ಈ ತಪ್ಪಿನ ಪರಿಣಾಮವನ್ನು ಜೀವನ ಪರ್ಯಂತ ಎದುರಿಸಬೇಕಾಗುತ್ತದೆ. 

ಇದನ್ನೂ ಓದಿ : ಪ್ರತಿಯೊಬ್ಬರನ್ನೂ ತನ್ನತ್ತ ಆಕರ್ಷಿಸಿ ಬಿಡುತ್ತಾರೆ ಈ ಮೂರು ರಾಶಿಯವರು ..!

ನಿಮ್ಮನ್ನು ನೀವು ಶಕ್ತಿಶಾಲಿ ಎಂದು ಪರಿಗಣಿಸಿ, ಮಹಿಳೆಗೆ ಕಿರುಕುಳ ನೀಡುವ, ಹಿಂಸಿಸುವ ತಪ್ಪನ್ನು ಎಂದಿಗೂ ಮಾಡಬೇಡಿ ಎನ್ನುತ್ತದೆ ಚಾಣಾಕ್ಯ ನೀತಿ (Chanakya Niti for Success). ಹೀಗೆ ಮಾಡುವುದರಿಂದ ಜೀವನಪೂರ್ತಿ ಕಡು ಬಡತನದಲ್ಲಿ ಜೀನವ ಸವೆಸಬೇಕಾಗಬಹುದು. ಮಹಿಳೆಯರನ್ನು ಅವಮಾನಿಸುವುದು, ಕಿರುಕುಳ ನೀಡುವುದು  ಮಾಡಿದರೆ ಲಕ್ಷ್ಮೀ ದೇವಿಯ ಕೋಪಕ್ಕೆ ಕಾರಣವಾಗುತ್ತದೆ.  

ಬಡ ಅಥವಾ ಅಸಹಾಯಕ ವ್ಯಕ್ತಿಗೆ ಕಿರುಕುಳ ನೀಡುವುದರಿಂದ ನಿಮ್ಮ ಖ್ಯಾತಿ ಮತ್ತು ಹಣ ಎರಡಕ್ಕೂ ಹಾನಿಯಾಗುತ್ತದೆ (Chanakya Niti for life) . ಬಡವರಿಗೆ ಕಿರುಕುಳ ನೀಡುವ ತಪ್ಪನ್ನು ಎಂದಿಗೂ ಮಾಡಬೇಡಿ. ಹಾಗೆ ಮಾಡುವುದರಿಂದ ಸಮಸ್ಯೆಗಳ ಪರ್ವತವೇ ನಿಮ್ಮ ಮೇಲೆರಗಬಹುದು. 

ಇದನ್ನೂ ಓದಿ : ಏಪ್ರಿಲ್ ನಲ್ಲಿ ಈ ರಾಶಿಯವರ ಮೇಲೆ ಬೀಳಲಿದೆ ಶನಿಯ ವಕ್ರ ದೃಷ್ಟಿ

ಮಕ್ಕಳನ್ನು ದೇವರ ರೂಪ ಎಂದು ಪರಿಗಣಿಸಲಾಗುತ್ತದೆ. ಮಗುವನ್ನು ಹಿಂಸಿಸುವುದು, ಕೂಡಾ ತಪ್ಪು.  ಹಾಗಾಗಿ ಮುಗ್ಧ ಮಕ್ಕಳೊಂದಿಗೆ ಎಂದಿಗೂ ತಪ್ಪು ಅಥವಾ ಅನುಚಿತ ವರ್ತನೆಯನ್ನು ಮಾಡಬೇಡಿ. 

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News