Diabetes: ವಯಸ್ಸಿಗೆ ಅನುಗುಣವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಎಷ್ಟಿರಬೇಕು? ಇಲ್ಲಿ ತಿಳಿದುಕೊಳ್ಳಿ!

Blood Sugar Level: ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಜನರು ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ಅಧಿಕ ರಕ್ತದೊತ್ತಡಗಳಂತಹ  ಕಾಯಿಲೆಗಳ ಹಿಡಿತಕ್ಕೆ ಸಿಲುಕಿ ಬೀಳುತ್ತಿದ್ದಾರೆ ಈ ಲೇಖನದಲ್ಲಿ, ರಕ್ತದಲ್ಲಿನ ಸಕ್ಕರೆಯ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಅಂದರೆ, ಯಾವ ವಯಸ್ಸಿನಲ್ಲಿ ಸಕ್ಕರೆಯ ಮಟ್ಟವು ಎಷ್ಟು ಇರಬೇಕು.  

Written by - Nitin Tabib | Last Updated : Apr 9, 2023, 06:11 PM IST
  • ಹೆಚ್ಚು ಸಕ್ಕರೆ, ಉಪ್ಪು, ತಂಪು ಪಾನೀಯಗಳು, ಸಿಹಿತಿಂಡಿಗಳನ್ನು ತಿನ್ನುವುದನ್ನು ತಪ್ಪಿಸಿ,
  • ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ವಸ್ತುಗಳನ್ನು ಸೇವಿಸಬೇಡಿ.
  • ನಿಮ್ಮ ಆಹಾರದಲ್ಲಿ ಸಲಾಡ್ ಅನ್ನು ಶಾಮೀಲುಗೊಳಿಸಿ.
Diabetes: ವಯಸ್ಸಿಗೆ ಅನುಗುಣವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಎಷ್ಟಿರಬೇಕು? ಇಲ್ಲಿ ತಿಳಿದುಕೊಳ್ಳಿ! title=
ವಯಸ್ಸಿಗೆ ಅನುಗುಣವಾಗಿಯೇ ರಕ್ತದಲ್ಲಿನ ಸಕ್ಕರೆ ಮಟ್ಟ

Blood Sugar Level Chart: ಹಿಂದಿನ ಕಾಲದಲ್ಲಿ ಕೆಲವು ಕಾಯಿಲೆಗಳು ವಯಸ್ಸಾದವರಿಗೆ ಮಾತ್ರ ಬರುತ್ತಿದ್ದವು, ಆದರೆ ಇಂದು ಹಾಗಲ್ಲ. ಚಿಕ್ಕ ವಯಸ್ಸಿನಲ್ಲೇ ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳ ಹಿಡಿತಕ್ಕೆ ಜನರು ಗುರಿಯಾಗುತ್ತಿದ್ದಾರೆ. ಆದರೆ, ಆಹಾರದ ಬಗ್ಗೆ ಸರಿಯಾದ ಗಮನವನ್ನು ನೀಡುವ ಮೂಲಕ, ನೀವು ಈ ಮಾರಣಾಂತಿಕ ಕಾಯಿಲೆಗಳನ್ನು ತಪ್ಪಿಸಬಹುದು. ಇದರೊಂದಿಗೆ, ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ವಿಭಿನ್ನವಾಗಿರುತ್ತದೆ. ಈ ಲೇಖನದಲ್ಲಿ, ರಕ್ತದಲ್ಲಿನ ಸಕ್ಕರೆಯ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಯಾವ ವಯಸ್ಸಿನಲ್ಲಿ ಸಕ್ಕರೆಯ ಮಟ್ಟವು ಇರಬೇಕು ಎಂಬ ಮಾಹಿತಿ ನಿಮಗೂ ಗೊತ್ತಿರಲಿ.

