ವೈಶಾಖ ಅಮಾವಾಸ್ಯೆ 2023: ಈ ಕೆಲಸ ಮಾಡಿದ್ರೆ 3 ದೊಡ್ಡ 'ಮಹಾದೋಷ'ಗಳಿಂದ ಮುಕ್ತಿ ಸಿಗುತ್ತದೆ!

ವೈಶಾಖ ಅಮಾವಾಸ್ಯೆ ಪರಿಹಾರಗಳು: ಪ್ರತಿ ತಿಂಗಳ ಕೃಷ್ಣ ಪಕ್ಷದ ಕೊನೆಯ ದಿನಾಂಕ ಅಮವಾಸ್ಯೆ. ಹಿಂದೂ ಧರ್ಮದಲ್ಲಿ ಅಮವಾಸ್ಯೆಗೆ ವಿಶೇಷ ಮಹತ್ವವಿದೆ. ವೈಶಾಖ ಮಾಸದ ಅಮಾವಾಸ್ಯೆಯ ದಿನವು ಏಪ್ರಿಲ್ 20ರ ಗುರುವಾರ ನಡೆಯಲಿದೆ. ಈ ದಿನ ತೆಗೆದುಕೊಳ್ಳುವ ಕೆಲವು ಕ್ರಮಗಳು ವ್ಯಕ್ತಿಯನ್ನು ದೋಷಗಳಿಂದ ಮುಕ್ತಗೊಳಿಸುತ್ತವೆ!

Written by - Puttaraj K Alur | Last Updated : Apr 15, 2023, 04:32 PM IST
  • ಹಿಂದೂ ಧರ್ಮದಲ್ಲಿ ಅಮವಾಸ್ಯೆಯ ವಿಶೇಷ ಮಹತ್ವವನ್ನು ಹೇಳಲಾಗಿದೆ
  • ವೈಶಾಖ ಮಾಸದ ಅಮಾವಾಸ್ಯೆಯು ಏಪ್ರಿಲ್ 20ರಂದು ಬರುತ್ತದೆ
  • ಈ ದಿನ ಸ್ನಾನ ಮತ್ತು ದಾನದ ವಿಶೇಷ ಮಹತ್ವದ ಬಗ್ಗೆ ಹೇಳಲಾಗಿದೆ
ವೈಶಾಖ ಅಮಾವಾಸ್ಯೆ 2023: ಈ ಕೆಲಸ ಮಾಡಿದ್ರೆ 3 ದೊಡ್ಡ 'ಮಹಾದೋಷ'ಗಳಿಂದ ಮುಕ್ತಿ ಸಿಗುತ್ತದೆ! title=
ವೈಶಾಖ ಮಾಸದ ಅಮಾವಾಸ್ಯೆ

ನವದೆಹಲಿ: ಹಿಂದೂ ಧರ್ಮದಲ್ಲಿ ಅಮವಾಸ್ಯೆಯ ವಿಶೇಷ ಮಹತ್ವವನ್ನು ಹೇಳಲಾಗಿದೆ. ವೈಶಾಖ ಮಾಸದ ಅಮಾವಾಸ್ಯೆಯು ಏಪ್ರಿಲ್ 20ರಂದು ಬರುತ್ತದೆ. ಈ ದಿನ ಸ್ನಾನ ಮತ್ತು ದಾನದ ವಿಶೇಷ ಮಹತ್ವದ ಬಗ್ಗೆ ಹೇಳಲಾಗಿದೆ. ಅಮವಾಸ್ಯೆಯ ದಿನ ಮಾಡುವ ಕೆಲವು ಜ್ಯೋತಿಷ್ಯ ಪರಿಹಾರಗಳು ವ್ಯಕ್ತಿಯನ್ನು 3 ಪ್ರಮುಖ ದೋಷಗಳಿಂದ ಮುಕ್ತಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಈ ಬಾರಿ ವೈಶಾಖ ಅಮಾವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಇಂದು ನಾವು ವೈಶಾಖ ಅಮವಾಸ್ಯೆಯ ಆ 3 ಕ್ರಮಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ವ್ಯಕ್ತಿಯನ್ನು ಕೆಲವು ದೋಷಗಳಿಂದ ಮುಕ್ತಗೊಳಿಸುತ್ತದೆ. ವ್ಯಕ್ತಿಯ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ. ವೈಶಾಖ ಅಮಾವಾಸ್ಯೆಯ ಬಗ್ಗೆ ತಿಳಿಯಿರಿ.

