ನವರಾತ್ರಿಯಲ್ಲಿ ತಪ್ಪಿಯೂ ಮಾಡದಿರಿ ಈ ಕೆಲಸಗಳನ್ನು , ದುರ್ಗೆಯ ಮುನಿಸಿಗೆ ಕಾರಣವಾಗಬಹುದು

ನೀವು ಮನೆಯಲ್ಲಿ ಕಲಶವನ್ನು ಸ್ಥಾಪಿಸುವುದಾದರೆ, ಅಖಂಡ ಜ್ಯೋತಿಯನ್ನು ಬೆಳಗುವುದಾದರೆ, ಮನೆಯನ್ನು ಒಂಟಿಯಾಗಿ ಬಿಡಬೇಡಿ. ಅಂದರೆ, ಮನೆಯಲ್ಲಿ ಈ 9 ದಿನಗಳಲ್ಲಿ ಯಾರಾದರೊಬ್ಬರು ಇರಲೇ ಬೇಕು.  

Written by - Ranjitha R K | Last Updated : Oct 7, 2021, 01:49 PM IST
  • ಪವಿತ್ರ ನವರಾತ್ರಿ ಹಬ್ಬ ಇಂದಿನಿಂದ ಆರಂಭವಾಗಿದೆ.
  • ನವರಾತ್ರಿ ದಿನಗಳಲ್ಲಿ ತಾಯಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಉಳಿಯುತ್ತದೆ.
  • ಕಲಶ ಸ್ಥಾಪಿಸಿದ ಮೇಲೆ ಮನೆಯನ್ನು ಒಂಟಿಯಾಗಿ ಬಿಡಬಾರದು
ನವರಾತ್ರಿಯಲ್ಲಿ ತಪ್ಪಿಯೂ ಮಾಡದಿರಿ ಈ ಕೆಲಸಗಳನ್ನು , ದುರ್ಗೆಯ ಮುನಿಸಿಗೆ ಕಾರಣವಾಗಬಹುದು title=
ಪವಿತ್ರ ನವರಾತ್ರಿ ಹಬ್ಬ ಇಂದಿನಿಂದ ಆರಂಭವಾಗಿದೆ (file photo)

ನವದೆಹಲಿ : Navratri 2021: ಪವಿತ್ರ ನವರಾತ್ರಿ ಹಬ್ಬ ಇಂದಿನಿಂದ ಆರಂಭವಾಗಿದೆ. ದೇವಿಯನ್ನು ಈ 9 ದಿನಗಳಲ್ಲಿ ಪೂಜಿಸಲಾಗುತ್ತದೆ. ತಾಯಿಯ ಕೃಪೆಗೆ ಪಾತ್ರರಾಗುವ ಉದ್ದೇಶದಿಂದ ಭಕ್ತರು ಈ ದಿನಗಳಲ್ಲಿ ಉಪವಾಸ ಆಚರಿಸುತ್ತಾರೆ.   ನವರಾತ್ರಿ (Navaratri) ದಿನಗಳಲ್ಲಿ ತಾಯಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಉಳಿಯುತ್ತದೆ. ದೇವಿಯು ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ನೆರೆವೇರಿಸುತ್ತಾಳೆ. ನವರಾತ್ರಿ ವೇಳೆ, ಮನೆಯಲ್ಲಿ ಕಲಶ ಸ್ಥಾಪಿಸಿ, ಪೂಜೆ ಸಲ್ಲಿಸಲಾಗುತ್ತದೆ. ನೀವು ಕೂಡಾ ಕಲಶ ಸ್ಥಾಪಿಸುವುದಾದರೆ, ಈ ಕೆಳಗಿನ ವಿಚಾರಗಳ ಬಗ್ಗೆ ಜಾಗೃತೆ ವಹಿಸಿ. 

ಮನೆಯನ್ನು ಒಂಟಿಯಾಗಿ ಬಿಡಬೇಡಿ :  
ನೀವು ಮನೆಯಲ್ಲಿ ಕಲಶವನ್ನು ಸ್ಥಾಪಿಸುವುದಾದರೆ, ಅಖಂಡ ಜ್ಯೋತಿಯನ್ನು (Akhanda Jyoti) ಬೆಳಗುವುದಾದರೆ, ಮನೆಯನ್ನು ಒಂಟಿಯಾಗಿ ಬಿಡಬೇಡಿ. ಅಂದರೆ, ಮನೆಯಲ್ಲಿ ಈ 9 ದಿನಗಳಲ್ಲಿ ಯಾರಾದರೊಬ್ಬರು ಇರಲೇ ಬೇಕು.  

