Vastu Tips: ಮನೆಯ ಮುಖ್ಯದ್ವಾರದ ಮೇಲಿರಲಿ ಈ 5 ಸಂಗತಿಗಳು, ಭಾಗ್ಯ ಹೊಳೆಯಲಿದೆ

ವಾಸ್ತುಶಾಸ್ತ್ರದಲ್ಲಿ, ಮನೆಯ ಮುಖ್ಯ ದ್ವಾರ ಬಹಳ ಮುಖ್ಯ ಎಂದು ವಿವರಿಸಲಾಗಿದೆ. ಕುಟುಂಬದ ಸಂತೋಷ ಮತ್ತು ಸಮೃದ್ಧಿಯು ಮನೆಯ ಮುಖ್ಯ ಬಾಗಿಲಿನಿಂದ ಬರುತ್ತದೆ. ಇದಕ್ಕಾಗಿ ವಾಸ್ತುಶಾಸ್ತ್ರದಲ್ಲಿ  ಕೆಲವು ನಿಯಮಗಳನ್ನು ಸೂಚಿಸಲಾಗಿದೆ.

Last Updated : Nov 22, 2020, 10:30 AM IST
  • ವಾಸ್ತುಶಾಸ್ತ್ರದಲ್ಲಿ ಮನೆಯ ಮುಖ್ಯದ್ವಾರಕ್ಕೆ ವಿಶೇಷ ಮಹತ್ವವಿದೆ.
  • ಮನೆ ಮುಖ್ಯದ್ವಾರದ ಮೇಲೆ ಕೆಲ ಶುಭ ಸಂಗತಿಗಳನ್ನು ಹಚ್ಚಿ.
  • ಇದರಿಂದ ಮನೆಯಲ್ಲಿ ಹಣದ ಕೊರತೆ ಎಂದಿಗೂ ಇರುವುದಿಲ್ಲ.
Vastu Tips: ಮನೆಯ ಮುಖ್ಯದ್ವಾರದ ಮೇಲಿರಲಿ ಈ 5 ಸಂಗತಿಗಳು, ಭಾಗ್ಯ ಹೊಳೆಯಲಿದೆ title=

ನವದೆಹಲಿ: ವಾಸ್ತುಶಾಸ್ತ್ರದಲ್ಲಿ (Vastu Shastra) ದಿಕ್ಕುಗಳಿಗೆ ಭಾರಿ ಮಹತ್ವವಿದೆ. ದಿಕ್ಕುಗಳಿಂದಲೇ ಮಂಗಳಮಯ ಹಾಗೂ ಅಮಂಗಳಮಯಗಳನ್ನು ನಿರ್ಧರಿಸಲಾಗುತ್ತದೆ. ಇದರ ಜೊತೆಗೆ ವಾಸ್ತು ಶಾಸ್ತ್ರದಲ್ಲಿ ಮನೆಯ ಮುಖ್ಯದ್ವಾರಕ್ಕು ಕೂಡ ವಿಶೇಷ ಮಹತ್ವ ನೀಡಲಾಗಿದೆ. ಮನೆಯ ಮುಖ್ಯದ್ವಾರದಿಂದಲೇ ಮನೆಯಲ್ಲಿ ಸುಖ-ಸಮೃದ್ಧಿ ಪ್ರವೇಶಿಸುತ್ತದೆ.

ಇಂದು ನಾವು ನಿಮಗೆ ಕೆಲ ಸಂಗತಿಗಳ ಕುರಿತು ಮಾಹಿತಿ ನೀಡುತ್ತಿದ್ದು, ಈ ಸಂಗತಿಗಳು ಮನೆಯ ಮುಖ್ಯ ದ್ವಾರದಲ್ಲಿದ್ದರೆ ಭಾಗ್ಯ ಹೊಳೆಯಲಿದೆ.

ಇದನ್ನು ಓದಿ- ಮನೆಯಲಿ ಸುಖ-ಶಾಂತಿ ಹಾಗೂ ಧನ-ಧಾನ್ಯ ಅಭಿವೃದ್ಧಿಗೆ ಮನೆಯ ಮುಖ್ಯದ್ವಾರದ ಕಾಳಜಿ ವಹಿಸಿ

ತೋರಣ
ವಾಸ್ತುಶಾಸ್ತ್ರದ ಪ್ರಕಾರ ಮನೆಯ ಮುಖ್ಯದ್ವಾರದ ಮೇಲೆ ಮಾವಿನ ಮರ, ಆಲದ ಮರ, ಅಶೋಕ ಮರದ ಎಳೆಗಳ ತೋರಣ ಹಾಕಿದರೆ ವಂಶವೃದ್ಧಿಯಾಗುತ್ತದೆ. ಈ ಎಳೆಗಳ ಸುಗಂಧದಿಂದ ಆಕರ್ಷಿತಗಾಗಿ ದೇವರು ಮನೆ ಪ್ರವೇಶಿಸುತ್ತಾರೆ ಎಂಬ ನಂಬಿಕೆ ಇದೆ.