ವೈಶಾಖ ಅಮಾವಾಸ್ಯೆ ದಿನಾಂಕ  

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೈಶಾಖ ಅಮಾವಾಸ್ಯೆಯ ದಿನಾಂಕವು ಏಪ್ರಿಲ್ 19ರಂದು ಬೆಳಗ್ಗೆ 11.23ರಿಂದ ಏಪ್ರಿಲ್ 20ರ ಬೆಳಗ್ಗೆ 9.41ರವರೆಗೆ ಇರುತ್ತದೆ. 20ರಂದು ಸೂರ್ಯೋದಯದ ವೇಳೆ ವೈಶಾಖ ಅಮವಾಸ್ಯೆ ನಡೆಯಲಿದೆ.

ವೈಶಾಖ ಅಮವಾಸ್ಯೆಯಂದು ಈ ಕ್ರಮ ಮಾಡಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಕ್ಷಿಣ ಭಾರತದಲ್ಲಿ ವೈಶಾಖ ಅಮವಾಸ್ಯೆಯಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಶನಿದೇವನ ಜನ್ಮದಿನ. ಈ ದಿನ ಮಾಡುವ ಕೆಲವು ವಿಶೇಷ ಕ್ರಮಗಳು ಸಾಡೇ ಸಾತಿ, ಧೈಯಾ ಮತ್ತು ಶನಿ ದೋಷಗಳನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Shani Dosh: ಶನಿಯ ಸಾಡೆಸಾತಿಯಿಂದ ಮುಕ್ತಿ ಪಡೆಯಬೇಕೇ? ಈ ಉಪಾಯ ಟ್ರೈಮಾಡಿ ನೋಡಿ!

ಶನಿ ಸಾಡೇ ಸಾತಿ, ಧೈಯಾ ಇತ್ಯಾದಿಗಳು ವ್ಯಕ್ತಿಯ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಈ ದಿನ ಶನಿದೇವನನ್ನು ಪೂಜಿಸುವುದರಿಂದ ಶನಿದೇವನ ಅನುಗ್ರಹ ದೊರೆಯುತ್ತದೆ. ಈ ದಿನ ದೇವಸ್ಥಾನಕ್ಕೆ ಹೋಗಿ ಕಪ್ಪು ಎಳ್ಳು, ಸಾಸಿವೆ ಎಣ್ಣೆ, ಕಪ್ಪು ಅಥವಾ ನೀಲಿ ಬಟ್ಟೆ ಅರ್ಪಿಸಬೇಕು. ಶನಿ ಕವಚ ಮತ್ತು ಶನಿ ಚಾಲೀಸಾವನ್ನು ಪಠಿಸಬೇಕು.