ಇದನ್ನೂ ಓದಿ : Mysuru Dasara: ಸಾಂಸ್ಕೃತಿಕ ನಗರಿಯಲ್ಲಿ ನಾಡಹಬ್ಬಕ್ಕೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ. ಕೃಷ್ಣ

ನೈವೇದ್ಯವನ್ನು ನೀಡಲೇಬೇಕು : 
ನವರಾತ್ರಿಯ ಸಂದರ್ಭದಲ್ಲಿ ಮನೆಯಲ್ಲಿ ಕಲಶವನ್ನು ಸ್ಥಾಪಿಸಿದ್ದರೆ, ದೇವಿಯನ್ನು ಮನೆಗೆ ಆಹ್ವಾನಿಸಿದ್ದೀರಿ ಎಂದು ಅರ್ಥ.   ಹಾಗಾಗಿ, ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು, ಪೂಜೆ ಮಾಡಿ, ಆರತಿ ಮಾಡಬೇಕು. ನೈವೇದ್ಯವನ್ನು ನೀಡುವುದನ್ನು ಕೂಡಾ ಮರೆಯಬೇಡಿ. 

ಈ ಕೆಲಸಗಳನ್ನು ಮಾಡಲೇಬಾರದು : 
ನವರಾತ್ರಿಯಲ್ಲಿ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಒಂಬತ್ತು ದಿನಗಳವರೆಗೆ, ಸೂರ್ಯೋದಯಕ್ಕೂ ಮುನ್ನ, ಸ್ನಾನ ಮಾಡಿ ಮಡಿ ಬಟ್ಟೆಗಳನ್ನು ಧರಿಸಿ. ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಕಪ್ಪು ಬಟ್ಟೆಗಳನ್ನು ಧರಿಸಬೇಡಿ ಅಥವಾ ಚರ್ಮದ ವಸ್ತುಗಳನ್ನು ಕೂಡಾ ಧರಿಸಬೇಡಿ. ಕೂದಲು, ಗಡ್ಡ ಮತ್ತು ಉಗುರುಗಳನ್ನು ಒಂಬತ್ತು ದಿನಗಳವರೆಗೆ ಕತ್ತರಿಸಬಾರದು.

ಹುಡುಗಿಯರನ್ನು ನೋಯಿಸಬೇಡಿ :
ಹುಡುಗಿಯರನ್ನು ದೇವಿ (Devi) ಸ್ವರೂಪ ಎನ್ನಲಾಗುತ್ತದೆ. ನವರಾತ್ರಿಯಲ್ಲಿ ಕನ್ಯೆಯರನ್ನು ಪೂಜಿಸುವುದರಿಂದ (Kanya Pooja) ಪುಣ್ಯ ಪ್ರಾಪ್ತಿಯಾಗುತ್ತದೆ. ದೇವಿ ಪುರಾಣದಲ್ಲಿ ತಾಯಿ ಭಗವತಿ ಮಹಿಳೆಯರಿಗೆ ಪೂರ್ಣ ಗೌರವ ನೀಡುವವರ ಪೂಜೆಯನ್ನು ಸ್ವೀಕರಿಸುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಮಹಿಳೆಯರನ್ನು ಗೌರವಿಸುವವರೊಂದಿಗೆ, ತಾಯಿ ಲಕ್ಷ್ಮಿ ಕೂಡಾ ಪ್ರಸನ್ನಳಾಗಿರುತ್ತಾಳೆ. 

ಇದನ್ನೂ ಓದಿ : ಈ ಐದು ರಾಶಿಯವರ ಭಾಗ್ಯ ತೆರೆಯಲಿದೆ, ಮುಂದಿನ 11 ದಿನ ಇವರಿಗೆ ಅತ್ಯಂತ ಶುಭ

ಬೆಳ್ಳುಳ್ಳಿ ಮತ್ತು ಈರುಳ್ಳಿ ತಿನ್ನಬೇಡಿ :
ನವರಾತ್ರಿಯ ಪವಿತ್ರ ದಿನಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, (Garlic) ಮಾಂಸಾಹಾರ ಮತ್ತು ಮದ್ಯವನ್ನು ಸೇವಿಸಬಾರದು. ನಿಮ್ಮ ಆಹಾರ, ನಡವಳಿಕೆ ಮತ್ತು ಆಲೋಚನೆಗಳಲ್ಲಿ ಸಾತ್ವಿಕತೆಯನ್ನು ಹೊಂದಿರುವುದು ಮುಖ್ಯವಾಗಿದೆ. ಹೀಗೆ ಮಾಡುವುದರಿಂದ ನವರಾತ್ರಿಯ ಉಪವಾಸದ ಸಂಪೂರ್ಣ ಪ್ರಯೋಜನಗಳನ್ನು ಪಡೆಯಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

 

Trending News