Unlucky Plants: ಮನೆಯಲ್ಲಿ ಮರೆತೂ ಕೂಡ ಈ ಗಿಡಗಳನ್ನು ನೆಡಬೇಡಿ, ನಕಾರಾತ್ಮಕಗೆ ಕಾರಣವಾಗುತ್ತವೆ

Unlucky Plants: ವಾಸ್ತು ಶಾಸ್ತ್ರದ ಪ್ರಕಾರ, ಕೆಲ ಗಿಡ-ಸಸ್ಯಗಳು ಮನೆಯಲ್ಲಿ ನಕಾರಾತ್ಮಕತೆಗೆ ಕಾರಣವಾಗುತ್ತವೆ. ಇಂತಹ ಸಸ್ಯಗಳನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಸಂಚಾರವಾಗುತ್ತದೆ ಹಾಗೂ ಹಲವು ಸಂಕಷ್ಟಗಳಿಗೆ ಅವು ದಾರಿ ಮಾಡಿಕೊಡುತ್ತವೆ.  

Written by - Nitin Tabib | Last Updated : Dec 5, 2022, 07:34 PM IST
  • ಮರಗಳು ಮತ್ತು ಸಸ್ಯಗಳು ನಮಗೆ ಕೇವಲ ಆಮ್ಲಜನಕವನ್ನು ಮಾತ್ರ ನೀಡದೆ,
  • ಅವು ಒಂದು ರೀತಿಯ ಶಕ್ತಿಯ ಸಂಚಾರ ಕೂಡ ಮಾಡುತ್ತವೆ.
Unlucky Plants: ಮನೆಯಲ್ಲಿ ಮರೆತೂ ಕೂಡ ಈ ಗಿಡಗಳನ್ನು ನೆಡಬೇಡಿ, ನಕಾರಾತ್ಮಕಗೆ ಕಾರಣವಾಗುತ್ತವೆ title=
Unlucky Plants

Negative Plant: ಸಾಮಾನ್ಯವಾಗಿ ಗಿಡ-ಮರಗಳು ವಿಜ್ಞಾನದ ದೃಷ್ಟಿಯಿಂದ ಮಾತ್ರವಲ್ಲದೆ, ವಾಸ್ತುವಿನ ದೃಷ್ಟಿಯಿಂದಲೂ ಕೂಡ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮರಗಳು ಮತ್ತು ಸಸ್ಯಗಳು ನಮಗೆ ಕೇವಲ ಆಮ್ಲಜನಕವನ್ನು ಮಾತ್ರ ನೀಡದೆ, ಅವು ಒಂದು ರೀತಿಯ ಶಕ್ತಿಯ ಸಂಚಾರ ಕೂಡ ಮಾಡುತ್ತವೆ. ಕೆಲ ಗಿಡಗಳನ್ನು ಮನೆಯಲ್ಲಿ ನೆಟ್ಟರೆ ಅವು ಸಕಾರಾತ್ಮಕ ಶಕ್ತಿಯ ಸಂಚಾರಕ್ಕೆ ಕಾರಣವಾದರೆ, ಕೆಲ ಗಿಡಗಳು ಮನೆಯಲ್ಲಿ ವೈಷಮ್ಯ, ಆರೋಗ್ಯಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ಬಡತನಕ್ಕೆ ಕಾರಣವಾಗುತ್ತವೆ. ಒಂದು ವೇಳೆ ನೀವೂ ಕೂಡ ನೆಮ್ಮದಿಯ ಜೀವನ ನಡೆಸಬೇಕು ಎಂದಾದಲ್ಲಿ ನಿಮ್ಮ ಮನೆಯಲ್ಲಿ ಅಪ್ಪಿತಪ್ಪಿಯೂ ಕೂಡ ಇಂತಹ ಗಿಡ ಮರಗಳನ್ನು ನೆಡಬೇಡಿ.

ಆಲದ ಮರ 
ಆಲದ ಮರಕ್ಕೆ ತುಂಬಾ ಮಾನ್ಯತೆ ಇದೆ. ಇದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದೆ ಕಾರಣದಿಂದ ಅದನ್ನು ಪೂಜಿಸಲಾಗುತ್ತದೆ. ಅನೇಕ ಜನರು ಪೂಜೆಗಾಗಿ ಮನೆಯಲ್ಲಿ ಪೀಪಲ್ ಈ ಮರವನ್ನು ನೆಡುತ್ತಾರೆ, ಆದರೆ ಈ ಮರವನ್ನು ಮನೆಯಲ್ಲಿ ನೆಡುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಸಣ್ಣ ಮರಗಳು ತಾವಾಗಿಯೇ ಬಂದರೆ, ಅವುಗಳನ್ನು ತೆಗೆದುಹಾಕಬೇಕು.

