Health Tipes: ಇತ್ತೀಚೀನ ದಿನಗಳಲ್ಲಿ ಎಳೆ ಮಕ್ಕಳಿಂದ ದೊಡ್ಡವರವರೆಗೂ ಒಂದಲ್ಲ ಒಂದು ರೋಗ ಆವರಿಸಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲಿ ಮುಖ್ಯವಾಗಿ ಮಧುಮೇಹದ ಸಮಸ್ಯೆ ಪ್ರತಿಯೊಬ್ಬರರಲ್ಲಿ ಕಾಡುವ ಸಮಸ್ಯೆಯಾಗಿದೆ. ಆದರೆ ಎಷ್ಟೋ ಜನರಿಗೆ ದೇಹದಲ್ಲಿ ಮಧುಮೇಹ ಆವರಿಸಿದರೂ ಗೊತ್ತೇ ಇರುವುದಿಲ್ಲ.
ನಿಮ್ಮ ದೇಹದಲ್ಲಿ ಈ ಗುಣಲಕ್ಷಣ ಇದೆಯೇ ಎಂದು ತಿಳಿದುಕೊಳ್ಳಿ .
ಮಧುಮೇಹದ ಲಕ್ಷಣ ಹೀಗಿದೆ
ಕೈ ಕಾಲು ಪಾದಗಗಳು ಊದುವಿಕೆ : ದೇಹದಲ್ಲಿ ಹೆಚ್ಚುವರಿ ದ್ರವ ಶೇಕರಣೆಯಾದಾಗ ಕೈ ಕಾಲು ಪಾದಗಗಳು ಊದುಕೊಳ್ಳುತ್ತವೆ. ಆ ವೇಳೆ ನಿರ್ಲಕ್ಷಿಸದೇ ನಿಗವಹಿಸಿ ಮಧುಮೇಹ ಪರೀಕ್ಷಿಸಿಕೊಳ್ಳಿ..
ಚರ್ಮ ತುರಿಕೆ: ಆಗಾಗ ಕಾಡುವ ದೇಹದಲ್ಲಿ ಆಗುವ ತುರಿಕೆಗಳ ಬಗ್ಗೆ ಎಚ್ಚರ ವಹಿಸಿ, ಇದು ಸಹ ಮೂತ್ರಪಿಂಡ ಹಾಗೂ ಮಧುಮೇಹ ಸಮಸ್ಯೆಯ ಗುಣಲಕ್ಷಣವಾಗಿದೆ.
ಆಗಾಗ ಕಾಡುವ ಹಸಿವು: ಮಧುಮೇಹದ ಮೂತ್ರಪಿಂಡ ಕಾಯಿಲೆಯ ಮತ್ತೊಂದು ಎಚ್ಚರಿಕೆಯ ಲಕ್ಷಣವೆಂದರೆ ಹಸಿವಿನ ತ್ವರಿತ ಬದಲಾವಣೆ ಅಥವಾ ಹಸಿವು ಕಡಿಮೆಯಾಗುವುದು.
ಕೆಲವೊಂದು ಬಾರಿ ವಾಕರಿಕೆ, ವಾಂತಿ, ಹಸಿವು ಕಡಿಮೆಯಾಗುವುದು ಸಹ ಈ ರೋಗಗಳ ಪ್ರಮುಖ ಅಂಶವಾಗಿದೆ.
ಆಯಾಸ: ಮಧುಮೇಹ ಮೂತ್ರಪಿಂಡ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಆಯಾಸ ಹೆಚ್ಚಾಗಿ ಕಂಡುಬರುತ್ತದೆ. ಇದು ವಿಶಿಷ್ಟವಾಗಿ ರಕ್ತಹೀನತೆಯಿಂದ ಉಂಟಾಗುತ್ತದೆ, ಈ ಸ್ಥಿತಿಯು ಮೂತ್ರಪಿಂಡಗಳು ಎರಿಥ್ರೋಪೊಯೆಟಿನ್ ಅನ್ನು ಉತ್ಪಾದಿಸುವುದನ್ನು ನಿಲ್ಲಿಸುತ್ತದೆ, ಇದು ಮೂಳೆ ಮಜ್ಜೆಯಲ್ಲಿ ಕೆಂಪು ರಕ್ತ ಕಣಗಳ ರಚನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಇನ್ನುಳಿದಂತೆ ಈ ಕೆಳಗಿನ ಸಮಸ್ಯೆ ಇದ್ದರೆ ಪರೀಕ್ಷಿಸಿ
*ಮಂದ ದೃಷ್ಟಿ
*ಹೆಚ್ಚಿದ ಬಾಯಾರಿಕೆ
*ಕೈ ಅಥವಾ ಕಾಲುಗಳಲ್ಲಿ ಮರಗಟ್ಟುವಿಕೆ
*ದುರ್ಬಲ
*ತೂಕ ಇಳಿಕೆ
*ಬಾಯಿ ಒಣಗುವಿಕೆ
*ಆಗಾಗ್ಗೆ ಮೂತ್ರ ವಿಸರ್ಜನೆ
*ಹೆಚ್ಚು ಕಾಡುವ ಸೋಂಕುಗಳು
*ದೇಹ ತುರಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.