ಇದನ್ನು ಓದಿ-Vastu Shastraದ ನಿಯಮಗಳ ಅನುಸಾರ Kitchen ನಿರ್ಮಿಸಿ, ಕೌಟುಂಬಿಕ ಆರೋಗ್ಯ ಸೌಖ್ಯ ನಿಮ್ಮದಾಗಿಸಿಕೊಳ್ಳಿ

ಮಂಡಪ
ಮಂಡಪ ಮುಖ್ಯದ್ವಾರದ ಎದುರು ಹಾಗೂ ಮುಖ್ಯದ್ವಾರದ ಗೋಡೆಗೆ ಹೊಂದಿಕೊಂಡಂತೆ ನಿರ್ಮಿಸಲಾಗುತ್ತದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣಗೊಳ್ಳುತ್ತದೆ ಹಾಗೂ ಸಂಕಷ್ಟಗಳು ದೂರವಾಗುತ್ತವೆ. ಇದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.

ಇದನ್ನು ಓದಿ- ಸುಖ-ಸಮೃದ್ಧಿಯ ಜೀವನ ನಿಮ್ಮದಾಗಬೇಕೆ? ನಿಮ್ಮ ಗೋಡೆಗಳ ಬಣ್ಣವನ್ನು ವಾಸ್ತು ಪ್ರಕಾರ ಆರಿಸಿ

ಪಂಚಸೂಲಕ ಹಾಗೂ ಸ್ವಸ್ತಿಕ್ 
ಐದು ತತ್ವಗಳ ಪ್ರತೀಕವನ್ನು ಪಂಚಸೂಲಕ ಎಂದು ಕರೆಯಲಾಗುತ್ತದೆ. ಇದನ್ನು ಮುಖ್ಯದ್ವಾರದ ಗೋಡೆಯ ಮೇಲೆ ರಚಿಸಲಾಗುತದೆ. ಇದರ ಜೊತೆಗೆ ಸ್ವಸ್ತಿಕ್ ರಚಿಸುವದೂ ಕೂಡ ಶುಭಕರ ಎನ್ನಲಾಗುತ್ತದೆ. ಸ್ವಸ್ತಿಕವನ್ನು ಶ್ರೀಗಣೇಶನ ರೂಪ ಎಂದೂ ಕೂಡ ಕರೆಯಲಾಗಿದೆ.

ಇದನ್ನು ಓದಿ- Vastu Shastra: ಮನೆಯಲ್ಲಿ ಧನವೃಷ್ಟಿ ತರುತ್ತವೆ ಈ ಸಸ್ಯಗಳು, ನೀವು ನಿಮ್ಮ ಮನೆಯಲ್ಲಿ ನೆಟ್ಟು ಧನವಂತರಾಗಿ

ಗಣೇಶನ ಮೂರ್ತಿ
ವಾಸ್ತು ಶಾಸ್ತ್ರದ ಪ್ರಕಾರ, ಗಣೇಶನ ವಿಗ್ರಹವನ್ನು ಅಥವಾ ಭಾವಚಿತ್ರವನ್ನು  ಮುಖ್ಯ ಬಾಗಿಲಿಗೆ ಮೇಲೆ ಅಥವಾ ಸಮನಾಗಿ ಇರಿಸಿ. ಹೀಗೆ ಮಾಡುವುದರಿಂದ, ತಾಯಿ ಲಕ್ಷ್ಮಿ ಮನೆಯಲ್ಲಿಯೇ ನೆಲೆಸುತ್ತಾಳೆ ಮತ್ತು ಹಣದ ಸಮಸ್ಯೆ ಎಂದಿಗೂ ಇರುವುದಿಲ್ಲ.

ಇದನ್ನು ಓದಿ- Vastu Shastra: ಸಾಲದ ಹೊರೆ ಹೆಚ್ಚಾಗಲು ಈ ವಾಸ್ತು ದೋಷಗಳೂ ಕಾರಣವಿರಬಹುದು

ಗಟ್ಟಿಯಾದ ಹೊಸ್ತಿಲು ನಿರ್ಮಿಸಿ
ಮನೆ ನಿರ್ಮಾಣದ ವೇಳೆ ಮುಖ್ಯದ್ವಾರದ ಹೊಸ್ತಿಲು ಗಟ್ಟಿಯಾಗಿ ಹಾಗೂ ಸುಂದರವಾಗಿ ನಿರ್ಮಿಸಿ. ಮನೆಯಲ್ಲಿ ಮಂಗಳ ಕಾರ್ಯದ ವೇಳೆ ಹೊಸ್ತಿಲಿಗೆ ಪೂಜೆ ಸಲ್ಲಿಸುವ ಪರಂಪರೆ ಇದೆ. ಹೊಸ್ತಿಲ ಎರಡು ಬಾಡಿಗೆ ಸ್ವಸ್ತಿಕ ಚಿನ್ಹೆ ರಚಿಸುವುದು ಅತ್ಯಂತ ಶುಭಕರ ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನಿರಂತರವಾಗಿ ನೆಲೆಸುತ್ತದೆ.

Trending News