ಜಾಲಿ ಗಿಡ
ಜಾಲಿ ಗಿಡ ನೆಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಈ ಮರವನ್ನು ಮನೆಯಲ್ಲಿ ನೆಡುವುದರಿಂದ ಮನೆಯಿಂದ ರೋಗಗಳು ಹೊರಹೊಗುವುದಿಲ್ಲ.. ಜಾಲಿ ಗಿಡದ ಕಾರಣ ಮನೆಯ ಜನರು ನಿತ್ಯ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ನಿಮ್ಮ ಮನೆಯ ಸಮೀಪವೂ ಕೂಡ ಒಂದು ವೇಳೆ ಜಾಲಿ ಮರವಿದ್ದರೆ, ಅದು ನಿಮ್ಮ ಮನೆಯ ಮುಖ್ಯ ಬಾಗಿಲಿನ ಮುಂದೆ ಇರಬಾರದು ಎಂಬುದನ್ನು ನೆನಪಿನಲ್ಲಿಡಿ.

ಕ್ಯಾಕ್ಟಸ್ ಗಿಡ
ವಾಸ್ತು ಶಾಸ್ತ್ರದ
ಪ್ರಕಾರ ಮನೆಯಲ್ಲಿ ಕ್ಯಾಕ್ಟಸ್ ನೆಡುವುದು ಅಶುಭ. ಈ ಸಸ್ಯವು ಮನೆಯಲ್ಲಿ ಅಪಶ್ರುತಿ ಮತ್ತು ಜಗಳಗಳಕ್ಕೆ ಕಾರಣವಾಗುತ್ತದೆ. ಕ್ಯಾಕ್ಟಸ್ ಒಂದು ಮುಳ್ಳಿನ ಸಸ್ಯವಾಗಿದೆ, ಇದು ಕುಟುಂಬದ ಮಾಧುರ್ಯಕ್ಕೆ ಧಕ್ಕೆ ತರುತ್ತದೆ. ಕ್ಯಾಕ್ಟಸ್ ನೆಡುವುದರಿಂದ ಬಡತನ ಬರುತ್ತದೆ. ಈ ಮುಳ್ಳಿನ ಸಸ್ಯವು ಸಂಬಂಧಗಳನ್ನು ಸಂಕೀರ್ಣಗೊಳಿಸುವ ಕೆಲಸ ಮಾಡುತ್ತದೆ.

ಇದನ್ನೂ ಓದಿ-Graha Rashi Parivartan 2022: ಡಿಸೆಂಬರ್ 16ಕ್ಕೆ ಒಂದೇ ರಾಶಿಯಲ್ಲಿ 3 ಗ್ರಹಗಳು, ತ್ರಿಗ್ರಹಿ ಯೋಗದಿಂದ 5 ರಾಶಿಗಳ ಜನರಿಗೆ ಬಂಪರ್ ಬೆನಿಫಿಟ್

ಹುಣಸೆ ಮರ
ಹುಣಸೆ ಮರವು ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಹುಣಸೆ ಮರವಿದ್ದರೆ ಅಶುಭವೆಂದು ಪರಿಗಣಿಸಲಾಗುತ್ತದೆ. ಇದೂ ಕೂಡ ಮುಳ್ಳಿನ ಮರಗಳ ವರ್ಗದಲ್ಲಿ ಬರುತ್ತದೆ. ಹುಣಸೆ ಮರವನ್ನು ನೆಡುವುದರಿಂದ ಮನೆಯಲ್ಲಿ ಭಿನ್ನಾಭಿಪ್ರಾಯ ಪ್ರಾರಂಭವಾಗುತ್ತದೆ. ಈ ಮರ ಬಡತನಕ್ಕೂ ಕೂಡ ಕಾರಣವಾಗುತ್ತದೆ.

ಇದನ್ನೂ ಓದಿ-Tips For Good Luck: ಅದೃಷ್ಟದ ಬೆಂಬಲ ಸಿಗುತ್ತಿಲ್ಲವೇ, ಮನೆಯಲ್ಲಿನ ಅಕ್ಕಿಯನ್ನು ಬಳಸಿ ಈ ಉಪಾಯ ಮಾಡಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News