ನವದೆಹಲಿ: ನಿಮಗೂ ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿಯುವ ಅಭ್ಯಾಸವಿದೆಯೇ(Drinking Water Before Brushing)..? ದೇಹವನ್ನು ಹೈಡ್ರೀಕರಿಸಿದಂತೆ ಮತ್ತು ರೋಗಗಳಿಂದ ರಕ್ಷಿಸಲು ನಾವು ಪ್ರತಿದಿನ ನೀರನ್ನು ಕುಡಿಯಬೇಕು. ಪ್ರತಿದಿನ 8 ರಿಂದ 10 ಗ್ಲಾಸ್ ನೀರು ಸೇವಿಸಬೇಕು ಎಂದು ತಜ್ಞರು ನೀಡುವ ಸಲಹೆಯಾಗಿದೆ. ಇದರೊಂದಿಗೆ ಬೆಳಿಗ್ಗೆ ಹಲ್ಲುಜ್ಜುವ ಮೊದಲು ನೀರು ಕುಡಿಯುವುದು ಪ್ರಯೋಜನಕಾರಿ ಎಂದು ಹೆಚ್ಚಿನ ಜನರ ನಂಬಿಕೆಯಾಗಿದೆ. ಹಾಗಾದರೆ ಇದರ ಹಿಂದಿನ ಸತ್ಯ ಏನು ಎಂದು ತಿಳಿಯೋಣ. ಬ್ರಷ್ ಇಲ್ಲದೆ ನೀರು ನಮ್ಮ ಆರೋಗ್ಯಕ್ಕೆ ನಿಜವಾಗಿಯೂ ಪ್ರಯೋಜನಕಾರಿಯೇ?
ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ
ಹಲ್ಲುಜ್ಜುವ ಮೊದಲು ನೀರನ್ನು ಕುಡಿದರೆ(Drinking Water)ನಿಮ್ಮ ಜೀರ್ಣಕಾರಿ ಶಕ್ತಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಅದೇನೆಂದರೆ ಈ ಸಮಯದಲ್ಲಿ ಏನು ತಿಂದರೂ ಅದು ಸುಲಭವಾಗಿ ಜೀರ್ಣವಾಗುತ್ತದೆ.
ಮಲಗುವಾಗ ಬಾಯಾರಿಕೆ ಏಕೆ ಆಗುತ್ತದೆ?
ಹೆಚ್ಚಿನ ಜನರು ರಾತ್ರಿಯಲ್ಲಿ ಬಾಯಾರಿಕೆಯನ್ನು ಅನುಭವಿಸುತ್ತಾರೆ. ರಾತ್ರಿ ವೇಳೆ ನೀರು(Drinking Water Before Bed)ಕುಡಿಯಲು ಅನೇಕರು ಎಚ್ಚರಗೊಳ್ಳುತ್ತಾರೆ. ವಾಸ್ತವವಾಗಿ ನೀವು ನಿದ್ದೆ ಮಾಡುವಾಗ ನಿಮ್ಮ ದೇಹವು ನೀರನ್ನು ಬಳಸುತ್ತದೆ. ಇದು ಕೆಲವೊಮ್ಮೆ ನಿಮಗೆ ರಾತ್ರಿಯಲ್ಲಿ ಬಾಯಾರಿಕೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಬೆಳಿಗ್ಗೆ ಎದ್ದು ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆಯಾಗುವುದಿಲ್ಲ.
ಇದನ್ನೂ ಓದಿ: Cholesterol: ಕೊಲೆಸ್ಟ್ರಾಲ್ ಹೆಚ್ಚಾಗುವಿಕೆ ಅಪಾಯದ ಗಂಟೆ! ಈ ವಿಷಯಗಳ ಬಗ್ಗೆ ಕಾಳಜಿ ವಹಿಸಿ
ಬಾಯಿಯಲ್ಲಿ ಬ್ಯಾಕ್ಟೀರಿಯಾ ಸಂಗ್ರಹವಾಗುವುದಿಲ್ಲ
ಹಲ್ಲುಜ್ಜುವ(Brushing Teeth) ಮೊದಲು ನೀವು ನೀರನ್ನು ಕುಡಿಯುತ್ತಿದ್ದರೆ ಬ್ಯಾಕ್ಟೀರಿಯಾಗಳು ಬಾಯಿಯಲ್ಲಿ ಸಂಗ್ರಹವಾಗುವುದಿಲ್ಲವೆಂದು ನಂಬಲಾಗಿದೆ. ಈ ಸಮಯದಲ್ಲಿ ನಿಮ್ಮ ಬಾಯಿ ರೋಗಾಣು ಮುಕ್ತವಾಗುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ
ಇದಲ್ಲದೇ ಬೆಳಗ್ಗೆ ಹಲ್ಲುಜ್ಜುವ ಮುನ್ನ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ(Immunity Booster)ಹೆಚ್ಚುತ್ತದೆ. ನಿಮಗೆ ಆಗಾಗ್ಗೆ ಶೀತ ಇದ್ದರೆ ತಪ್ಪದೇ ಬೆಳಿಗ್ಗೆ ನೀರನ್ನು ಕುಡಿಯುವುನ್ನು ರೂಢಿಸಿಕೊಳ್ಳಬೇಕು. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ತ್ವಚೆ ಮತ್ತು ಕೂದಲನ್ನು ಚೆನ್ನಾಗಿ ಇಡುತ್ತದೆ.
ಅಧಿಕ ಬಿಪಿ ಮತ್ತು ಶುಗರ್ ನಲ್ಲಿ ಪ್ರಯೋಜನಕಾರಿ
ಇದಲ್ಲದೆ ಹೆಚ್ಚಿನ ಬಿಪಿ ಮತ್ತು ಅಧಿಕ ಶುಗರ್(BP and Sugar) ಇರುವಾಗಲೂ ಬ್ರಷ್ ಮಾಡದೆ ನೀರು ಕುಡಿಯುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿದರೆ ಬೊಜ್ಜಿನ ಸಮಸ್ಯೆಯಿಂದ ಪಾರಾಗಬಹುದು. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಬೆಳಿಗ್ಗೆ ಹಲ್ಲುಜ್ಜುವ ಮೊದಲು ನೀರು ಕುಡಿಯುವ ಅಭ್ಯಾಸವು ನಿಮಗೆ ಪ್ರಯೋಜನವನ್ನು ನೀಡುತ್ತದೆ.
ಇದನ್ನೂ ಓದಿ: ಈ ಸಮಸ್ಯೆ ಇರುವವರು ಮಧ್ಯಾಹ್ನದ ಹೊತ್ತು ನಿದ್ದೆ ಮಾಡಬಾರದು, ಆರೋಗ್ಯದ ಮೇಲೆ ಬೀರಲಿದೆ ಪರಿಣಾಮ
(ವಿಶೇಷ ಸೂಚನೆ: ಈ ಲೇಖನವನ್ನು ಸಾಮಾನ್ಯ ಮಾಹಿತಿಗಾಗಿ ಮಾತ್ರ ನೀಡಲಾಗಿದೆ. ಇಲ್ಲಿನ ಸಲಹೆಗಳನ್ನು ಪಾಲಿಸುವ ಮುನ್ನ ಕಡ್ಡಾಯವಾಗಿ ವೈದ್ಯರ ಸಲಹೆ ಪಡೆದುಕೊಳ್ಳಿರಿ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.