ನವರಾತ್ರಿಯ ವೇಳೆ ನೀವೂ ಉಪವಾಸ ಮಾಡುತ್ತೀರಾ? ಕಲ್ಲು ಉಪ್ಪಿಗೆ ಸಂಬಂಧಿಸಿದ ಈ ಸತ್ಯ ತಿಳಿಯಿರಿ

ನವರಾತ್ರಿಯು ಏಪ್ರಿಲ್ 2ರಿಂದ ಪ್ರಾರಂಭವಾಗುತ್ತಿದೆ. ಇಂತಹ ಸಂದರ್ಭದಲ್ಲಿ ವ್ರತದ ಸಮಯದಲ್ಲಿ ಭಕ್ತರೆಲ್ಲರೂ ಹಣ್ಣುಗಳನ್ನು ತಿನ್ನುವುದನ್ನು ಮತ್ತು ಆಹಾರದಲ್ಲಿ ಕಲ್ಲು ಉಪ್ಪನ್ನು ಬಳಸುವುದನ್ನು ನೀವು ನೋಡಿರಬೇಕು. ನವರಾತ್ರಿ ಉಪವಾಸದಲ್ಲಿ ಕಲ್ಲು ಉಪ್ಪನ್ನು ಏಕೆ ಬಳಸುತ್ತಾರೆ ಎಂಬುದನ್ನು ತಿಳಿದುಕೊಳ್ಳಿರಿ.

Written by - Puttaraj K Alur | Last Updated : Mar 28, 2022, 09:46 PM IST
  • ನವರಾತ್ರಿಯ ಉಪವಾಸದಲ್ಲಿ ಕಲ್ಲು ಉಪ್ಪನ್ನು ಏಕೆ ಬಳಸುತ್ತಾರೆ ಗೊತ್ತಾ?
  • ಜೀರ್ಣಕ್ರಿಯೆಯನ್ನು ಸುಧಾರಿಸಲು ಕಲ್ಲು ಉಪ್ಪನ್ನು ಬಳಸಲಾಗುತ್ತದೆ
  • ಕಲ್ಲು ಉಪ್ಪನ್ನು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ
ನವರಾತ್ರಿಯ ವೇಳೆ ನೀವೂ ಉಪವಾಸ ಮಾಡುತ್ತೀರಾ? ಕಲ್ಲು ಉಪ್ಪಿಗೆ ಸಂಬಂಧಿಸಿದ ಈ ಸತ್ಯ ತಿಳಿಯಿರಿ title=
ಕಲ್ಲು ಉಪ್ಪಿನ ಆರೋಗ್ಯಕಾರಿ ಪ್ರಯೋಜನಗಳು

ನವದೆಹಲಿ: ನವರಾತ್ರಿಯ ವೇಳೆ ಉಪವಾಸದಲ್ಲಿ ಕಲ್ಲು ಉಪ್ಪನ್ನು(Rock Salt In Navratri Fast) ಏಕೆ ಬಳಸುತ್ತಾರೆ ಗೊತ್ತಾ? ವಾಸ್ತವವಾಗಿ ನವರಾತ್ರಿಯು ಏಪ್ರಿಲ್ 2 ರಿಂದ ಪ್ರಾರಂಭವಾಗುತ್ತಿದೆ. ಇಂತಹ ಸಂದರ್ಭದಲ್ಲಿ ವ್ರತದ ಸಮಯದಲ್ಲಿ ಭಕ್ತರೆಲ್ಲರೂ ಹಣ್ಣುಗಳನ್ನು ತಿನ್ನುವುದನ್ನು ಮತ್ತು ಆಹಾರದಲ್ಲಿ ಕಲ್ಲು ಉಪ್ಪನ್ನು ಬಳಸುವುದನ್ನು ನೀವು ನೋಡಿರಬೇಕು. ಕಲ್ಲು ಉಪ್ಪು ತುಂಬಾ ಶುದ್ಧವಾಗಿದೆ ಎಂದು ನಂಬಲಾಗಿದೆ. ಇದರ ಹೊರತಾಗಿ ಈ ಉಪ್ಪನ್ನು ತಯಾರಿಸುವಾಗ ಯಾವುದೇ ರೀತಿಯ ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸುವುದಿಲ್ಲ. ಉಪವಾಸದ(Navratri Fast)ಲ್ಲಿ ಕಲ್ಲು ಉಪ್ಪನ್ನು ಬಳಸುವುದಕ್ಕೆ ಇದೇ ಮುಖ್ಯ ಕಾರಣ.

ಇದನ್ನೂ ಓದಿ: ಡಯಾಬಿಟೀಸ್ ರೋಗಿಗಳು ಕಬ್ಬಿನ ಹಾಲು ಸೇವಿಸಬಹುದೇ ? ಏನೆನ್ನುತ್ತಾರೆ ತಜ್ಞರು

ಕಲ್ಲು ಉಪ್ಪು ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಯನ್ನು ಸುಧಾರಿಸಲು ಕಲ್ಲು ಉಪ್ಪ(Rock Salt)ನ್ನು ಸಹ ಬಳಸಲಾಗುತ್ತದೆ. ನಿಮಗೆ ವಾಂತಿಯ ಸಮಸ್ಯೆ ಇದ್ದರೆ, ಕಲ್ಲು ಉಪ್ಪಿನೊಂದಿಗೆ ನಿಂಬೆ ರಸವನ್ನು ಬೆರೆಸಿ ಕುಡಿಯಬೇಕು. ಇದರಿಂದ ನೀವು ತಕ್ಷಣವೇ ಸಮಸ್ಯೆಯಿಂದ ಮುಕ್ತಿ ಪಡೆಯುತ್ತಿರಿ.

ಕಣ್ಣುಗಳಿಗೆ ಪ್ರಯೋಜನಕಾರಿ

ಕಲ್ಲು ಉಪ್ಪನ್ನು(Rock Salt) ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಲ್ಲಿನ ಉಪ್ಪು ದೃಷ್ಟಿ ಕಡಿಮೆಯಾಗದಂತೆ ರಕ್ಷಿಸಲು ಸಹ ಉಪಯುಕ್ತವಾಗಿದೆ.

ರಕ್ತದೊತ್ತಡ ಸಾಮಾನ್ಯವಾಗಿರುತ್ತದೆ

ನೀವು ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರೆ, ಕಲ್ಲು ಉಪ್ಪು(Use Of Rock Salt) ನಿಮಗೆ ಉಪಯುಕ್ತವಾಗಿದೆ. ಕಲ್ಲಿನ ಉಪ್ಪಿನೊಳಗೆ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಂ ಹೇರಳವಾಗಿ ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬೇಗನೆ ಸುಸ್ತಾಗುವ ಜನರು ಕಲ್ಲು ಉಪ್ಪನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಯಲ್ಲಿಡಬಹುದು.

ಇದನ್ನೂ ಓದಿ: ದಿನ ನಿತ್ಯ ಈ ಎಲೆಯನ್ನು ತಿಂದರೆ ಕೇವಲ 8 ದಿನಗಳಲ್ಲಿ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ಕಡ್ಡಾಯವಾಗಿ ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. Zee Kannada News ಇದನ್ನು ದೃಢಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News