ವಯಸ್ಸಿನ ಪ್ರಕಾರ ಸಕ್ಕರೆ ಮಟ್ಟ ಎಷ್ಟಿರಬೇಕು?
18 ವರ್ಷಕ್ಕಿಂತ ಮೇಲ್ಪಟ್ಟ ಜನರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಆಹಾರವನ್ನು ಸೇವಿಸಿದ ಒಂದು ಅಥವಾ ಎರಡು ಗಂಟೆಗಳ ನಂತರ 140 ಮಿಗ್ರಾಂ ಮತ್ತು ಒಂದು ವೇಳೆ ನೀವು ಉಪವಾಸ ಮಾಡುತ್ತಿದ್ದರೆ ಅದು ಪ್ರತಿ ಡೆಸಿಲೀಟರ್‌ಗೆ 99 ಮಿಲಿಗ್ರಾಂ ಆಗಿರಬೇಕು. 40 ವರ್ಷ ದಾಟಿದ ನಂತರ ಜನರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು.

40 ರಿಂದ 50 ವರ್ಷ ವಯಸ್ಸಿನವರು ಮತ್ತು ಮಧುಮೇಹ ರೋಗಿಗಳಾಗಿದ್ದರೆ, ಅವರ ಉಪವಾಸದ ಸಕ್ಕರೆಯ ಮಟ್ಟವು 90 ರಿಂದ 130 mg/dL ಆಗಿರಬೇಕು. ಆಹಾರ ಸೇವನೆಯ ಬಳಿಕ ಅದು 140 mg/dl ಗಿಂತ ಕಡಿಮೆ ಮತ್ತು ರಾತ್ರಿಯ ಊಟದ ನಂತರ 150 ಕ್ಕಿಂತ ಕಡಿಮೆಯಿರುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದಕ್ಕಿಂತ ಹೆಚ್ಚಾಗಿದ್ದಾರೆ ಅದು ಕಳವಳಕಾರಿ ಸಂಗತಿಯಾಗಿದೆ ಮತ್ತು ನೀವು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.

ಸಕ್ಕರೆ ಮಟ್ಟ ಹೇಗೆ ಕಡಿಮೆ ಮಾಡಿಕೊಳ್ಳಬೇಕು?
>> ನೀವು ಮಧುಮೇಹಿಗಳಾಗಿದ್ದರೆ ನೀವು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ, ನೀವು ನಿಮ್ಮ ಆಹಾರ ಸೇವನೆ ಮತ್ತು ಪಾನೀಯ ಸೇವನೆ ವಿಧಾನವನ್ನು ಬದಲಾಯಿಸಬೇಕು. ನಿಮ್ಮ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಬೇಕು. ವ್ಯಾಯಾಮವನ್ನು ನಿಮ್ಮ ಜೀವನಶೈಲಿಯ ಭಾಗವಾಗಿಸಬೇಕು.

ಇದನ್ನೂ ಓದಿ-Side Effects Of Raw Egg: ಮರೆತೂ ಕೂಡ ಕಚ್ಚಾ ಹಾಗೂ ಅರ್ಧ ಬೆಂದ ಮೊಟ್ಟೆಯನ್ನು ಸೇವಿಸಬೇಡಿ, ಕಾರಣ ಬೆಚ್ಚಿಬೀಳಿಸುವಂತಿದೆ!

>> ಹೆಚ್ಚು ಸಕ್ಕರೆ, ಉಪ್ಪು, ತಂಪು ಪಾನೀಯಗಳು, ಸಿಹಿತಿಂಡಿಗಳನ್ನು ತಿನ್ನುವುದನ್ನು ತಪ್ಪಿಸಿ, ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ವಸ್ತುಗಳನ್ನು ಸೇವಿಸಬೇಡಿ. ನಿಮ್ಮ ಆಹಾರದಲ್ಲಿ ಸಲಾಡ್ ಅನ್ನು ಶಾಮೀಲುಗೊಳಿಸಿ.

ಇದನ್ನೂ ಓದಿ-Relation Tips: ನಿಮ್ಮ ವೈವಾಹಿಕ ಜೀವನ ಕೂಡ ಬಂಬಾಟಾಗಿರಬೇಕೆ? ರಾತ್ರಿ ಮಲಗುವ ಮುನ್ನ ಈ ಒಂದು ಕೆಲಸ ಮಾಡಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ, ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News