ಪಿತೃದೋಷಕ್ಕೆ ಪರಿಹಾರಗಳು

ಧರ್ಮಗ್ರಂಥಗಳಲ್ಲಿ ಪಿತೃದೋಷವನ್ನು ಜಾತಕದಲ್ಲಿ ಪ್ರಮುಖ ದೋಷವೆಂದು ಪರಿಗಣಿಸಲಾಗಿದೆ. ಇದರಿಂದ ಇಡೀ ಕುಟುಂಬ ತೊಂದರೆಗೀಡಾಗಿ, ವ್ಯಕ್ತಿಯ ಮನೆ ಪ್ರಗತಿ ಕಾಣುವುದಿಲ್ಲ. ಇದರಿಂದ ವ್ಯಕ್ತಿಯ ವಂಶವು ಮುಂದೆ ಸಾಗಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ವೈಶಾಖ ಅಮಾವಾಸ್ಯೆಯ ದಿನ ಪೂರ್ವಜರಿಗೆ ನೀರನ್ನು ಅರ್ಪಿಸಿ ಪಿಂಡದಾನ ಮಾಡಬೇಕು. ಈ ದಿನ ಪೂರ್ವಜರನ್ನು ಧ್ಯಾನಿಸುವ ಮೂಲಕ ದಾನ ಮಾಡಲಾಗುತ್ತದೆ. ಇದರಿಂದ ಪೂರ್ವಜರು ತೃಪ್ತರಾಗುತ್ತಾರೆ ಮತ್ತು ಅವರ ವಂಶಸ್ಥರನ್ನು ಆಶೀರ್ವದಿಸುತ್ತಾರೆಂದು ನಂಬಲಾಗಿದೆ. ಇದು ಪಿತೃ ದೋಷದಿಂದ ಮುಕ್ತಿ ನೀಡುತ್ತದೆ

ಕಾಲಸರ್ಪ ದೋಷ ಪರಿಹಾರ

ಜಾತಕದಲ್ಲಿ ಇತರ 7 ಗ್ರಹಗಳ ಜೊತೆಗೆ ರಾಹು-ಕೇತುಗಳ ವಿಶೇಷ ಸ್ಥಾನವು ಕಾಲಸರ್ಪ ದೋಷವನ್ನು ಸೃಷ್ಟಿಸುತ್ತದೆ. ಇದು ನಿಮ್ಮ ಕೆಲಸದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ, ಯಶಸ್ಸನ್ನು ಪಡೆಯುವುದು ಕಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವೈಶಾಖ ಅಮಾವಾಸ್ಯೆಯ ದಿನ ನೀವು ಕಾಲಸರ್ಪ ದೋಷವನ್ನು ನಿವಾರಿಸಬೇಕು.

ಇದನ್ನೂ ಓದಿ: Money remedies: ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಹಾಗಿದ್ರೆ ಈಗಲೇ ಈ ಕೆಲಸ ಮಾಡಿ

ವೈಶಾಖ ಅಮಾವಾಸ್ಯೆಯ ದಿನದಂದು ಸ್ನಾನದ ನಂತರ ಚಿನ್ನದ ಸರ್ಪ-ನಾಗಿಣಿಯನ್ನು ಪೂಜಿಸುವ ಆಚರಣೆ ಇದೆ. ಇದರ ನಂತರ ಅವುಗಳನ್ನು ನೀರಿನಲ್ಲಿ ಹರಿಯಲು ಬಿಡಬೇಕು. ಈ ಪರಿಹಾರ ಮಾಡುವುದರಿಂದ ಪ್ರಯೋಜನವಾಗುತ್ತದೆ. ಇದಲ್ಲದೇ ಕಾಲಸರ್ಪ ದೋಷ ಪರಿಹಾರಕ್ಕಾಗಿ ಶಿವನನ್ನು ಆರಾಧಿಸಬೇಕು. ಶಿವನ ಆರಾಧನೆಯಿಂದ ಕಾಲಸರ್ಪ ದೋಷದಿಂದ ಮುಕ್ತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ. 

ಸರ್ವಾರ್ಥ ಸಿದ್ಧಿ ಯೋಗ 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೈಶಾಖ ಅಮಾವಾಸ್ಯೆಯ ದಿನ ಮುಂಜಾನೆ 5.51ರಿಂದ ಸರ್ವಾರ್ಥ ಸಿದ್ಧಿಯೋಗ ನಿರ್ಮಾಣವಾಗುತ್ತಿದೆ. ಈ ಯೋಗದಲ್ಲಿ ಮಾಡುವ ಕೆಲಸವು ವ್ಯಕ್ತಿಯನ್ನು ಯಶಸ್ವಿಗೊಳಿಸುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ವ್ಯಕ್ತಿಯು ದೋಷಗಳಿಂದ ಸ್ವಾತಂತ್ರ್ಯವನ್ನು ಪಡೆಯುತ್ತಾನೆಂದು ಹೇಳಲಾಗಿದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News